For Quick Alerts
ALLOW NOTIFICATIONS  
For Daily Alerts

ತನ್ನ 200 ಸಿಬ್ಬಂದಿಗಳನ್ನು ಚಾರ್ಟೆಡ್ ವಿಮಾನದಲ್ಲಿ ಅಮೆರಿಕದಿಂದ ಕರೆ ತಂದ ಇನ್ಫೋಸಿಸ್

|

ಬೆಂಗಳೂರು: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಕಂಪನಿ ಅಮೆರಿಕದಿಂದ ತನ್ನ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮತ್ತು ಅವರ ಕುಟುಂಬದವರನ್ನು ಚಾರ್ಟೆಡ್ ವಿಮಾನದಲ್ಲಿ ಭಾರತಕ್ಕೆ ವಾಪಸ್ ಕರೆ ತಂದಿದೆ.

ಇನ್ಫೋಸಿಸ್ ಚಾರ್ಟರ್ಡ್ ಫ್ಲೈಟ್ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಿಂದ ನೂರಾರು ಉದ್ಯೋಗಿಗಳು ಮತ್ತು ಕುಟುಂಬದವರನ್ನು ಬೆಂಗಳೂರಿಗೆ ಕರೆತಂದಿದೆ ಎಂದು ಲಿಂಕ್ಡ್ಇನ್ ಪೋಸ್ಟನಲ್ಲಿ ಇನ್ಫೊಸಿಸ್ ಲಾಜಿಸ್ಟಿಕ್ ಸಹಾಯಕ ಉಪಾಧ್ಯಕ್ಷ ಸಮೀರ್ ಗೋಸವಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ಫೋಸಿಸ್ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದಿದ್ದರೂ, ಇನ್ಫೋಸಿಸ್ ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಭಾರತಕ್ಕೆ ಕರೆದೊಯ್ಯಲು ವಿಮಾನವನ್ನು ಆಯೋಜಿಸಲಾಗಿತ್ತು ಎಂದು ಅದು ದೃಡಪಡಿಸಿದೆ.

ಇನ್ಫೋಸಿಸ್ ಮೇಲೆ ಜನಾಂಗೀಯ ತಾರತಮ್ಯ ಆರೋಪ: ದೂರು ದಾಖಲು ಮಾಡಿದ ಮಾಜಿ ಉದ್ಯೋಗಿಇನ್ಫೋಸಿಸ್ ಮೇಲೆ ಜನಾಂಗೀಯ ತಾರತಮ್ಯ ಆರೋಪ: ದೂರು ದಾಖಲು ಮಾಡಿದ ಮಾಜಿ ಉದ್ಯೋಗಿ

ಅಮೆರಿಕ ಮಾರ್ಚ್ ಅಂತ್ಯದ ತ್ರೈಮಾಸಿಕದ ವೇಳೆಗೆ ಕಂಪನಿಯ ಆದಾಯಕ್ಕೆ 61.6% ಕೊಡುಗೆ ನೀಡಿದ ಅತಿದೊಡ್ಡ ಮಾರುಕಟ್ಟೆಯಾಗಿದೆ. ಕಂಪನಿಯು ಅಮೆರಿಕದಲ್ಲಿ ತನ್ನ ಸ್ಥಳೀಯ ನೇಮಕವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದರೂ, ಅದರ ಅನೇಕ ಭಾರತೀಯ ಉದ್ಯೋಗಿಗಳು ಅಮೆರಿಕದಲ್ಲಿ ಎಚ್ 1-ಬಿ ವೀಸಾಗಳ ಮೇಲೆ ನೆಲೆಸಿದ್ದಾರೆ.

ಸಿಬ್ಬಂದಿಯನ್ನು ಚಾರ್ಟೆಡ್ ವಿಮಾನದಲ್ಲಿ ಅಮೆರಿಕದಿಂದ ಕರೆ ತಂದ Infosys

ಕಳೆದ 24 ತಿಂಗಳುಗಳಲ್ಲಿ, ಇನ್ಫೋಸಿಸ್ ತನ್ನ ಸ್ಥಳೀಕರಣ ಉಪಕ್ರಮವನ್ನು ಅಮೆರಿಕದಲ್ಲಿ ಜಾರಿಗೆ ತಂದಿದೆ, 10,000 ಕ್ಕೂ ಹೆಚ್ಚು ಯುಎಸ್ ಪ್ರಜೆಗಳು ಅಥವಾ ಖಾಯಂ ನಿವಾಸಿಗಳನ್ನು ನೇಮಕ ಮಾಡಿದೆ. ಪ್ರಸ್ತುತ, ನಮ್ಮ ಯುಎಸ್ ಉದ್ಯೋಗಿಗಳಲ್ಲಿ 60% ವೀಸಾ ಸ್ವತಂತ್ರರು ಎಂದು ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಬಿ.ಪ್ರವೀಣ್ ರಾವ್ ಅವರು ತಮ್ಮ ಇತ್ತೀಚಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಹೇಳಿದ್ದರು.

English summary

Infosys Brings Back More Than 200 Employees, Family From America

Infosys Brings Back More Than 200 Employees From America Ahead Of Corona Out Break
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X