ಪಿಪಿಎಫ್‌ ಯೋಜನೆಯಡಿ 1,500 ರೂಪಾಯಿ ಹೂಡಿಕೆ ಮಾಡಿ, 5 ಲಕ್ಷದವರೆಗೆ ಹಣ ಪಡೆಯಿರಿ

ಪೋಸ್ಟ್‌ ಆಫೀಸ್‌ನ ಅನೇಕ ಯೋಜನೆಗಳನ್ನ ಬಳಸಿಕೊಂಡು ಹೂಡಿಕೆ ಮಾಡುವುದರಿಂದ ಹೂಡಿಕೆದಾರರು ಅನೇಕ ಲಾಭವನ್ನ ಗಳಿಸಬಹುದು. ಇನ್ನು ಅಂಚೆ ಕಚೇರಿಯ ಪಿಪಿಎಫ್ ಯೋಜನೆಯಿಂದಾಗಿ ನೀವು ಹಣವನ್ನ ಗಳಿಸಬಹುದು. ಹಾಗೆ ಈ ಹಣವನ್ನ ನಿಮ್ಮ ಭವಿಷ್ಯಕ್ಕಾಗಿ ಕೂಡಿಡಬಹುದು. ಈ ಯೋಜನೆಯಲ್ಲಿ ಪ್ರತಿ ತಿಂಗಳು 1,500 ಠೇವಣಿ ಇಡುವುದರಿಂದ 5 ಲಕ್ಷದವರೆಗೆ ನೀವು ಹಣ ಗಳಿಸಬಹುದು.

ಪೋಸ್ಟ್‌ ಆಫೀಸ್‌ನ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌(ಪಿಪಿಎಫ್‌)ನಲ್ಲಿ ಪ್ರತಿ ತಿಂಗಳು 1,500 ರೂಗಳನ್ನ ಹೂಡಿಕೆ ಮಾಡುವ ಮೂಲಕ ಕೊನೆಯಲ್ಲಿ ನೀವು 5 ಲಕ್ಷದವರೆಗೆ ಹಣವನ್ನ ಗಳಿಸಬಹುದು.ಪಿಪಿಎಫ್‌ ಯೋಜನೆಯಡಿ ನೀವು ಶೇಕಡಾ 7.1 ರಷ್ಟು ಬಡ್ಡಿದರವನ್ನ ಪಡೆಯಬಹುದು. ಅಲ್ಲದೆ ಇದು ಪೋಸ್ಟ್‌ ಆಫೀಸ್‌ ಮೂಲಕ ಸಲ್ಲಿಸಬಹುದಾದ ಹೆಚ್ಚಿನ ಬಡ್ಡಿ ಹೂಡಿಕೆ ಆಯ್ಕೆಗಳಲ್ಲಿ ಇದು ಒಂದಾಗಿದೆ.

 ಪೋಸ್ಟ್ ಆಫೀಸ್‌ನ ಈ ಯೋಜನೆಯಿಂದ 5 ಲಕ್ಷ ಹಣ ಗಳಿಸಬಹುದು

ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ ಬಗ್ಗೆ ತಿಳಿಯಿರಿ

ಅಂಚೆ ಕಚೇರಿಯ ಪಿಪಿಎಫ್ ಯೋಜನೆಯು ಹೆಚ್ಚಿನ ಆದಾಯದ ಅಂಚೆ ಕಚೇರಿ ಉಳಿತಾಯ-ಸಂಬಂಧಿತ ಯೋಜನೆಯಾಗಿದೆ. ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಇಲ್ಲಿ ಹೂಡಿಕೆ ಮಾಡಿದರೆ ನಿರ್ದಿಷ್ಟ ಅವಧಿಯ ನಂತರ, ನಾವು ಬಡ್ಡಿಯೊಂದಿಗೆ ಉತ್ತಮ ಲಾಭವನ್ನು ಪಡೆಯಬಹುದು.

ತುರ್ತು ಸಂದರ್ಭಗಳಿಗಾಗಿ ಒಂದಿಷ್ಟು ಹಣವನ್ನ ಉಳಿತಾಯ ಮಾಡುವುದು ಬಹಳ ಮುಖ್ಯ. ನಮಗೆ ಬರುವ ಆದಾಯದಲ್ಲಿ ಅದರ ಒಂದು ಬಾಗವನ್ನು ಉಳಿತಾಯ ಮಾಡುವುದು ಅತ್ಯಗತ್ಯ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಯೋಜನೆ ನಿಮಗೆ ನಿಮ್ಮ ಹಣವನ್ನ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಆಕರ್ಷಕ ಆದಾಯದೊಂದಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಉತ್ತಮ ಮತ್ತು ಜನಪ್ರಿಯ ಆಯ್ಕೆಯಾಗಿದೆ.

ಇದರಿಂದ ನೀವು ಎಷ್ಟು ಗಳಿಸಬಹುದು?

PPF ಯೋಜನೆಯಲ್ಲಿ ತಿಂಗಳಿಗೆ ಕೇವಲ 1,500 ರೂಪಾಯಿಗಳನ್ನ ಹೂಡಿಕೆ ಮಾಡುವ ಮೂಲಕ ಅವಧಿಯ ಅಂತ್ಯದಲ್ಲಿ 5 ಲಕ್ಷದವರೆಗೆ ಸಂಗ್ರಹಿಸಬಹುದು. ಅಲ್ಲದೆ PPF ನಿಮಗೆ ವಾರ್ಷಿಕವಾಗಿ ಶೇಕಡಾ 7.1ರಷ್ಟು ಬಡ್ಡಿದರವನ್ನು ನೀಡುತ್ತದೆ, ಇದು ಅಂಚೆ ಕಛೇರಿಯ ಮೂಲಕ ಲಭ್ಯವಿರುವ ಹೆಚ್ಚಿನ-ಬಡ್ಡಿಯ ಯೋಜನೆಯಾಗಿದೆ.

ಹೂಡಿಕೆಯ ವಿವರಗಳು

PPF ಯೋಜನೆ 15 ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದೆ, ನಂತರ ನೀವು ಅದನ್ನು ಬೇಕಾದರೆ 5 ವರ್ಷಗಳವರೆಗೆ ವಿಸ್ತರಿಸಬಹುದು. ಇನ್ನು ಈ ವಾರ್ಷಿಕ ಅವಧಿಯಲ್ಲಿ ನೀವು ರೂ 500 ರಿಂದ ರೂ 1.5 ಲಕ್ಷದವರೆಗೆ ಠೇವಣಿ ಮಾಡಬಹುದು. ಹಾಗೆ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ನೀವೇನಾದ್ರು PPF ಖಾತೆಯನ್ನು ತೆರೆಯಲು ಬಯಸಿದ್ರೆ ಕನಿಷ್ಠ 500 ರೂಪಾಯಿಗಳು ನಿಮಗೆ ಬೇಕಾಗುತ್ತದೆ.

PPF ಯೋಜನೆಯು ಹೆಚ್ಚಿನ ಬಡ್ಡಿದರಗಳ ಜೊತೆಗೆ, ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ ಹಾಗೆ ನಿಯಮಿತ ಆದಾಯವನ್ನು ನೀವು ಪಡೆಯಬಹುದು. 15 ವರ್ಷಗಳ ತನಕ ಪ್ರತಿ ತಿಂಗಳು 1,500 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ, ನೀವು ಒಟ್ಟು 2,70,000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಪ್ರಸ್ತುತ 7.1% ಬಡ್ಡಿದರದಲ್ಲಿ, 15 ವರ್ಷಗಳಲ್ಲಿ ನೀವು ಒಟ್ಟು 2,18,185 ರೂಗಳಷ್ಟು ಒಟ್ಟು ಬಡ್ಡಿಯನ್ನ ಗಳಿಸಬಹುದು.

ಒಟ್ಟು ಆದಾಯ ಮತ್ತು ವಿಸ್ತರಣೆ:

ಅವಧಿಯ ಅಂತ್ಯದಲ್ಲಿ, ನೀವು ಸರಿಸುಮಾರು 4,88,185 ರೂಪಾಯಿಗಳನ್ನು ಪಡೆಯಬಹುದು. ಅಂದರೆ ಒಟ್ಟು ಸುಮಾರು 5 ಲಕ್ಷದ ವರೆಗೆ ಹಣವನ್ನ ಗಳಿಸಬಹುದು. ಹಾಗೆ ಇದರಲ್ಲಿ ಇನ್ನೂ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುವವರು ಯೋಜನೆಯನ್ನು 5 ವರ್ಷಗಳವರೆಗೆ ಕೂಡ ವಿಸ್ತರಿಸಬಹುದು. ಇದರಿಂದ ನಿಮ್ಮ ಉಳಿತಾಯವನ್ನು ಇನ್ನಷ್ಟು ಹೆಚ್ಚಿಸಬಹುದು.

ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಯನ್ನು ತೆರೆಯಲು ಇರುವ ಅರ್ಹತಾ ಮಾನದಂಡಗಳು

ಈ ಪಿಪಿಎಫ್‌ ಖಾತೆಯನ್ನು ವೇತನದಾರರು, ಸ್ವಯಂ ಉದ್ಯೋಗಿ, ಪಿಂಚಣಿದಾರರು, ಇತ್ಯಾದಿ ಸೇರಿದಂತೆ ಯಾವುದೇ ಭಾಗದ ಭಾರತೀಯರು ಪೋಸ್ಟ್‌ ಆಫೀಸ್‌ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಆದ್ರೆ ಒಬ್ಬ ವ್ಯಕ್ತಿ ಒಂದು ಖಾತೇಐನ್ನ ತೆರೆಯಲು ಮಾತ್ರ ಅವಕಾಶವಿರುತ್ತದೆ. ಆತ ಇಂದಕ್ಕಿಂತ ಹೆಚ್ಚು ಪಿಪಿಎಫ್‌ ಖಾತೆಯನ್ನು ಹೊಂದಿರುವಂತಿಲ್ಲ. ಅಲ್ಲದೆ ಜಂಟಿ ಖಾತೆಯನ್ನು ಕೂಡ ತಎರೆಯುವ ಅವಕಾಶ ಇರುವುದಿಲ್ಲ. ಆದ್ರೆ ಯಾವುದೇ ಭಾಗದ ಭಾರತೀಯ ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಒಂದು ಪಿಪಿಎಫ್‌ ಖಾತೆಯನ್ನು ಹೊಂದಿರಬೇಕು.

ಹಾಗೆ ಪೋಷಕರು ಅಥವಾ ಬೇಕಾದ್ರೆ ಅಪ್ರಾಪ್ತ ವಯಸ್ಸಿನ ಮಗುವಿನ ಪರವಾಗಿ ಅಂಚೆ ಕಚೇರಿಯಲ್ಲಿ ಮೈನರ್ ಪಿಪಿಎಫ್ ಖಾತೆಯನ್ನು ತೆರೆಯುವ ಅವಕಾಶವಿರುತ್ತದೆ. ಇದು ಒಂದು ಮಗುವಿಗೆ ಒಂದು ಮೈನರ್ ಪಿಪಿಎಫ್ ಖಾತೆ ಎಂಬಂತೆ ಅವರು ಖಾತೆಯನ್ನ ತೆರೆಯಬಹಹುದು.

ಇನ್ನು ಹೊಸ ಪಿಪಿಎಫ್ ಖಾತೆಯನ್ನು ತೆರೆಯಲು ಅನಿವಾಸಿಗಳಿಗೆ ಇಲ್ಲಿ ಅವಕಾಶವಿಲ್ಲ. ಆದಾಗ್ಯೂ ತೆರೆಯಲು ಇಚ್ಛಿಸುವವರು, ಆತ ಏನಾದ್ರು ಎನ್‌ಆರ್‌ಐ ಅಥವಾ ಅನಿವಾಸಿ ಭಾರತೀಯ ಆಗಿದ್ದರೆ ಒಬ್ಬ ನಿವಾಸಿ ಭಾರತೀಯನ ಪಿಪಿಎಫ್ ಖಾತೆಯ ಮುಕ್ತಾಯದ ಮೊದಲು, ಹಾಗೆ ಮುಕ್ತಾಯವಾಗುವವರೆಗೆ ಖಾತೆಯನ್ನು ಅವರು ನಿರ್ವಹಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+