ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿಗೆ ಭಾರಿ ನಿರಾಸೆಯಾಗಿದೆ. ಅದೇನೆಂದರೆ ಇನ್ಫೋಸಿಸ್ ಷೇರುಗಳು ಇಂದು ( ಮಾರ್ಚ್ 12) 3% ಕ್ಕಿಂತ ಹೆಚ್ಚು ಕುಸಿದಿವೆ.. ಇದಕ್ಕೆ ಪ್ರಮುಖ ಕಾರಣ ಮಾರ್ಗನ್ ಸ್ಟಾನ್ಲಿ ತನ್ನ ರೇಟಿಂಗ್‌ನ ಅಧಿಕ ತೂಕದಿಂದ ಸಮಾನ ತೂಕಕ್ಕೆ ಬದಲಿಸಿದ್ದಾರೆ. ಇದು ಷೇರುಗಳ ಗುರಿ ಬೆಲೆಯನ್ನು 2,150 ರೂ. ನಿಂದ 1,740 ರೂ.ಗೆ ಕಡಿಮೆ ಮಾಡುವಂತಾಗಿದೆ. ಹೀಗೆ ಇನ್ಫೋಸಿಸ್ ಷೇರು ಕುಸಿತಕ್ಕೆ ಕಾರಣವಾಗಿದೆ.

ಮಾರ್ಗನ್ ಸ್ಟಾನ್ಲಿ ಎಚ್ಚರಿಕೆ:
ವಿಶ್ಲೇಷಕರ ಅಭಿಪ್ರಾಯದ ಪ್ರಕಾರ ಮಾರ್ಗನ್ ಸ್ಟಾನ್ಲಿ ಭಾರತೀಯ ಐಟಿ ಸೇವೆಗಳ ಆದಾಯ ಬೆಳವಣಿಗೆ ಮತ್ತು ಮೌಲ್ಯಮಾಪನದಲ್ಲಿ ತೊಂದರೆಯ ಅಪಾಯಗಳು ಗೋಚರಿಸುತ್ತಿವೆ ಎನ್ನಲಾಗಿದೆ. ಅಂದರೆ ಈ ವಲಯದಲ್ಲಿ ಒಳಪಡುವ ಕಂಪನಿಗಳು, ತಮ್ಮ ಆದಾಯ ಹೆಚ್ಚಿಸಲು ಮತ್ತು ತಮ್ಮ ಷೇರು ಮೌಲ್ಯವನ್ನು ಉಳಿಸಿಕೊಳ್ಳಲು ಕಷ್ಟ ಅನುಭವಿಸುತ್ತಿವೆ ಎಂಬುದಾಗಿದೆ.
ಯುಎಸ್ ಆರ್ಥಿಕ ಸ್ಥಿತಿಯಿಂದ ಒತ್ತಡ:
ಗಮನಿಸಬಹುದಾದರೆ ಭಾರತೀಯ ಐಟಿ ಕಂಪನಿಗಳ ಆದಾಯದ ಬಹುತೇಕ ಭಾಗ, ಅಮೆರಿಕದ ಮಾರುಕಟ್ಟೆಯಿಂದ ಬರುತ್ತದೆ. ಹಾಗೆಯೇ ಇನ್ಫೋಸಿಸ್‌ಗೂ ಅಮೆರಿಕದಿಂದಲೇ ಬರುತ್ತದೆ. 2023-24ರಲ್ಲಿ ಅದರ ಒಟ್ಟು ಆದಾಯದ 60% ಕ್ಕಿಂತ ಹೆಚ್ಚು ಅಮೆರಿಕದಿಂದಲೇ ಬಂದಿದೆ. ಆದರೆ ಅಮೆರಿಕದ ಆರ್ಥಿಕತೆ ಸದ್ದಿಲ್ಲದ ಹಿಂಜರಿತವನ್ನು ಅನುಭವಿಸುತ್ತಿರುವುದರಿಂದ ಹೊಸ ಪ್ರಾಜೆಕ್ಟ್‌ಗಳ ಕೊಡುಗೆ ಮತ್ತು ಹೂಡಿಕೆಗಳು ನಿಧಾನಗತಿಯಾಗಿದೆ. ಇದರಿಂದಾಗಿ, ಐಟಿ ಕಂಪನಿಗಳ ಆದಾಯವೂ ಪ್ರಭಾವಿತವಾಗುತ್ತಿದೆ.
ನಿಫ್ಟಿ ಐಟಿ ಸೂಚ್ಯಂಕದಲ್ಲಿ ಭಾರಿ ಕುಸಿತ:
2025ರಲ್ಲಿ ನಿಫ್ಟಿ ಸೂಚ್ಯಂಕವು ಸುಮಾರು 14%ನಷ್ಟು ಕುಸಿದಿದೆ..ಇದು ರಿಯಲ್ ಎಸ್ಟೇಟ್ ವಲಯದ ನಂತರ ಅತ್ಯಂತ ದುರ್ಬಲ ಪ್ರದರ್ಶನ ನೀಡುತ್ತಿರುವ ವಲಯವಾಗಿದೆ. ಹಾಗೂ ಈ ಕುಸಿತದ ಪ್ರಮುಖ ಕಾರಣಗಳಲ್ಲಿ ಹೂಡಿಕೆದಾರರಲ್ಲಿ ವಲಯದ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆ ಒಂದಾಗಿದೆ.
ರೂಪಾಯಿ ಮೌಲ್ಯದ ಕುಸಿತದ ಪರಿಣಾಮ:
ಗಮನಾರ್ಹವಾಗಿ ಯಾವಾಗ ರೂಪಾಯಿ ಮೌಲ್ಯ ಕುಸಿಯುತ್ತದೆಯೋ ಆಗ, ಭಾರತೀಯ ಐಟಿ ಕಂಪನಿಗಳಿಗೆ ಲಾಭವಾಗುತ್ತದೆ. ಏಕೆಂದರೆ ಅವರ ಆದಾಯದ ಹೆಚ್ಚಿನ ಭಾಗ ಡಾಲರ್‌ನಲ್ಲಿ ಬರುತ್ತದೆ. ಆದರೆ ಈ ಬಾರಿ ಮಾತ್ರ ರೂಪಾಯಿ ಮೌಲ್ಯ ಕುಸಿತದಿಂದಾಗಿ ಹೆಚ್ಚಿನ ಪ್ರಯೋಜನವಾಗಿಲ್ಲ. ಹೂಡಿಕೆದಾರರು ಐಟಿ ವಲಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಎಲ್ಲಾ ಬ್ರೋಕರೇಜ್ ಸಂಸ್ಥೆಗಳು ಇನ್ಫೋಸಿಸ್ ಷೇರುಗಳ ಮೇಲೆ ನಕಾರಾತ್ಮಕ ದೃಷ್ಟಿಕೋನ ಹೊಂದಿಲ್ಲ. ಕಳೆದ ವಾರ CLSA, ಇನ್ಫೋಸಿಸ್ ರೇಟಿಂಗ್‌ನ ಹೋಲ್ಡ್‌ನಿಂದ ಸಂಗ್ರಹಣೆಗೆ ಅಪ್‌ಗ್ರೇಡ್ ಮಾಡಿತು. ಹಾಗೆಯೇ 12 ತಿಂಗಳ ಗುರಿ ಬೆಲೆಯನ್ನು 1,978 ರೂ.ಗೆ ನಿಗದಿಪಡಿಸಿದೆ.
ಇನ್ಫೋಸಿಸ್ ಗೆ ಏನು ಮುಂದಿರುವ ಸವಾಲುಗಳು..?
ಪ್ರತಿಷ್ಠಿತ ಐಟಿ ಕಂಪನಿಯಾದ ಇನ್ಫೋಸಿಸ್ ತನ್ನ ಆದಾಯದ 60% ಕ್ಕೂ ಹೆಚ್ಚು ಉತ್ತರ ಅಮೆರಿಕಾದಿಂದ ಪಡೆಯುತ್ತದೆ. ಆದರೆ ಆ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಭಾವನೆ ದುರ್ಬಲವಾಗಿದೆ. ಪ್ರಮುಖ ಹೂಡಿಕೆದಾರರು ಹೊಸ ಯೋಜನೆಗಳಿಗೆ ಹಸಿರು ನಿಶಾನೆ ನೀಡುವುದರಲ್ಲಿ ಹಿಂಜರಿದಿದ್ದಾರೆ. ಇದು ಕೂಡ ಕೋರ್ ಐಟಿ ಸೇವೆಗಳ ತುರ್ತು ಅಗತ್ಯವಿಲ್ಲದಂತೆ ಮಾಡುತ್ತಿರುವುದು ಮತ್ತು ಇದರ ಪರಿಣಾಮವಾಗಿ ಇನ್ಫೋಸಿಸ್ ಸೇರಿ ಅನೇಕ ಕಂಪನಿಗಳು ಆರ್ಥಿಕ ಅನುಮಾನ ಎದುರಿಸುತ್ತಿವೆ. ಹಾಗೆಯೇ ಇನ್ಫೋಸಿಸ್ ಹೂಡಿಕೆದಾರರು ಈ ಆರ್ಥಿಕ ಅಸ್ಥಿರತೆಯೊಂದಿಗೆ ಕಂಪನಿಯ ವೇಗ ತಗ್ಗುವಿಕೆ ಹೇಗೆ ನಿರ್ವಹಿಸುತ್ತದೆ ಎಂಬುದರ ಮೇಲೆ ಗಮನಹರಿಸಬೇಕಾಗಿದೆ. ಗ್ರಾಹಕರ ಬಜೆಟ್ ಕಡಿತ ಮತ್ತು ಹೊಸ ಯೋಜನೆಗಳ ಅನುಮೋದನೆ ವಿಳಂಬವಾಗುತ್ತಿರುವುದು ಕಂಪನಿಯ ಮುಂದಿನ ಬೆಳವಣಿಗೆಗೆ ಹಿನ್ನಡೆಯಾಗಬಹುದು.
ಇನ್ನು ಟ್ರೆಂಡ್‌ಲೈನ್ ಟೇಟಾ ಪ್ರಕಾರ, ಇನ್ಫೋಸಿಸ್ ಷೇರುಗಳನ್ನು ಟ್ರ್ಯಾಕ್ ಮಾಡುವ 40 ವಿಶ್ಲೇಷಕರಲ್ಲಿ 28 ಜನರು ಖರೀದಿ ರೇಟಿಂಗ್ ನೀಡಿದ್ದಾರೆ. ಒಟ್ಟಾರೆ ತಜ್ಞರ ಅಭಿಪ್ರಾಯದ ಪ್ರಕಾರ 2,097 ರೂ. ಗುರಿ ಬೆಲೆಯನ್ನು ನಿರ್ಧರಿಸಿದ್ದಾರೆ. ಇದು ಪ್ರಸ್ತುತ ಮೌಲ್ಯದ ಹೋಲಿಕೆಯಲ್ಲಿ 26% ವೃದ್ಧಿಯ ನಿರೀಕ್ಷೆ ಸೂಚಿಸುತ್ತದೆ. ಅಂದಹಾಗೆ ಕಳೆದ ವರ್ಷದಲ್ಲಿ ಇನ್ಫೋಸಿಸ್ ಷೇರುಗಳ ಬದಲಾವಣೆಯಾಗಿದೆ. ಕಳೆದ ವರ್ಷದಲ್ಲಿ 3.81% ಶೇರುಗಳು ಏರಿಕೆ ಕಂಡರೆ, ಕಳೆದ ತಿಂಗಳಲ್ಲೇ 11.41% ಕುಸಿತವಾಗಿದೆ. ಅದರಂತೆ ಕಳೆದ ವಾರದಲ್ಲಿ ಮಾತ್ರ 1.58% ಕುಸಿತ ದಾಖಲಾಗಿದೆ.
ಇನ್ನು ಇನ್ಫೋಸಿಸ್ ಷೇರುಗಳ ಇತ್ತೀಚಿನ ಕುಸಿತಕ್ಕೆ ಅಮೆರಿಕದ ಆರ್ಥಿಕ ಅನಿಶ್ಚಿತತೆ ಕಾರಣವಾಗಿದೆ. ಅದರಂತೆ ಆದಾಯ ಬೆಳವಣಿಗೆಯಲ್ಲಿ ನಿಧಾನತೆ ಮತ್ತು ಮೌಲ್ಯಮಾಪನ ಒತ್ತಡ ಪ್ರಮುಖ ಕಾರಣಗಳಾಗಿವೆ. ಆದರೆ ಕೆಲವು ವಿಶ್ಲೇಷಕರು ಇನ್ನೂ ಈ ಷೇರುಗಳ ಮೇಲೆ ವಿಶ್ವಾಸವನ್ನು ಹೊಂದಿದ್ದಾರೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ವಾಪಾಸು ನೀಡಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ, ಹೂಡಿಕೆದಾರರು ತಮ್ಮ ಹೂಡಿಕೆ ನಿರ್ಧಾರವನ್ನು ಮಾಡಲು ಇನ್ಫೋಸಿಸ್ ಮತ್ತು ಐಟಿ ವಲಯದ ಮುಂದಿನ ಬೆಳವಣಿಗೆಗಳನ್ನು ಆಲೋಚಿಸಬೇಕಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಸಂಕಷ್ಟಕ್ಕೆ ದೂಡಬಹುದಾಗಿದೆ.


Click it and Unblock the Notifications