ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಇನ್ಫೋಸಿಸ್ (Infosys) ತನ್ನ Q3FY26 ಆರ್ಥಿಕ ಫಲಿತಾಂಶಗಳನ್ನು ಜನವರಿ 14 ರಂದು ಪ್ರಕಟ ಮಾಡಲು ಸಜ್ಜಾಗಿದೆ ಎಂದು ವರದಿಯಾಗಿದೆ. ಕಂಪನಿ ಜನವರಿ 7 ರಂದು ನೀಡಿದ ನಿಯಂತ್ರಕ ದಾಖಲೆಯಲ್ಲಿ, "ಡಿಸೆಂಬರ್ 31, 2025ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದ ಫಲಿತಾಂಶಗಳನ್ನು ಜನವರಿ 14, 2026 ರಂದು ಸಂಜೆ 3:45ಕ್ಕೆ (ಭಾರತೀಯ ಕಾಲಮಾನ) ಪ್ರಕಟಿಸುವ ಸಾಧ್ಯತೆ ಇದೆ. ಇನ್‌ಫೋಸಿಸ್ ತಂಡವು ಜನವರಿ 14, 2026 ರಂದು ಸಂಜೆ 4:30 ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಈ ಪ್ರಕಟಣೆಯನ್ನು ಮಾಡಲಿದೆ" ಎಂದು ತಿಳಿಸಿದೆ. ಇನ್ನು ತ್ರೈಮಾಸಿಕಕ್ಕೆ ಸಂಬಂಧಿಸಿದ ಈ ಫಲಿತಾಂಶಗಳು ಹೂಡಿಕೆದಾರರಿಗೆ ಮಹತ್ವದ್ದಾಗಿರುವುದರಿಂದ, ಕಂಪನಿಯ ಭವಿಷ್ಯದ ಏಳಿಗೆ ಬಗ್ಗೆ ಭಾರೀ ಚರ್ಚೆಗಳು ಮುಂದಾಗಿದೆ.

ವಿಶ್ಲೇಷಕರ ಅಭಿಪ್ರಾಯ
ವಿಶ್ಲೇಷಕರು ಈ ತ್ರೈಮಾಸಿಕದಲ್ಲಿ ಇನ್ಫೋಸಿಸ್‌ನ ಕಾರ್ಯಕ್ಷಮತೆ ದುರ್ಬಲವಾಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ವಾರ್ಷಿಕ ರಜೆಗಳು (furloughs) ಮತ್ತು ಗ್ರಾಹಕರ ಮಂದಗತಿಯ ಆರ್ಥಿಕ ವೆಚ್ಚಗಳು ಈ ಅವಧಿಯಲ್ಲಿ ಐಟಿ ಕಂಪನಿಗಳ ಮೇಲೆ ಒತ್ತಡ ಬೀಳಲು ಮುಖ್ಯ ಕಾರಣ ಎಂದು ಹೇಳಲಾಗಿದೆ. ಡಿಸೆಂಬರ್ ತ್ರೈಮಾಸಿಕವು ಸಾಮಾನ್ಯವಾಗಿ ರಜಾದಿನಗಳಿಂದ ಪ್ರಭಾವಿತವಾಗಿರುತ್ತದೆ.
ಐಟಿ ಸೆಕ್ಟರ್‌ನಲ್ಲಿ ಮಂದಗತಿಯ ಪ್ರಯಾಣ ಮತ್ತು ರೂಪಾಯಿ ಕುಸಿತದ ಕಾರಣ ಇನ್ಫೋಸಿಸ್ Q3 ಫಲಿತಾಂಶಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದೆ.
ಜೆಎಂ ಫೈನಾನ್ಷಿಯಲ್ ರಜೆಯ ಪ್ರಭಾವ ಕಳೆದ ವರ್ಷದಂತೆಯೇ ಇರಲಿದೆ ಎಂದಿದೆ. ಗ್ರಾಹಕರು ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದರಿಂದ ಡೀಲ್‌ಗಳು ವೆಚ್ಚ-ದಕ್ಷತೆ ಮೇಲೆ ಕೇಂದ್ರೀಕೃತವಾಗಿವೆ. ಹೀಗಾಗಿ ಬೇಡಿಕೆಯ ವಾತಾವರಣದಲ್ಲಿ ಗಣನೀಯ ಬದಲಾವಣೆಯಿಲ್ಲ ಎಂದು ಬ್ರೋಕರೇಜ್‌ಗಳು ಹೇಳಿವೆ.
ಸಿಸ್ಟಮಾಟಿಕ್ಸ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್, Q3FY26 ಕಾರ್ಯಕ್ಷಮತೆಯ ಮೇಲೆ ಋತುಮಾನದ ಸಮಸ್ಯೆಗಳು ಪ್ರಭಾವ ಬೀರಲಿವೆ ಎಂದು ಹೇಳಿದೆ. ರಜೆಗಳು ಮತ್ತು ಕಡಿಮೆ ಕೆಲಸದ ದಿನಗಳ ಕಾರಣ, ದೊಡ್ಡ ಐಟಿ ಕಂಪನಿಗಳು 0-2% ಅನುಕ್ರಮ USD ಆದಾಯ ಬೆಳವಣಿಗೆ ವರದಿ ಮಾಡಬಹುದು ಎನ್ನಲಾಗಿದೆ. ಮೋತಿಲಾಲ್ ಓಸ್ವಾಲ್ ಸಹ ಇದನ್ನು ಬೆಂಬಲಿಸಿದ್ದು, ಗ್ರಾಹಕರು ಕೂಡಾ ಹೂಡಿಕೆ ಮಾಡಲು ಹಿಂಜರಿಯುವ ಸಾಧ್ಯತೆ ಇದೆ ಎಂದಿದ್ದಾರೆ.
ಫಲಿತಾಂಶಗಳ ಘೋಷಣೆಯ ನಂತರ, ಇನ್ಫೋಸಿಸ್ ಷೇರುಗಳು (NSE/BSE) ಏರುಪೇರಾಗಬಹುದು ಎಂದು ಹೇಳಲಾಗಿದೆ. ಅಂದರೆ ಹಿಂದಿನ ತ್ರೈಮಾಸಿಕಗಳಲ್ಲಿ ಫಲಿತಾಂಶಗಳು ಪಾಸಿಟಿವ್ ಇದ್ದ ಕಾರಣ, ಷೇರು ಬೆಲೆ 2% ರಿಂದ 5%ಗೆ ಏರಿಕೆ ಕಂಡಿತ್ತು.
ಇನ್ಫೋಸಿಸ್ Q3 FY26 ಫಲಿತಾಂಶ ಘೋಷಣೆ ಎಂದರೇನು?
ಇನ್ಫೋಸಿಸ್ Q3 FY26 ಫಲಿತಾಂಶ ಘೋಷಣೆ ಎಂದರೆ, ಇನ್ಫೋಸಿಸ್ ಕಂಪನಿಯು ತನ್ನ ಹಣಕಾಸು ವರ್ಷ 2025-26ರ ಮೂರನೇ ತ್ರೈಮಾಸಿಕ (ಅ.1 ರಿಂದ ಡಿ.31, 2025 ವರೆಗೆ) ಆರ್ಥಿಕ ಬೆಳವಣಿಗೆ ಬಗ್ಗೆ ಸಾರ್ವಜನಿಕವಾಗಿ ಘೋಷಿಸುವುದು. ಇದು ಕಂಪನಿಯ ಆದಾಯ, ಲಾಭ, ವೆಚ್ಚ, ಹೊಸ ಒಪ್ಪಂದಗಳು ಭವಿಷ್ಯದ ಮಾರ್ಗದರ್ಶನ್ (ಗೈಡೆನ್ಸ್) ಕುರಿತು ಮಾಹಿತಿ ನೀಡುವುದಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications