ನೀವು ಹೂಡಿಕೆ ಮಾಡಲು ಬಯಸುತ್ತಿದ್ದರೆ ನೀವು ಈ ಹೂಡಿಕೆ ತಂತ್ರಗಳನ್ನ ನೆನಪಿಡಬಾಕಾಗುತ್ತದೆ. ಜನರು ಹೆಚ್ಚು ಆದಾಯವನ್ನ ಗಳಿಸಲು ಹೂಡಿಕೆ ಮಾಡುವ ನಿಧಾfರವನ್ನ ಕೈಗೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ನಾವು ಇದರಲ್ಲಿ ಎಡವುತ್ತೇವೆ. ಹೀಗಾಗಿ ನೀವು ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನ ಗಮಿಸಬೇಕು. ಆಗ ಮಾತ್ರ ನವು ಉತ್ತಮ ರೀತಿಯಲ್ಲಿ ಆದಾಯವನ್ನ ಗಳಸಲು ಸಾಧ್ಯ.
ನಿಮ್ಮ ವ್ಯವಸ್ಥಿತ ಹೂಡಿಕೆ, ಶಿಸ್ತುಬದ್ಧ ಹಣಕಾಸು ಯೋಜನೆಯಿಂದ ನೀವು ಉತ್ತಮ ಆದಾಯವನ್ನ ಗಳಸಬಹುದು. ನೀವೀಗ ತಾನೆ ಕಾಲೇಜು ಮುಗಿಸಿ ವೃತ್ತಿಯನ್ನ ಮಾಡುತ್ತಿದ್ದರೆ ನಿಮಗೀಗ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಹೆಚ್ಚಿರುತ್ತದೆ. 2025 ನಿಮಗೆ ಲಾಭದಾಯಕ ವರ್ಷವಾಗಬೇಕಾದ್ರೆ ನೀವು ಈ ಹೂಡಿಕೆಯ ತಂತ್ರಳನ್ನ ಗಮನಿಸಬೇಕು. ಏನು ತಡವಾಗಿಲ್ಲ ನೀವು ಈಗ ಕೂಡ ಹೂಡಿಕೆಯನ್ನ ಆರಂಭ ಮಾಡಬಹುದು. ಆದ್ರೆ ಇದಕ್ಕಾಗಿ ನೀವು ಮೊದಲ ಹೆಜ್ಜೆಯನ್ನ ಇಡಬೇಕಾಗುತ್ತದೆ. ಅಲ್ಲದೆ ಈ ಹಣಕಾಸಿನ ಪ್ರಯಾಣಕ್ಕಾಗಿ ನಿಮಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಹೆಚ್ಚಿರುತ್ತದೆ.

ಬೇಗ ಪ್ರಾರಂಭ ಮಾಡುವುದರ ಲಾಭಗಳು
ನೀವು ನಿಮ್ಮ ಹೂಡಿಕೆ ಪ್ರಯಾಣವನ್ನ ಬೇಗ ಆರಂಭ ಮಾಡಿದರೆ, ನಿಮ್ಮ ಅನುಕೂಲಗಳೀಗೆ ತಕ್ಕಂತೆ ಇದನ್ನ ಸಂಯೋಜನೆ ಮಾಡಬಹುದು. ತರ್ಕಬದ್ಧವಾದ ನಿರೀಕ್ಷೆ ಮತ್ತು ವ್ಯವಸ್ಥಿತ ಹೂಡಿಕೆಯ ಜೊತೆಗೆ ನೀವು ಆರಂಭ ಮಾಡುವುದು ಬಹಳ ಮುಖ್ಯವಾಗುತ್ತದೆ ಎಂದು ಮಾಯಾಂಕ್ ಭಟ್ನಾಗರ್ ಹೇಳುತ್ತಾರೆ. ನೀವು 10 ವರ್ಷಗಳಲ್ಲಿ ಒಂದು ಕೋಟಿಯನ್ನು ಸಂಪಾದನೆ ಮಾಡಲು ನೀವು ತಿಂಗಳಿಗೆ 40,000 ರೂಪಾಯಿಗಳನ್ನ ಹೂಡಿಕೆ ಮಾಡಲು ಆಗದಿದ್ದರೂ ಕೂಡ ನೀವು ಸಣ್ಣದಾಗಿ ಪ್ರಾರಂಭ ಮಾಡಿ. ತಿಂಗಳಿಗೆ 8,800 ರೂ.ಗಳಂತೆ ನೀವು 20 ವರ್ಷಗಳು ಹೂಡಿಕೆ ಮಾಡಿದ್ರೆ ನೀವು ಆ ಗುರಿಯನ್ನ ಸುಲಭವಾಗಿ ತಲುಪಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಇನ್ನು ಈ ಕೋಟಿ ಸಂಪಾದನೆ ಅಂದರೆ ಬರೀ ಹಣವನ್ನ ಸಂಗ್ರಹ ಮಾಡುವುದಲ್ಲ ಆದರೆ ಸಮತೋಲನವಾದ ಆರ್ಥಿಕ ಜೀವನವನ್ನ ಕಟ್ಟಿಕೊಳ್ಳುವುದು ಎಂದು ಭಾವಿಕ್ ಠಕ್ಕರ್ ಅವರು ಹೇಳುತ್ತಾರೆ. ನಿಮ್ಮ ಜೀವನದ ಅನಿರೀಕ್ಷಿತ ಘಟನೆಗಳಿಂದ ನಿಮ್ಮನ್ನ ಪಾರು ಮಾಡಲು ಸಾಕಷ್ಟು ಜೀವನ ಮತ್ತು ಆರೋಗ್ಯ ವಿಮೆಯನ್ನ ಪ್ರಾರಂಭ ಮಾಡಲು ಅವರು ಶಿಫಾರಸು ಮಾಡುತ್ತಾರೆ. ಒಮ್ಮೆ ನೀವು ಇಂತಹ ರಕ್ಷಣೆಯನ್ನ ನೀಡುವಂತಹ ಯೋಜನೆಗಳನ್ನ ಮಾಡಿಕೊಂಡರೆ ನಂತರ ನೀವು ದೀರ್ಘಾವಧಿಯ ವರೆಗೆ ನೀವು ನಿಮ್ಮ ಹೂಡಿಕೆಯ ಮೇಲೆ ಗಮನಹರಿಸಬಹುದು.
ನಿಮ್ಮ ಜೀವನ ಶೈಲಿ ಮತ್ತು ಹೂಡಿಕೆ ಎರಡೂ ಸಮತೋಲನವಾಗಿರಬೇಕು
ಇಬ್ಬರು ತಜ್ಞರು ಹೇಳುವ ಪ್ರಕಾರ ಹೂಡಿಕೆ ಮಾಡಲು ಬಯಸುವವರು ಮೊದಲು ಅವರ ಜೀವನಶೈಲಿ ಮತ್ತು ಹೂಡಿಕೆ ಎರಡನ್ನೂ ಸಮತೋಲನದಲ್ಲಿಡಬೇಕು ಎಂದು ಹೇಳುತ್ತಾರೆ.
ನಿಮ್ಮ ಜೀವನ ಶೈಲಿಯಲ್ಲಿ ಏರುಪೇರುಗಳಾದ್ರೆ ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ಚಂಚಲತೆಗಳನ್ನ ಎದುರಿಸಬೇಕಾಗುತ್ತದೆ, ಆಗ ನೀವು ನಿಮ್ಮ ಹೂಡಿಕಡಯನ್ನ ನಿಲ್ಲಿಸುವ ನಿರ್ಧಾರವನ್ನ ಕೂಡ ನೀವು ಮಾಡಬಹುದು ಎಂದು ಭಟ್ನಾಗರ್ ಹೇಳುತ್ತಾರೆ. ನೀವು ನಿಮ್ಮ ಜೀವನ ಹಾಗು ನಿಮ್ಮ ಹೂಡಿಕೆ ಸಮತೋಲದಲ್ಲಿಡುವುದರಿಂದ ನೀವು ನಿಮ್ಮ ಕೋಟಿ ಸಂಪಾದನೆ ಮಾಡುವ ಗುರಿಯನ್ನ ತಲುಪಬಹುದು.
ಹಾಗೆ ಹೂಡಿಕೆಯಲ್ಲಿ ಶಿಸ್ತು ಮತ್ತು ಸಮತೋಲನ ಎರಡೂ ಬಹಳ ಮುಖ್ಯ ಎಂದು ಠಕ್ಕರ್ ಅವರು ಹೇಳುತ್ತಾರೆ. ಹಾಗೆ ನಿಜವಾದ ಸಂಪತ್ತು ಯೋಜನೆಯೆಂದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಮಾಹಿತಿಗಳ ಬಗ್ಗೆ ತಿಳಿಯುವುದು, ನೀವು ನಿಮ್ಮ ಜೀವನದ ಆನಂದಗಳನ್ನ ಅನುಭವಿಸುವುದು ಎಂದು ಅವರು ಹೇಳುತ್ತಾರೆ.
ಭರವಸೆಯ ವಲಯಗಳನ್ನು ನೋಡಿ
ಮೂಲಸೌಕರ್ಯ ಅಭಿವೃದ್ಧಿ: ರಸ್ತೆಮಾರ್ಗಗಳು, ರೈಲ್ವೆಗಳು, ಬಂದರುಗಳು ಮತ್ತು ನಗರಾಭಿವೃದ್ಧಿಯಂತಹ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಸರ್ಕಾರ ಅವಕಾಶಗಳನ್ನ ನೀಡುವ ಮೂಲಕ ಭಾರತದ ಮೂಲಸೌಕರ್ಯವು ಪ್ರಮುಖ ಉತ್ತೇಜನಕ್ಕೆ ಸಿದ್ಧವಾಗಿದೆ. ಇದು ಈ ವಲಯದ ಬೆಳವಣಿಗೆಗೆ ಉತ್ತೇಜಕ ಅವಕಾಶವನ್ನು ಸೃಷ್ಟಿಸುತ್ತದೆ.
ಹೆಲ್ತ್‌ಕೇರ್: ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಆರೋಗ್ಯ ಕ್ಷೇತ್ರವು ಸ್ಥಿತಿಸ್ಥಾಪಕತ್ವವನ್ನು ತೋರಿಸುವುದನ್ನು ಮುಂದುವರೆಸಿದೆ. ಭಾರತದ ಜನಸಂಖ್ಯೆ ಕೂಡ ಸ್ಥಿರವಾಗಿ ಬೆಳೆಯುತ್ತಿರುವುದರಿಂದ, ವೈದ್ಯಕೀಯ ಸೇವೆಗಳು ಮತ್ತು ಔಷಧೀಯ ಪ್ರಗತಿಗಳ ಅಗತ್ಯಗಳು ಕೂಡ ಇಲ್ಲಿ ಹೆಚ್ಚಿರುತ್ತವೆ.
ನವೀಕರಿಸಬಹುದಾದ ಶಕ್ತಿ: ಸೌರಶಕ್ತಿ, ಗಾಳಿ ಮತ್ತು ಹಸಿರು ಹೈಡ್ರೋಜನ್‌ನಂತಹ ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ಹೂಡಿಕೆಗಳನ್ನು ನಡೆಸುತ್ತಿದೆ. ಈ ವಲಯವು ಭವಿಷ್ಯಕ್ಕಾಗಿ ಗಮನಾರ್ಹ ಸಾಮರ್ಥ್ಯವನ್ನು ಹೊಂದಿರುುದಲ್ಲದೆ, ಜಾಗತಿಕ ಪ್ರವೃತ್ತಿಗಳೊಂದಿಗೆ ಹೊಂದಿಕೊಳ್ಳುತ್ತದೆ.
