ಗಣರಾಜ್ಯೋತ್ಸವ ಪ್ರಯುಕ್ತ ಇಕಾಮರ್ಸ್ ಕಂಪನಿಗಳು (E-commerce Company) ವಿಶೇಷ ಆಫರ್ ಸೇಲ್‌ಗಳನ್ನು ಘೋಷಿಸಿದೆ. ಆ ಪ್ರಕಾರ ಫ್ಲಿಪ್‌ಕಾರ್ಟ್, ಅಮೆಜಾನ್, ಕ್ರೋಮಾ ಹೀಗೆ ಅನೇಕ ಕಂಪನಿಗಳು ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸುತ್ತದೆ.

ಕ್ರೋಮಾದ ಗಣರಾಜ್ಯೋತ್ಸವ ಮಾರಾಟ ಇದೀಗ ಲೈವ್ ಆಗಿದ್ದು, ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ. ಅದರಲ್ಲೂ ಐಫೋನ್ 17 ಮೇಲೆ ಭಾರೀ ಆಫರ್ ಘೋಷಿಸಿದೆ. ₹82,900ಕ್ಕೆ ಬಿಡುಗಡೆಯಾಗಿದ್ದ ಈ ಐಫೋನ್, ವಿನಿಮಯ ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ ಕೇವಲ ₹47,990ರ ಭಾರೀ ಕಡಿಮೆ ಬೆಲೆ ಲಭ್ಯವಿದೆ. ಹಾಗಿದ್ರೆ ಈ ಐಫೋನ್ ಪಡೆಯುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಟಾಟಾ ಸಮೂಹದ ಕ್ರೋಮಾ, ಜನವರಿ 26ರವರೆಗೆ ದೇಶಾದ್ಯಂತ ತನ್ನ ಎಲ್ಲಾ ಸ್ಟೋರ್‌ಗಳಲ್ಲಿ ಈ ವಿಶೇಷ ಆಫರ್ ಸೇಲ್ ಆರಂಭಿಸಿದೆ. ಇಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟೆಲಿವಿಷನ್‌ಗಳು, ದೊಡ್ಡ ಗೃಹೋಪಯೋಗಿ ಉಪಕರಣಗಳು ಮತ್ತು ಆಡಿಯೊ ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆಗಳಿವೆ. ಗ್ರಾಹಕರು ಬ್ಯಾಂಕ್ ಕ್ಯಾಶ್‌ಬ್ಯಾಕ್‌ಗಳು, ವಿನಿಮಯ ಪ್ರಯೋಜನಗಳು, ವಿದ್ಯಾರ್ಥಿ ರಿಯಾಯಿತಿಗಳು ಮತ್ತು ಸುಲಭ EMI ಆಯ್ಕೆಗಳನ್ನು ಸಹ ಪಡೆಯಬಹುದು. ಅಲ್ಲದೇ ಬ್ಯಾಂಕ್‌ನ ನಿಯಮಗಳನ್ನು ಆಧರಿಸಿ ಅಂತಿಮ ಬೆಲೆ ನಿರ್ಧಾರವಾಗುತ್ತದೆ. HDFC ಟಾಟಾ ನ್ಯೂ ಕಾರ್ಡ್ ಬಳಕೆದಾರರಿಗೆ ಆಯ್ದ ಆಪಲ್ ಉತ್ಪನ್ನಗಳ ಮೇಲೆ ಹೆಚ್ಚುವರಿ 10% ಉಳಿತಾಯ ಲಭ್ಯವಿದೆ.
ಈ ಬಾರಿ ಐಫೋನ್ 17 ಮೇಲೆ ಭಾರೀ ರಿಯಾಯಿತಿ ಘೋಷಿಸಲಾಗಿದೆ. ಇದನ್ನು ₹47,990 ರೂ.ಗೆ ಖರೀದಿಸಲು, ₹23,500 ವರೆಗಿನ ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮೌಲ್ಯ, ₹2,000 ಫ್ಲಾಟ್ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ₹8,000 ಹೆಚ್ಚುವರಿ ವಿನಿಮಯ ಬೋನಸ್ ಒಳಗೊಂಡಿರುವ ಆಫರ್‌ಗಳನ್ನು ಪಡೆಯಬಹುದು. ವಿನಿಮಯ ಮಾಡುವ ಸಾಧನದ ಸ್ಥಿತಿ ಮತ್ತು ಮಾದರಿಯ ಆಧಾರದ ಮೇಲೆ ರಿಯಾಯಿತಿ ಸಿಗುತ್ತದೆ.
ಐಫೋನ್ ಫೀಚರ್ಸ್:
ಐಫೋನ್ 17, ತನ್ನ ಹಿಂದಿನ ಮಾದರಿಗಿಂತ ಅದ್ಭುತ ಫೀಚರ್ಸ್ ಹೊಂದಿದೆ. ಇದರ 6.3-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಿಂದಿನ ಐಫೋನ್ 16ರ 6.1-ಇಂಚಿನ 60Hz ಪ್ಯಾನೆಲ್‌ಗೆ ಹೋಲಿಸಿದರೆ ಇದು ಉತ್ತಮವಾಗಿದೆ.
ಈ ಸ್ಮಾರ್ಟ್‌ಫೋನ್ ಆಪಲ್‌ನ ಹೊಸ A19 ಚಿಪ್‌ಸೆಟ್ ಮತ್ತು 16-ಕೋರ್ ನ್ಯೂರಲ್ ಎಂಜಿನ್‌ನಿಂದ ಕೆಲಸ ಮಾಡುತ್ತದೆ.
ಕ್ಯಾಮೆರಾ: ಇನ್ನು ಈ ಮೊಬೈಲ್ 48ಎಂಪಿ ಅಲ್ಟ್ರಾ ವೈಡ್ (ಡ್ಯುಯೆಲ್ ಸಿಸ್ಟಮ್) ಕ್ಯಾಮೆರಾ ಹೊಂದಿದೆ. ಐಫೋನ್ 17 ಸೀರಿಸ್‌ನಲ್ಲು ಐಫೋನ್ 17, ಐಫೋನ್ 17 ಪ್ರೋ, ಐಫೋನ್ 17 ಪ್ರೋ ಮ್ಯಾಕ್ಸ್ ಮತ್ತು ಐಫೋನ್ 17 ಏರ್ ಆಯ್ಕೆಗಳಿವೆ. ಆದ್ರೆ ಮಾದರಿಗನುಗುಣವಾಗಿ ಈ ಬೆಲೆಗಳು ಬದಲಾಗುತ್ತದೆ. ಸೆಪ್ಟೆಂಬರ್ 2025ರಲ್ಲಿ ಲಾಂಚ್ ಮಾಡಲಾದ ಐಫೋನ್ 17 ಸೀರಿಸ್ ಫೋನ್‌ಗಳು ಸದ್ಯ ಭಾರೀ ಬೇಡಿಕೆಯಲ್ಲಿದೆ. ಈ ಮಧ್ಯೆ ವಿಶೇಷ ರಿಯಾಯಿತಿ ಮಾರಾಟಗಳು ಆರಂಭವಾಗಿದ್ದು, ಅದರಲ್ಲೂ ಕ್ರೋಮಾ ಪ್ಲಾಟ್‌ಫಾರ್ಮ್‌ನಲ್ಲಿ ಐಫೋನ್ 17 ಕಡಿಮೆ ಬೆಲೆಗೆ ಸಿಗುತ್ತಿದೆ.


Click it and Unblock the Notifications