ಇತ್ತೀಚೆಗೆ ರಾಜಕೀಯ ಪಕ್ಷಗಳಲ್ಲಿ ಜನರಿಗೆ ಉಚಿತ ಕೊಡುಗೆ ನೀಡುವ ಸ್ಪರ್ಧೆ ಏರ್ಪಟ್ಟಿದೆ ಎಂದರೆ ತಪ್ಪಾಗಲ್ಲ. ಅಂದರೆ ಚುನಾವಣೆ ಗೆಲ್ಲಲು ಜನರಿಗೆ ನೀಡುವ ಉಚಿತ ಕೊಡುಗೆಗಳೇ ಅವರ ಅಸ್ತ್ರವಾಗಿವೆ. 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಿಸಿತು. ಪಂಚ ಗ್ಯಾರಂಟಿಗಳ ಸಹಾಯದಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ಈಗ ಇದೇ ದಾರಿಯನ್ನು ಬೇರೆ ಬೇರೆ ಪಕ್ಷಗಳೂ ಕೂಡ ಹಿಡಿಯುತ್ತಿವೆ. ಕುಚಿತ ಕೊಡುಗೆಗಳನ್ನು ನೀಡಿದರೆ ಜನ ವೋಟ್ ಹಾಕ್ತಾರೆ ಎಂಬ ಭಾವನೆಯಿಂದ, ಒಂದಷ್ಟು ಉಚಿತ ಯೋಜನೆಗಳನ್ನೂ ಘೋಷಣೆ ಮಾಡಿದ್ದಾರೆ. ಆದರೆ ಉಚಿತ ಕೊಡುಗೆ ನೀಡುವ ರಾಜಕೀಯ ಪಕ್ಷಗಳ ತಂತ್ರವನ್ನು, ಇನ್ಫೋಸಿಸ್‌ನ ಎನ್.ಆರ್.ನಾರಾಯಣಮೂರ್ತಿ ಟೀಕಿಸಿದಂತೆ ಕಾಣುತ್ತಿದೆ. ಅಂದರೆ ಅವರು ಉಚಿತ ಕೊಡುಗೆಗಳು ಬಡತನವನ್ನು ಹೋಗಲಾಡಿಸಲ್ಲ ಎಂದು ಹೇಳಿದ್ದಾರೆ.

ಹೌದು, ಭಾರತದಲ್ಲಿ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲಲು ಉಚಿತ ಕೊಡುಗೆಗಳನ್ನು ನೀಡುವ ಪದ್ಧತಿ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿದೆ. ಇವುಗಳಿಂದಾದ ಪರಿಣಾಮಗಳ ಕುರಿತು ಒಂದು ಡಿಬೇಟ್ ನಡೆದಿದೆ. ಈ ಡಿಬೇಟ್ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ, ಉಚಿತ ಕೊಡುಗೆಗಳು ಬಡತನವನ್ನು ನಿವಾರಿಸಲು ಸಾಧ್ಯವಿಲ್ಲ. ಹಾಗೆಯೇ ಉದ್ಯೋಗವನ್ನೂ ಸೃಷ್ಟಿ ಮಾಡುವುದಿಲ್ಲ. ಉದ್ಯೋಗ ಸೃಷ್ಟಿಯ ಮೂಲಕವೇ ದೇಶವನ್ನು ಬಡತನದಿಂದ ಮುಕ್ತಗೊಳಿಸಬೇಕೇ ಹೊರತು, ಉಚಿತ ಕೊಡುಗೆಗಳನ್ನು ನೀಡುವುದರಿಂದಲ್ಲ ಎಂದು ಅಭಿಪ್ರಾಯ ಹೇಳಿದ್ದಾರೆ..ಹಾಗೆಯೇ ಉದ್ಯೋಗ ಸೃಷ್ಟಿಯ ಮಹತ್ವ ಏನೆಂಬುದನ್ನೂ ವಿವರಿಸಿದ್ದಾರೆ.
