ಕೆಲವೇ ತಿಂಗಳಲ್ಲಿ ಐಪಿಎಲ್ 19ನೇ ಆವೃತ್ತಿ (IPL 19th Season) ಆರಂಭವಾಗಲಿದೆ. ಇದೀಗ ಎಲ್ಲರ ಕಣ್ಣು ಐಪಿಎಲ್ 2026ರ ಹರಾಜು ಪ್ರಕ್ರಿಯೆಯತ್ತ ನೆಟ್ಟಿದೆ. ಇದೀಗ ಐಪಿಎಲ್ 2026ರ ಪೈಪೋಟಿಗೆ ಇಂದು ಹರಾಜು ಪ್ರಕ್ರಿಯೆ (IPL Auction 2026) ಆರಂಭವಾಗಿದೆ. 77 ಖಾಲಿ ಇರುವ ಸ್ಥಾನಗಳಿಗೆ 359 ಆಟಗಾರರ ನಡುವೆ ಪೈಪೋಟಿ ನಡೆಯಲಿದ್ದು, 10 ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಆಟಗಾರರನ್ನು ಬಿಡ್ ಮಾಡುತ್ತಿಷದೆ. ಇದೀಗ ಐಪಿಎಲ್ ಇತಿಹಾಸದಲ್ಲೇ ಅಚ್ಛರಿಯ ಬೆಳವಣಿಗೆಯೊಂದು ಮಿನಿ ಹರಾಜಿನಲ್ಲಿ ನಡೆದಿದೆ. ಐಪಿಎಲ್ ಇತಿಹಾಸದಲ್ಲೇ ಇದೀಗ ಮೂರನೇ ಅತ್ಯಂತ ದುಬಾರಿ ಆಟಗಾರನಾಗಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮ್ ಗ್ರೀನ್ ಹೊರಹೊಮ್ಮಿದ್ದಾರೆ.

2026ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಕ್ಯಾಮ್ ಗ್ರೀನ್ (Cameron Green) ಅವರನ್ನು ₹25.20 ಕೋಟಿಗೆ ಖರೀದಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದ ಮೂರನೇ ದುಬಾರಿ ಆಟಗಾರನಾಗಿ ಗ್ರೀನ್ ಗುರುತಿಸಿಕೊಂಡಿದ್ದಾರೆ. ತಮ್ಮ ಸಹ ಆಟಗಾರರಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿ, ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಯಶಸ್ವಿ ಬೆನ್ನಲ್ಲೇ ಯಶಸ್ವಿ ಕಂಡ ಗ್ರೀನ್!
ಕ್ಯಾಮ್ ಗ್ರೀನ್ ಅವರ ಮೊದಲ ಐಪಿಎಲ್ ಸೀಸನ್ ಭಾರೀ ಯಶಸ್ವಿ ಪಡೆದಿತ್ತು. 2023ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಆಸ್ಟ್ರೇಲಿಯನ್ ಆಟಗಾರ ಗ್ರೀನ್ ಅಜೇಯ 47 ಎಸೆತಗಳಲ್ಲಿ 100 ರನ್ ಸಹಿತ 452 ರನ್ ಗಳಿಸಿ 6 ವಿಕೆಟ್‌ಗಳನ್ನು ಪಡೆದಿದ್ದರು. ನಂತರದ ವರ್ಷ ಅಂದರೆ 2024ರಲ್ಲಿ ಆರ್‌ಸಿಬಿಗೆ ಟ್ರೇಡ್ ಆಗಿದ್ದ ಅವರು, 13 ಪಂದ್ಯಗಳಲ್ಲಿ 255 ರನ್ ಮತ್ತು 10 ವಿಕೆಟ್ ಗಳಿಸಿದರಾದರೂ, ಸೀಸನ್ ಮಧ್ಯದಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಕ್ಯಾನ್ ಗ್ರೀನ್ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮುಂಬೈ ಇಂಡಿಯನ್ಸ್ ₹2 ಕೋಟಿಗೆ ಪ್ರಾರಂಭಿಸಿತು. ಆ ನಂತರ ಶುರುವಾಯ್ತು ನೋಡಿ ಗ್ರೀನ್ ರೋಚಕ ಬಿಡ್ಡಿಂಗ್. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಒಮ್ಮೆಲೆ ₹8 ಕೋಟಿಗೆ ಬಿಡ್ ಮಾಡಲು ಮುಂದಾಯ್ತು. ಆದರೆ ರಾಜಸ್ಥಾನ ರಾಯಲ್ಸ್ ತನ್ನಲ್ಲಿದ್ದ ಶೇಕಡಾ 80ಕ್ಕೂ ಹೆಚ್ಚು, ಅಂದರೆ ₹13.6 ಕೋಟಿ ವರೆಗೆ ಬಿಡ್ ಮಾಡಿ ರೇಸ್‌ನಿಂದ ಹೊರಬಂದಿತು. ಆಮೇಲೆ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಕೆಕೆಆರ್ ನಡುವಿನ ಜಿದ್ದಾಜಿದ್ದಿನ ಬಿಡ್ಡಿಂಗ್ ಆರಂಭವಾಯಿತು ನೋಡಿ.
ಸಿಎಸ್‌ಕೆ ಆರಂಭದಲ್ಲೇ ₹18 ಕೋಟಿಗೂ ಹೆಚ್ಚಿನ ಬಿಡ್ ಹಾಕಿತು. ಆದರೆ 18 ಕೋಟಿಗಿಂತ ಹೆಚ್ಚಿನ ಮೊತ್ತದ ನಂತರದ ಹೆಚ್ಚುವರಿ ಹಣ ಐಪಿಎಲ್ ಆಟಗಾರರ ಕಲ್ಯಾಣ ನಿಧಿಗೆ ಹೋಗುತ್ತದೆ (ವಿದೇಶಿ ಆಟಗಾರರಿಗೆ ಮಾತ್ರ). ಎರಡೂ ಫ್ರಾಂಚೈಸಿಗಳ ಬಿಡ್ ಹೆಚ್ಚುತ್ತಲೇ ಇತ್ತು. ಆದರೆ ಕೊನೆಯಲ್ಲಿ, ಕೆಕೆಆರ್ ₹25.2 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಅವರನ್ನು ಮೀರಿಸಿ ಗ್ರೀನ್ ಅವರನ್ನು ತನ್ನ ತಂಡಕ್ಕೆ ತೆಗೆದುಕೊಂಡಿದೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರು:
ರಿಷಭ್ ಪಂತ್: ₹27.00 ಕೋಟಿ (LSG, ಐಪಿಎಲ್ 2025)
ಶ್ರೇಯಸ್ ಅಯ್ಯರ್: ₹26.75 ಕೋಟಿ (PBKS, ಐಪಿಎಲ್ 2025)
ಕ್ಯಾಮರೂನ್ ಗ್ರೀನ್: ₹25.20 ಕೋಟಿ (KKR, ಐಪಿಎಲ್ 2026)
ಮಿಚೆಲ್ ಸ್ಟಾರ್ಕ್: ₹24.75 ಕೋಟಿ (KKR, ಐಪಿಎಲ್ 2024)
ವೆಂಕಟೇಶ್ ಅಯ್ಯರ್: ₹23.75 ಕೋಟಿ (KKR, ಐಪಿಎಲ್ 2025)
ಪ್ಯಾಟ್ ಕಮಿನ್ಸ್: ₹20.50 ಕೋಟಿ (SRH, ಐಪಿಎಲ್ 2024)
ಸ್ಯಾಮ್ ಕರನ್: ₹18.50 ಕೋಟಿ (PBKS, ಐಪಿಎಲ್ 2023)
ಅರ್ಷದೀಪ್ ಸಿಂಗ್ / ಯುಜುವೇಂದ್ರ ಚಾಹಲ್: ₹18.00 ಕೋಟಿ (PBKS, ಐಪಿಎಲ್ 2025)
ಕ್ಯಾಮರೂನ್ ಗ್ರೀನ್: ₹17.50 ಕೋಟಿ (MI, ಐಪಿಎಲ್ 2023


Click it and Unblock the Notifications