ನವದೆಹಲಿ, ಜೂನ್ 27: ಆಪಲ್ ಪೂರೈಕೆದಾರ ಪ್ರಮುಖ ಕಂಪೆನಿ ಫಾಕ್ಸ್‌ಕಾನ್ ತನ್ನ ಐಫೋನ್ ಕಾರ್ಖಾನೆ ಚೆನ್ನೈ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕಿರುವುದು, ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.
ಕಂಪನಿಯ ನೀತಿಯು ಕುಟುಂಬದ ಜವಾಬ್ದಾರಿಗಳು, ಗರ್ಭಧಾರಣೆ ಮತ್ತು ಹೆಚ್ಚಿನ ಗೈರುಹಾಜರಿಯನ್ನು ಕಾರಣವೆಂದು ಉಲ್ಲೇಖಿಸಿದೆ. ಆದ್ದರಿಂದ ಅವಿವಾಹಿತ ಮಹಿಳಾ ಅಭ್ಯರ್ಥಿಗಳ ನೇಮಕಕ್ಕೆ ಒಲವು ನೀಡುತ್ತದೆ. ಎಸ್. ಪಾಲ್, ಫಾಕ್ಸ್‌ಕಾನ್ ಇಂಡಿಯಾದ ಮಾಜಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ, ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳಲು ಕಂಪನಿಯು ಹಿಂಜರಿಯುತ್ತಿರುವುದು ಸಾಂಸ್ಕೃತಿಕ ಸಮಸ್ಯೆಗಳು ಮತ್ತು ಸಾಮಾಜಿಕ ಒತ್ತಡ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಪಾಲ್ ಹೇಳುವಂತೆ, ಮದುವೆಯ ನಂತರ ಮಹಿಳೆಯರು ಮಕ್ಕಳನ್ನು ಹೊಂದುವುದು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ನೀವು ವಿವಾಹಿತ ಮಹಿಳೆಯರನ್ನು ನೇಮಿಸಿಕೊಂಡಾಗ ಅಪಾಯದ ಅಂಶಗಳು ಹೆಚ್ಚಾಗುತ್ತವೆ. ಮದುವೆಯ ನಂತರ ಅನೇಕ ಸಮಸ್ಯೆಗಳಿರುತ್ತವೆ. ಮಹಿಳೆಯರು ಮದುವೆಯಾದ ನಂತರ ಮಕ್ಕಳನ್ನು ಹೊಂದುತ್ತಾರೆ" ಎಂದು ಹೇಳಿದ್ದಾರೆ.
ರಾಯಿಟರ್ಸ್ ಪ್ರಕಾರ, ಕೇವಲ ಪಾಲ್ ಮಾತ್ರವಲ್ಲ, ಭಾರತದಲ್ಲಿನ ಫಾಕ್ಸ್‌ಕಾನ್ ನೇಮಕಾತಿ ಏಜೆನ್ಸಿಗಳ 17 ಉದ್ಯೋಗಿಗಳು ಮತ್ತು ನಾಲ್ಕು ಪ್ರಸ್ತುತ ಮತ್ತು ಮಾಜಿ ಫಾಕ್ಸ್‌ಕಾನ್ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರು ಈ ಹಕ್ಕನ್ನು ಬೆಂಬಲಿಸಿದ್ದಾರೆ. ವಿವಾಹಿತ ಹಿಂದೂ ಮಹಿಳೆಯರು ಧರಿಸುವ ಆಭರಣಗಳು ಉತ್ಪಾದನೆಗೆ ಅಡ್ಡಿಯಾಗಬಹುದು ಎಂದು ಅವರಲ್ಲಿ ಹಲವರು ಹೇಳಿದ್ದಾರೆ. ಆಘಾತಕಾರಿಯಾಗಿ, ಕೆಲವು ನೇಮಕಾತಿ ಏಜೆನ್ಸಿಗಳು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ತಮ್ಮ ವೈವಾಹಿಕ ಸ್ಥಿತಿಯನ್ನು ಮರೆಮಾಚಲು ಮಹಿಳಾ ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತವೆ ಎಂದು ಹೇಳಿಕೊಂಡಿದ್ದಾರೆ.
ಆಪಲ್ ಮತ್ತು ಫಾಕ್ಸ್‌ಕಾನ್ ಎರಡೂ 2022 ರಲ್ಲಿ ತಮ್ಮ ನೇಮಕಾತಿ ಅಭ್ಯಾಸಗಳಲ್ಲಿ ಲೋಪಗಳನ್ನು ಒಪ್ಪಿಕೊಂಡಿವೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿಕೊಂಡಿವೆ. ಆದಾಗ್ಯೂ, ರಾಯಿಟರ್ಸ್ ದಾಖಲಿಸಿದ ವಿವಾಹಿತ ಮಹಿಳೆಯರ ವಿರುದ್ಧ ತಾರತಮ್ಯದ ಕ್ರಮ 2023 ಮತ್ತು 2024 ರಲ್ಲಿ ಚೆನ್ನೈ ಬಳಿಯ ಶ್ರೀಪೆರಂಬದೂರ್ ಸ್ಥಾವರದಲ್ಲಿ ನಡೆದಿವೆ.
ವರದಿ ನಿರಾಕರಿಸಿದ ಆಪಲ್:
ಫಾಕ್ಸ್‌ಕಾನ್ ಕಾರ್ಖಾನೆಗಳಲ್ಲಿ ವಿವಾಹಿತ ಮಹಿಳೆಯರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂಬ ವರದಿಗಳನ್ನು ಆಪಲ್ ನಿರಾಕರಿಸಿತು. ಉದ್ಯಮದಲ್ಲಿ ಅತ್ಯಧಿಕ ಪೂರೈಕೆ ಸರಪಳಿ ಮಾನದಂಡಗಳನ್ನು ಪೂರೈಸುತ್ತಿದೆ. ಫಾಕ್ಸ್‌ಕಾನ್ ಭಾರತದಲ್ಲಿ ಕೆಲವು ವಿವಾಹಿತ ಮಹಿಳೆಯರನ್ನು ನೇಮಿಸಿಕೊಂಡಿದೆ ಎಂದು ರಾಯಿಟರ್ಸ್‌ಗೆ ತಿಳಿಸಿದೆ.
"2022 ರಲ್ಲಿ ನೇಮಕಾತಿ ವೇಳೆ ಸಮಸ್ಯೆಗಳನ್ನು ಪರಿಗಣಿಸಿ ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ. ಸಮಸ್ಯೆಗಳನ್ನು ಗುರುತಿಸಲು ಮತ್ತು ನಮ್ಮ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಾಸಿಕ ಲೆಕ್ಕಪರಿಶೋಧನೆಗಳನ್ನು ನಡೆಸಲು ನಮ್ಮ ಪೂರೈಕೆದಾರರೊಂದಿಗೆ ಕೆಲಸ ಮಾಡಿದೆವು" ಎಂದು ಆಪಲ್ ಹೇಳಿಕೆಯಲ್ಲಿ ತಿಳಿಸಿದೆ.
ವರದಿ ಕೇಳಿದ ಕೇಂದ್ರ:
ನೇಮಕಾತಿ ಕುರಿತ ವಿವಾದದ ವರದಿಯ ನಂತರ, ವಿವರವಾದ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರವನ್ನು ಕೇಳಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1976 ರ ಸಮಾನ ಸಂಭಾವನೆ ಕಾಯಿದೆಯನ್ನು ಉಲ್ಲೇಖಿಸಿ, ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಯಾವುದೇ ತಾರತಮ್ಯವನ್ನು ಮಾಡಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ" ಎಂದು ಹೇಳಿದೆ.


Click it and Unblock the Notifications