ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವವರಲ್ಲಿ ಆಪಲ್ ಕಂಪನಿಯೂ (Apple Company) ಒಂದು. ಬೆಲೆ ದುಬಾರಿಯಾದ್ರೂ ಪ್ರತೀ ಬಾರಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಆಪಲ್ ಕಂಪನಿ ಕಳೆದ ಸೆಪ್ಟಂಬರ್‌ನಲ್ಲಷ್ಟೇ ಐಫೋನ್ 17 ಸೀರಿಸ್ ಅನ್ನು ಲಾಂಚ್ ಮಾಡಿತ್ತು. ಈ ಸೀರಿಸ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇದೀಗ ಆಪಲ್ ಕಂಪನಿಯ ಐಫೋನ್ 18 ಸೀರಿಸ್ (iPhone 18 Series) ಬಗ್ಗೆ ಭಾರೀ ಸುದ್ದಿಗಳು ವೈರಲ್ ಆಗುತ್ತಿದೆ.

ಇನ್ನು ಈಗಾಗಲೇ ಐಫೋನ್ 18 ಸೀರಿಸ್‌ನ ಫೀಚರ್ಸ್‌ಗಳು ಸೋರಿಕೆಯಾಗಿದ್ದು, ಈಗಾಗಲೇ ಹಲವು ವರದಿಗಳು ವೈರಲ್ ಆಗುತ್ತಿದೆ. ಹಾಗಿದ್ರೆ ಐಫೋನ್ 18 ಸೀರಿಸ್ ಫೋನ್‌ಗಳು ಯಾವಾಗ ಮಾರುಕಟ್ಟೆಗೆ ಬರುತ್ತದೆ? ಫೀಚರ್ಸ್‌ಗಳು ಹೇಗಿರಲಿದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಐಫೋನ್ 18 ಪ್ರೊ ಮಾದರಿಗಳು ಐಫೋನ್ 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್‌ಗಿಂತ ವಿಭಿನ್ನತೆಯಿಂದ ಇರಲಿದೆ ಎನ್ನಲಾಗಿದೆ. ಅದರಲ್ಲೂ ಐಫೋನ್ 18 ಬ್ಯಾಕ್‌ಪ್ಲೇಟ್ ಡಿಫರೆಂಟ್ ಆಗಿರಲಿದೆ ಎಂದು ವರದಿಗಳು ತಿಳಿಸಿವೆ. ಅಲ್ಯುಮಿನಿಯಂ ಯೂನಿಬಾಡಿ ಮತ್ತು ಸೆರಾಮಿಕ್ ಶೀಲ್ಡ್ 2 ಗ್ಲಾಸ್ ಪ್ಲೇಟ್ ನಡುವಿನ ಕಲರ್ ಬದಲಾಯಿಸಲು ಆಪಲ್ ಯೋಜಿಸುತ್ತಿದೆ ಎಂದು ಹೇಳಲಾಗಿದೆ. 2025ರ ನವೆಂಬರ್ 11ರಂದು ಅಪ್‌ಡೇಟ್ ಮಾಡಲಾದ ಈ ಮಾಹಿತಿಯು ಹೊಸ ವಿನ್ಯಾಸದಲ್ಲಿ ಐಫೋನ್ 18 ಬರಲಿದೆ ಎಂದು ಹೇಳಲಾಗಿದೆ.
ಆದ್ದರಿಂದ ಆಪಲ್‌ನ ಐಫೋನ್ 18 ಪ್ರೊ ಸೀರಿಸ್ ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಹೇಳಲಾಗಿದೆ. ಈಗಾಗಲೇ ಐಫೋನ್ 17 ಪ್ರೋ ಮಾದರಿಗಳಲ್ಲಿರುವ ಡ್ಯುಯಲ್ ಟೋನ್‌ನ ತೆಗೆದು ಹೊಸ ಕಲರ್ ಆಡ್ ಮಾಡಲು ಆಪಲ್ ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಟಿಪ್ಸ್ಟರ್ ಇನ್‌ಸ್ಟಂಟ್ ಡಿಜಿಟಲ್ ಪ್ರಕಾರ, ಮುಂಬರುವ ಸೀರಿಸ್ ಹೊಸ ಕಲರ್, ಹೊಸ ವಿನ್ಯಾಸದೊಂದಿಗೆ ಬರಬಹುದು ಎಂದು ವರದಿಯಾಗಿದೆ.
ಐಫೋನ್ 18 ಫೀಚರ್ಸ್:
ಐಫೋನ್ 17 ಪ್ರೊನಲ್ಲಿ, ಈಗಾಗಲೇ ಮ್ಯಾಗ್‌ಸೇಫ್ ಚಾರ್ಜಿಂಗ್‌ಗಾಗಿ ಗ್ಲಾಸ್ ಕಟೌಟ್ ಅನ್ನು ಹಿಂಭಾಗದಲ್ಲಿ ಲಾಂಚ್ ಮಾಡಿತ್ತು. ಇದು ಅಲ್ಯುಮಿನಿಯಂ ಯೂನಿಬಾಡಿ ಮತ್ತು ಸೆರಾಮಿಕ್ ಶೀಲ್ಡ್ 2 ಕಟೌಟ್‌ನೊಂದಿಗೆ ಲಾಂಚ್ ಮಾಡಿತ್ತು. ಆದರೆ ಇದಕ್ಕೆ ಹಲವು ಮಿಶ್ರ ಅಭಿಪ್ರಾಯಗಳು ಕೇಳಿಬಂದಿತ್ತು.
ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ಗಾಗಿ, ಗ್ಲಾಸ್ ಮತ್ತು ಅಲ್ಯುಮಿನಿಯಂ ಫ್ರೇಮ್ ನಡುವಿನ ಬಣ್ಣವನ್ನು ಕಡಿಮೆ ಮಾಡುವ ಪ್ಲಾನ್ ಮಾಡಿದೆ ಎಂದು ಹೇಳಲಾಗಿದೆ. ಒಂದು ವೇಳೆ ಇದು ನಿಜವಾದ್ರೆ ಐಫೋನ್ 18 ಹೊಸ ಲುಕ್‌ನೊಂದಿಗೆ ಬರುವುದಂತು ಪಕ್ಕಾ.
ಸೆರಾಮಿಕ್ ಶೀಲ್ಡ್ ಬ್ಯಾಕ್‌ಪ್ಲೇಟ್ ಮಾತ್ರವಲ್ಲದೇ, ಮುಂಬರುವ ಐಫೋನ್ 18 ಪ್ರೊ ಮಾದರಿಗಳು ಹೆಚ್ಚಾಗಿ 17 ಪ್ರೊ ನಂತೆಯೇ ಇರಲಿದೆ ಎಂದು ವರದಿಗಳು ಹೇಳುತ್ತದೆ. ಇನ್ನು ಕ್ಯಾಮೆರಾದಲ್ಲೂ ಸ್ವಲ್ಪ ಅಧಿಕ ಫೀಚರ್ಸ್ ಬರಬಹುದು ಎನ್ನಲಾಗಿದೆ. ಲುಕ್ ಮಾತ್ರವಲ್ಲದೇ ಐಫೋನ್ 18, ಆಪಲ್‌ನ A20 ಪ್ರೊ ಚಿಪ್‌ಗಳೊಂದಿಗೆ ಹೊರಬರಬಹುದು ಎಂದು ವರದಿಗಳು ತಿಳಿಸಿವೆ. ಕ್ವಾಲ್‌ಕಾಮ್‌ನ ಬದಲಿಗೆ ಆಪಲ್‌ನ ಸ್ವಂತ C2 ಮೋಡೆಮ್ ಅನ್ನು ಸಹ ಬಳಸುವ ನಿರೀಕ್ಷೆಯಿದೆ, ಇದು ಆಪಲ್‌ನ ಹೊಸ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ
ಯಾವಾಗ ಲಾಂಚ್ ಆಗುತ್ತದೆ?
ಇನ್ನು ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮುಂದಿನ ಸೆಪ್ಟೆಂಬರ್ 2026 ರಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಪ್ರತೀ ವರ್ಷ ಆಪಲ್ ಕಂಪನಿ ತನ್ನ ಬ್ರಾಂಡ್‌ನಿಂದ ಹೊಸ ಸೀರಿಸ್ ಅನ್ನು ಲಾಂಚ್ ಮಾಡುತ್ತದೆ. ಅದು ಬಹುತೇಕ ಸಪ್ಟೆಂಬರ್‌ನಲ್ಲೇ ಇರುತ್ತದೆ. ಅದೇ ರೀತಿ ಐಫೋನ್ 18 ಸೀರಿಸ್ ಕೂಡಾ ಮುಂದಿನ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಬಹುದು ಎಂದು ಅಂದಾಜಿಸಲಾಗಿದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್‌ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications