For Quick Alerts
ALLOW NOTIFICATIONS  
For Daily Alerts

ಇಂಗ್ಲೆಂಡ್ ರಾಜಮನೆತನದ ಆದಾಯ, ವೆಚ್ಚ, ವಿಶೇಷತೆ ಬಗ್ಗೆ ಗೊತ್ತೆ?

By ರಾಜಶೇಖರ್ ಮ್ಯಾಗೇರಿ
|

ಲಂಡನ್, ಜನವರಿ.19: ಶತಮಾನಗಳ ಇತಿಹಾಸ ಹೊಂದಿರುವ ಭಾರತದಲ್ಲಿ ನೂರಾರು ರಾಜಮನೆತನಗಳು ಆಳ್ವಿಕೆ ನಡೆಸಿವೆ. ರಾಜಸ್ಥಾನದ ರಜಪೂತ್, ಕೇರಳದ ತಿರುವಾಂಕೂರ್, ಆಂಧ್ಪಪ್ರದೇಶದ ಪೆನುಕೊಂಡ ರಾಜಮನೆತನಗಳು ಪ್ರಸಿದ್ಧಿ ಪಡೆದುಕೊಂಡಿವೆ. ಕರ್ನಾಟಕದಲ್ಲಿ ಈ ಹಿಂದೆ ಮೌರ್ಯರು, ಶಾತವಾಹನರು, ಬನವಾಸಿ ಕದಂಬರು, ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ದ್ವಾರ ಸಮುದ್ರದ ಹೋಯ್ಸಳರು, ವಿಜಯನಗರ ಸಾಮ್ರಾಜ್ಯ ಅರಸರು ಶತಮಾನಗಳ ಕಾಲ ಆಳ್ವಿಕೆ ನಡೆಸಿದ್ದಾರೆ. ಮೈಸೂರಿನ ರಾಜಮನೆತನ ಇಂದಿಗೂ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ.

ಭಾರತದಲ್ಲಿ ನೂರಾರು ರಾಜರು ಆಳ್ವಿಕೆ ನಡೆಸಿದ್ದರೂ, ಇಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ನ ರಾಜಮನೆತನಕ್ಕೆ ಅತಿಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಮಹಾರಾಣಿ ಎಲಿಜಬೆತ್ ರನ್ನು ಕನಿಷ್ಠ ಭೇಟಿ ಮಾಡಬೇಕಾದರೂ ಸಹ ಅದಕ್ಕೊಂದು ನೀತಿ ಸಂಹಿತೆಯಿದೆ. ವಿಶ್ವದ ಎಲ್ಲ ರಾಷ್ಟ್ರಗಳು ಹಾಗೂ ನಾಯಕರು ಈ ನೀತಿ ಸಂಹಿತೆಯನ್ನು ಪಾಲಿಸಲೇಬೇಕು.

 

ಇಂಗ್ಲೆಂಡ್ ಮಹಾರಾಣಿ ಕ್ವೀನ್ ಎಲಿಜಬೆತ್-2 ಆದೇಶಗಳನ್ನು ಅಲ್ಲಿನ ಸರ್ಕಾರ ಗೌರವ ಆದರದಿಂದ ಪಾಲಿಸುತ್ತದೆ. ಇಂಗ್ಲೆಂಡ್ ನಲ್ಲಿ ರಾಜಮನೆತನದ ಕಾರ್ಯವೈಖರಿ, ಆದಾಯದ ಮೂಲ, ಆಸ್ತಿ-ಪಾಸ್ತಿ ಸೇರಿದಂತೆ ಸಾಕಷ್ಟು ಕುತೂಹಲಕಾರಿ ವಿಚಾರಗಳ ಕುರಿತು ಒಂದು ವಿಸ್ತೃತ ವರದಿ ನಿಮ್ಮ ಮುಂದಿದೆ.

ರಾಜಮನೆತನದ ಆದಾಯದ ಮೂಲಗಳು

ರಾಜಮನೆತನದ ಆದಾಯದ ಮೂಲಗಳು

ಇಂಗ್ಲೆಂಡ್ ರಾಜಮನೆತನಕ್ಕೆ ಮೂರು ಆದಾಯದ ಮೂಲಗಳಿವೆ. ಸಾರ್ವಭೌಮ ಅನುದಾನವನ್ನು ನೀಡಲಾಗುತ್ತಿದ್ದು, ರಾಣಿ ಎಲಿಜಬೆತ್ ಅರಮನೆ ನಿರ್ವಹಣೆ ಹಾಗೂ ಕಚೇರಿ ಕಾರ್ಯಗಳಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಬಂಕಿಂಗ್ ಹ್ಯಾಮ್ ಅರಮನೆ, ಸೇಂಟ್ ಜೇಮ್ಸ್ ಅರಮನೆ, ಕ್ಲ್ಯಾರೆನ್ಸ್ ಹೌಸ್, ಮೆಲ್ಬರ್ನ್ ನ ಅಶ್ವಶಾಲೆ ನಿರ್ವಹಣೆಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಆರ್ಥಿಕ ಹಾಗೂ ಹಣಕಾಸು ಸಚಿವಾಲಯ 2016-17ನೇ ಸಾಲಿನಲ್ಲಿ 406 ಕೋಟಿ ರುಪಾಯಿ ತೆರಿಗೆ ರಹಿತ ಅನುದಾನವನ್ನು ನೀಡಲಾಗಿತ್ತು. ಇನ್ನು, ಇಂಗ್ಲೆಂಡ್ ಸರ್ಕಾರದ ಬೊಕ್ಕಸದಿಂದ ಕ್ವೀನ್ ಎಲಿಜಬೆತ್-2 ವೈಯಕ್ತಿಕ ವೆಚ್ಚದ ನಿರ್ವಹಣೆಗಾಗಿ ಕೋಟಿ ಕೋಟಿ ರುಪಾಯಿ ಅನುದಾನ ನೀಡಲಾಗುತ್ತದೆ.

ಇದರ ಜೊತೆ ರಾಜಮನೆತನದ ವೈಯಕ್ತಿಕ ಮೂಲಗಳಿಂದ ಆದಾಯ ಪಡೆಯಲಾಗುತ್ತಿದೆ. ಕ್ವೀನ್ ಎಲಿಜಬೆತ್ ಪತಿ ಪ್ರಿನ್ಸ್ ಪಿಲಿಪ್ ಕಳೆದ ವರ್ಷ 34 ಕೋಟಿ 16 ಲಕ್ಷ ರುಪಾಯಿ ಆದಾಯವನ್ನು ರಾಜ ಮನೆತನದ ವೈಯಕ್ತಿಕ ಮೂಲಗಳಿಂದಲೂ ಪಡೆದಿದ್ದರು.

ಆದಾಯ ಬಳಕೆ ಹೇಗೆ ಮಾಡಲಾಗುತ್ತದೆ?

ಆದಾಯ ಬಳಕೆ ಹೇಗೆ ಮಾಡಲಾಗುತ್ತದೆ?

ಸರ್ಕಾರ ಸೇರಿ ವಿವಿಧ ಮೂಲಗಳಿಂದ ಸಂಗ್ರಹಿಸುವ ಆದಾಯವನ್ನು ಕ್ವೀನ್ ಎಲಿಜಬೆತ್-2 ಕಚೇರಿ ಹಾಗೂ ವೈಯಕ್ತಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಪ್ರಯಾಣ ವೆಚ್ಚ, ಇಂಗ್ಲೆಂಡ್ ಹಾಗೂ ವಿದೇಶಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಕ್ಕೆ ಅನುದಾನ ಬಳಸಲಾಗುತ್ತದೆ. ಅರಮನೆಗಳ ನಿರ್ವಹಣೆ, ಮನರಂಜನಾ ಕಾರ್ಯಕ್ರಮ ಹಾಗೂ ಅರಮನೆ ಸಿಬ್ಬಂದಿಯ ವೇತನಕ್ಕಾಗಿ ಈ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ.

ಸರ್ಕಾರಕ್ಕೆ ಎಲ್ಲರಂತೆ ಎಲಿಜಬೆತ್-2 ತೆರಿಗೆ ಪಾವತಿ
 

ಸರ್ಕಾರಕ್ಕೆ ಎಲ್ಲರಂತೆ ಎಲಿಜಬೆತ್-2 ತೆರಿಗೆ ಪಾವತಿ

ಇಂಗ್ಲೆಂಡ್ ರಾಜಮನೆತನದ ಪಿತ್ರಾರ್ಜಿತ ಆಸ್ತಿ ಮೇಲೆ ಯಾವುದೇ ತೆರಿಗೆ ಅನ್ವಯ ಆಗುವುದಿಲ್ಲ. ಪ್ರಿನ್ಸ್ ಆಫ್ ವಾಲ್ಸ್ ಆಸ್ತಿಗೆ ಸಂಬಂಧಿಸಿದಂತೆ ಕಳೆದ 1992ರಲ್ಲೇ ತೆರಿಗೆ ಪಾವತಿಸಿದ್ದೇ ಕೊನೆ ಎಂದು ಹೇಳಲಾಗುತ್ತಿದೆ. ಸರ್ಕಾರವು ರಾಜಮನೆತನಕ್ಕೆ ನೀಡುವ ಸಾರ್ವಭೌಮ ಅನುದಾನಕ್ಕೂ ಯಾವುದೇ ತೆರಿಗೆ ಪಾವತಿಸುವ ಹಾಗಿಲ್ಲ.

ನೈಋತ್ಯ ಇಂಗ್ಲೆಂಡ್ ನಲ್ಲಿ 54, 521 ಎಕರೆ ಭೂಮಿ

ನೈಋತ್ಯ ಇಂಗ್ಲೆಂಡ್ ನಲ್ಲಿ 54, 521 ಎಕರೆ ಭೂಮಿ

1337ರಲ್ಲಿ 3ನೇ ಪ್ರಿನ್ಸ್ ಎಡ್ವರ್ಡ್ ನೈಋತ್ಯ ಇಂಗ್ಲೆಂಡ್ ದೇಶಗಲ್ಲಿ ಎಸ್ಟೇಟ್ ನಿರ್ಮಾಣ ಮಾಡಿದರು. 23 ದೇಶಗಳಲ್ಲಿ 54, 521 ಎಕರೆ ಭೂಮಿಯು ಇಂಗ್ಲೆಂಡ್ ರಾಜಮನೆತನಕ್ಕೆ ಸೇರುತ್ತದೆ. ಈ ಪೈಕಿ ಬ್ರಿಟನ್ ನ ಡಚಿ ಆಫ್ ಕಾರ್ನ್ ವಾಲ್ ಎಸ್ಟೇಟ್ ವಿಶ್ವದ ಅತಿದೊಡ್ಡ ಹಾಗೂ ಹಳೆಯ ಎಸ್ಟೇಟ್ ಆಗಿದೆ. ಪ್ರತಿ ತಲೆಮಾರಿನಲ್ಲೂ ರಾಜಮನೆತನದವರು ಈ ಆಸ್ತಿಯನ್ನು ವೃದ್ಧಿಸಬಹುದು. ಟ್ರಸ್ಟ್ ಗೆ ಹೊಸ ಆಸ್ತಿ ಖರೀದಿಸಬಹುದು. ಆದರೆ, ಪಿತ್ರಾರ್ಜಿತ ಆಸ್ತಿಯನ್ನು ಬಳಸಬಹುದೇ ವಿನಃ ಮಾರಾಟ ಮಾಡುವ ಹಾಗಿಲ್ಲ.

1837ರ ಬಕಿಂಗ್ ಹ್ಯಾಮ್ ಅರಮನೆಗೆ 775 ಕೋಣೆಗಳು

1837ರ ಬಕಿಂಗ್ ಹ್ಯಾಮ್ ಅರಮನೆಗೆ 775 ಕೋಣೆಗಳು

ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯು ಕೋಣೆ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. 1837ರಲ್ಲಿ ನಿರ್ಮಾಣಗೊಂಡ ಇಂಗ್ಲೆಂಡ್ ರಾಜಮನೆತನದ ಈ ಅರಮನೆಯೇ ಆಡಳಿತಾತ್ಮಕ ಕೇಂದ್ರಬಿಂದು ಆಗಿತ್ತು. ಬಕಿಂಗ್ ಹ್ಯಾಮ್ ಅರಮನೆಯಲ್ಲಿ 775 ಕೋಣೆಗಳಿದ್ದು, 19 ಸಾಮಾನ್ಯ, 52 ಐಶಾರಾಮಿ ವಿಶ್ರಾಂತಿ ಕೋಣೆಗಳಿವೆ. 188 ಸಿಬ್ಬಂದಿ ಕೋಣೆ, 92 ಕಚೇರಿ, 78 ಶೌಚಾಲಯಗಳನ್ನು ಈ ಅರಮನೆ ಒಳಗೊಂಡಿದೆ.

ಅರಮನೆ ನೋಡಲು ಬೇಸಿಗೆಯಲ್ಲಿ ಅವಕಾಶ

ಅರಮನೆ ನೋಡಲು ಬೇಸಿಗೆಯಲ್ಲಿ ಅವಕಾಶ

ದೇಶದ ಸಾಂವಿಧಾನಿಕ ಕಾರ್ಯ ಚಟುವಟಿಕೆಗಳಿಗೆ ಈ ಬಕಿಂಗ್ ಹ್ಯಾಮ್ ಅರಮನೆಯೇ ಕೇಂದ್ರಸ್ಥಾನ ಎನಿಸಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಬಕಿಂಗ್ ಹ್ಯಾಮ್ ಅರಮನೆ ಪ್ರವೇಶಕ್ಕೆ ಮುಕ್ತವಾಗಲಿದೆ. ವಿದೇಶಿ ಪ್ರಧಾನಮಂತ್ರಿ, ಅಧ್ಯಕ್ಷರು, ರಾಯಭಾರಿಗಳು ಭೇಟಿ ನೀಡಿದ್ದಾರೆ. ಪ್ರತಿವರ್ಷ ಕನಿಷ್ಠ 50 ಸಾವಿರ ಪ್ರಜೆಗಳು ಈ ಅರಮನೆಯನ್ನು ಕಣ್ತುಂಬಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

Read more about: money
English summary

Interesting Information On The Royal Family Of England

England Queen Elizabeth-2 Source Of Income And Expenditure. Interesting Information On The Royal Family Of England.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more