ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ವಾತಾವರಣದ ನಡುವೆ, ಈ ಬಾರಿಯ ಐಪಿಎಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಕ್ರಿಕೆಟ್ ಲವರ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ಅದೇನೆಂದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ, ಐಪಿಎಲ್ 2025ರ 18ನೇ ಆವೃತ್ತಿಯು ಇದೀಗ ಮತ್ತೆ ಪುನರಾರಂಭಗೊಳ್ಳಲಿದೆ. ಈ ಬಗ್ಗೆ BCCI ಅಧಿಕೃತವಾಗಿ ಘೋಷಿಸಿದ್ದು, ಮೇ 17ರಿಂದ ಕ್ರಿಕೆಟ್ ಲವರ್ಸ್‌ಗೆ ಅನ್‌ಲಿಮಿಟೆಡ್ ಮನರಂಜನೆ ಎನ್ನಬಹುದು.

ಮೊದಲ ಪಂದ್ಯದಿಂದಲೇ ಕ್ರಿಕೆಟ್ ಲವರ್ಸ್‌ಗೆ ಹುಚ್ಚೆಬ್ಬಿಸುವ ಮ್ಯಾಚ್ ಇದೆ ಎನ್ನಬಹುದು. ಸಖತ್ ಕ್ರೇಜ್ ಸೃಷ್ಟಿಸಿರುವ RCBಯೇ ಮರು ಆರಂಭದ ಮೊದಲ ಪಂದ್ಯವಾಗಿದೆ. ಹಾಗಾದ್ರೆ ಟಿಕೆಟ್ ದರ, ಮರು ಪಾವತಿ, ಸಮಯ, ಸ್ಥಳ ಎಲ್ಲದರ ಬಗ್ಗೆ ತಿಳಿಯಲು ಈ ಲೇಖನವನ್ನು ಪೂರ್ತಿ ಓದಿ.
ಬಿಸಿಸಿಐ ಈಗಾಗಲೇ ನವೀಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಅಡಿದೆ. ಅದರಲ್ಲಿ 17 ಪಂದ್ಯಗಳನ್ನು ಸೇರಿಸಲಾಗಿದೆ. ಈ ವೇಳಾಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಮಹತ್ವದ ಪಂದ್ಯವೂ ಇದೆ. ಇದೀಗ ಎಲ್ಲಾ ತಂಡಗಳು ಪ್ಲೇಆಫ್ ಪ್ರವೇಶಕ್ಕಾಗಿ ತೀವ್ರ ಹೋರಾಟ ನಡೆಸುವ ಹಂತದಲ್ಲಿವೆ.
ಮೊದಲ ಪಂದ್ಯವೇ ಅಭಿಮಾನಿಗಳಿಗೆ ಹಬ್ಬ:
ಇನ್ನು ಮರು ಆರಂಭದ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಹಬ್ಬದೂಟ ಎನ್ನಬಹುದು. ಏಕೆಂದರೆ ಮರು ಆರಂಭದ ಮೊದಲ ಪಂದ್ಯ RCB ಮತ್ತು KKR ನಡೆಯುತ್ತಿದೆ. ಮೇ 17ರಂದು ಕ್ರಿಕೆಟ್ ಲವರ್ಸ್ ಅಲುಗಾಡದೇ ನೋಡುವ ಪಂದ್ಯ ಇದಾಗಿದೆ. ಈ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ. ಸ್ಥಳ, ದಿನಾಂಕ ಅಥವಾ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ, ಈ ಹಿಂದೆ ಖರೀದಿಸಿದ ಟಿಕೆಟ್‌ಗಳು ಈಗಲೂ ಮಾನ್ಯವಾಗುತ್ತವೆ.
RCB ಅಧಿಕೃತವಾಗಿ ಘೋಷಿಸಿರುವಂತೆ, ಈ ಪಂದ್ಯಕ್ಕೆ ಯಾವುದೇ ಮರುಪಾವತಿ ಪ್ರಕ್ರಿಯೆಯ ಅವಶ್ಯಕತೆ ಇಲ್ಲ. ಅಭಿಮಾನಿಗಳು ತಮಗೆ ಇದ್ದ ಟಿಕೆಟ್‌ಗಳನ್ನೇ ಬಳಸಿ ಪಂದ್ಯ ವೀಕ್ಷಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ಪಾಯಿಂಟ್ಸ್ ಟೇಬಲ್ ಸ್ಥಿತಿ:
ಇನ್ನು ಐಪಿಎಸ್ ಸ್ಥಗಿತಗೊಳ್ಳುವ ಹೊತ್ತಿಗೆ, ಗುಜರಾತ್ ಟೈಟಾನ್ಸ್ 11 ಪಂದ್ಯಗಳಿಂದ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು. ವಿಶೇಷ ಏನೆಂದರೆ RCB ಕೂಡ ಅದೇ ಅಂಕಗಳನ್ನು ಹೊಂದಿದೆ. ಆದರೂ ನಿವ್ವಳ ರನ್ ದರದಲ್ಲಿ ಇದು ತಡೆಯಲ್ಪಟ್ಟಿತ್ತು. ಈ ಎರಡು ತಂಡಗಳಿಗೆ ತಲಾ ಒಂದೊಂದು ಗೆಲುವು ಸಿಕ್ಕರೂ ಪ್ಲೇಆಫ್ ಫಿಕ್ಸ್ ಎನ್ನಬಹುದು.
ಇನ್ನು ಇದಾದ ನಂತರ ಪಂಜಾಬ್ ಕಿಂಗ್ಸ್ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ನಿಂತಿದೆ. ಈ ತಂಡ ಕೂಡ ಒಂದೇ ಒಂದು ಮ್ಯಾಚ್ ಗೆದ್ದರೆ, ಪ್ಲೇಆಫ್ ಪ್ರವೇಶ ಸಾಧಿಸಬಹುದು. ಮುಂಬೈ ಇಂಡಿಯನ್ಸ್ (MI) 14 ಅಂಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) 13 ಅಂಕಗಳೊಂದಿಗೆ ನೇರ ಸ್ಪರ್ಧೆಯಲ್ಲಿ ಇವೆ. ಆದರೆ ಇವರಿಗೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಅಗತ್ಯವಾಗಿದೆ.
ಪ್ಲೇಆಫ್ ಸ್ಪರ್ಧೆಯಲ್ಲಿ ಕಠಿಣ ಪರಿಸ್ಥಿತಿಯಲ್ಲಿರುವ ತಂಡಗಳು:
ಸದ್ಯ ಹಾಲಿ ಚಾಂಪಿಯನ್ಸ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) 11 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಹೀಗಾಗಿಯೇ ಇದು ಪ್ಲೇಆಫ್ ಪ್ರವೇಶ ಸಾಧ್ಯತೆ ಉಳಿಸಿಕೊಂಡಿದೆ. ಆದರೆ ಉಳಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸುವ ಒತ್ತಡ ಈ ತಂಡದ ಮೇಲೆ ಇದೆ. ಲಕ್ನೋ ಸೂಪರ್ ಜೈಂಟ್ಸ್ (LSG) ಕೂಡ ಏಕೆಂದರೆ, ತಮ್ಮ ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಅವಕಾಶ ಇದೆ.
ಈಗಾಗಲೇ ಹೊರಗುಳಿದ ತಂಡಗಳು:
ಐಪಿಎಲ್ 2025 ಪಾಯಿಂಟ್ಸ್ ಟೇಬಲ್‌ನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ (SRH), ರಾಜಸ್ಥಾನ ರಾಯಲ್ಸ್ (RR), ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಮ್ಮ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದ್ದು, ಈಗಾಗಲೇ ಪ್ಲೇಆಫ್ ಹಂತದಿಂದ ಹೊರಗುಳಿದಿರುವ ತಂಡಗಳ ಪಟ್ಟಿಗೆ ಸೇರಿವೆ.
ಐಪಿಎಲ್ 2025 ಪುನರಾರಂಭದ ಮೂಲಕ ಕ್ರಿಕೆಟ್ ಅಭಿಮಾನರಿಗೆ ಮತ್ತೆ ಉತ್ಸಾಹದ ಕ್ಷಣಗಳು ಹತ್ತಿರವಾಗಿವೆ. ಉಳಿದ 17 ಪಂದ್ಯಗಳು ಸೂಪರ್ ತೀವ್ರತೆಗೆ ಸಾಕ್ಷಿಯಾಗಲಿವೆ. ಪ್ರತಿಯೊಂದು ಗೆಲುವು ಪ್ಲೇಆಫ್ ಪ್ರವೇಶದ ಬಾಗಿಲನ್ನು ತೆರೆಯುವ ಶಕ್ತಿ ಹೊಂದಿರುವ ಕಾರಣದಿಂದಾಗಿ, ಎಲ್ಲ ತಂಡಗಳೂ ಹೆಚ್ಚು ಒತ್ತಡದಡಿ ಕಣಕ್ಕಿಳಿಯಲಿವೆ.ಮೆ 17 ರಂದು ನಡೆಯುವ RCB vs KKR ಪಂದ್ಯವು ಸೀಸನ್‌ನ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದೆ. ಈ ಪಂದ್ಯ ಮಾತ್ರವಲ್ಲದೆ ಮುಂದಿನ ಎಲ್ಲಾ ಪಂದ್ಯಗಳಿಗೂ ಅಭಿಮಾನಿಗಳ ತೀವ್ರ ಗಮನವಿದೆ.
More From GoodReturns

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications