ಯುವಕರು ವಾರದಲ್ಲಿ 70 ಗಂಟೆಗಳ ಕಾಲ ದುಡಿಯಬೇಕು ಎನ್ನುವ ಸ್ಟೇಟ್ ಮೆಂಟ್ ಕೊಟ್ಟು ಭಾರೀ ಚರ್ಚೆಗೀಡಾಗಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಭಾರಿ ಸುದ್ದಿಯಾಗಿರುವುದು ಹೇಳಿಕೆಯಿಂದಲ್ಲ ಬದಲಾಗಿ ಆಸ್ತಿ ಖರೀದಿಯಿಂದ.!
ಹೌದು ಭಾರತದ ಪ್ರಸಿದ್ಧ ಬಿಲಿಯನೇರ್ ಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಮನೆ ಖರೀದಿ ಮಾಡಿದ್ದಾರೆ. ಆದರೆ ಇಷ್ಟೇ ಆಗಿದ್ದರೆ ಕುತೂಹಲವಿರುತ್ತಿರಲಿಲ್ಲ. ಬೆಂಗಳೂರಿನ ಹೃದಯಭಾಗದಲ್ಲಿರುವ ಮಲ್ಯ ರೋಡ್ ನ ಯುಬಿ ಸಿಟಿಯಲ್ಲಿನ ಪ್ರೆಸ್ಟೀಜ್ ಕಿಂಗ್ ಫಿಶರ್ ನ ಟವರ್ ನಲ್ಲಿ ನಾರಾಯಣ ಮೂರ್ತಿ ದುಬಾರಿ ಬೆಲೆಯ ತನ್ನ ಎರಡನೇ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. 4BHK ಐಷಾರಾಮಿ ಅಪಾರ್ಟ್ಮೆಂಟ್ ಬೆಲೆ 50 ಕೋಟಿ ಅಥವಾ 50,00,00,000 ರೂ. ಎನ್ನಲಾಗಿದೆ. ನಾರಾಯಣ ಮೂರ್ತಿ ಈ ಹೊಸ ಫ್ಲಾಟ್ ಅನೇಕ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಈ ಖರೀದಿಯು ಬೆಂಗಳೂರಿನಲ್ಲಿನ ವಸತಿ ಆಸ್ತಿ ಬೆಲೆಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂದರೆ ತಪ್ಪಾಗಲಾರದು.

ನಾರಾಯಣ ಮೂರ್ತಿಯವರು ಖರೀದಿಸಿದ ಈ ಫ್ಲಾಟ್ ಗೋಪುರದ ಹದಿನಾರನೇ ಮಹಡಿಯಲ್ಲಿದ್ದು ಸುಮಾರು 8,400 ಚದರ ಅಡಿಗಳಷ್ಟು ವ್ಯಾಪಿಸಿದೆ ಎಂದು ವರದಿಯಾಗಿದೆ. ಈ ಐಷಾರಾಮಿ ಅಪಾರ್ಟ್ ಮೆಂಟ್ ನ ಪ್ಲ್ಯಾಟ್ ನಲ್ಲಿ 4 ಬೆಡ್ ರೂಮ್ ಗಳು ಹಾಗೂ ಐದು ಕಾರ್ ಪಾರ್ಕಿಂಗ್ ಸ್ಥಳಗಳನ್ನು ಒಳಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಇದೇ ಟವರ್ ನ 23ನೇ ಮಹಡಿಯಲ್ಲಿ 29 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ್ದರು.
4.5 ಎಕರೆ ವಿಸ್ತಾರದಲ್ಲಿ ಹರಡಿರುವ ಈ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಮೂರು ಬ್ಲಾಕ್ ಗಳನ್ನು ಒಳಗೊಂಡಿದ್ದು, ಪ್ರತಿಯೊಂದೂ 34 ಅಂತಸ್ತಿನ ಎತ್ತರವನ್ನು ಹೊಂದಿದೆ. ಒಟ್ಟಾರೆಯಾಗಿ, ಈ ಗೋಪುರಗಳು 81 ಅತ್ಯಂತ ವಿಶಾಲವಾದ ಮತ್ತು ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು ಹೊಂದಿದ್ದು, ಪ್ರತಿಯೊಂದೂ ಸರಾಸರಿ 8,321 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಎರಡನೇಯ ಬ್ಲಾಕ್ ನಲ್ಲಿ ಈ ಐಷಾರಾಮಿ ಮೂರ್ತಿಯವರು ಖರೀದಿಸಿದ್ದಾರೆ ಎನ್ನಲಾಗಿದೆ.
