ಟೆಕ್ ದೈತ್ಯ, ಇನ್ಫೋಸಿಸ್ ಶುಕ್ರವಾರದ ಆರಂಭಿಕ ವಹಿವಾಟಿನ ಭಾರೀ ನಷ್ಟವನ್ನು ಕಂಡಿದೆ, ನಷ್ಟವೂ ಆಗಿದೆ. ಇನ್ಫೋಸಿಸ್ ಷೇರುಗಳು ಶೇಕಡ 4ಕ್ಕಿಂತ ಅಧಿಕ ಕುಸಿತ ಕಂಡಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯದಲ್ಲಿ ಕೆಲವೇ ನಿಮಿಷಗಳಲ್ಲಿ 26000 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ.
ಮೌಲ್ಯದ ಲೆಕ್ಕಾಚಾರದಲ್ಲಿ 6 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ಇನ್ನು ಎಡಿಆರ್ ಶೇಕಡ 6.5 ರಷ್ಟು ಇಳಿಕೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಲಾಭವು, ಆದಾಯವು ಏರಿಕೆಯಾದರೂ ಕೂಡಾ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಇನ್ಫೋಸಿಸ್ ಸ್ಟಾಕ್ ಕುಸಿತ ಕಂಡಿದೆ.

ಆರಂಭಿಕ ವಹಿವಾಟಿನಲ್ಲಿ ಇನ್ಫೋಸಿಸ್ ಷೇರಿನ ಬೆಲೆಯು ಬಿಎಸ್‌ಇಯಲ್ಲಿ ಶೇಕಡ 4.3ರಷ್ಟು ಇಳಿದು 1,402.10 ರೂಪಾಯಿಗೆ ಕನಿಷ್ಠಮಟ್ಟವನ್ನು ತಲುಪಿದೆ. ಇದರಿಂದಾಗಿ 26,137.31 ಕೋಟಿ ರೂಪಾಯಿಗೂ ಅಧಿಕ ಮಾರುಕಟ್ಟೆ ಮೌಲ್ಯ ನಷ್ಟವಾಗಿದೆ. ಇನ್ಫೋಸಿಸ್‌ನ ಒಟ್ಟು ಮಾರುಕಟ್ಟೆ ಮೌಲ್ಯವು 5,81,707.19 ಕೋಟಿ ರೂಪಾಯಿ ಆಗಿದೆ.
ಆದರೆ ಇನ್ಫೋಸಿಸ್ ಕೆಲವು ನಷ್ಟಗಳಿಂದ ಚೇತರಿಸಿಕೊಂಡಿದೆ. ಆದರೂ ಷೇರು ಮಾತ್ರ ನಿರಂತರವಾಗಿ ಇಳಿಯುತ್ತಲೇ ಇದೆ. ಈ ಸಮಯಕ್ಕೆ ಇನ್ಫೋಸಿಸ್ ಷೇರು ಶೇಕಡ 2.55 ರಷ್ಟು ಇಳಿಕೆಯಾಗಿದ್ದು, 1,428.10 ರೂಪಾಯಿಗೆ ತಲುಪಿದೆ. ಹಾಗೆಯೇ ಇಂದಿನ ಟಾಪ್ ಲೂಸರ್ ಆಗಿದೆ.
ಈ ಹಿಂದಿನ ದಿನ ಇನ್ಫೋಸಿಸ್ ಷೇರುಗಳು 6,07,844.51 ಕೋಟಿ ರೂಪಾಯಿಯ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಪ್ರತಿ ಷೇರಿನ ಬೆಲೆ 1464.55 ರೂಪಾಯಿ ಆಗಿತ್ತು. ಈ ನಡುವೆ ಎರಡನೇ ತ್ರೈಮಾಸಿಕದ ವರದಿ ಪ್ರಕಟವಾದ ಬಳಿಕ ಟೆಕ್ ದೈತ್ಯದ ಅಮೇರಿಕನ್ ಡಿಪಾಸಿಟರಿ ರಿಸಿಪ್ಟ್ಸ್ (ಎಡಿಆರ್) ಎನ್‌ವೈಎಸ್‌ಇಯಲ್ಲಿ ಶೇಕಡ 6.53 ರಷ್ಟು ಕುಸಿದು ಗುರುವಾರ 16.46 ಡಾಲರ್‌ಗೆ ವಹಿವಾಟು ಕೊನೆ ಮಾಡಿದೆ. ಆದರೆ ಮಾರುಕಟ್ಟೆ ಸಮಯದ ನಂತರ, ಎಡಿಆರ್‌ಗಳು ಶೇಕಡ 0.73 ರಷ್ಟು ಏರಿಕೆಯಾಗಿ, 16.58 ಡಾಲರ್‌ಗೆ ತಲುಪಿದೆ.
ಎರಡನೇ ತ್ರೈಮಾಸಿಕ ವರದಿ
ತೆರಿಗೆ ಬಳಿಕ ಇನ್ಫೋಸಿಸ್ ನಿವ್ವಳ ಲಾಭವು 6,212 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದಾಯವು ತ್ರೈಮಾಸಿಕವಾಗಿ 38,994 ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ವರ್ಷ 2024ರ ಎರಡನೇ ತ್ರೈಮಾಸಿಕದಲ್ಲಿ ಲಾಭವು ಸುಮಾರು ಶೇಕಡ 4.49 ರಷ್ಟು ಏರಿಕೆಯಾಗಿದೆ.
ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಲಾಭವು 5,945 ಕೋಟಿ ರೂಪಾಯಿ ಆಗಿದೆ. ಎರಡನೇ ತ್ರೈಮಾಸಿಕದಲ್ಲಿ ಮೊದಲ ತ್ರೈಮಾಸಿಕದಿಂದ ಲಾಭವು ಸುಮಾರು ಶೇಕಡ 4.49 ರಷ್ಟು ಏರಿಕೆಯಾಗಿದೆ. ಹಣಕಾಸು ವರ್ಷ 2023 ರಲ್ಲಿ ಎರಡನೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಲಾಭವು ಶೇಕಡ 3.17 ರಷ್ಟು ಹೆಚ್ಚಾಗಿ 6,021 ಕೋಟಿ ರೂಪಾಯಿಗೆ ತಲುಪಿದೆ.
ಇನ್ಫೋಸಿಸ್ ನಿವ್ವಳ ಆದಾಯವು ನಿರೀಕ್ಷೆಗೆ ಅನುಗುಣವಾಗಿ ಏರಿಕೆಯಾಗಿದೆ. ಕಂಪನಿಯು 2022-23 ರ ಹಣಕಾಸು ವರ್ಷಕ್ಕೆ ಲಾಭಾಂಶವನ್ನು ಘೋಷಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯವು ಶೇಕಡ 2.3 ರಷ್ಟು ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಶೇಕಡ 2.5 ರಷ್ಟು ಹೆಚ್ಚಳವಾಗಿದೆ. ಕಂಪನಿಯ ಕಾರ್ಯಾಚರಣೆಯ ಲಾಭವು ಶೇಕಡ 21.2 ರಷ್ಟು ಏರಿಕೆಯಾಗಿದೆ.


Click it and Unblock the Notifications