ಆಪಲ್ ಕಂಪನಿ (Apple Company) ಪ್ರತೀ ವರ್ಷದಂತೆ 2024 ರಲ್ಲೂ ತನ್ನ ಬ್ರಾಂಡ್‌ನ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಸೆಪ್ಟೆಂಬರ್ 2024 ರಲ್ಲಿ ಹೊಸ ಫೋನ್‌ಗಳ ಮಾರಾಟದಿಂದಾಗಿ ನಿಲ್ಲಿಸಿತ್ತು. ಆದರೆ, ಇದೀಗಗ ಈ ಎರಡೂ ಫೋನ್‌ಗಳು ಮೇ 2025 ರಿಂದ ಮರುಸ್ಥಾಪಿತ (Repurbished) ರೂಪದಲ್ಲಿ ಕಡಿಮೆ ಬೆಲೆಯಲ್ಲಿ ಮತ್ತೆ ಖರೀದಿಗೆ ಲಭ್ಯವಿದೆ. ಇದು ಗ್ರಾಹಕರಿಗೆ ಆಪಲ್‌ನ ಈ ಫೋನ್ ಅನ್ನು ಇತ್ತೀಚಿನ ಟೆಕ್ನಾಲಜಿಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಪಡೆಯಬಹುದಾಗಿದೆ.

ಆಪಲ್ ತನ್ನ ಐಫೋನ್ 15 ಪ್ರೋ ಅನ್ನು ಸೆಪ್ಟೆಂಬರ್ 2024 ರಲ್ಲಿ ಸಾಮಾನ್ಯ ಮಾರಾಟದಿಂದ ವಾಪಾಸ್ ಪಡೆದಿತ್ತು. ನಂತರ ಮೇ 2025 ರಲ್ಲಿ, ಪರಿಷ್ಕೃತ (refurbished) ಸ್ಥಿತಿಯಲ್ಲಿ ಕಡಿಮೆ ಬೆಲೆಗೆ ಮರುಪರಿಚಯಿಸಿತು. ಇದೀಗ ಐಫೋನ್ 15 ಸೀರಿಸ್ ಇನ್ನೂ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.
ಐಫೋನ್ 15 ಸೀರಿಸ್‌ನ ಎರಡು ಮಾದರಿಗಳ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ:
ಆಪಲ್ ಪ್ರಸ್ತುತ ಕೇವಲ ಎರಡು ಪ್ರೋ ಮಾದರಿಗಳಿಗೆ ಆಫರ್ ಘೋಷಿಸಿದೆ. ಈಗಾಗಲೇ ಬಿಡುಗಡೆಯಾದ ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಮಾದರಿಗಳನ್ನು ಮಾತ್ರ ಪರಿಷ್ಕೃತ ಸ್ಥಿತಿಯಲ್ಲಿ ಮಾರಾಟ ಮಾಡುತ್ತಿದೆ, ಹೊಸದಾಗಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಆಪಲ್ ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿದಾಗ, ಹಿಂದಿನ ವರ್ಷದ ಮಾದರಿಗಳನ್ನು ತನ್ನ ಮಾರಾಟದಿಂದ ಕೈಬಿಡೋದು ಸಾಮಾನ್ಯ. ಅದನ್ನೇ ಆಪಲ್ ಕಂಪನಿ 2024ರಲ್ಲಿ ಕೈಗೊಂಡಿತ್ತು.
ಐಫೋನ್ 17 ಸೀರಿಸ್ ಬಿಡುಗಡೆ
ಇತ್ತೀಚೆಗೆ ಹೊಸ ಐಫೋನ್ 17 ಸರಣಿ ಬಿಡುಗಡೆಯಾಗಿದ್ದು, ಐಫೋನ್ 16 ಪ್ರೋ ಮತ್ತು ಐಫೋನ್ 16 ಪ್ರೋ ಮ್ಯಾಕ್ಸ್ ಮಾದರಿಗಳ ಮಾರಾಟವನ್ನು ಸಹ ನಿಲ್ಲಿಸಲಾಗಿದೆ.
ಇದೀಗ ಐಫೋನ್ 15 ಪ್ರೋ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಏಕೆಂದರೆ ಐಫೋನ್ 15 ಪ್ರೋ ಮತ್ತು ಪ್ರೋ ಮ್ಯಾಕ್ಸ್ ವಿಶೇಷವಾಗಿದ್ದು, ಏಕೆಂದರೆ ಅವುಗಳು ಆಪಲ್ ಇಂಟೆಲಿಜೆನ್ಸ್ ಅನ್ನು ಬೆಂಬಲಿಸುವ ಮೊದಲ ಐಫೋನ್‌ಗಳಾಗಿದೆ. ಆದ್ದರಿಂದ, ಈ ಫೋನ್ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು, ಎಲ್ಲಾ ಫೀಚರ್‌ಗಳನ್ನು ಇದರಲ್ಲಿ ಬಳಸಬಹುದಾಗಿದೆ. ಇದೀಗ ಐಫೋನ್ 15 ಪ್ರೋ ಹಿಂದೆಂದಿಗಿಂತಲೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಭಾರೀ ಕಡಿಮೆ ಬೆಲೆಯಲ್ಲಿ ಐಫೋನ್15 ಪ್ರೋ!
ಉದಾಹರಣೆಗೆ, 128GB ಅಥವಾ 256GB ಸಂಗ್ರಹ ಸಾಮರ್ಥ್ಯದ ಹ್ಯಾಂಡ್‌ಸೆಟ್‌ಗಳು ಪ್ರಸ್ತುತ ಸ್ಟಾಕ್‌ನಲ್ಲಿಲ್ಲ. ಆದರೆ 512GB ಸಂಗ್ರಹ ಸಾಮರ್ಥ್ಯದ ಐಫೋನ್ 15 ಪ್ರೋ, ಹೊಸದಾಗಿದ್ದಾಗ $1,299 (1,15,346.00 ರೂ.) ಬೆಲೆ ಹೊಂದಿತ್ತು, ಆದರೆ ಈಗ $929 (82,491.48 ರೂ) ಕ್ಕೆ ನಾಲ್ಕು ಬಣ್ಣಗಳಲ್ಲಿ ಪರಿಷ್ಕೃತ ಸ್ಥಿತಿಯಲ್ಲಿ ಲಭ್ಯವಿದೆ. ಕೆಲ ವಾರಗಳಿಗೆ ಹೋಲಿಸಿದ್ರೆ ಮತ್ತಷ್ಟು ಇಳಿಕೆಯಾಗಿದೆ.
ನೀವು ಹೆಚ್ಚಿನ ಸಂಗ್ರಹ ಸಾಮರ್ಥ್ಯ, ಅಂದರೆ 1TB ಮಾದರಿಯನ್ನು ಬಯಸಿದರೆ, ಆರಂಭದಲ್ಲಿ $1,499 (1,33,105.19 ರೂ) ಇತ್ತು, ಆದರೆ ಇದೀಗ $1,099 (97,586) ಕ್ಕೆ ಲಭ್ಯವಿದೆ.
ದೊಡ್ಡ ಪರದೆಯ ಐಫೋನ್ 15 ಪ್ರೋ ಮ್ಯಾಕ್ಸ್, ಐಫೋನ್ 15 ಪ್ರೋ ಆಪಲ್ ಶ್ರೇಣಿಯಿಂದ ಕಣ್ಮರೆಯಾಗಿತ್ತು, ಈಗ ಆಪಲ್‌ನ ಪರಿಷ್ಕೃತ ಮಳಿಗೆಯಲ್ಲಿ ಮೊದಲಿಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಐಫೋನ್ 15 ಪ್ರೊ ಮ್ಯಾಕ್ಸ್ (512GB):
ಈ ಮಾದರಿಯ ಒರಿಜಿನಲ್ ಬೆಲೆ $1,399 (1,24,229 ರೂ) ಆಗಿತ್ತು. ಆದ್ರೆ ಇದೀಗ ಈ ಫೋನ್ ಸದ್ಯ $1,019 (97,582 ರೂ.) ಕ್ಕೆ ಲಭ್ಯವಿದೆ, ಇದು $380 (33,741 ರೂ.) ರಿಯಾಯಿತಿಯನ್ನು ಒಳಗೊಂಡಿದೆ. ಈ ಮಾದರಿಯು ಕೇವಲ ಎರಡು ಬಣ್ಣಗಳಲ್ಲಿ (ವೈಟ್ ಟೈಟಾನಿಯಂ ಮತ್ತು ಬ್ಲೂ ಟೈಟಾನಿಯಂ) ಖರೀದಿಗೆ ಲಭ್ಯವಿದೆ.
ಐಫೋನ್ 15 ಪ್ರೊ ಮ್ಯಾಕ್ಸ್ (1TB):
ಈ ಮಾದರಿಯ ಒರಿಜಿನಲ್ ಬೆಲೆ $1,599 (1,41,979 ರೂ.) ಆಗಿತ್ತು. ಆದ್ರೆ ಇದೀಗ ಈ ಫೋನ್ $1,189 (1,05,554 ರೂ.) ಕ್ಕೆ ಲಭ್ಯವಿದೆ, ಇದು $410 (36,398 ರೂ.) ರಿಯಾಯಿತಿಯೊಂದಿಗೆ ಬರುತ್ತದೆ. ಈ ಆಯ್ಕೆಯು ವೈಟ್ ಟೈಟಾನಿಯಂ ಮತ್ತು ಬ್ಲ್ಯಾಕ್ ಟೈಟಾನಿಯಂ ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ.
ಎಲ್ಲಿ ಖರೀದಿಸಬಹುದು?
ಈ ಮರುಸ್ಥಾಪಿತ ಐಫೋನ್‌ಗಳನ್ನು ಆಪಲ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು. ಹೆಚ್ಚಿನ ವಿವರಗಳಿಗೆ, ಆಪಲ್‌ನ ರಿಫರ್ಬಿಶ್ಡ್ ಸ್ಟೋರ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರೆ ಒಳ್ಳೆಯದು.


Click it and Unblock the Notifications