ಕಿಂಗ್ ಫಿಶರ್ ಟವರ್ಸ್ ಬೆಂಗಳೂರಿನಲ್ಲಿ ಐಷಾರಾಮಿ ಮತ್ತು ಪ್ರತಿಷ್ಠೆಯ ಸಂಕೇತವಾಗಿದೆ. ಯಾಕೆಂದರೆ ಕಿಂಗ್ ಫಿಶರ್ ಟವರ್ಸ್ ನಲ್ಲಿರುವ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ಹಲವು ಕೋಟ್ಯಾಧಿಪತಿಗಳು ವಾಸವಿದ್ದಾರೆ. ಬಯೋಕಾನ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಕಿರಣ್ ಮಜುಂದಾರ್ ಶಾ, ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ , ಅಮೇರಿಕಾ ಮೂಲದ ಉದ್ಯಮಿ ಕೃಷ್ಣ ಚಿವುಕುಲ ಹೀಗೆ ಸಿರಿವಂತರ ದಂಡೇ ಇಲ್ಲಿ ವಾಸವಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ 50 ಕೋಟಿ ಬೆಲೆಯ ಈ ದುಬಾರಿ ಅಪಾರ್ಟ್ ಮೆಂಟ್ ನ ಪ್ರತಿ ಚದರ ಅಡಿ ವೆಚ್ಚವು 59,500 ರೂ. ಗಳಿಷ್ಟಿದೆ. ಪ್ರಸಿದ್ಧ ಉದ್ಯಮಿ ನಾರಾಯಣ ಮೂರ್ತಿ ಅವರು ಬೆಂಗಳೂರಿನಲ್ಲಿರುವ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದು, ಈ ಆಸ್ತಿಯನ್ನು ಒಂದು ದಶಕದ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರು ಖರೀದಿಸಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ ಸಾಧ್ವನಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಈ ವ್ಯವಹಾರದಲ್ಲಿ ಮಾರಾಟಗಾರರನ್ನು ಪ್ರತಿನಿಧಿಸಿದೆ.
ಬೆಂಗಳೂರಿನ ಪ್ರತಿಷ್ಠಿತ ಕಿಂಗ್‌ಫಿಶರ್ ಟವರ್ಸ್‌ನಲ್ಲಿನ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಬೆಲೆ 31.5 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. 2010 ರಲ್ಲಿ ಪ್ರೆಸ್ಟೀಜ್ ಗ್ರೂಪ್ ಮತ್ತು ಮಲ್ಯ ನಡುವಿನ ಜಂಟಿ ಅಭಿವೃದ್ಧಿಯಾದ ಕಿಂಗ್‌ಫಿಷರ್ ಟವರ್ಸ್‌ನಲ್ಲಿರುವ 41 ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರೆಸ್ಟೀಜ್ ತನ್ನ ಪಾಲನ್ನು ಮಾರಾಟ ಮಾಡಿತ್ತು.
ಸ್ಟಾಂಪ್ ಡ್ಯೂಟಿ ಎಷ್ಟು?
ಬೆಂಗಳೂರಿನಲ್ಲಿ ಆಸ್ತಿ ಖರೀದಿಸುವಾಗ ಕೆಲವು ನಿರ್ದಿಷ್ಟ ತೆರಿಗೆಗಳು ಮತ್ತು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಈ ತೆರಿಗೆಗಳು ಆಸ್ತಿಯ ಮೌಲ್ಯ, ಖರೀದಿದಾರರ ಲಿಂಗ ಮತ್ತು ಆಸ್ತಿಯ ಸ್ಥಳ (ನಗರ ಅಥವಾ ಗ್ರಾಮೀಣ) ಇತ್ಯಾದಿ ಅಂಶಗಳನ್ನು ಅವಲಂಬಿಸಿ ಬದಲಾಗುತ್ತವೆ.
ಸ್ಟಾಂಪ್ ಡ್ಯೂಟಿ: ಆಸ್ತಿಯ ಮಾರಾಟ ದಾಖಲೆಗಳ ಮೇಲೆ ವಿಧಿಸುವ ತೆರಿಗೆ ಇದು.
ದರಗಳು:
20 ಲಕ್ಷ ರೂಪಾಯಿಗಳವರೆಗಿನ ಆಸ್ತಿಗೆ: 2%
21 ಲಕ್ಷ ರೂಪಾಯಿರಿಂದ 45 ಲಕ್ಷ ರೂಪಾಯಿಗಳವರೆಗಿನ ಆಸ್ತಿಗೆ: 3%
45 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಆಸ್ತಿಗೆ: 5%
ಬೆಂಗಳೂರಿನಲ್ಲಿ ಆಸ್ತಿಯ ನೋಂದಣಿ ಶುಲ್ಕಗಳು:
ನೋಂದಣಿ ಶುಲ್ಕಗಳು: ಪುರುಷ ಮತ್ತು ಮಹಿಳಾ ಮಾಲೀಕರು ಆಸ್ತಿ ಮೌಲ್ಯದ 1% ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಬೆಂಗಳೂರಿನಲ್ಲಿ ಆಸ್ತಿ ಮೇಲಿನ ಹೆಚ್ಚುವರಿ ಶುಲ್ಕಗಳು:
ಗ್ರಾಮೀಣ ಪ್ರದೇಶಗಳಲ್ಲಿ ಖರೀದಿಸಿದ ಆಸ್ತಿಗಳನ್ನು ಹೊರತುಪಡಿಸಿ, ಮನೆ ಖರೀದಿದಾರರು 10% ಸೆಸ್ ಅನ್ನು ಹೊಂದಿರುತ್ತಾರೆ ಇದು ಮುದ್ರಾಂಕ ಶುಲ್ಕದ ಮೇಲೆ ಅನ್ವಯಿಸುತ್ತದೆ. ಹೆಚ್ಚುವರಿಯಾಗಿ, ನಗರ ಪ್ರದೇಶಗಳಲ್ಲಿ ರೂ 35 ಲಕ್ಷಕ್ಕಿಂತ ಹೆಚ್ಚಿನ ಆಸ್ತಿಗಳಿಗೆ 2% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ 35 ಲಕ್ಷಕ್ಕಿಂತ ಹೆಚ್ಚಿನ ಆಸ್ತಿಗಳಿಗೆ 3% ಸರ್ಚಾರ್ಜ್ ಇದೆ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications