ಕಡಿಮೆ ಬೆಲೆಗೆ ಐಫೋನ್ ಸಿಕ್ಕರೆ ಯಾರು ಬೇಡ ಅಂತಾರೆ..ಈಗೀಗ ಈ ಐಫೋನ್ ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ಹೀಗಾಗಿ ಎಲ್ಲರ ಕೈಯಲ್ಲೂ ರಿಚ್ ಫೋನ್ ಎಂದೇ ಕರೆಸಿಕೊಳ್ಳುವ ಐಫೋನ್ ಇರುತ್ತೆ. ಬಹುತೇಕ ಯುವಕರಿಗೆ ಐಫೋನ್ ಎಂದರೆ ಪಂಚಪ್ರಾಣ. ಅದರಲ್ಲೂ ಕಡಿಮೆ ಬೆಲೆಗೆ ಐಫೋನ್ ಸಿಕ್ಕರೆ ಓಡೋಡಿ ಹೋಗಿ ಕೊಳ್ಳುತ್ತಾರೆ. ಈಗೆಲ್ಲ ಇಎಂಐ ಸೌಲಭ್ಯ ಇರುವುದರಿಂದ ಎಷ್ಟೇ ದುಬಾರಿಯಾದ್ರೂ ಐಫೋನ್ ಕೊಳ್ಳುವುದು ಸುಲಭವಾಗಿದೆ. ಹಾಗೆಯೇ ಐಫೋನ್ ಪ್ರಿಯರಿಗೆ ಮತ್ತೊಂದು ಖುಷಿ ಸುದ್ದಿ ಇದೆ. ಅದೇನಂದ್ರೆ ಅಮೆಜಾನ್‌ನಲ್ಲಿ ಐಫೋನ್ 15 ಪ್ರೋ ಮ್ಯಾಕ್ಸ್‌ಗೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ.
ಹೌದು, ಅಮೆಜಾನ್‌ನಲ್ಲಿ ಐಫೋನ್ 15 ಪ್ರೋ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಐಫೋನ್ ಕೊಳ್ಳಬೇಕು ಎಂದುಕೊಂಡಿದ್ದವರಿಗೆ ಇದೇ ಉತ್ತಮ ಘಳಿಗೆಯಾಗಿದೆ. ಫೆಬ್ರವರಿ 26ರಂದು ಅಮೆಜಾನ್‌ನಲ್ಲಿ ಐಫೋನ್ ಬೆಲೆ, 1 ಲಕ್ಷ 28 ಸಾವಿರದ 900 ರೂ. ಇದೆ. ಈ ಮೊಬೈಲ್‌ನ ಭಾರತದಲ್ಲಿ ಮೊದಲಿಗೆ 1 ಲಕ್ಷ 59 ಸಾವಿರದ 900 ರೂ.ಗೆ ಬಿಡುಗಡೆ ಮಾಡಲಾಯಿತು. ಅಂದರೆ ನೈಜ ಮೊತ್ತಕ್ಕೆ ಹೋಲಿಸಿದರೆ ಗ್ರಾಹಕರಿಗೆ ಈಗ 31 ಸಾವಿರ ರೂ. ರಿಯಾಯಿತಿ ನೀಡಿದೆ ಅಮೆಜಾನ್.

ಇನ್ನು ರಿಯಾಯಿತಿ ಬೆಲೆ 256 ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 15 ಪ್ರೋ ಮ್ಯಾಕ್ಸ್ ಮೊಬೈಲ್‌ಗೆ ಅನ್ವಯಿಸುತ್ತದೆ. ಈ 31 ಸಾವಿರ ರೂ. ಜೊತೆ ಇನ್ನೂ ಎರಡು ಸಾವಿರ ರಿಯಾಯಿತಿ ಪಡೆಯಬಹುದು. ಅದು ಹೇಗೆಂದರೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ, ಹೆಚ್ಚುವರಿಯಾಗಿ ಎರಡು ಸಾವಿರ ರೂ. ರಿಯಾಯಿತಿ ಸಿಗುತ್ತದೆ. ಐಫೋನ್ 16 ಪ್ರೋ ಮ್ಯಾಕ್ಸ್‌ಗೆ ಹೋಲಿಸಿದರೆ, 15 ಪ್ರೋ ಮ್ಯಾಕ್ಸ್ ದುಬಾರಿ ಮೊತ್ತದಲ್ಲಿ ಬಿಡುಗಡೆಯಾದ ಮೊಬೈಲ್ ಆಗಿದೆ. ಅಂದರೆ ಐಫೋನ್ 16 ಪ್ರೋ ಮ್ಯಾಕ್ಸ್ ಬಿಡುಗಡೆಯಾದಾದ ಅದರ ಬೆಲೆ 1 ಲಕ್ಷ 44 ಸಾವಿರದ 900 ರೂ. ಇತ್ತು. ಅಂದರೆ ಬರೋಬ್ಬರಿ 15 ಪ್ರೋ ಮ್ಯಾಕ್ಸ್‌ಗಿಂತ 15 ಸಾವಿರ ರೂ. ಕಡಿಮೆ ಬೆಲೆಯಲ್ಲಿ ಐಫೋನ್ 16 ಪ್ರೋ ಮ್ಯಾಕ್ಸ್ ಬಿಡುಗಡೆಯಾಗಿತ್ತು.
2023ರಲ್ಲಿ ಈ ಐಫೋನ್ 15 ಪ್ರೋ ಮ್ಯಾಕ್ಸ್ ಹೊಸ A17 Pro ಚಿಪ್, ಟೈಟೇನಿಯಂ ಬಾಡಿ, 5X ಪೆರಿಸ್ಕೋಪ್ ಕ್ಯಾಮೆರಾ, ಮತ್ತು USB-C ಪೋರ್ಟ್ ಮುಂತಾದ ಪ್ರಮುಖ ತಂತ್ರಜ್ಞಾನಗಳೊಂದಿಗೆ ಬಿಡುಗಡೆಯಾಯಿತು. ಇದು ಐಫೋನ್ 15 ಸರಣಿಯ ಅತ್ಯುತ್ತಮ ಪ್ರೀಮಿಯಂ ಮಾಡೆಲ್ ಆಗಿದ್ದು, ಗೇಮಿಂಗ್, ಫೋಟೋಗ್ರಫಿ ಮತ್ತು ಪ್ರೊಫೆಷನಲ್ ಬಳಕೆದಾರರಿಗೆ ಸೂಕ್ತವಾಗಿದೆ. ಇನ್ನು ಈಗ ಉತ್ತಮ ಆಯ್ಕೆಗಳು ಗ್ರಾಹಕರ ಕಣ್ಣು ಮುಂದಿವೆ. ಹಳೆಯ ಮೊಬೈಲ್ ವಾಪಸ್ ಮಾಡಿ ಹೊಸ ಮೊಬೈಲ್ ಖರೀದಿಸುವುದು, ಇಎಂಐ ಮೂಲಕ ತಿಂಗಳು ತಿಂಗಳು ಹಣ ಪಾವತಿಸುವುದು, ಹಾಗೂ ಡಿಸ್ಕೌಂಟ್‌ಗಳನ್ನು ಪಡೆಯವುದು ಹೀಗೆ ಹಲವಾರು ಆಯ್ಕೆಗಳಿವೆ. ಹೀಗಾಗಿ ಐಫೋನ್ ಖರೀದಿ ಈಗ ಸುಲಭವಾಗಿ ಹೋಗಿದೆ.
ಐಫೋನ್ 15 ಪ್ರೋ ಮ್ಯಾಕ್ಸ್ ವೈಶಿಷ್ಟ್ಯಗಳು:
6.7 ಇಂಚು ಸೂಪರ್ ರೆಟಿನಾ XDR OLED ಡಿಸ್‌ಪ್ಲೇ
ಸ್ಮೂತ್ ಸ್ಕ್ರೋಲಿಂಗ್ ಮತ್ತು ಉತ್ತಮ ವೀಕ್ಷಣಾ ಅನುಭವ
ಗ್ಲಾಸ್ ಒಡೆದರೆ ಹೆಚ್ಚು ರಕ್ಷಣಾ ಶಕ್ತಿಯಿರುವ ಸೆರಾಮಿಕ್ ಶೀಲ್ಡ್ ತಂತ್ರಜ್ಞಾನ
ಹಳೇ ಸ್ಟೀಲ್ ಫ್ರೇಮ್‌ಗಿಂತ ಹಗುರ, ಬಲಿಷ್ಠ, ಮತ್ತು ಪ್ರೀಮಿಯಂ ಲುಕ್ ಹೊಂದಿರುವ ಹೊಸ ಮೆಟೀರಿಯಲ್
ಹೆಚ್ಚು ವೇಗ, ಕಡಿಮೆ ಬ್ಯಾಟರಿ ಬಳಕೆ, ಉತ್ತಮ ತಾಪಮಾನ ನಿಯಂತ್ರಣ
ಉತ್ತಮ ಗೇಮಿಂಗ್ ಮತ್ತು ಫೋಟೋ ಎಡಿಟಿಂಗ್ ಅನುಭವ
ಹೆಚ್ಚು ನೈಸರ್ಗಿಕ ಗೇಮಿಂಗ್ ಗ್ರಾಫಿಕ್ಸ್‌ಗಳು
ಐಫೋನ್ 15 ಪ್ರೋ ಮ್ಯಾಕ್ಸ್ ಕ್ಯಾಮೆರಾ:
48MP ಪ್ರಾಥಮಿಕ ಕ್ಯಾಮೆರಾ - ಹೆಚ್ಚಿನ ಡಿಟೈಲಿಂಗ್ & ಕಡಿಮೆ-ಲೈಟ್ ಫೋಟೋ ಶೂಟ್
12MP Ultra-Wide ಲೆನ್ಸ್ - ವಿಶಾಲ ಕೋನದಲ್ಲಿ ಫೋಟೋ ಸೆರೆ ಹಿಡಿಯಲು ಸಹಾಯ
5X Periscope Telephoto Zoom- ಈಗ 5Xನಲ್ಲಿ ಜೂಮ್ ಮಾಡಿ ಫೋಟೋ ಸೆರೆ ಹಿಡಿಯಲು ಸಪೋರ್ಟ್
120mm Equivalent Lens - ವೃತ್ತಿಪರ ಕ್ಯಾಮೆರಾ ಮಟ್ಟದ ಝೂಮ್ ಶಾಟ್‌ಗಳು


Click it and Unblock the Notifications