ನಿವೃತ್ತಿ ಎನ್ನುವುದು ನಮ್ಮ ಜೀವನದ ಬಹುದೊಡ್ಡ ಅಂಗ. ವೃತ್ತಿ ಜೀವನದಲ್ಲಿ ಜಗತ್ತಿನೊಂದಿಗೆ ಸೆಣಸಾಡಿ ಅಷ್ಟೋ ಇಷ್ಟೋ ಅಂತಾ ಹಣ ಉಳಿಸಿಕೊಂಡು ಜೀವನ ಸಾಗಿಸುತ್ತೇವೆ. ಆದರೆ ನಿವೃತ್ತಿ ಬಳಿಕವೂ ನಮ್ಮ ಜೀವನ ಸುಖವಾಗಿರಬೇಕೆಂದರೆ ಆದಾಯದ ಕೊರತೆ ಇರಬಾರದು. ಆರ್ಥಿಕ ಸಂಪನ್ಮೂಲಗಳು ಗಟ್ಟಿಯಾಗಿರಬೇಕು. ಏಕೆಂದರೆ ವಯಸ್ಸಾದ ಮೇಲೆ ಪ್ರತಿ ಖರ್ಚಿಗೂ ಮಕ್ಕಳನ್ನ ಅವಲಂಬಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮಗೆ ಇಷ್ಟ ಬಂದಂತೆ, ನಮ್ಮ ಜೀವನದಲ್ಲಿ ಏನೂ ಕೊರತೆ ಬಾರದಂತೆ ಜೀವಿಸಲು ಒಂದು ಆದಾಯದ ಮೂಲ ಇರಲೇಬೇಕು. ಹೀಗಾಗಿ ನಿವೃತ್ತಿ ನಂತರವೂ ನಾವೂ ಆದಾಯದ ಬಗ್ಗೆ ಯೋಚಿಸಬೇಕು. ಹೀಗೆ ನಿವೃತ್ತಿ ನಂತರವೂ ಉತ್ತಮ ಆದಾಯ ನೀಡುವ ಒಂದು ಯೋಜನೆ ಇದೆ. ಅದೇ ನಿವೃತ್ತಿ ನಿಧಿ.

ಈ ನಿವೃತ್ತಿ ಯೋಜನೆ ನಿಧಿ ಎಷ್ಟು ಉಪಯೋಗಕಾರಿ ಎಂದರೆ, ಈ ನಿಧಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಎಂದಿಗೂ ಆದಾಯದ ಕೊರತೆ ಬರುವುದಿಲ್ಲ. ಅಂದರೆ ಹೂಡಿಕೆದಾರರು ಇಲ್ಲಿ ಮೊದಲು 11 ಲಕ್ಷ ಹೂಡಿಕೆ ಮಾಡಿದರೆ 3.3 ಕೋಟಿಯಷ್ಟು ಆದಾಯ ಕೈಗೆ ಸೇರುತ್ತದೆ. ಹಾಗಾದರೆ ಈ ನಿವೃತ್ತಿ ನಿಧಿ ಎಂದರೇನು, ಇದರ ಗಾತ್ರ ಪ್ರಕಾರ ಹಾಗೂ ಇದನ್ನು ರಚಿಸುವ ವಿಧಾನ ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
1. ನಿವೃತ್ತಿ ನಿಧಿ ಎಂದರೇನು ಮತ್ತು ಇದನ್ನು ರಚಿಸುವುದು ಹೇಗೆ..?
ನಿವೃತ್ತಿ ನಿಧಿ ಎಂದರೆ ಹೂಡಿಕೆದಾರರ ನಿವೃತ್ತಿ ಬದುಕಿಗೆ ಹಣ ಒದಗಿಸುವ ಯೋಜನೆ. ಮೊದಲೇ ಹೂಡಿಕೆ ಮಾಡಿದರೆ ನಿವೃತ್ತಿ ಜೀವನದ ಹೊತ್ತಿಗೆ ಹೂಡಿಕೆದಾರರು, ತಮ್ಮ ದೈನಂದಿನ ಖರ್ಚಿಗೆ ಹಣವನ್ನು ಪೂರೈಸಿಕೊಳ್ಳಬಹುದು. ಈ ಯೋಜನೆಯ ಪ್ರಮುಖ ಉದ್ದೇಶ ಮತ್ತು ಗುರಿ ಏನೆಂದರೆ ಯಾವುದೇ ಕಾರಣಕ್ಕೂ ಹಣದ ಬಿಕ್ಕಟ್ಟು ಯಾರೂ ಎದುರಿಸಬಾರದು ಎನ್ನುವುದು. ಈ ನಿಧಿ ರಚಿಸುವುದು ಹೇಗೆಂದರೆ ಹೂಡಿಕೆದಾರರು ಒಮ್ಮೆಲೇ ಆದರೂ ಸರಿ, ಮಾಸಿಕವಾಗಿ ಆದರೂ ಸರಿ ಅಥವಾ ಹಂತ ಹಂತಗಳಲ್ಲಿಯಾದರೂ ಸರಿ ಹೂಡಿಕೆ ಮಾಡಬಹುದು.
2. ನಿವೃತ್ತಿ ನಿಧಿಯ ಹೂಡಿಕೆ ಪ್ರಕಾರ
ಕೆಲಸ ಮಾಡುತ್ತಿರುವ ವರ್ಷದಿಂದ ಹಿಡಿದು ನಿವೃತ್ತಿ ಗುರಿಯನ್ನು ಆಧರಿಸಿ ಹೂಡಿಕೆ ಮಾಡಬೇಕು. ಅಂದರೆ ಮಾರುಕಟ್ಟೆ-ಸಂಬಂಧಿತ ಮತ್ತು ಮಾರುಕಟ್ಟೆ-ಸಂಬಂಧಿತವಲ್ಲದ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಬಹುದು. ಇದು ಎರಡರ ಮಿಶ್ರಣವೂ ಆಗಿರಬೇಕು. ಅಲ್ಲದೇ ನಿವೃತ್ತಿ ಬದುಕಿನಲ್ಲಿ ನಿಮ್ಮ ನಿಧಿಯ ಜೊತೆಗೆ ಅಪಾಯವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ, ನೀವು ಸಾಲದ ಆಯ್ಕೆಗಳನ್ನೇ ಆರಿಸಿಕೊಳ್ಳುವುದು ಉತ್ತಮ.
3. ಹೂಡಿಕೆಯ ಅವಧಿ ಎಷ್ಟಿರುತ್ತದೆ..?
ಈ ನಿವೃತ್ತಿ ನಿಧಿಯಲ್ಲಿ ಹೂಡಿಕೆ ಅವಧಿ ಹೆಚ್ಚಾಗಿದ್ದರೆ ನಿಧಿಯ ಪ್ರಯಾಣ ಸುಲಭವಾಗಿರುತ್ತದೆ. ಏಕೆಂದರೆ ತಡವಾಗಿ ಹೂಡಿಕೆ ಮಾಡುವ ವ್ಯಕ್ತಿಗಿಂತ, ಹೆಚ್ಚು ಹಣವನ್ನು ಪಡೆಯಬಹುದು. ಉದಾಹರಣೆ ಮಾಸಿಕವಾಗಿ 6000 ರೂ. ಎಸ್‌ಐಪಿಯಲ್ಲಿ ವಾರ್ಷಿಕವಾಗಿ 12% ಲಾಭ ಪಡೆಯಬಹುದು. ಅದು 15,25 ಹಾಗೂ 35 ವರ್ಷಗಳಲ್ಲಿ ಬೆಳೆದು ದೊಡ್ಡ ಮೊತ್ತವಾಗಿರುತ್ತದೆ.
4. 6,000 ಹೂಡಿಕೆ 3.90 ಕೋಟಿ ಆದಾಯ ಹೇಗೆ ನೀಡುತ್ತದೆ.
ಹೂಡಿಕೆದಾರರು ಮಾಸಿಕವಾಗಿ 6000 ರೂ. ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 10.8 ಕೋಟಿ ರೂ. ಆಗಿರುತ್ತದೆ. 25 ವರ್ಷಗಳಲ್ಲಿ ಹೂಡಿಕೆ ಮೊತ್ತ 18 ಲಕ್ಷ ಆಗಿರುತ್ತದೆ ಮತ್ತು ನಿರೀಕ್ಷಿತ ಕಾರ್ಪಸ್ ರೂ. 1 ಕೋಟಿ 13 ಲಕ್ಷದ 85 ಸಾವಿರದ 811 ಆಗಿರುತ್ತದೆ. 35 ವರ್ಷಗಳಲ್ಲಿ ಒಟ್ಟು ಹೂಡಿಕೆ ಮೊತ್ತ 25 ಲಕ್ಷದ 20 ಸಾವಿರ ರೂ. ಆಗಿದ್ದರೆ, ನಿರೀಕ್ಷಿತ ನಿಧಿಯ ಮೊತ್ತ 3 ಕೋಟಿ 89 ಲಕ್ಷದ 71 ಸಾವಿರದ 614 ರೂ.ಗಳಾಗಿರುತ್ತದೆ. ಅಂದರೆ ಇಲ್ಲಿ ಅವಧಿ ಹೆಚ್ಚಾಂದತೆಲ್ಲ ಒಬ್ಬ ವ್ಯಕ್ತಿ ದೊಡ್ಡ ಮಟ್ಟದ ಲಾಭ ಪಡೆಯಬಹುದು. 35 ವರ್ಷಗಳಲ್ಲಿ ಅಂದಾಜು 3 ಕೋಟಿ 16 ಲಕ್ಷದ 79 ಸಾವಿರದ 772 ರೂ.ಗಳಾಗಿರುತ್ತದೆ.
ಹಾಗೆಯೇ ಹೂಡಿಕೆದಾರರು ಇಲ್ಲಿ 11 ಲಕ್ಷ ಹೂಡಿಕೆ ಮಾಡಿದರೆ, ವರ್ಷಕ್ಕೆ 12%ನಷ್ಟು ಲಾಭ ಪಡೆಯಬಹುದು. ಅಂದರೆ 11 ಲಕ್ಷ ರೂ. ಹೂಡಿಕೆ ಮಾಡಿದರೆ ಅದು 10 ವರ್ಷಗಳ ಅವಧಿಯಾಗಿ ಪರಿಗಣನೆಯಾಗುತ್ತದೆ. ಹಾಗೆಯೇ 11 ಲಕ್ಷ ರೂ. ಹೂಡಿಕೆ 10 ವರ್ಷಗಳಲ್ಲಿ 47 ಲಕ್ಷದ 55 ಸಾವಿರದ 461 ರೂ.ಪಡೆಯಬಹುದು. ಹಾಗೆಯೇ 20 ವರ್ಷಗಳಲ್ಲಿ 95 ಲಕ್ಷ 10 ಸಾವಿರದ 922 ರೂ. ಲಾಭ ಸಿಗುತ್ತದೆ. ಇನ್ನು 30 ವರ್ಷಗಳಿಗೆ ಲೆಕ್ಕ ಹಾಕಿದಾಗ ಕೈ ಸೇರುವ ಆದಾಯದ ಮೊತ್ತ 3 ಕೋಟಿ 29 ಲಕ್ಷದ 55 ಸಾವಿರದ 914 ರೂ.ಗಳಾಗಿರುತ್ತದೆ.
ಹೀಗೆ ಆದಾಯದ ಮೊತ್ತ ದುಪ್ಪಟ್ಟು ಆಗುತ್ತಲೇ ಇರುತ್ತದೆ. ಹೂಡಿಕೆದಾರರು ಈಗಿನಿಂದಲೇ ಹೂಡಿಕೆ ಶುರು ಮಾಡಿದರೆ ತಮ್ಮ ನಿವೃದ್ಧಿ ಅವಧಿ ಹೊತ್ತಿಗೆ ಆದಾಯ ಪಡೆಯಬಹುದು. ಹಾಗೂ ನಿವೃತ್ತಿ ಬದುಕಿನಲ್ಲಿ ಹಣದ ಕೊರತೆಯಾಗದೇ


Click it and Unblock the Notifications