ಆಟೋಮೊಬೈಲ್‌ಗಳು: ಈಗಂತು ಆಟೋಮೊಬೈಲ್ ವಲಯ ಹೆಚ್ಚಗ ಜನರನ್ನ ಆಕರ್ಷಿಸುವುದರಿಂದ, ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಮತ್ತು ಪ್ರೀಮಿಯಂ ಮಾದರಿಗಳು, ಜೊತೆಗೆ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ ಮತ್ತು ಪ್ರೀಮಿಯಮೀಕರಣದತ್ತ ನಡೆಯುತ್ತಿರುವ ಬದಲಾವಣೆಯಿಂದಾಗಿ ಬಲವಾದ ಬೆಳವಣಿಗೆಯನ್ನ ನಾವು ಕಾಣಬಹುದು.
ಹೂಡಿಕೆ ಮೂಲಕ ಹೆಚ್ಚು ಸಂಪಾದಿಸುವದು ಹೇಗೆ?
ನೀವು ಕೋಟಿ ಸಂಪಾದನೆ ಮಾಡಲು ನೀವು ಈ ಹೂಡಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನ ತಿಳಿದಿರಬೇಕಾಗುತ್ತದೆ. ನಿಮ್ಮ 1 ಕೋಟಿ ಗಳಿಕೆಗಾಗಿ ಸ್ಥಿರ ಹೂಡಿಕೆ ಮತ್ತು ದೀರ್ಘಾವದಿಯ ದೃಷ್ಟಿಕೋನದ ಅಗತ್ಯ ಇರುತ್ತದೆ. ಭಟ್ನಾಗರ್ ಪ್ರಕಾರ, ನೀವು 25 ವರ್ಷ ಇರುವಾಗ ನೀವು ತಿಂಗಳಿಗೆ 20,000 ರೂಗಳಂತೆ ಹೂಡಿಕೆ ಮಾಡಲು ಆರಂಭಿಸಿದರೆ ನೀವು ನಿಮ್ಮ 40ನೇ ವಯಸ್ಸಿನಲ್ಲಿ ನೀವು 1 ಕೋಟಿಯನ್ನ ಗಳಿಕೆ ಮಾಡಬಹುದು.
ಠಕ್ಕರ್ ಅವರ ಪ್ರಕಾರ, 12% ನಂತರದ ತೆರಿಗೆ ರಿಟರ್ನ್ ಅನ್ನು ಆಧಾರದ ಮೇಲೆ, ನೀಮ್ಮ ಕೋಟಿ ಸಂಪಾದನೆಯನ್ನ ತಲುಪಲು ಸರಿಸುಮಾರು 15 ವರ್ಷಗಳು ಬೇಕಾಗಬಹುದು ಎಂದು ಅವರು ಹೇಳುತ್ತಾರೆ.
ಅಲ್ಲದೆ ನಿಮ್ಮ ಆದಾಯ ಹೆಚ್ಚಾದಂತೆ ನೀವು ನಿಮ್ಮ ಹೂಡಿಕೆಯ ಮೊತ್ತವನ್ನ ಕೂಡಹೆಚ್ಚಿಸುವುದು ಮುಖ್ಯ ಎಂದು ಇಬ್ಬರು ತಜ್ಞರು ಹೇಳುತ್ತಾರೆ. ಇದು ಹಣದುಬ್ಬರದಂತಹ ಪ್ರಭಾವವನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಹಾಗೆ ನಿಮ್ಮ ಹಣಕಾಸಿನ ಗುರಿಗಳೊಂದಿಗೆ ನಿಮ್ಮ ಸಂಪತ್ತು ಗಳಿಸುವ ಪ್ರಯಾಣವು ಕೂಡ ವೇಗವಾಗಿ ಸಾಗುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications