ಇರಾನ್-ಇಸ್ರೇಲ್ ಮತ್ತು ಅಮೆರಿಕಾ ಯುದ್ಧದಿಂದಾಗಿ (Iran And Israel-America War) ಇದೀಗ ಭಾರತ ಅಯ್ಯಯ್ಯೋ ಎಂಬಂತಾಗಿದೆ. ಅತ್ತ ಕಚ್ಚಾ ತೈಲ ಬೆಲೆ, ಇಂಧನ ಬೆಲೆಗಳು ಏರಿಕೆಯಾಗಿದ್ದು, ಇತ್ತೀಚೆಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಇದೀಗ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಕೊರತೆ (LPG Cylinder Shortage) ಇನ್ಫೋಸಿಸ್ ಕ್ಯಾಂಟೀನ್‌ಗಳ (Infosys Canteen) ಮೇಲೂ ತಟ್ಟಿದೆ.

ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯೆಂದು ಗುರುತಿಸಿಕೊಂಡಿರುವ ಇನ್ಫೋಸಿಸ್ ತನ್ನ ಬೆಂಗಳೂರು, ಪುಣೆ ಮತ್ತು ಚೆನ್ನೈನ ಕ್ಯಾಂಪಸ್‌ಗಳ ಫುಡ್ ಕೋರ್ಟ್‌ಗಳಲ್ಲಿ ತನ್ನ ಮೆನುವನ್ನೇ ಬದಲಾಯಿಸಿದೆ. ಅಂದರೆ ಮೆನು ಲೀಸ್ಟ್‌ನಿಂದ ಕೆಲವು ಆಹಾರಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ. ಇದಕ್ಕೆ ಮುಖ್ಯ ಕಾರಣವೇ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ.
ಇನ್ಫೋಸಿಸ್ ಕ್ಯಾಂಟೀನ್‌ಗೂ ತಟ್ಟಿದ ಇರಾನ್-ಇಸ್ರೇಲ್ ಯುದ್ಧ!
ಹೌದು, ಇರಾನ್-ಇಸ್ರೇಲ್ ಯುದ್ಧದಿಂದಾಗಿ, ಸದ್ಯ ಜಾಗತಿಕವಾಗಿ ಇಂಧನ ಸರಬರಾಜಿನಲ್ಲಿ ತೀವ್ರ ಅಡ್ಡಿಯುಂಟಾಗಿದೆ. ಈ ಪ್ರಭಾವ ಭಾರತಕ್ಕೂ ಬೀರಿದ್ದು, ಸದ್ಯ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಪರಿಣಾಮ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ದೇಶದಲ್ಲಿರುವಂತಹ ಬಹುತೇಕ ಹೋಟೆಲ್, ರೆಸ್ಟೋರೆಂಟ್‌ಗಳು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿಗೆ ಬಂದಿದೆ.
ಉದ್ಯೋಗಿಗಳಿಗೆ ಸೂಚನೆ
ಇನ್ನು ಇನ್ಫೋಸಿಸ್ ಉದ್ಯೋಗಿಗಳಿಗೆ ಸಂದೇಶ ಕಳುಹಿಸಿದ್ದು, "ಎಲ್ಲಾ ಫುಡ್ ಕೋರ್ಟ್‌ಗಳು ತಾತ್ಕಾಲಿಕವಾಗಿ ಸೀಮಿತ ಮೆನುವಿನೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಲ್‌ಪಿಜಿ ಕೊರತೆಯಿಂದಾಗಿ ಅಪಾಯದಲ್ಲಿದ್ದು, ಮಾರ್ಚ್ 12 ರಿಂದ ತಕ್ಕ ಮಟ್ಟಿಗೆ ಬದಲಾವಣೆಯಾಗಲಿದೆ ಎಂದು ಸೂಚನೆ ನೀಡಿತ್ತು. ಅಲ್ಲದೇ ಫುಡ್ ಕೋರ್ಟ್‌ನಲ್ಲಿ ಮೆನುಗಳನ್ನು ಬದಲಾವಣೆ ಮಾಡಲಿದ್ದು, ಅದರಲ್ಲೂ ದೋಸೆ, ಆಮ್ಲೆಟ್ ಕೌಂಟರ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸೂಚನೆ ನೀಡಿದೆ.
ಎಲ್‌ಪಿಜಿ ಕೊರತೆ, ದೇಶಕ್ಕೆ ಸಂಕಷ್ಟ!
ಇನ್ನು ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕಾ ಜಂಟಿಯಾಗಿ ದಾಳಿ ನಡೆಸುತ್ತಿದ್ದು, ಈ ಹಿನ್ನೆಲೆ ಜಾಗತಿಕ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅಲ್ಲದೇ ಜಾಗತಿಕವಾಗಿ ಎಲ್‌ಪಿಜಿ ಸರಬರಾಜಿನಲ್ಲಿ ತೀವ್ರ ಅಡ್ಡಿ ಉಂಟಾಗಿದೆ. ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ತೀವ್ರವಾಗಿ ಕಡಿಮೆಯಾಗಿದ್ದು, ಈ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳು, ಪಿಜಿಗಳು, ಕಾರ್ಪೋರೇಟ್ ಕ್ಯಾಂಟೀನ್‌ಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಅಲ್ಲದೇ ಸರ್ಕಾರ ಕೂಡಾ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿಗೆ ಸೀಮಿತ ಸರಬರಾಜನ್ನು ಮಾಡಲಾಗುತ್ತಿದೆ. ಈ ಪರಿಣಾಮದಿಂದಾಗಿ ಬೆಂಗಳೂರು, ಚೆನ್ನೈ, ಪುಣೆ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ದೋಸೆ, ಪರೋಟಾ, ವಡೆ, ಇಡ್ಲಿಯಂತಹ ಹೆಚ್ಚು ಗ್ಯಾಸ್ ಬಳಕೆಯಾಗುವ ಆಹಾರಗಳನ್ನು ಮೆನುವಿನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಇನ್ಫೋಸಿಸ್ ಮಾತ್ರವಲ್ಲದೇ, ಅಂತಹ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳ ಅನುಕೂಲಕ್ಕಾಗಿ, ಕ್ಯಾಂಟೀನ್‌ಗಳ ಮೂಲಕ ಸೇವೆ ನೀಡುತ್ತಿರುತ್ತದೆ. ಆದರೆ ಇದೀಗ ಇಡೀ ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಪೂರೈಕೆಯಲ್ಲಾದ ಕೊರತೆ, ಭಾರೀ ತೊಂದರೆಗೆ ಸಿಲುಕುವಂತೆ ಮಾಡಿದೆ.


Click it and Unblock the Notifications