ಉದ್ಯೋಗ ಸೃಷ್ಟಿಯ ಮಹತ್ವ:
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಅವರು, ಬಡತನದ ವಿರುದ್ಧ ಹೋರಾಡುವ ಅತಿ ಪರಿಣಾಮಕಾರಿ ಅಸ್ತ್ರವೆಂದರೆ ಅದು ಉದ್ಯೋಗ. ಉದ್ಯಮಿಗಳು ಹೊಸ ಉದ್ಯೋಗಾವಕಾಶಗಳನ್ನು ನೀಡಿದರೆ, ಬಡತನವು ಸ್ವಯಂ ಹೋದಂತೆ ಮಾಯವಾಗುತ್ತದೆ ಎಂದು ವಿವರಿಸಿದರು. ಹಾಗೂ ನೀವು ಪ್ರತಿಯೊಬ್ಬರೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನೀವು ಬಡತನದ ಸಮಸ್ಯೆಯನ್ನು ಉಚಿತ ಕೊಡುಗೆಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಯಾವುದೇ ದೇಶವು ಉಚಿತ ಕೊಡುಗೆಗಳ ಮೂಲಕ ಬಡತನ ನಿವಾರಣೆಯಲ್ಲಿ ಯಶಸ್ವಿಯಾಗಿಲ್ಲ. ಉದ್ಯೋಗ ಸೃಷ್ಟಿಯ ಮೂಲಕ ವ್ಯಕ್ತಿಗಳ ಆತ್ಮನಿರ್ಭರತೆಯನ್ನು ಬೆಳೆಸಲು ಸಾಧ್ಯವಿದೆ. ಅದೇ ದಾರಿಯಲ್ಲಿ ಸಾಗಿದರೆ ಮಾತ್ರ ದೀರ್ಘಕಾಲಿಕ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಒತ್ತಿ ಹೇಳಿದ್ದಾರೆ.
ಉಚಿತ ಕೊಡುಗೆಗಳ ಪರಿಗಣನೆ:
ಸರ್ಕಾರವು ನೀಡುವ ಉಚಿತ ಸೇವೆಗಳು ಅಥವಾ ಆರ್ಥಿಕ ನೆರವಿನ ಹಿಂದೆ ಒಂದು ಉದ್ದೇಶ ಇರುತ್ತೆ. ಅಂದರೆ ಉಚಿತತೆಗಳ ಹಿಂದೆ ಯಾವುದೇ ರೀತಿಯ ಪ್ರತಿಫಲವನ್ನು ನಿರೀಕ್ಷಿಸದೆ ನೀಡಿದರೆ ಜನರು ಸೋಮಾರಿಯಾಗುತ್ತಾರೆಂದುಅಭಿಪ್ರಾಯಪಟ್ಟರು. ಹಾಗೂ ಉಚಿತ ಸೇವೆ ಪಡೆಯುವ ವ್ಯಕ್ತಿಯು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತೆ ಮಾಡುವ ವ್ಯವಸ್ಥೆ ಇರಬೇಕು ಎಂದು ಅವರು ಹೇಳಿದರು.
ಅಂದರೆ ಅವರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯು ಉಚಿತ ವಿದ್ಯುತ್ ಪಡೆಯುತ್ತಾನೆ ಎಂದಾದರೆ, ಆತನ ಮಕ್ಕಳ ಶಿಕ್ಷಣದಲ್ಲಿ ಸುಧಾರಣೆ ಆಗಿದೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಆಗ ಅವರು ಕೊಟ್ಟ ಉಚಿತ ಕೊಡುಗೆಯನ್ನು ಸರಿಯಾದ ದಾರಿಯಲ್ಲಿ ಬಳಸಿಕೊಳ್ಳುತ್ತಾರೆ. ಇದರ ಮೂಲಕ, ಉಚಿತ ಕೊಡುಗೆಗಳು ತಾತ್ಕಾಲಿಕ ಲಾಭ ನೀಡುವುದರ ಜೊತೆಗೆ ದೀರ್ಘಕಾಲಿಕ ಉದ್ದೇಶವನ್ನು ಪೂರೈಸಬೇಕೆಂಬುದನ್ನು ಅವರು ಸೂಚಿಸಿದರು.
ಉಚಿತ ಕೊಡುಗೆಗಳ ಪ್ರಭಾವದ ಬಗ್ಗೆ ಸುಪ್ರೀಂ ಕೋರ್ಟ್ ನಿಲುವು:
ಜನರಿಗೆ ನೀಡಲಾಗುತ್ತಿರುವ ಉಚಿತ ಕೊಡುಗೆಗಳ ಪ್ರಭಾವದ ಬಗ್ಗೆ, ಸುಪ್ರೀಂ ಕೋರ್ಟ್ ಕೂಡ ಚರ್ಚೆ ನಡೆಸಿದೆ. ಅಂದರೆ ಈ ರೀತಿಯ ಕೊಡುಗೆಗಳು ಜನರನ್ನು ಕಾರ್ಯಪಟುಗಳಾಗಿ ಮಾಡುವ ಬದಲು ಪರಾವಲಂಬಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದೆ. ಹಾಲಿ ನ್ಯಾಯಪೀಠವು, ರಾಜಕೀಯ ಪಕ್ಷಗಳು ನೀಡುತ್ತಿರುವ ಉಚಿತ ಕೊಡುಗೆಗಳು, ಜನರನ್ನು ದುಡಿಯದೆಯೇ ಬದುಕಲು ಪ್ರೇರೇಪಿಸುತ್ತಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ. ಈ ಬಗ್ಗೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರು, ನಾವು ಉಚಿತ ಕೊಡುಗೆಗಳ ಮೂಲಕ ಜನರನ್ನು ಕೆಲಸಕ್ಕೆ ಹೋಗದಂತೆ ಮಾಡುತ್ತಿಲ್ಲವೇ? ಬದಲಿಗೆ ಅವರನ್ನು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದು ಹೇಳಿದ್ದಾರೆ.
ಭಾರತದ ಆರ್ಥಿಕ ನೆಲೆಗಟ್ಟಿನ ಪ್ರಭಾವ:
ಉಚಿತ ಕೊಡುಗೆಗಳಿಂದ ಭಾರತದ ಆರ್ಥಿಕ ನೆಲೆಗಟ್ಟಿನ ಮೇಲೂ ಪ್ರಭಾವ ಬೀರುತ್ತದೆ. ಹೇಗೆ ಎಂದರೆ ಭಾರತವು ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಈಗಾಗಲೇ ಇಲ್ಲಿ ಸರ್ಕಾರ 80 ಕೋಟಿಗೂ ಹೆಚ್ಚು ಜನರಿಗೆ ಪಡಿತರ ನೀಡುತ್ತಿದೆ. ಅಗತ್ಯವಾಗಿರುವ ಪಡಿತರವೇ ಉಚಿತವಾಗಿ ಸಿಗುತ್ತದೆ ಎಂದಾಗ, ಜನರು ಕೆಲಸ ಮಾಡುವ ಮನೋಭಾವವಾಗಲೀ, ಆಸಕ್ತಿಯನ್ನಾಗಲಿ ಹೊಂದುವುದಿಲ್ಲ. ಕ್ರಮೇಣ ಪಡಿತರ ಬಿಟ್ಟು ಬೇರೆ ಬೇರೆ ಯೋಜನೆಗಳೂ ಘೋಷಣೆಯಾಗಿವೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತವೆ. ಆಗ ದೇಶದಲ್ಲಿ ಉದ್ಯೋಗ ಸೃಷ್ಟಿಯಾದರೂ ಕೆಲಸ ಮಾಡುವ ಮನಸ್ಸು ಜನರಿಗಿರುವುದಿಲ್ಲ. ಹೀಗಾಗಿ ಜನರಿಗೆ ದುಡಿಮೆಯಿಲ್ಲದಿದ್ದರೂ ಎಲ್ಲವೂ ಉಚಿತವಾಗಿ ಸಿಗುತ್ತದೆ. ಹಾಗೆಯೇ ದುಡಿಮೆ ಮಾಡದ ಜನರಿಂದ ತೆರಿಗೆ ವಸೂಲಿಯೂ ಆಗುವುದಿಲ್ಲ. ಒಟ್ಟಾರೆಯಾಗಿ ಎಲ್ಲಾ ರೀತಿಯಿಂದಲೂ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಸಮಾಜಿಕ ಭದ್ರತೆ ಪ್ರೊಗ್ರಾಮುಗಳು ಅವಶ್ಯಕವಾದರೂ, ಅವುಗಳನ್ನು ದೀರ್ಘಕಾಲ ಶಾಶ್ವತ ಪರಿಹಾರವಾಗಿ ಬಳಸುವುದು ದೇಶದ ಆರ್ಥಿಕ ಅಭಿವೃದ್ಧಿಗೆ ತೊಡಕು ಉಂಟುಮಾಡಬಹುದು. ಸರ್ಕಾರಗಳು ಜನರನ್ನು ಸ್ವಾವಲಂಬಿಯಾಗಿ ಬದುಕಲು ಪ್ರೇರೇಪಿಸಬೇಕು ಎಂಬುದು ನಾರಾಯಣ ಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ಅಭಿಪ್ರಾಯ.
ಉಚಿತ ಕೊಡುಗೆಗಳ ಬದಲು ಪರ್ಯಾಯ ಮಾರ್ಗ:
ಜನರಿಗಾಗಿ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಿದರೆ ಜನ ದುಡಿದ ಹಣದಲ್ಲಿ, ಸಂತೃಪ್ತಿ ಜೀವನ ಸಾಗಿಸುತ್ತಾರೆ. ಅಲ್ಲದೇ ತಮ್ಮ ಜೀವನವನ್ನು ಸ್ವತಃ ಕಟ್ಟಿಕೊಳ್ಳಬಹುದು. ಉದ್ಯೋಗದ ಪರ್ಯಾಯವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಬಹುದು. ಇದರಿಂದ ಜನರು ಸ್ವ-ಉದ್ಯೋಗಿಗಳಾಗಲು ಪ್ರೋತ್ಸಾಹಿಸಿದಂತಾಗುತ್ತದೆ. ಅಂತೆಯೇ ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗೆ ಉತ್ತೇಜನೆ ನೀಡುವುದು ಉತ್ತಮ ದಾರಿ ನೀಡುವುದರಿಂದ, ಸಮಾಜದ ಆರ್ಥಿಕ ಶಕ್ತೀಕರಣವಾಗುತ್ತದೆ. ಉಚಿತ ಕೊಡುಗೆಗಳ ಬದಲಿಗೆ, ಜನರು ತಮ್ಮ ಜೀವನ ಶೈಲಿಯನ್ನು ಸುಧಾರಿಸಲು ಬಳಸಬಹುದಾದ ಆರ್ಥಿಕ ಪ್ರೋತ್ಸಾಹ ನೀಡಿದರೆ ಸಾಕಾಗಿರುತ್ತದೆ.
ಒಟ್ಟಿನಲ್ಲಿ ಉಚಿತ ಕೊಡುಗೆಗಳ ಬಗ್ಗೆ ದೇಶದಲ್ಲಿ ತೀವ್ರವಾದ ಚರ್ಚೆ ನಡೆಯುತ್ತಿದೆ. ಉದ್ಯೋಗ ಸೃಷ್ಟಿಯು ದೀರ್ಘಕಾಲದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದು ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಉಚಿತ ಕೊಡುಗೆಗಳು ಜನರನ್ನು ಪರಾವಲಂಬಿಗಳಾಗಿ ಮಾಡುತ್ತವೆ ಎಂಬ ಆತಂಕ ವ್ಯಕ್ತಪಡಿಸಿದೆ. ಉಚಿತ ಕೊಡುಗೆಗಳ ಬದಲು, ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, ಮತ್ತು ಸ್ವಾವಲಂಬನೆಯತ್ತ ಒಲವು ಹೆಚ್ಚಾದರೆ, ಭಾರತ ದೀರ್ಘಕಾಲದ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದು. ಯಾವುದೇ ರಾಜ್ಯ ಅಥವಾ ರಾಷ್ಟ್ರ ಮಟ್ಟದ ಚುನಾವಣೆ ಬಂದಾಗ, ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ಅಂಗವಾಗಿ ಹಲವಾರು ಉಚಿತ ಸೇವೆಗಳನ್ನು ಘೋಷಿಸುತ್ತವೆ. ಇದು ಮತದಾರರನ್ನು ಆಕರ್ಷಿಸಲು ಬಳಸುವ ಪ್ರಮುಖ ತಂತ್ರವಾಗಿದೆ. ಉಚಿತ ವಿದ್ಯುತ್, ಉಚಿತ ಆಹಾರ ಧಾನ್ಯ, ಮಹಿಳೆಯರಿಗೆ ಉಚಿತ ಸಾರಿಗೆ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ನಿರುದ್ಯೋಗ ಭತ್ಯೆ ಮುಂತಾದವು ಇವುಗಳಲ್ಲಿ ಪ್ರಮುಖವಾಗಿವೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications