ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಹತ್ತಿರದಲ್ಲೇ ಇದ್ದ ಚಿನ್ನದ ಮಳಿಗೆಗೆ ತೆರಳಿ ಚಿನ್ನವನ್ನು ಖರೀದಿಸುವುದು ಇದರ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಸರಳ ಮಾರ್ಗವಾಗಿದೆ. ಚಿನ್ನವನ್ನು ಚಿನ್ನಾಭರಣ ಅಥವಾ ಗೋಲ್ಡ್ ಕಾಯಿನ್ ಮತ್ತು ಬಿಸ್ಕೆಟ್ ಇತ್ಯಾದಿಗಳ ರೂಪದಲ್ಲಿ ಖರೀದಿಸಬಹುದು. ಬಂಗಾರದ ಮೇಲೆ ಹೂಡಿಕೆ ಮಾಡುವುದು ಸಂಪ್ರದಾಯಿಕ ವಿಧಾನಗಳಲ್ಲಿ ಒಂದು. ಅದರಲ್ಲೂ ಭಾರತದಲ್ಲಿ ಹಬ್ಬ- ಹರಿದಿನಗಳ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂಬ ನಂಬಿಕೆ ಇದೆ. ಹೂಡಿಕೆ ದೃಷ್ಟಿಯನ್ನು ಹೊರತುಪಡಿಸಿ ನೋಡುವುದಾದರೆ ಯಶಸ್ಸು ಮತ್ತು ಸಂಪತ್ತನ್ನು ಪ್ರತಿನಿಧಿಸುವುದರಿಂದ ಬಂಗಾರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ.
ಹಿಂದೆ ನಮ್ಮ ಪೂರ್ವಜರಿಗೆ ಹೂಡಿಕೆಗೆ ಆಯ್ಕೆಗಳು ಕಡಿಮೆ ಇತ್ತು. ಆದರೆ ಇಂದು ಹಾಗಲ್ಲ..ಹಲವಾರು ವಿಧದ ಹೂಡಿಕೆ ಆಯ್ಕೆಗಳಿವೆ. ಈಗ ಚಿನ್ನವನ್ನೇ ತೆಗೆದುಕೊಂಡರೆ ಸಾವರಿನ್ ಗೋಲ್ಡ್ ಬಾಂಡ್, ಗೋಲ್ಡ್ ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್, ಡಿಜಿಟಲ್ ಗೋಲ್ಡ್ , ಮತ್ತು ಘನ ರೂಪ್ ಹೇಗೆ ವಿವಿಧ ರೂಪದ ಚಿನ್ನದ ಮೇಲೆ ಹೂಡಿಕೆದಾರರು ಹೂಡಿಕೆ ಮಾಡಬಹುದು. ಯಾವುದೇ ಚಿನ್ನವಿರಲಿ ಹೂಡಿಕೆ ಮಾಡುವಾಗ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಅತ್ಯಂತ ಸೂಕ್ತ.

ಭಾರತದಲ್ಲಿ ಹಬ್ಬವೆಂದರೆ ಕೇವಲ ಆಚರಣೆಯ ಸಮಯವಲ್ಲ,ಆರ್ಥಿಕ ಚಟುವಟಿಕೆಗಳು ಗರಿಕೆದರುವ ಸಮಯವಾಗಿದೆ. ಅದರಲ್ಲೂ ವಿಶೇಷವಾಗಿ ಚಿನ್ನದ ಖರೀದಿಗಳು ಕೊಂಚ ಹೆಚ್ಚಾಗಿಯೇ ನಡೆಯುತ್ತದೆ. ಹಾಗಿದ್ರೆ ಹಬ್ಬದ ಈ ಋತುವಿನಲ್ಲಿ ಚಿನ್ನದ ಮೇಲೆ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಹೇಗೆ? ಹಬ್ಬದ ಸೀಸನ್‌ಗಾಗಿ ಚಿನ್ನವನ್ನು ಖರೀದಿಸುತ್ತಿರಲಿ ಅಥವಾ ದೀರ್ಘಾವಧಿಯ ಹೂಡಿಕೆ ಬಗ್ಗೆ ಯೋಜನೆ ಹಾಕಿಕೊಂಡಿರಲಿ. ಚಿನ್ನವನ್ನು ಖರೀದಿಸುವ ಮುನ್ನ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಸೂಚನೆಗಳು ಯಾವುವು ಮುಂತಾದ ಮಾಹಿತಿಗಳು ಈ ಲೇಖನದಲ್ಲಿದೆ.
ಖರೀದಿಗೆ ಉತ್ತಮ ವಿತರಕರನ್ನು ಆಯ್ಕೆ ಮಾಡಿ:
ಬಿಐಎಸ್ ಹಾಲ್‌ಮಾರ್ಕ್ ಆಭರಣಗಳ ಮಾರಾಟ ಮಾಡುವ ಹಾಗೂ ಇತರ ಅಗತ್ಯವಿರುವ ನಿಯಮಗಳನ್ನು ಪಾಲಿಸುವಂತಹ ವಿಶ್ವಾಸಾರ್ಹ, ಸಂಘಟಿತ ವಲಯದ ಆಭರಣ ಮಾರಾಟಗಾರರಿಂದ ಮಾತ್ರ ಅಭರಣವನ್ನು ಖರೀದಿಸಿ. ಅಸಂಘಟಿತ ವಲಯದ ಮಾರಾಟಗಾರರಿಂದ ಖರೀದಿಸಬೇಡಿ ಯಾಕೆಂದರೆ ಇಂತಹ ಮಾರಾಟ ಹೆಚ್ಚಿನವುಗಳು ಅನಿಯಂತ್ರಿತವಾಗಿದ್ದು, ಇದರಿಂದ ಖರೀದಿದಾರರಿಗೆ ನಷ್ಟದ ಅಪಾಯಕ್ಕೆ ಒಡ್ದುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಹೇಗೆ ಖರೀದಿಸುತ್ತೀರಿ?
ಎಲ್ಲರಿಗೂ ಸಂಪೂರ್ಣ ನಗದು ಕೊಟ್ಟು ಚಿನ್ನ ಖರೀದಿ ಸಾಧ್ಯವಾಗುವುದಿಲ್ಲ. ಹೀಗಾಗಿ ಒಂದು ವೇಳೆ ನೀವು EMI ಮೂಲಕ ಚಿನ್ನ ಖರೀದಿಗೆ ಯೋಚಿಸುತ್ತಿದ್ದರೆ, ಅದರ ನಿಯಮಗಳ ಬಗ್ಗೆ ಮೊದಲು ಅರ್ಥಮಾಡಿಕೊಳ್ಳಿ. ಮೇಲ್ನೋಟಕ್ಕೆ ಲಾಭದಾಯಕ ಎಂದು ಕಂಡರೂ, ನಿಯಮಗಳನ್ನು ನಿಖರವಾಗಿ ತಿಳಿದುಕೊಳ್ಳುವುದು ಸೂಕ್ತ.
ನೀವು ಪ್ರತಿಮಾಸ ಪಾವತಿಸಿದಾಗ, ಅವಧಿಯ ಕೊನೆಯಲ್ಲಿ ನೀವು ಪಾವತಿಸಬೇಕಾದ ಮೊತ್ತ, ಅಥವಾ ಆ ಸಮಯದಲ್ಲಿ ಚಿನ್ನದ ಬೆಲೆಯ ಎಷ್ಟಿದೆ ಎಂದು ತಿಳಿದುಕೊಳ್ಳಿ. , ಪ್ರಾರಂಭದಲ್ಲಿ ಬೆಲೆ ಲಾಕ್ ಆಗಿರುತ್ತದೆ ಎಂದು ತಿಳಿಯುವಂತಹ ಉತ್ತಮ ಯೋಜನೆಗಳನ್ನು ಆಯ್ಕೆಮಾಡಿ. ನೀವು ಯಾವ ಆಭರಣ ಅಥವಾ ನಾಣ್ಯವನ್ನು ಖರೀದಿಸುತ್ತೀರಿ ಮತ್ತು ನೀವು ಎಷ್ಟು ಗ್ರಾಮ್ ಪಡೆಯುತ್ತೀರಿ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನಿಮಗೆ ಇರುವುದರಿಂದ ಎಲ್ಲವೂ ನಿಮಗೆ ನಿಖರವಾಗಿ ತಿಳಿದಿರುತ್ತೀರಿ.
ಖರೀದಿ ಉದ್ದೇಶ ಏನು?
ನೀವು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರೆ ಅದರ ಉದ್ದೇಶವು ಇಲ್ಲಿ ಪ್ರಮುಖವಾಗುತ್ತದೆ. ಒಂದು ವೇಳೆ ನೀವು ವಿವಾಹಕ್ಕಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರೆ 10-ಗ್ರಾಂ ಚಿನ್ನದ ನೆಕ್ಲೇಸ್‌ನಂತಹ ನಿರ್ದಿಷ್ಟ ಆಭರಣವನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ, ಒಪ್ಪಂದದ ವೇಳೆ ವಿನ್ಯಾಸ ತೂಕ ಮತ್ತು ಒಟ್ಟು ಬೆಲೆಯನ್ನು ತಿಳಿದುಕೊಳ್ಳಿ. ನಿಮಗೆ ಈ ಬಗ್ಗೆ ನಿಖರತೆ ಇದ್ರೆ ನಿಮ್ಮ ಚಿನ್ನವನ್ನು ರಿಡೀಮ್ ಮಾಡಲು ಹೋದಾಗ ಕೊನೆಯ ಕ್ಷಣದ ಆಗುವಂತಹ ಬದಲಾವಣೆಗಳು ಅಥವಾ ಬೆಲೆ ಏರಿಕೆಗಳಿಂದ ನಿಮ್ಮನ್ನು ಕಾಪಾಡುತ್ತದೆ.
ವಿಶ್ವಾಸಾರ್ಹತೆಯ ಬಗ್ಗೆ ಗ್ರೌಂಡ್ ವರ್ಕ್ ಮಾಡಿಕೊಳ್ಳಿ
ಚಿನ್ನ ಖರೀದಿಸುವಾಗ ನೀವು ಕೊಂಡುಕೊಳ್ಳುವ ಜುವೆಲ್ಲ್ಯರಿ ಶಾಪ್ ನ ವಿಶ್ವಾಸಾರ್ಹತೆಯ ಬಗ್ಗೆ ಕೊಂಚ ಗ್ರೌಂಡ್ ವರ್ಕ್ ಮಾಡಿಕೊಳ್ಳಿ. ವಿವಿಧ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಗ್ರಾಹಕರು ಹಿಂದೆ ಹಾಕಿರುವಂತ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಿ. ಪ್ರಮುಖವಾಗಿ ಉತ್ಪನ್ನದ ಗುಣಮಟ್ಟದ ಬಗ್ಗೆ ಮತ್ತು ಡೆಲಿವರಿ ಟೈಮ್ ಬಗ್ಗೆ ನೆಗೆಟಿವ್ ವಿಮರ್ಶೆಗಳಿದ್ದರೆ ಇತರ ಸೇವೆಗಳ ಬಗ್ಗೆ ಪಾರದರ್ಶಕ ಮಾಹಿತಿ ನೀಡುವಂತ ವಿಶ್ವಾಸಾರ್ಹ ಮಾರಾಟಗಾರರನ್ನು ಆಯ್ಕೆ ಮಾಡಿ.
ಮಾರುಕಟ್ಟೆ ಬೆಲೆ:
ಚಿನ್ನದ ಬೆಲೆಗಳ ಬಗ್ಗೆ ನೀವು ಅಪ್ಡೇಟ್ ಆಗಿರಬೇಕು. ಇದಕ್ಕಾಗಿ ನೀವು ಗುಡ್ ರಿರ್ಟನ್ಸ್ ನಂತ ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದು. ಚಿನ್ನದ ಬೆಲೆ, ಮೌಲ್ಯ ತಿಳಿದಿರುವುದರಿಂದ ನೀವು ಎಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಬೇಕು ಎಂಬ ಕಲ್ಪನೆ ನಿಮಗೆ ಖಚಿತವಾಗಿರುತ್ತದೆ.
ಹಿಡನ್ ಫೀ ಬಗ್ಗೆ ಎಚ್ಚರದಿಂದಿರಿ:
ನಂತರದ ದಿನಾಂಕದಲ್ಲಿ ಗುಪ್ತ ಶುಲ್ಕಗಳನ್ನು ತಪ್ಪಿಸಲು ಯಾವುದೇ ಡಾಕ್ಯುಮೆಂಟ್‌ಗೆ ಸಹಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಮತ್ತು ಅವುಗಳನ್ನು ನಿಮ್ಮ ತಿಳುವಳಿಕೆಯೊಂದಿಗೆ ಹೊಂದಿಸಿ.
ಡಿಜಿಟಲ್ ಚಿನ್ನ ಅಥವಾ ಸೋವರಿನ್ ಗೋಲ್ಡ್ ಬಾಂಡ್‌ಗಳನ್ನು ಪರಿಗಣಿಸಿ:
ಹಬ್ಬದಲ್ಲಿ ಭೌತಿಕ ಚಿನ್ನವನ್ನು ಖರೀದಿಸುವ ಬದಲು ಡಿಜಿಟಲ್ ಚಿನ್ನ ಅಥವಾ ಸೋವರಿನ್ ಗೋಲ್ಡ್ ಬಾಂಡ್‌ಗಳನ್ನು ಆಯ್ಕೆ ಮಾಡುವುದು ಉತ್ತಮ. ಇದು ನಿಮ್ಮ ಹೂಡಿಕೆಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ.


Click it and Unblock the Notifications