ಕ್ರಿಕೆಟ್ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುವ ಇಂಡಿಯನ್ ಪ್ರೀಮಿಯಂ ಲೀಗ್ (ಐಪಿಎಲ್) ಹವಾ ಆರಂಭವಾಗಿದೆ. ಬರೋಬ್ಬರಿ ಎರಡೂವರೆ ತಿಂಗಳು ಪ್ರತಿದಿನ ಟಿ-೨೦ ಕ್ರಿಕೆಟ್ ಮ್ಯಾಚ್ ನ ಮನೋರಂಜನೆ ದೊರಕಲಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಿಸುವ ಕೋಟ್ಯಾಂತರ ಅಭಿಮಾನಿಗಳು ದೇಶ- ವಿದೇಶದಲ್ಲಿದ್ದಾರೆ.
ವೀಕ್ಷಕರನ್ನು ಹಾಗೂ ಆಟಗಾರರನ್ನು ಅಭಿನಂದಿಸುವ ಚಿಯರ್ ಲೀಡರ್ ಗಳು ಐಪಿಎಲ್ ನ ಅವಿಭಾಜ್ಯ ಭಾಗವಾಗಿದ್ದಾರೆ.

ಐಪಿಎಲ್‌ನಲ್ಲಿ ಚಿಯರ್ ಲೀಡರ್‌ಗಳು ಕೇವಲ ನೃತ್ಯಗಾರ್ತಿಯರಲ್ಲ, ಅವರು ಪಂದ್ಯದ ಉತ್ಸಾಹದ ಪ್ರತೀಕ. ಮೈದಾನದಲ್ಲಿನ ಆಟಗಾರರನ್ನು ಮತ್ತು ಪ್ರೇಕ್ಷಕರನ್ನು ಹುರಿದುಂಬಿಸುವ ಮೂಲಕ ಪಂದ್ಯದ ವಾತಾವರಣವನ್ನು ರೋಮಾಂಚನಕಾರಿಯಾಗಿರಿಸುತ್ತಾರೆ. ಚಿಯರ್ ಲೀಡರ್‌ಗಳಿಲ್ಲದೆ ಐಪಿಎಲ್ ಪಂದ್ಯಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಏಕೆಂದರೆ ಅವರು ಪಂದ್ಯದ ಮನರಂಜನೆಯ ಭಾಗವಾಗಿದ್ದಾರೆ. ಅವರ ಹುರುಪಿನ ಹೆಜ್ಜೆ ಮತ್ತು ಗ್ಯಾಲರಿಯಲ್ಲಿರುವ ಪ್ರೇಕ್ಷಕರಲ್ಲಿ ಹೊಸ ಉತ್ಸಾಹವನ್ನು ತುಂಬುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ಕೋಲ್ಕತ್ತಾದಲ್ಲಿ ನಡೆದ 18ನೇ ಸೀಸನ್ ಲೀಗ್‌ನ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ಅದ್ಬುತ ನೃತ್ಯ ಮಾಡಿ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು. ಅದೇ ರೀತಿ ಚಿಯರ್‌ಲೀಡಿಂಗ್ ಡ್ಯಾನ್ಸ್ ಕೂಡಾ ಆಟದ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಮೆಗಾ ಟಿ-20 ಲೀಗ್‌ನ ಪಂದ್ಯಗಳ ಸಮಯದಲ್ಲಿ, ಫ್ರಾಂಚೈಸಿಗಳ ಚಿಯರ್‌ಲೀಡರ್‌ಗಳು ಎಷ್ಟು ಸಂಪಾದಿಸುತ್ತಾರೆ ಎಂಬ ಕುತೂಹಲ ನಿಮಗಿದೆಯಾ? ಪ್ರತಿ ಪಂದ್ಯಗಳ ಸಂದರ್ಭದಲ್ಲಿ ಆಟಗಾರರು ಸಿಕ್ಸರ್, ಬೌಂಡರಿ ಹೊಡೆದಾಗ ಇಲ್ಲವೇ ವಿಕೆಟ್ ಕಬಳಿಸಿದಾಗ ಚಿಯರ್ ಗರ್ಲ್ಸ್ ಹಾಕುವ ಹೆಜ್ಜೆಗಳಿಗೆ ಸಂಭಾವನೆ ಎಷ್ಟಿರಬಹುದು?
ಚಿಯರ್‌ಲೀಡರ್‌ಗಳಿಗೆ ಸಿಗುವ ಸೌಲಭ್ಯಗಳು ಯಾವುವು?
ಐಪಿಎಲ್‌ನಲ್ಲಿ ಗ್ಲಾಮರ್ ತುಂಬುವ ಎಲ್ಲಾ ಚಿಯರ್‌ಲೀಡರ್‌ಗಳು ಭತ್ಯೆ ಮತ್ತು ಉತ್ತಮ ಮೊತ್ತದ ವೇತನ ಪಡೆಯುತ್ತಾರೆ. ಭಾರತದ ಸುಡುವ ಬಿಸಿಲಿನಲ್ಲಿ ಜನರ ಮುಂದೆ ನೃತ್ಯ ಮಾಡುವುದು, ಮಾಡೆಲಿಂಗ್ ಮಾಡುವುದು ಮತ್ತು ಪ್ರದರ್ಶನ ನೀಡುವುದು ತುಂಬಾ ಸುಲಭವಲ್ಲ. ನಗುನಗುತ್ತಾ ಪ್ರತಿಬಾರಿ ಹೆಜ್ಜೆ ಹಾಕಲು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ, ಆದ್ದರಿಂದ ವೇತನ ಅತ್ಯುತ್ತಮ ಎಂದು ಹೇಳಲಾಗದಿದ್ದರೂ ಉತ್ತಮವಾಗಿವ ಸಂಬಳ ಇವರ ಕೈ ಸೇರುತ್ತದೆ.
ಚಿಯರ್‌ಲೀಡರ್‌ಗಳ ವೇತನ ಎಷ್ಟು?
ಮಾಧ್ಯಮ ವರದಿಗಳ ಪ್ರಕಾರ, ಚಿಯರ್‌ಲೀಡರ್ ಸಾಮಾನ್ಯವಾಗಿ ಪ್ರತಿ ಪಂದ್ಯಕ್ಕೆ ಸುಮಾರು 15,000 ರಿಂದ 17,000 ರೂ. ಗಳಿಸುತ್ತಾರೆ. ಇದರೊಂದಿಗೆ, ಫ್ರಾಂಚೈಸಿ ಅವರ ಹೋಟೆಲ್ ಗಳಲ್ಲಿ ತಂಗಲುವ ವ್ಯವಸ್ಥೆ, ಆಹಾರ ಮತ್ತು ಪ್ರಯಾಣ ವೆಚ್ಚಗಳನ್ನು ಸಹ ಭರಿಸುತ್ತದೆ.
ಯಾವ ಫ್ರಾಂಚೈಸಿ ಅತಿ ಹೆಚ್ಚು ಸಂಬಳ ನೀಡುತ್ತದೆ?
ಶಾರುಖ್ ಖಾನ್ ಅವರ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಐಪಿಎಲ್‌ನಲ್ಲಿ ತನ್ನ ಚಿಯರ್‌ಲೀಡರ್‌ಗಳಿಗೆ ಅತಿ ಹೆಚ್ಚು ಹಣವನ್ನು ನೀಡುತ್ತದೆ ಎಂದು ವರದಿಯಾಗಿದೆ. ಕೆಕೆಆರ್ ತನ್ನ ಚಿಯರ್‌ಲೀಡರ್‌ಗಳಲ್ಲಿ ಒಬ್ಬರಿಗೆ ಪ್ರತಿ ಪಂದ್ಯಕ್ಕೆ 24,000 ರಿಂದ 25,000 ರೂ.ಗಳನ್ನು ನೀಡುತ್ತದೆ. ತಂಡವು ಉತ್ತಮ ಪ್ರದರ್ಶನ ನೀಡಿದರೆ ಕೆಕೆಆರ್ ಚಿಯರ್‌ಲೀಡರ್‌ಗಳಿಗೆ ಕೆಲವು ಬೋನಸ್‌ಗಳನ್ನು ನೀಡುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ರತಿ ಪಂದ್ಯಕ್ಕೂ ಚಿಯರ್‌ಲೀಡರ್‌ಗೆ ಸುಮಾರು 20,000 ರೂ.ಗಳನ್ನು ಪಾವತಿಸುತ್ತವೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಪ್ರತಿ ಪಂದ್ಯಕ್ಕೂ ತನ್ನ ಚಿಯರ್‌ಲೀಡರ್‌ಗಳಲ್ಲಿ ಒಬ್ಬರಿಗೆ 17,000 ರೂ.ಗಳನ್ನು ಪಾವತಿಸುತ್ತದೆ. ಆದರೆ ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಚಿಯರ್‌ಲೀಡರ್‌ಗಳಿಗೆ ಪ್ರತಿ ಪಂದ್ಯಕ್ಕೆ 12 ಸಾವಿರ ರೂ.ಗಳನ್ನು ಪಾವತಿಸುತ್ತವೆ ಎಂದು ವರದಿಯಾಗಿದೆ. ಇದರ ಜೊತೆಗೆ ತಂಡ ಗೆದ್ದರೆ ಬೋನಸ್ ಕೂಡ ನೀಡಲಾಗುತ್ತದೆ.


Click it and Unblock the Notifications