ಅಂತಾರಾಷ್ಟ್ರೀಯ ಕಚ್ಚಾ ತೈಲ ದರ 3 ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ

ಇಂಧನ ಬೆಲೆಯ ವಿಚಾರದಲ್ಲಿ ಇಂದು ಒಂದು ಸಿಹಿ ಸುದ್ದಿ ನಿಮಗಿದೆ. ಜಾಗತಿಕ ಕಚ್ಚಾ ತೈಲ ದರವು ಮೂರು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಜಾಗತಿಕ ಕಚ್ಚಾ ತೈಲ ಬೆಲೆಯು ಈಗ ಬ್ಯಾರೆಲ್‌ಗೆ 83 ಯುಎಸ್‌ಡಿಗೆ ಕುಸಿದಿದೆ. ಕೇವಲ ಕೆಲವು ದಿನಗಳ ಹಿಂದೆ ಬ್ಯಾರೆಲ್‌ಗೆ 85 ಯುಎಸ್‌ಡಿಗೂ ಅಧಿಕವಾಗಿತ್ತು. ಆದರೆ ಈಗ ಜಾಗತಿಕ ಕಚ್ಚಾ ತೈಲ ಬೆಲೆಯು ಈಗ ಬ್ಯಾರೆಲ್‌ಗೆ 83 ಡಾಲರ್‌ಗೆ ಕುಸಿದಿದ್ದು ಇದು ಮೂರು ವರ್ಷದಲ್ಲಿ ಗರಿಷ್ಠ ಮಟ್ಟದಲ್ಲಿ ಇಳಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತವು ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಈ ನಡುವೆ ಇನ್ನು ಇದೇ ರೀತಿಯಾಗಿ ಬೆಲೆ ರೇಖೆಯು ಇಳಿಕೆಯಾದರೆ, ಭಾರತದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಮತ್ತಷ್ಟು ಕಡಿಮೆ ಆಗುವ ಸಾಧ್ಯತೆಗಳು ಇದೆ. ಆದರೆ ಐಎಎನ್‌ಎಸ್ ವರದಿಯ ಪ್ರಕಾರ ಡಿಸೆಂಬರ್‌ನಲ್ಲಿ ಉತ್ಪಾದನೆಯ ಕ್ರಮೇಣ ಹೆಚ್ಚಳದ ಕುರಿತು ಒಪೆಕ್‌+ ನಿರ್ಧಾರವು ಮತ್ತೆ ಕಚ್ಚಾ ಬೆಲೆಗಳನ್ನು ಹೆಚ್ಚಳಕ್ಕೆ ಕಾರಣವಾಗಬಹುದು.

ದೇಶದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಈಗ ಕಡಿಮೆ ಆಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಕೂಡಾ ವ್ಯಾಟ್‌ ಅನ್ನು ಕಡಿತ ಮಾಡಿದೆ. ಈ ಬೆನ್ನಲ್ಲೇ ಪೆಟ್ರೋಲ್‌ ಹಾಗೂ ಡಿಸೇಲ್‌ನ ಬೆಲೆಯು ಇಳಿಕೆ ಆಗಿದೆ.

 ಕಚ್ಚಾ ತೈಲ ದರ 3 ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ

45 ದಿನಗಳಲ್ಲಿ 30 ಬಾರಿ ಬಾರಿ ಏರಿಕೆ!

ಇನ್ನು ಐಎಎನ್‌ಎಸ್‌ ವರದಿಯ ಪ್ರಕಾರ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ಮಾರ್ಚ್ ತಿಂಗಳಿನಲ್ಲಿ ಹಾಗೂ ಮೇ ತಿಂಗಳಿನಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಪರಿಷ್ಕರಣೆ ಮಾಡಿದೆ. ಈ ಮೂಲಕ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವು ತೀವ್ರ ಪ್ರಮಾಣದಲ್ಲಿ ಏರಿಕೆ ಆಗಿದೆ. ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತ ಮಾಡುವ ಮುನ್ನ 45 ದಿನಗಳಲ್ಲಿ 30 ಬಾರಿ ಡಿಸೇಲ್ ‌ದರವು ಏರಿಕೆಯನ್ನು ಕಂಡಿತ್ತು. ಹಾಗೆಯೇ ಪೆಟ್ರೋಲ್‌ ಬೆಲೆಯು 41 ದಿನಗಳಲ್ಲಿ 28 ಬಾರಿ ಏರಿಕೆಯನ್ನು ಕಂಡಿದೆ.

ಈ ನಡುವೆ ಮಂಗಳವಾರ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ದೇಶದಲ್ಲಿ ಸ್ಥಿರವಾಗಿದೆ. ಈ ನಡುವೆ ಇನ್ನು ಕೆಲವು ರಾಜ್ಯಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ಕಡಿತ ಮಾಡಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರವು ಲೀಟರ್‌ಗೆ 103.97 ರೂಪಾಯಿ ಆಗಿದೆ ಹಾಗೂ ಲೀಟರ್‌ ಡೀಸೆಲ್‌ಗೆ 86.67 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ ಬೆಲೆಯು 109.98 ಆಗಿದ್ದು, ಡೀಸೆಲ್‌ ಬೆಲೆಯು ಲೀಟರ್‌ಗೆ 94.14 ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ ಬೆಲೆಯು 104.67 ಆಗಿದ್ದು, ಡಿಸೇಲ್‌ ಬೆಲೆ 89.79 ರೂಪಾಯಿಗೆ ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯು 100.67 ರೂಪಾಯಿ ಆಗಿದೆ. ಡೀಸೆಲ್‌ ಬೆಲೆಯು 100.58 ರೂಪಾಯಿ ಆಗಿದೆ. ನಿಮ್ಮ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ದರ ತಿಳಿದುಕೊಳ್ಳಲು ಕ್ಲಿಕ್ ಮಾಡಿ..

https://www.goodreturns.in/petrol-price.html

ಏನಿದು ಒಪೆಕ್‌?

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಆರ್ಗನೈಸೇಶನ್‌ ಆಫ್‌ ದಿ ಪೆಟ್ರೋಲಿಯಂ ಎಕ್ಸ್‌ಪೋರ್ಟಿಂಗ್‌ ಕಂಟ್ರೀಸ್‌) ಅಥವಾ ಒಪೆಕ್‌ ಎಂಬುವುದು 13 ರಾಷ್ಟ್ರಗಳನ್ನು ಒಳಗೊಂಡ ಸಂಘಟನೆ ಆಗಿದೆ. ಇದು 1960ರಲ್ಲಿ ಬಾಗ್ದಾದ್‌ನಲ್ಲಿ ಸ್ಥಾಪನೆ ಆಗಿದೆ. ಆರಂಭದಲ್ಲಿ ಈ ಸಂಘಟನೆಯಲ್ಲಿ ಇರಾನ್‌, ಇರಾಕ್‌, ಕುವೈತ್‌ ಸೌದಿ ಅರೇಬಿಯಾ ಹಾಗೂ ವೆನಿಜುವೆಲಾ ಮಾತ್ರ ಸದಸ್ಯ ರಾಷ್ಟ್ರಗಳು ಆಗಿದ್ದವು. ಸದ್ಯಕ್ಕೆ ಅಲ್ಜೀರಿಯಾ, ಆಂಗೊಲಾ, ಈಕ್ವಟೋರಿಯಲ್‌ ಜಿನಿವಾ, ಗಬಾನ್‌, ಇರಾನ್‌, ಇರಾಕ್‌, ಕುವೈತ್‌, ನೈಜೀರಿಯಾ, ಕಾಂಗೊ, ಸೌದಿ ಅರೇಬಿಯಾ, ಯುಎಇ, ವೆನಿಜುವೆಲಾ ಇದರ ಸದಸ್ಯ ರಾಷ್ಟ್ರಗಳಾಗಿವೆ. ಭಾರತ, ಅಮೆರಿಕ, ಜಪಾನ್‌ ಸೇರಿ ಪ್ರಮುಖ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಅಧಿಕ ಮಾಡಲು ಒತ್ತಾಯಿಸುತ್ತಿದೆ. ಆದರೆ ಒಪೆಕ್‌ ಮಾತ್ರ ಹಿಂದೇಟು ಹಾಕಿತ್ತು. ಈಗ ಸದ್ಯಕ್ಕೆ ಕಚ್ಚಾ ತೈಲ ದರ ಇಳಿಕೆ ಆಗಿದ್ದರೂ ಕೂಡಾ ಒಪೆಕ್‌+ (ಒಪೆಕ್‌ ಒಕ್ಕೂಟದ ಮಿತ್ರ ರಾಷ್ಟ್ರಗಳು) ನಿರ್ಧಾರವು ಮತ್ತೆ ಕಚ್ಚಾ ಬೆಲೆಗಳನ್ನು ಹೆಚ್ಚಳಕ್ಕೆ ಕಾರಣವಾಗಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+