ಚಿನ್ನದ ಮೇಲಿನ ಹೂಡಿಕೆ (Gold Investment) ಹೆಚ್ಚಿನವರು ಸೇಫ್ ಅಂತಾರೆ. ಆದ್ರೆ ಇತ್ತೀಚಿನ ಬೆಲೆ ಏರಿಕೆಯಿಂದ ಚಿನ್ನ ಖರೀದಿಸೋದೆ ಬೇಡವೆಂಬಂತಾಗಿದೆ. ಆದ್ರೆ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡರೂ, ಹಿಂದಿನ ಬೆಲೆಗೆ ಹೋಲಿಸಿದ್ರೆ ದುಬಾರಿಯಾಗಿದೆ.

ಹಬ್ಬದ ಸೀಸನ್‌ನಲ್ಲಿ ಹೆಚ್ಚಿನವರು ಚಿನ್ನ ಖರೀದಿಸುತ್ತಾರೆ. ಇದನ್ನೇ ಲಾಭವಾಗಿಟ್ಟುಕೊಂಡು ಕೆಲ ವಂಚಕರು, ನಕಲಿ ಚಿನ್ನ ಮಾರಾಟ ಮಾಡೋ ಐಡಿಯಾ ಇಟ್ಟುಕೊಂಡಿರುತ್ತಾರೆ. ಆದ್ರೆ ಚಿನ್ನ ಖರೀದಿಸುವ ಪ್ಲಾನ್‌ನಲ್ಲಿದ್ದವರು, ಚಿನ್ನದ ಶುದ್ಧತೆಯನ್ನು (Gold Purity) ಮೊದಲು ಚೆಕ್ ಮಾಡಬೇಕು. ಹಾಗಿದ್ರೆ ಚಿನ್ನದ ಶುದ್ಧತೆಯನ್ನು ಚೆಕ್ ಮಾಡುವುದು ಹೇಗೆ ಗೊತ್ತಾ?
ಈಗ ಮೊಬೈಲ್ ಮೂಲಕವೇ ಚಿನ್ನದ ಶುದ್ಧತೆಯನ್ನು ಪತ್ತೆ ಮಾಡಬಹುದು. ಅದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮನೆಯಲ್ಲೇ ಚೆಕ್ ಮಾಡಿ ಚಿನ್ನದ ಶುದ್ಧತೆ:
- ನೀವು ಖರೀದಿಸಿದ ಚಿನ್ನದ ಶುದ್ಧತೆಯನ್ನು ಮನೆಯಲ್ಲೇ ಚೆಕ್ ಮಾಡಬಹುದು.
- ಅದಕ್ಕಾಗಿ ಸ್ಮಾರ್ಟ್‌ಫೋನ್ ಮೂಲಕ 'BIS Care' ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ನಂತರ, ಮೊಬೈಲ್ ನಂಬರ್ ಆಡ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ.
- ರಿಜಿಸ್ಟರ್ ಆದ ಬಳಿಕ ಆಭರಣದ ಮೇಲಿರುವ 6-ಅಂಕಿಯ HUID ಸಂಖ್ಯೆಯನ್ನು ಆಪ್‌ನಲ್ಲಿ ಹಾಕಬೇಕು.
- HUID ಹಾಕಿದ ಕೆಲವೇ ಸೆಕೆಂಡುಗಳಲ್ಲಿ, ನಿಮ್ಮ ಆಭರಣದ ಶುದ್ಧತೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರವನ್ನು ನೀಡುತ್ತದೆ.
- ಈ ಒಂದು ಟ್ರಿಕ್ಸ್‌ನಿಂದ ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕ ಚಿನ್ನದ ಪ್ಯೂರಿಟಿಯನ್ನು ಚೆಕ್ ಮಾಡಬಹುದು.
ಹಾಲ್‌ಮಾರ್ಕ್ ಎಂದರೇನು?
ಹಾಲ್ ಮಾರ್ಕ್ ಎಂದರೆ, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS) ನೀಡುವ ಚಿನ್ನದ ಗುರುತು. ಇದು ಚಿನ್ನ ಮತ್ತು ಬೆಳ್ಳಿಯ ಶುದ್ಧತೆಯನ್ನು ತಿಳಿಸುತ್ತದೆ. ಈ ಹಾಲ್ ಮಾರ್ಕ್ ಚಿನ್ನದ ಶುದ್ಧತೆ ಎಷ್ಟಿದೆ ಎಂದು ತಿಳಿಸುತ್ತದೆ. ಅದೇ ಕಾರಣಿಂದ ಚಿನ್ನ ಖರೀದಿಸುವ ಮುನ್ನ ಹಾಲ್ ಮಾರ್ಕ್ ಚೆಕ್ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,491, 22K ರೂ. 11,450, 18K ರೂ. 9,575
ಮುಂಬೈ: 24K ರೂ. 12,448, 22K ರೂ. 11,410, 18K ರೂ. 9,336
ದೆಹಲಿ: 24K ರೂ. 12,463, 22K ರೂ. 11,425, 18K ರೂ. 9,351
ಕೋಲ್ಕತ್ತಾ: 24K ರೂ. 12,448, 22K ರೂ. 11,410, 18K ರೂ. 9,336
ಬೆಂಗಳೂರು: 24K ರೂ. 12,448, 22K ರೂ. 11,410, 18K ರೂ. 9,336
ಹೈದರಾಬಾದ್: 24K ರೂ. 12,448, 22K ರೂ. 11,410, 18K ರೂ. 9,336
ಕೇರಳ: 24K ರೂ. 12,448, 22K ರೂ. 11,410, 18K ರೂ. 9,336
ಪುಣೆ: 24K ರೂ. 12,448, 22K ರೂ. 11,410, 18K ರೂ. 9,336
ವಡೋದರಾ: 24K ರೂ. 12,453, 22K ರೂ. 11,415, 18K ರೂ. 9,341
ಅಹಮದಾಬಾದ್: 24K ರೂ. 12,453, 22K ರೂ. 11,415, 18K ರೂ. 9,341


Click it and Unblock the Notifications