ಟೆಕ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಹೊಸ ದಾಖಲೆ ಬರೆದಿರುವ ಕಂಪನಿಗಳಲ್ಲಿ ಆಪಲ್ (Apple Company) ಕೂಡಾ ಒಂದು. ಈ ಬ್ರಾಂಡ್‌ನಡಿಯಲ್ಲಿ ಈಗಾಗಲೇ 17 ಸೀರಿಸ್‌ವರೆಗೆ ಐಫೋನ್ ಲಾಂಚ್ ಆಗಿದೆ. ಆದ್ರೆ ಇತ್ತೀಚೆಗೆ ಲಾಂಚ್ ಆದ ಆಪಲ್ 17 ಸೀರಿಸ್ ಐಫೋನ್‌ಗಳು (iPhone 17 Series) ಭಾರತದ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ.

30 ದಿನದಲ್ಲಿ ದಾಖಲೆ ಮಾರಾಟ
ಭಾರತದಲ್ಲಿ ಐಫೋನ್ 17 ಬಿಡುಗಡೆಯಾದ ಒಂದೇ ತಿಂಗಳಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳಾದ ಬರ್ನ್‌ಸ್ಟೈನ್, ಕೌಂಟರ್‌ಪಾಯಿಂಟ್ ಮತ್ತು ಐಡಿಸಿ ವರದಿಗಳ ಪ್ರಕಾರ, ಐಫೋನ್ 17 ಹಿಂದಿನ ಮಾದರಿಗಳಿಗೆ ಹೋಲಿಸಿದ್ರೆ ಈ ಬಾರಿ ಮೊದಲ 30 ದಿನಗಳಲ್ಲಿ ಶೇ. 15-20% ಹೆಚ್ಚಿನ ಮಾರಾಟ ಕಂಡಿದೆ.
ವರದಿ ಪ್ರಕಾರ, ಆ್ಯಪಲ್‌ನ ಇತ್ತೀಚಿನ 17 ಸೀರಿಸ್ ಐಫೋನ್‌ಗಳು ಭಾರತದಲ್ಲಿ ಭಾರೀ ವೇಗದಲ್ಲಿ ಮಾರಾಟ ಕಂಡಿದೆ. ಈ ಮೂಲಕ ಹಳೆಯ ಸೀರಿಸ್‌ನ ಮಾರಾಟವನ್ನು ಇಷ್ಟು ಬೇಗ ಹಿಂದಿಕ್ಕಿದೆ ಎನ್ನಲಾಗಿದೆ. ಇದರಿಂದ ಆಪಲ್ ಉತ್ಪನ್ನಗಳಿಗೆ ಭಾರತ ಎಷ್ಟು ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಟ್ಟಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಕೌಂಟರ್‌ಪಾಯಿಂಟ್ ವರದಿ ಹೇಳಿದಂತೆ, ಈ ಬಾರಿ ಐಫೋನ್ 17 ಮಾರಾಟವು ಒಟ್ಟು ಐಫೋನ್ ಮಾರಾಟದ 57% ರಷ್ಟಿದೆ. ಇಷ್ಟು ಸೇಲ್ ಈ ಹಿಂದೆಯೂ ನಡೆದಿಲ್ಲ. ಆದ್ದರಿಂದ ಭಾರತದಲ್ಲಿ ಯಾವುದೇ ಹೊಸ ಆ್ಯಪಲ್ ಫೋನ್‌ಗೆ ಇದುವರೆಗೆ ಇಷ್ಟು ದೊಡ್ಡ ಮಾರಾಟ ಬಂದಿರಲಿಲ್ಲ. ಹಿಂದೆಲ್ಲಾ ಹೊಸ ಮಾದರಿಯ ಐಫೋನ್‌ಗಳು ಬಂದರೂ, ಹಳೆಯ ಮಾದರಿಯ ಫೋನ್‌ಗಳೇ ಮಾರಾಟವಾಗುತ್ತಿತ್ತು. ಆದ್ರೆ ಈ ಬಾರಿ ಐಫೋನ್ 17 ಸೀರಿಸ್ ಹೊಸ ದಾಖಲೆ ಸೃಷ್ಟಿಸಿದೆ.
ಈ ವರದಿಯಿಂದ ಗ್ರಾಹಕರು ಈ ಬಾರಿ ಯಾವ ಮಾದರಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಕಂಡುಕೊಳ್ಳಬಹುದು. ಐಡಿಸಿ ಮತ್ತು ಕೌಂಟರ್‌ಪಾಯಿಂಟ್ ವರದಿ ಪ್ರಕಾರ, ಹಳೆಯ ಮಾದರಿ ಐಫೋನ್‌ಗಳ ಮಾರಾಟ ಹೆಚ್ಚಾಗಬಹುದು. ಆದರೆ ಹೊಸ ಮಾದರಿಗಳನ್ನು ಆಯ್ಕೆ ಮಾಡುವವರ ಸಂಖ್ಯೆ ವೇಗವಾಗಿ ಏರುತ್ತದೆ ಎನ್ನಲಾಗಿದೆ.
ವರದಿಯಲ್ಲಿ ಭಾರತದ ಬಗ್ಗೆ ಪ್ರತ್ಯೇಕ ಅಂಕಿಅಂಶಗಳನ್ನು ನೀಡದಿದ್ದೃೂ, ಬರ್ನ್‌ಸ್ಟೈನ್ ಪ್ರಕಾರ, ಆ್ಯಪಲ್‌ನ ಯುರೋಪ್ ವಿಭಾಗದಲ್ಲಿ (ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ) ಸೆಪ್ಟೆಂಬರ್‌ನಲ್ಲಿ 20.4% ಬೆಳವಣಿಗೆಯೊಂದಿಗೆ 66 ಲಕ್ಷ ಯುನಿಟ್‌ಗಳ ಮಾರಾಟವಾಗಿದೆ ಎನ್ನಲಾಗಿದೆ. ಇದರಲ್ಲಿ ಭಾರತದ ಮಾರಾಟ ಸಂಖ್ಯೆಯೇ ಹೆಚ್ಚಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಆ್ಯಪಲ್ ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಕೌಂಟರ್‌ಪಾಯಿಂಟ್‌ನ ಪಾಲುದಾರ ಮತ್ತು ನಿರ್ದೇಶಕ ತರುಣ್ ಪಾಠಕ್ ಈ ಬಗ್ಗೆ ಮಾತನಾಡಿದ್ದು, ಕಳೆದ ವರ್ಷ ಐಫೋನ್ 16 ರ ಮಾರಾಟವು ಮೊದಲ ತಿಂಗಳಲ್ಲಿ ಐಫೋನ್ 15 ಕ್ಕಿಂತ 5-7% ಹೆಚ್ಚಿತ್ತು. ಆದರೆ ಕಳೆದ ವರ್ಷದಿಂದ ಈ ವರ್ಷಕ್ಕೆ ಹೋಲಿಸಿದ್ರೆ ಐಫೋನ್ 17 ರ ಮಾರಾಟದಲ್ಲಿ 18% ಹೆಚ್ಚಳವಾಗಿದೆ. ಇದು ಆಪಲ್ ಕಂಪನಿಗೆ ಭಾರತದ ಕೊಡುಗೆ ಎಷ್ಟಿದೆ ಎಂದು ಗಮನಿಸಬಹುದು. ಅಲ್ಲದೇ ಐಫೋನ್ 17 ಸೀರಿಸ್‌ನ ಫೀಚರ್ಸ್‌ಗಳೇ ಈ ದಾಖಲೆ ಮಾರಾಟಕ್ಕೆ ಕಾರಣವಾಗಿದೆ.


Click it and Unblock the Notifications