ಇಂಟೆಲ್ ತನ್ನ ಇತ್ತೀಚಿನ ಉದ್ಯೋಗ ಕಡಿತದ ಬಗ್ಗೆ ಪ್ರಕಟನೆ ನೀಡಿದೆ. ಸ್ಯಾಕ್ರಮೆಂಟೊ ಕೌಂಟಿಯಲ್ಲಿರುವ ಫೋಲ್ಸಮ್‌ನಲ್ಲಿರುವ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಸುಮಾರು 235 ಉದ್ಯೋಗಿಗಳನ್ನು ತೆಗೆದುಹಾಕುವ ಯೋಜನೆಯನ್ನು ಹೊಂದಿದ್ದಾರೆ. ಇದಾದ ಬಳಿಕ ಇನ್ನು ಡಿಸೆಂಬರ್ 31 ರಂದು ಉದ್ಯೋಗ ಕಡಿತ ಪ್ರಾರಂಭವಾಗುತ್ತವೆ.
ಎರಡು ವಾರಗಳ ಅವಧಿಯವರೆಗೆ, ಈ ವರ್ಷದೊಳಗೆ ಐದನೇ ಸುತ್ತಿನ ಉದ್ಯೋಗ ಕಡಿತ ನಡೆಯಲಿದೆ. ಸಂಸ್ಥೆಯು ಕಾರ್ಯಾಚರಣೆಯನ್ನು ಸುಗಮಗೊಳಿಸುವ ಮತ್ತು ಪ್ರಸ್ತುತ ಮಾರುಕಟ್ಟೆ ಶೈಲಿಗೆ ಅದರ ಕಾರ್ಯತಂತ್ರವನ್ನು ಹೊಂದಿಸುವ ಗುರಿಯನ್ನು ಹೊಂದಿದೆ. ಇಂಟೆಲ್‌ನ ವಕ್ತಾರರು ನಿರ್ದಿಷ್ಟ ವ್ಯಾಪಾರ ವಿಭಾಗಗಳನ್ನು ಒಳಗೊಂಡಂತೆ ಅದರ ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳಲ್ಲಿ ವೆಚ್ಚಗಳನ್ನು ಕಡಿತ ಮಾಡುವ ಗುರಿ ಹೊಂದಿದ್ದಾರೆ.

"ಇಂಟೆಲ್ ಕಂಪನಿಯಾದ್ಯಂತ ಕೆಲವು ವ್ಯಾಪಾರ ಮತ್ತು ಕಾರ್ಯ-ನಿರ್ದಿಷ್ಟ ಕೆಲಸದ ಸ್ಥಳದಲ್ಲಿ ಉದ್ಯೋಗ ಕಡಿತ ಸೇರಿದಂತೆ ಅನೇಕ ಉಪಕ್ರಮಗಳ ಮೂಲಕ ವೆಚ್ಚವನ್ನು ಕಡಿಮೆ ಮಾಡುವ ಅದರ ಕಾರ್ಯತಂತ್ರವನ್ನು ವೇಗಗೊಳಿಸುವತ್ತ ಗಮನ ಹರಿಸಿದೆ," ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಈ ಕ್ರಮವು ಮುಂಬರುವ ವರ್ಷದಲ್ಲಿ ಹೆಚ್ಚುವರಿ ಸಿಬ್ಬಂದಿ ಕಡಿತಕ್ಕೂ ಮುನ್ನ ನಡೆಯುತ್ತಿರುವುದು ಆಗಿದೆ. ಇದು ಕಂಪನಿಯೊಳಗೆ ಮತ್ತಷ್ಟು ಪುನರ್‌ರಚನೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಇಂಟೆಲ್ ತನ್ನ ಫೋಲ್ಸಮ್ ಕ್ಯಾಂಪಸ್‌ನಲ್ಲಿ 549 ಸ್ಥಾನಗಳನ್ನು ತೆಗೆದುಹಾಕಿದೆ. ಸಂಪೂರ್ಣ ಉದ್ಯೋಗಿಗಳ ಶೇಕಡ 10 ಕ್ಕಿಂತ ಕೊಂಚ ಅಧಿಕ ಉದ್ಯೋಗ ಕಡಿತ ಮಾಡಿದೆ.
ಉದ್ಯೋಗ ಕಡಿತಗಳ ಈ ಸೀಸನ್ ಇಂಟೆಲ್‌ನ ಆರ್ಥಿಕ ಕಾರಣದಿಂದಾಗಿ ಮಾಡಲಾಗುತ್ತಿದೆ. 2022 ರಲ್ಲಿ, ಕಂಪನಿಯು 2025 ರ ವೇಳೆಗೆ 10 ಬಿಲಿಯನ್ ಡಾಲರ್ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶವನ್ನು ಘೋಷಿಸಿತು. ಅದಾದ ಬಳಿಕ ವಜಾ ಪ್ರಕ್ರಿಯೆ, ಕೆಲಸದ ಸಮಯ ಕಡಿತ ಮೊದಲಾದ ಕ್ರಮಗಳನ್ನು ಕೈಗೊಂಡಿದೆ.
ಈ ಕಡಿತಗಳ ಹೊರತಾಗಿಯೂ, ಇಂಟೆಲ್ ಕ್ಯಾಲಿಫೋರ್ನಿಯಾದಾದ್ಯಂತ 13,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ. ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಕೇಂದ್ರವಾಗಿರುವ ಫೋಲ್ಸಮ್ ಕ್ಯಾಂಪಸ್, ಎಸ್‌ಎಸ್‌ಡಿಗಳು, ಗ್ರಾಫಿಕ್ಸ್ ಪ್ರೊಸೆಸರ್‌ಗಳು, ಸಾಫ್ಟ್‌ವೇರ್ ಮತ್ತು ಚಿಪ್‌ಸೆಟ್‌ಗಳ ಅಭಿವೃದ್ಧಿಯನ್ನು ಒಳಗೊಂಡಿರುವ ಕಂಪನಿಯ ಅನ್ವೇಷಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.


Click it and Unblock the Notifications