ಇತ್ತೀಚೆಗೆ ಐಟಿ ಜಾಬ್‌ಗಳು ಸೆರಗಲ್ಲಿ ಕಟ್ಟಿಕೊಂಡಿರುವ ಕೆಂಡದಂತಾಗಿವೆ. ಲೇ ಆಫ್ ಎಂಬ ಭೂತ ಯಾರಿಗೆ ಯಾವಾಗ ಕಾಡುತ್ತೋ ಗೊತ್ತಿಲ್ಲ. ಲೇ ಆಫ್..ಅಂದರೆ ಕೆಲಸದಿಂದ ವಜಾಗೊಳಿಸುವ ಪದ್ದತಿ ಇತ್ತೀಚೆಗೆ, ಟ್ರೆಂಡ್ ಆಗಿ ಹೋಗಿದೆ. ಇದೀಗ ಮತ್ತೆ ಲೇಆಫ್ ಸುದ್ದಿ ಸದ್ದು ಮಾಡುತ್ತಿದೆ. ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಇಂಟೆಲ್ ತನ್ನ ವ್ಯಾಪಕ ಪುನರ್‌ರಚನಾ ಯೋಜನೆಯ ಭಾಗವಾಗಿ, 2025 ರ ಅಂತ್ಯದೊಳಗೆ ಉದ್ಯೋಗಿಗಳ ಮೂರನೇ ಭಾಗವನ್ನು ಕಡಿತಗೊಳಿಸುವ ತೀರ್ಮಾನ ಕೈಗೊಂಡಿದೆ.

ಹೌದು, ಕಂಪನಿಯ ಕಾರ್ಯಕ್ಷಮತೆ ಹಾಗೂ ವೆಚ್ಚ ನಿರ್ವಹಣೆಯ ಗುರಿಯನ್ನು ಸಾಧಿಸಲು ಈ ಕ್ರಮ ಕೈಗೊಳ್ಳಲಾಗಿದೆ. 2025ರ ಅಂತ್ಯದವರೆಗೆ 1,08,900 ಮಂದಿಯಷ್ಟು ಕಾರ್ಯಪಡೆ ಇದ್ದ ಇಂಟೆಲ್, ಅದನ್ನು 75,000ಕ್ಕೂ ಇಳಿಸಲು ಸಿದ್ಧತೆ ನಡೆಸಿದೆ..ಅಂದರೆ 30,000ಕ್ಕೂ ಹೆಚ್ಚು ಜನರಿಗೆ ಈ ವರ್ಷ ಇಂಟೆಲ್ ಕಂಪನಿ ಕೆಲಸ ಕಿತ್ತುಕೊಳ್ಳಲಿದೆ.
ಕಂಪನಿಯ ಎರಡನೇ ತ್ರೈಮಾಸಿಕ ಗಳಿಕೆ ವರದಿಯೊಂದಿಗೆ, ಇಂಟೆಲ್ ಈ ಉದ್ಯೋಗ ಕಡಿತದ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ. ಈ ಕಡಿತ ಕ್ರಮವು ಕೇವಲ ವಜಾ ಕಾರ್ಯವಿಧಾನವಲ್ಲದೆ, ನೈಸರ್ಗಿಕ ಸೇವಾ ನಿರ್ವಹಣೆಯಲ್ಲಿಯೇ ಉಂಟಾಗುವ ಇಳಿಕೆಗಳನ್ನು ಕೂಡ ಒಳಗೊಂಡಿದೆ. ಮೊಬೈಲ್‌ಯೇನ್‌ನಂತಹ ಕಂಪನಿಯ ಅಂಗಸಂಸ್ಥೆಗಳ ಸಿಬ್ಬಂದಿಯನ್ನು ಹೊರತುಪಡಿಸಿ ಈ ಅಂಕಿ ಅಂಶ ನೀಡಲಾಗಿದೆ.
ಕಂಪನಿಯು ತನ್ನ ಕಾರ್ಯವೈಖರಿಯನ್ನು ಹೆಚ್ಚು ಚುರುಕಾದ ಹಾಗೂ ಸ್ಪಂದನಶೀಲ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ರೂಪಿಸಿದೆ. ಇಂಟೆಲ್ ಹೇಳಿದ್ದು, ನಾವು ವೇಗವಾಗಿ ಚಲಿಸುವ, ನವೀನತೆ ಬೆಳೆಸುವ ಹಾಗೂ ದುಡಿಮೆಯಲ್ಲಿ ಪ್ರಬಲ ಸಂಸ್ಥೆಯಾಗಲು ಈ ಪುನರ್‌ರಚನೆ ನೆರವಾಗಲಿದೆ ಎಂದು.
ಕಂಪನಿಯಲ್ಲಿ ದೀರ್ಘಕಾಲದ ಕಾರ್ಯಕ್ಷಮತಾ ಕೊರತೆ ಹಿನ್ನೆಲೆಯಲ್ಲಿ, 2024ರ ಮಾರ್ಚ್‌ನಲ್ಲಿ ಪ್ಯಾಟ್ ಗೆಲ್ಸಿಂಗರ್ ಅವರ ಬದಲಿಗೆ ಲಿಪ್-ಬು ಟಾನ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದರು. ಟಾನ್ ಅವರ ನೇತೃತ್ವದಲ್ಲಿ ಈ ಉದ್ಯೋಗ ಕಡಿತ ಮೊದಲ ಪ್ರಮುಖ ನಿರ್ಧಾರವಾಗಿದೆ. ಈ ಸಂದರ್ಭದಲ್ಲಿ ಅವರು ಹೇಳಿದ್ದು, "ಇದು ತಕ್ಷಣದ ಫಲಿತಾಂಶ ನೀಡುವುದಿಲ್ಲ, ಆದರೆ ನಾವು ಸ್ಪರ್ಧಾತ್ಮಕತೆಗೆ ಹತ್ತಿರ ಹೋಗುವ ಮಾರ್ಗದಲ್ಲಿದ್ದೇವೆ. ನಮ್ಮ ಲಾಭದಾಯಕತೆ ಮತ್ತು ಷೇರುದಾರರ ದೀರ್ಘಕಾಲೀನ ಮೌಲ್ಯವೃದ್ಧಿಗಾಗಿ ಇದೊಂದು ಸ್ಪಷ್ಟ ಪಥವಾಗಿದೆ."
ವ್ಯವಸ್ಥಿತ ವೆಚ್ಚ ಕಡಿತದ ಭಾಗವಾಗಿ, ಇಂಟೆಲ್ ಜರ್ಮನಿ ಮತ್ತು ಪೋಲೆಂಡ್‌ನಲ್ಲಿನ ತನ್ನ ಹೊಸ ವಿಸ್ತರಣಾ ಯೋಜನೆಗಳನ್ನು ಕೈಬಿಟ್ಟಿದೆ. ಜೊತೆಗೆ, ಕಂಪನಿಯ ಕೋಸ್ಟಾ ರಿಕಾದ ಕಾರ್ಯಚಟುವಟಿಕೆಗಳನ್ನು ವಿಯೆಟ್ನಾಂ ಮತ್ತು ಮಲೇಷ್ಯಾದಲ್ಲಿನ ಘಟಕಗಳಲ್ಲಿ ವಿಲೀನಗೊಳಿಸಲಾಗುತ್ತಿದೆ. ಅಲ್ಲದೆ, ಓಹಿಯೋದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳ ವೇಗವನ್ನು ಕಂಪನಿಯು ಇಳಿಸಿದ್ದು, ಇದು ಸದ್ಯದ ಮಾರುಕಟ್ಟೆ ಬೇಡಿಕೆಗೆ ಹೊಂದಾಣಿಕೆ ತರುವ ಉದ್ದೇಶವಿದೆ.
ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾಗುತ್ತಿರುವ ದೃಶ್ಯಪಟದ ನಡುವೆ ಇಂಟೆಲ್ ತನ್ನ ಹಿಂದಿನ ಸ್ಥಾನವನ್ನು ಮರಳಿ ಗಳಿಸಲು ಹೋರಾಟ ನಡೆಸುತ್ತಿದೆ. ಮೊಬೈಲ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ನಿರೀಕ್ಷಿತ ಹೂಡಿಕೆಯನ್ನು ಮಾಡಲು ವಿಫಲವಾದ ಕಾರಣ, ಇಂಟೆಲ್ ತೀವ್ರ ಟೀಕೆಗೆ ಗುರಿಯಾಗಿದೆ. ಈ ನಡುವೆ, ನವೀನ ತಂತ್ರಜ್ಞಾನಗಳಲ್ಲಿ ಮುನ್ನಡೆ ಸಾಧಿಸಿರುವ ಸಂಸ್ಥೆ 4 ಟ್ರಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಮೌಲ್ಯಮಾಪನ ತಲುಪಿದ ಮೊದಲ ಪಟ್ಟಿಯ ಕಂಪನಿಯಾಗಿ ಗುರುತಿಸಿಕೊಂಡಿದೆ.
ಇಂಟೆಲ್‌ದ ಈ ನಿರ್ಧಾರವು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಒಟ್ಟೂ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಮೈಕ್ರೋಸಾಫ್ಟ್ ಕೂಡ ಈ ತಿಂಗಳ ಆರಂಭದಲ್ಲಿ 9,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಮೇಟಾ (ಫೇಸ್‌ಬುಕ್‌ನ ಪೇರೆಂಟ್ ಕಂಪನಿ) ಸಹ ಇದೇ ವರ್ಷ ಜನವರಿಯಲ್ಲಿ ತನ್ನ ನೌಕರರ 5% ವಜಾಗೊಳಿಸಿತ್ತು. ಈ ದಿಟ್ಟ ಕ್ರಮಗಳು ಆಂತರಿಕ ವೆಚ್ಚ ಕಡಿತದ ಅಗತ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾದ ಆರ್ಥಿಕ ವಾತಾವರಣವನ್ನು ಸಾಥ್ ನೀಡುವ ತಂತ್ರದ ಭಾಗವಾಗಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications