ಸದ್ಯ ಮುಂದಿನ ವರ್ಷ ನಡೆಯಲಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಎರಡು ದಿನಗಳ ಹರಾಜು ಪ್ರಕ್ರಿಯೆ ಸೋಮವಾರ ಅಂತ್ಯಗೊಂಡಿದೆ. ಭಾರತದ ವಿಕೆಟ್ ಕೀಪರ್ ದಾಂಡಿಗ ರಿಷಬ್ ಪಂತ್ ಅವರು ಟೂರ್ನಿಯ ಇತಿಹಾಸದಲ್ಲೇ ಅತೀ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಹಲವು ಯುವ ಆಟಗಾರರು ಕೂಡ ಕೋಟಿಗಳ ಲೆಕ್ಕದಲ್ಲಿ ಬಿಕರಿಯಾಗಿದ್ದಾರೆ. ಇನ್ನು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಆಟಗಾರರಂತೆ ಹರಾಜು ಪ್ರಕ್ರಿಯೆ ನಡೆಸಿದ 49 ವರ್ಷದ ಮಹಿಳೆ ಕೂಡ ಎಲ್ಲರ ಕೇಂದ್ರ ಬಿಂದುವಾಗಿರುವುದು ಸುಳ್ಳಲ್ಲ. ಸದ್ಯ ಹರಾಜು ಪ್ರಕ್ರಿಯೆ ನಡೆಸಿದ ಮಹಿಳೆಯ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಅಂತರ್ಜಾಲದಲ್ಲಿ ಹುಡುಕಾಟ ಕೂಡ ನಡೆಸಲಾಗುತ್ತಿದೆ. ಸದ್ಯ ಹರಾಜು ಪ್ರಕ್ರಿಯೆ ಮೂಲಕ ಗಮನ ಸೆಳೆದಿರುವ ಮಹಿಳೆಯ ಹೆಸರೇ ಮಲ್ಲಿಕಾ ಸಾಗರ್. ಇನ್ನು ಎಲ್ಲರಿಗೂ ತಿಳಿದಿರುವಂತೆ ಮಲ್ಲಿಕಾ ಅವರೇನು ಇದೇ ಮೊದಲ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕಿಂತ ಮುನ್ನ ಕೂಡ ಆಟಗಾರರ ಹರಾಜು ಪ್ರಕ್ರಿಯೆ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಅದರಂತೆ ಈ ಬಾರಿ ಕೂಡ ಮಲ್ಲಿಕಾ ಅವರು ಹರಾಜು ಪ್ರಕ್ರಿಯೆಯನ್ನು ಮತ್ತೊಮ್ಮೆ ಅಮೋಘ ರೀತಿಯಲ್ಲಿ ನಿರ್ವಹಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇನ್ನು ಐಪಿಎಲ್ ನಲ್ಲಿ ಹರಾಜು ಪ್ರಕ್ರಿಯೆ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ ಮಲ್ಲಿಕಾ ಅವರು ಸಾಮಾನ್ಯ ವ್ಯಕ್ತಿ ಅಲ್ಲ. ಅವರು ಬರೊಬ್ಬರಿ 126 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ದ್ವಿತೀಯ ಬಾರಿಗೆ ಹರಾಜು ಪ್ರಕ್ರಿಯೆ ನಡೆಸಿದ ಮಲ್ಲಿಕಾ ಸಾಗರ್:
ಹರಾಜು ಉದ್ಯಮದಲ್ಲಿ ಭಾರೀ ಪ್ರಸಿದ್ಧ ಹೆಸರಾಗಿರುವ ಮಲ್ಲಿಕಾ ಸಾಗರ್ ಅವರು ಮುಂಬೈ ಮೂಲದ ಕಲಾ ಸಂಗ್ರಾಹಕ ಮತ್ತು ಆಧುನಿಕ ಮತ್ತು ಸಮಕಾಲೀನ ಭಾರತೀಯ ಕಲೆಯಲ್ಲಿ ಪರಿಣತಿ ಹೊಂದಿರುವ ಸಲಹೆಗಾರ್ತಿಯಾಗಿದ್ದಾರೆ. ಅವರು ಮುಂಬೈನ ಪ್ರಸಿದ್ಧ ಕಲಾ ಗ್ಯಾಲರಿಯಾದ ಪುಂಡೋಲ್ಸ್‌ನೊಂದಿಗೆ ಹರಾಜು ಪ್ರಕ್ರಿಯೆ ನಡೆಸಿದ ಅಪಾರ ಅನುಭವವನ್ನು ಹೊಂದಿದ್ದಾರೆ ಮತ್ತು ಆರ್ಟ್ ಇಂಡಿಯಾ ಕನ್ಸಲ್ಟೆಂಟ್‌ಗಳ ಪಾಲುದಾರರಾಗಿದ್ದಾರೆ. ಇನ್ನು ಈ ಮೊದಲೇ ಹೇಳಿದಂತೆ ಮಲ್ಲಿಕಾ ಅವರು ಇದೇ ಮೊದಲ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಳೆದ ಆವೃತಿಗೂ ಮುನ್ನ ನಡೆದ ಹರಾಜು ಪ್ರಕ್ರಿಯೆಯನ್ನು ಕೂಡ ಮಲ್ಲಿಕಾ ಅವರು ನಡೆಸಿದ್ದರು. ಹಾಗಾಗಿ ಎರಡು ವರ್ಷಗಳಲ್ಲಿ, ಮಲ್ಲಿಕಾ ಅವರು ತಮ್ಮ ಎರಡನೇ ಸತತ ಐಪಿಎಲ್ ಹರಾಜನ್ನು ಆಯೋಜಿಸಲು ಸಿದ್ಧರಾಗಿರುವ ಕಾರಣ ಕ್ರಿಕೆಟ್ ಹರಾಜು ಜಗತ್ತಿನಲ್ಲಿ ಮನೆಮಾತಾಗಿದ್ದಾರೆ. ಇನ್ನು ಮಲ್ಲಿಕಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾದರೆ ಮಲ್ಲಿಕಾ ಮುಂಬೈ ಮೂಲದ ಕಲಾ ಸಂಗ್ರಾಹಕಿ ಮತ್ತು ವ್ಯಾಪಾರ ಕುಟುಂಬದಿಂದ ಬಂದವರಾಗಿದ್ದಾರೆ. ಅವರು ಅಮೆರಿಕಾದ ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು ಮತ್ತು ಕಳೆದ ಎರಡು ದಶಕಗಳಿಂದ ಹರಾಜುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನವರಿಗೆ ಗೊತ್ತಿರದ ವಿಚಾರವೆಂದರೆ 2001 ರಲ್ಲಿ ಮಲ್ಲಿಕಾ ಅವರು ಅವರು ಕೇವಲ 26 ನೇ ವಯಸ್ಸಿನಲ್ಲೇ ಕ್ರಿಸ್ಟೀಸ್‌ನಲ್ಲಿ ಹರಾಜುದಾರರಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಭಾರತೀಯ ಮೂಲದ ಮೊದಲ ಮಹಿಳಾ ಹರಾಜುದಾರರಾದರು.

ಕಬಡ್ಡಿಯಿಂದ ಕ್ರಿಕೆಟ್ ಹರಾಜು!
ಇನ್ನು ಮಲ್ಲಿಕಾ ಅವರು ನೇರವಾಗಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಇದಕ್ಕೂ ಮುನ್ನ ಅಂದರೆ 2021 ರಲ್ಲಿ ಅವರು ಪ್ರೊ ಕಬಡ್ಡಿ ಲೀಗ್‌ನ ಹರಾಜಿನ ಭಾಗವಾಗಿದ್ದರು. ಅಲ್ಲದೆ 023 ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಉದ್ಘಾಟನಾ ಆವೃತ್ತಿಗೆ ಹರಾಜುದಾರರಾಗಿ ಆಯ್ಕೆಯಾದಾಗ ಅವರು ಜಗದ ಗಮನ ಸೆಳೆದಿದ್ದು, ಮಿನಿ ಹರಾಜನ್ನು ಕೂಡ ನಡೆಸಿದ್ದರು. ಅಲ್ಲದೆ ಮಲ್ಲಿಕಾ ಪ್ರೊ ಕಬಡ್ಡಿ ಲೀಗ್ ಹರಾಜನ್ನು ಆಯೋಜಿಸಿದ ಮೊದಲ ಮಹಿಳಾ ಹರಾಜುಗಾರ್ತಿ ಎಂಬ ಹೆಗ್ಗಳಿಕೆಗೆ ಮಲ್ಲಿಕಾ ಅವರು ಪಾತ್ರರಾದರು.
ಮಲ್ಲಿಕಾ ಅವರ ನಿವ್ವಳ ಮೌಲ್ಯವೆಷ್ಟು?
ಉತ್ತಮವಾದ ವ್ಯಾಪಾರ ಕುಟುಂಬದಿಂದ ಬಂದಿರುವ ಮಲ್ಲಿಕಾ ಅವರು ಆರ್ಟ್ ಇಂಡಿಯಾ ಕನ್ಸಲ್ಟೆಂಟ್ಸ್‌ನಲ್ಲಿ ಪಾಲುದಾರರಾಗಿದ್ದಾರೆ ಮತ್ತು ಮುಂಬೈ ಮೂಲದ ಪ್ರಸಿದ್ಧ ಕಲಾ ಗ್ಯಾಲರಿಯಾದ ಪುಂಡೋಲ್ಸ್‌ನೊಂದಿಗೆ ಹರಾಜುಗಳನ್ನು ನಡೆಸಿದ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಮಲ್ಲಿಕಾ ಸಾಗರ್ ಅವರ ನಿವ್ವಳ ಮೌಲ್ಯ ಸುಮಾರು USD 15 ಮಿಲಿಯನ್ ಅಥವಾ ಸುಮಾರು 126 ಕೋಟಿ ರೂ. ಎಂದು ಅಂದಾಜು ವ್ಯಕ್ತಪಡಿಸಲಾಗಿದೆ. ಮಲ್ಲಿಕಾ ಅವರು ಅವರು ಫಿಲಡೆಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದರು. ಮಲ್ಲಿಕಾ ಕಲಾ ಹರಾಜು ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು. 2023 ರಲ್ಲಿ, ಮಲ್ಲಿಕಾ ಭಾರತೀಯ T20 ಲೀಗ್‌ಗಾಗಿ ಹರಾಜನ್ನು ಮುನ್ನಡೆಸುವ ಮೊದಲ ಭಾರತೀಯ ವ್ಯಕ್ತಿಯಾಗುವ ಮೂಲಕ ಮೈಲಿಗಲ್ಲನ್ನು ಸಾಧಿಸಿದರು.


Click it and Unblock the Notifications