ಈ ಯೋಜನೆಯಲ್ಲಿ ಶಾರ್ಟ್ ಟರ್ಮ್ ಹೂಡಿಕೆ ಮಾಡಿ FDಗಿಂದಲೂ ಅಧಿಕ ಲಾಭ ಗಳಿಸಿ

ಎಫ್‌ಡಿ (ಸ್ಥಿರ ಠೇವಣಿ) ದೀರ್ಘಕಾಲದಿಂದ ಜನರ ವಿಶ್ವಾಸಾರ್ಹ ಹೂಡಿಕೆ ಆಯ್ಕೆಯಾಗಿದೆ. ಹೆಚ್ಚಿನ ಸಂಪ್ರದಾಯಿಕ ಹೂಡಿಕೆದಾರರು ಇಂದಿಗೂ ಎಫ್‌ಡಿ ಮೇಲೆ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ಎಫ್‌ಡಿಗಿಂತ ಹೆಚ್ಚಿನ ಆದಾಯವನ್ನು ನೀಡುವ ಹಲವಾರು ಆಯ್ಕೆಗಳಿವೆ. ನೀವು 2 ರಿಂದ 3 ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಲು ಸಿದ್ಧರಿದ್ದರೆ ಮತ್ತು ಸ್ವಲ್ಪ ಮಟ್ಟಿನ ಅಪಾಯವನ್ನು ತೆಗೆದುಕೊಳ್ಳಲು ತಯಾರಿದ್ದರೆ, ಸಾಲ ನಿಧಿಗಳ ಬಗ್ಗೆ ಪರಿಗಣಿಸುವುದು ಸೂಕ್ತ.

ಮ್ಯೂಚುಯಲ್ ಫಂಡ್‌ಗಳಲ್ಲಿನ ಸಾಲ ನಿಧಿಗಳನ್ನು ಸುರಕ್ಷಿತ ಆಯ್ಕೆಗಳೆಂದು ಪರಿಗಣಿಸಲಾಗುತ್ತದೆ ಮತ್ತು ಸ್ಥಿರ ಠೇವಣಿಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳ ಪ್ರಯೋಜನಗಳು, ಲಾಭಗಳು ಮತ್ತು ಇತರ ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಳ್ಳಿ

ಇಲ್ಲಿ ಹಣ ಹೂಡಿದ್ರೆ ಎಫ್‌ಡಿಗಿಂತ ಹೆಚ್ಚಿನ ಲಾಭ!

ಸಾಲ ನಿಧಿ (Debt Funds )ಎಂದರೇನು?

ಸಾಲ ನಿಧಿ ಅಂದರೆ ನೀವು ಅಂದುಕೊಳ್ಳುವ ಸಾಲವಲ್ಲ, ಡೆಬ್ಟ್‌ ಫಂಡ್ ಅಥವಾ ಸಾಲ ನಿಧಿ ಎನ್ನುವುದು ಮ್ಯೂಚುಯಲ್ ಫಂಡ್ ಅಥವಾ ಎಕ್ಸ್ಚೇಂಜ್-ಟ್ರೇಡೆಡ್ ಫಂಡ್‌ನಂತಹ ಹೂಡಿಕೆ ಕೂಟ ಆಗಿದೆ. ಡೆಬ್ಟ್‌ ಫಂಡ್ ಗಳಲ್ಲಿ ಹೂಡಿಕೆದಾರರಿಂದ ಸಂಗ್ರಹಿಸಲಾದ ಹಣವನ್ನು ಬಾಂಡ್‌ಗಳು, ಸರ್ಕಾರಿ ಭದ್ರತೆಗಳು, ಖಜಾನೆ ಬಿಲ್‌ಗಳು ಮತ್ತು ಪರಿವರ್ತಿಸಲಾಗದ ಡಿಬೆಂಚರ್‌ಗಳಂತಹ ಸ್ಥಿರ ಆದಾಯದ ಭದ್ರತೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅಂದರೆ ಸಾಲ ನಿಧಿಯ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲಾಗುತ್ತದೆ. ಸಾಲ ನಿಧಿಗಳನ್ನು ಈಕ್ವಿಟಿಗಿಂತ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಯಾವುದೇ ದ್ರವ್ಯತೆ ಸಮಸ್ಯೆ ಇಲ್ಲ, ಅಂದರೆ, ನೀವು ಯಾವಾಗ ಬೇಕಾದರೂ ನಿಮ್ಮ ಹಣವನ್ನು ಹಿಂಪಡೆಯಬಹುದು. ಸಾಮಾನ್ಯವಾಗಿ ಸಾಲ ನಿಧಿಗಳು ನಿಗದಿತ ಮುಕ್ತಾಯ ದಿನಾಂಕವನ್ನು ಹೊಂದಿರುತ್ತವೆ.

ಆದಾಯದ ದೃಷ್ಟಿಯಿಂದ ನೋಡುವುದಾದರೆ, ಸಾಲ ನಿಧಿಗಳು ಸ್ಥಿರ ಠೇವಣಿಗಳಿಗಿಂತ ಸ್ವಲ್ಪ ಹೆಚ್ಚಿನ ಲಾಭವನ್ನು ನೀಡುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ, 1 ರಿಂದ 3 ವರ್ಷಗಳವರೆಗೆ ಸ್ಥಿರ ಠೇವಣಿಗಳ ಮೇಲೆ ವಾರ್ಷಿಕವಾಗಿ ಸುಮಾರು 6% ರಿಂದ 7.5% ರಷ್ಟು ಬಡ್ಡಿಯನ್ನು ಪಡೆಯಬಹುದು. ಆದರೆ ಸಾಲ ನಿಧಿಗಳು ಸುಮಾರು 9% ರಷ್ಟು ವಾರ್ಷಿಕ ಲಾಭವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ಆದ್ದರಿಂದ, ಸಾಲ ನಿಧಿಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು. ಆದರೆ ಹೂಡಿಕೆದಾರರು ಸಾಲ ನಿಧಿಗಳು ಷೇರು ಮಾರುಕಟ್ಟೆಯಂತಹ ಹೆಚ್ಚಿನ ಆದಾಯವನ್ನು ನೀಡುತ್ತವೆ ಎಂದು ನಿರೀಕ್ಷಿಸಬಾರದು

FD ಮತ್ತು ಸಾಲ ನಿಧಿಗಳ ಮೇಲಿನ ತೆರಿಗೆ ನಿಯಮಗಳು

ಸಾಲ ನಿಧಿಗಳು ಮತ್ತು ಸ್ಥಿರ ಠೇವಣಿಗಳ (FD) ಮೇಲಿನ ತೆರಿಗೆ ನಿಯಮಗಳು ವಿಭಿನ್ನವಾಗಿವೆ. ಸಾಲ ನಿಧಿಗಳಿಂದ ಬರುವ ಲಾಭದ ಮೇಲೆ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯು ನೀವು ನಿಧಿಯನ್ನು ಯಾವಾಗ ಖರೀದಿಸಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಏಪ್ರಿಲ್ 2023 ರ ಮೊದಲು ನಿಧಿಯನ್ನು ಖರೀದಿಸಿದ್ದರೆ, ಹಳೆಯ ತೆರಿಗೆ ನಿಯಮಗಳು ಅನ್ವಯಿಸುತ್ತವೆ. ಆದರೆ, ಏಪ್ರಿಲ್ 2023 ರ ನಂತರ ಖರೀದಿಸಿದ ನಿಧಿಗಳಿಗೆ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ಲಾಭದ ಮೇಲೆ ತೆರಿಗೆ ವಿಧಿಸಲಾಗುತ್ತದೆ.

ಸಾಲ ನಿಧಿಗಳಲ್ಲಿ ಹೂಡಿಕೆ ಮಾಡುವಾಗ, ತೆರಿಗೆಯನ್ನು ಪರಿಗಣಿಸುವುದು ಬಹಳ ಮುಖ್ಯ. ಹಳೆಯ ನಿಯಮಗಳ ಪ್ರಕಾರ, ದೀರ್ಘಾವಧಿಯ ಬಂಡವಾಳ ಲಾಭಗಳ ಮೇಲೆ (3 ವರ್ಷಗಳಿಗಿಂತ ಹೆಚ್ಚು) ಸೂಚ್ಯಂಕದ ಪ್ರಯೋಜನಗಳೊಂದಿಗೆ 20% ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಹೊಸ ನಿಯಮಗಳ ಪ್ರಕಾರ, ಸಾಲ ನಿಧಿಗಳಿಂದ ಬರುವ ಲಾಭವನ್ನು ನಿಮ್ಮ ಒಟ್ಟಾರೆ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.

ನಾವು FD ಬಗ್ಗೆ ಮಾತನಾಡುವುದಾದರೆ, 5 ವರ್ಷಗಳ ಎಫ್‌ಡಿ ತೆರಿಗೆ ಮುಕ್ತವಾಗಿದೆ. ಇದಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ನೀವು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ.. ಕೆಲವು ಸಂದರ್ಭಗಳಲ್ಲಿ, ಮೂಲದಲ್ಲಿಯೇ ತೆರಿಗೆ ಕಡಿತ (TDS) ವನ್ನು ಸಹ ಮಾಡಲಾಗುತ್ತದೆ.

Disclaimer:

The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+