ನೀವು ಐಫೋನ್ 14 ಅಥವಾ 15 ಖರೀದಿಸುವ ಯೋಜನೆ ಹೊಂದಿದ್ದೀರಾ? ಇದೀಗ ಐಫೋನ್ ಖರೀದಿಸಲು ಸರಿಯಾದ ಸಮಯವಲ್ಲ. ಏಕೆಂದರೆ ಐಫೋನ್ 17 ಶ್ರೇಣಿ ಬಿಡುಗಡೆಯ ಹಂತದಲ್ಲಿದೆ. ಒಂದು ವೇಳೆ ಐಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ, ಅದಕ್ಕೂ ಮುನ್ನ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳಿವು. ಯಾಕಂದ್ರೆ ಸೀದಾ ಹೋಗಿ ಖರೀದಿಸಿದರೆ, ನಷ್ಟ ಗ್ಯಾರಂಟಿ. ನಷ್ಟ ತಪ್ಪಿಸಲು ಇದನ್ನೊಮ್ಮೆ ಓದಿ.

ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ ಬರುತ್ತಿದೆ:
ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಆಪಲ್ ಹೊಸ ಐಫೋನ್ ಮಾದರಿಗಳನ್ನು ಪರಿಚಯಿಸುತ್ತಿದೆ. ಈ ಬಾರಿ iPhone 17 ಸಿರೀಸ್ ಬರಲಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಹೊಸ ತಂತ್ರಜ್ಞಾನ, ನೂತನ ವಿನ್ಯಾಸ, ಹೆಚ್ಚಿನ ಬ್ಯಾಟರಿ, ಉತ್ತಮ ಕ್ಯಾಮೆರಾ ಇತ್ಯಾದಿಯೊಂದಿಗೆ ಅದು ಬರಲಿದೆ. ಹಾಗಾಗಿ ಈಗ ಐಫೋನ್ ಖರೀದಿಸಿದರೆ, ಕೇವಲ 30-40 ದಿನಗಳಲ್ಲಿ ಅದೇ ಮಾದರಿಯ ಬೆಲೆ ಕಡಿಮೆಯಾಗುತ್ತದೆ. ಇದೊಂದು ನೇರ ನಷ್ಟವೇ ಸರಿ!
ಬೆಲೆ ಇಳಿಕೆ ಖಚಿತ, ಆಯ್ಕೆ ಹೆಚ್ಚಾಗುತ್ತದೆ:
ಹೊಸ ಮಾದರಿ ಬಂದಾಗ ಹಳೆಯ ಮಾದರಿಗಳ ಮೇಲೆ ಡಿಸ್ಕೌಂಟ್ ಆರಂಭವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಐಫೋನ್ 17 ಲಾಂಚ್ ಆದ ಬಳಿಕ ಐಫೋನ್ 14, 15 ಬೆಲೆಗಳು ದೀಪಾವಳಿ ಮಾರಾಟದ ಸಮಯದಲ್ಲಿ ಗಂಭೀರವಾಗಿ ಇಳಿಯುವ ಸಾಧ್ಯತೆ ಇದೆ. ಜೊತೆಗೆ, ಫೆಸ್ಟಿವ್ ಆಫರ್‌ಗಳು, ಕ್ಯಾಂಷ್‌ಬ್ಯಾಕ್, ಇಎಂಐ ಪ್ಲಾನ್‌ಗಳು ಬಳಕೆದಾರರಿಗೆ ಲಾಭದಾಯಕವಾಗುತ್ತವೆ. ಇಷ್ಟೇ ಅಲ್ಲ, ನೀವು ಬಯಸುವ ಬಣ್ಣ, ಶೇಖರಣಾ ಆಯ್ಕೆ ಕೂಡ ಲಭ್ಯವಾಗುತ್ತದೆ.
iPhone 17 ವೈಶಿಷ್ಟ್ಯಗಳು ಏನು?
- 120Hz ಡಿಸ್ಪ್ಲೇ ಈಗ ಪ್ರಾಥಮಿಕ ಮಾದರಿಗಳಲ್ಲಿಯೂ
- 24MP ಸೆಲ್ಫಿ ಕ್ಯಾಮೆರಾ
- A19 ಪ್ರೊಸೆಸರ್ - ವೇಗದ ಕಾರ್ಯಕ್ಷಮತೆ
- ಹೊಸ iOS 26, ಲಿಕ್ವಿಡ್ ಗ್ಲಾಸ್ ಇಂಟರ್ಫೇಸ್
- iPhone 17 Pro/Max ನಲ್ಲಿ 8K ವಿಡಿಯೋ, ಕ್ಯಾಮೆರಾ ಬಾರ್ ವಿನ್ಯಾಸ
- ಹೆಚ್ಚು ಸ್ಕ್ರಾಚ್ ರೆಸಿಸ್ಟೆಂಟ್ ಗ್ಲಾಸ್ ಮತ್ತು ಕಡಿಮೆ ಹೆವಿ ವನ್‌ಹ್ಯಾಂಡ್ ಯುಸೇಜ್
ಇತ್ತೀಚೆಗೆ ಖರೀದಿ ಮಾಡುವುದು ಯಾಕೆ ತಪ್ಪು?
- ಬೆಲೆ ಏರಿಕೆ-ಇನ್ನೇನು ಕಡಿಮೆಯಾಗುತ್ತದೆ
- ಹಳೆಯ ತಂತ್ರಜ್ಞಾನ
- ಕಡಿಮೆ ಸಾಫ್ಟ್‌ವೇರ್ ಬೆಂಬಲ (iOS ಅಪ್‌ಡೇಟ್‌ಗಳು ಕಡಿಮೆ)
- ಡಿಸ್ಕೌಂಟ್ ಇಲ್ಲದ ಖರೀದಿ = ನಷ್ಟ
- ದೀಪಾವಳಿಯ ಹೊತ್ತಿಗೆ ಉತ್ತಮ ಆಯ್ಕೆಗಳು ಬರುತ್ತವೆ
ಈಗ ಐಫೋನ್‌ಗಳ ಮೇಲೆ ಇರುವ ಯಾವುದೇ ಡೀಲ್‌ಗಳು ಮೋಸವಾಗಿ ಪರಿಣಮಿಸಬಹುದು. ಹಳೆಯ ಮಾದರಿ ಬೆಲೆ ಹೆಚ್ಚಿನಲ್ಲಿ ಖರೀದಿ ಮಾಡುವುದು, ನಂತರದ ವಾರಗಳಲ್ಲಿ ಕಡಿಮೆ ಬೆಲೆಗೆ ಬರುವುದನ್ನು ನೋಡಿ ನೊಂದುಕೊಳ್ಳುವ ಸಾಧ್ಯತೆ ಇದೆ.
ಈಗ ತಕ್ಷಣ ಐಫೋನ್ 14 ಅಥವಾ 15 ಖರೀದಿಸುವ ಬದಲಿಗೆ, ಕೇವಲ 30-45 ದಿನಗಳ ಕಾಲ ನಿರೀಕ್ಷಿಸಿ. ಸೆಪ್ಟೆಂಬರ್‌ನಲ್ಲಿ iPhone 17 ಸಿರೀಸ್ ಬಿಡುಗಡೆ ಆದ ನಂತರ, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ, ಫೆಸ್ಟಿವ್ ಡೀಲ್‌ಗಳು, ಮತ್ತು ಹೆಚ್ಚಿನ ಆಯ್ಕೆಗಳ ಲಾಭ ಪಡೆಯಬಹುದು. ಹೀಗೆ ತಾಳ್ಮೆಯಿಂದ ಕಾಯುವುದರಿಂದ ನವೀನ ತಂತ್ರಜ್ಞಾನ ಹೊಂದಿರುವ ಹೊಸ ಮಾದರಿಯನ್ನೂ ಪರಿಗಣಿಸಬಹುದು ಅಥವಾ ಹಳೆಯ ಮಾದರಿಯನ್ನೇ ಕಡಿಮೆ ಬೆಲೆಯಲ್ಲಿ ಪಡೆದು ನಷ್ಟವಿಲ್ಲದ ಖರೀದಿಯನ್ನು ಸಾಧ್ಯವನ್ನಾಗಿಸಬಹುದು.


Click it and Unblock the Notifications