ಷೇರುಪೇಟೆಯ ಸೂಚ್ಯಂಕಗಳು ಅಂತರ ರಾಷ್ಟ್ರೀಯ ಬೆಳವಣಿಗೆಗಳ, ವಿದೇಶಿ ವಿತ್ತೀಯ ಸಂಸ್ಥೆಗಳ ಸತತ ಮಾರಾಟದ ಕಾರಣ ಭಾರಿ ಕುಸಿತ ದಾಖಲಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ರೀತಿಯಲ್ಲಿ ಸೆನ್ಸೆಕ್ಸ್ 3,200 ಪಾಯಿಯಿಂಟುಗಳಷ್ಟು ಕುಸಿತ ಕಂಡು 2,919 ಪಾಯಿಂಟುಗಳ ಕುಸಿತದಲ್ಲಿ ಕೊನೆಗೊಂಡಿದೆ. ಆನೆ ನಡೆದದ್ದೇ ದಾರಿ ಸೆನ್ಸೆಕ್ಸ್ ಚಲಿಸಿದ್ದೆ ಗುರಿ ಎಂಬಂತೆ ಯಾವ ತಜ್ಞರಾಗಲಿ, ವಿಶ್ಲೇಷಕರಾಗಲಿ ಕಲ್ಪಿಸಿಕೊಳ್ಳಲಾಗದ ಚಲನೆಯನ್ನು ಪ್ರದರ್ಶಿಸುತ್ತಿದೆ. ಇಂದು ಸೆನ್ಸೆಕ್ಸ್ ನ ಎಲ್ಲಾ ಮೂವತ್ತು ಕಂಪನಿಗಳು ಹಾನಿಗೊಳಗಾಗಿವೆ.
ಇಂತಹ ಭಾರಿ ಕುಸಿತವು ಹೆಚ್ಚಿನ ಹೂಡಿಕೆದಾರರಲ್ಲಿ ಗಾಬರಿ ಮೂಡಿಸುವುದು ಸಹಜ. ಪೇಟೆಯಲ್ಲಿ ತೇಲಾಡುವ ನಕಾರಾತ್ಮಕ ಅಂಶಗಳಿಗೆ ಕಿವಿಗೊಡದೆ, ಅಂತರ್ಗತವಾದ ಮೌಲ್ಯಗಳನ್ನು ಅರಿತು ಹೂಡಿಕೆ ಮಾಡಿದಲ್ಲಿ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದು. ಇಂತಹ ವಾತಾವರಣದಲ್ಲೂ ಅಗ್ರಮಾನ್ಯ ಕಂಪೆನಿಗಳನೇಕವು ಪ್ರದರ್ಶಿಸಿದ ಏರಿಳಿತಗಳು, ಕುಸಿತದಿಂದ ಕಂಡ ಚೇತರಿಕೆಗಳು, ಕೆಲವು ಷೇರುಗಳು ಬಾಟಮ್ ಔಟ್ ಆಗಿರಬೇಕೆನಿಸುತ್ತದೆ.
ಉದಾಹರಣೆಗೆ: ಕಾಲ್ಗೇಟ್ ಪಾಲ್ಮೊಲೀವ್ ಕಂಪನಿ ಇಂದು ದಿನದ ಮಧ್ಯಂತರದಲ್ಲಿ ರೂ.1,174 ರವರೆಗೂ ಕುಸಿದು ನಂತರ ರೂ.1,250 ನ್ನು ದಾಟಿ ಮತ್ತೆ ರೂ.1,205ರ ಸಮೀಪ ಕೊನೆಗೊಂಡಿದೆ.
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಷೇರು
* ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿಯ ಷೇರು ನಿನ್ನೆಯ ದಿನದ ರೂ.195 ರ ಸಮೀಪದಿಂದ ರೂ.138.45 ರ ವರೆಗೂ ಲೋವರ್ ಸರ್ಕ್ಯೂಟ್ ನಲ್ಲಿದ್ದು ನಂತರ ಮತ್ತೆ ರೂ.170 ರ ಗಡಿ ದಾಟಿತು. ಮತ್ತೊಮ್ಮೆ ಮಾರಾಟದ ಒತ್ತಡದಿಂದ ರೂ.140 ರ ಸಮೀಪಕ್ಕೆ ಕುಸಿದು ಅಂತಿಮ ಕ್ಷಣಗಳಲ್ಲಿ ರೂ.169 ಕ್ಕೆ ಚೇತರಿಕೆ ಕಂಡು ರೂ.163 ರ ಸಮೀಪ ಕೊನೆಗೊಂಡಿದೆ.
* ಕ್ಯಾನ್ ಫಿನ್ ಹೋಮ್ಸ್ ಕಂಪನಿಯ ಷೇರಿನ ಬೆಲೆಯೂ ಆರಂಭದಲ್ಲಿ ರೂ.400 ರ ಸಮೀಪವಿದ್ದು ನಂತರ ಮಧ್ಯಂತರದಲ್ಲಿ ರೂ.336 ರ ಸಮೀಪಕ್ಕೆ ಕುಸಿದು, ಮತ್ತೆ ಚೇತರಿಸಿಕೊಂಡು ರೂ.406 ರವರೆಗೂ ಏರಿಕೆ ಕಂಡು ರೂ.400 ರ ಸಮೀಪಕ್ಕೆ ಕೊನೆಗೊಂಡಿದೆ. ಎಲ್ ಐ ಸಿ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆ ರೂ.288 ರ ಸಮೀಪದಿಂದ ರೂ.255 ರ ಸಮೀಪಕ್ಕೆ ಏಕಮುಖವಾಗಿ ಕುಸಿದಿರುವಾಗ ಕ್ಯಾನ್ ಫಿನ್ ಹೋಮ್ಸ್ ನ ಈ ಚೇತರಿಕೆ ಅಚ್ಚರಿ ಮೂಡಿಸಿರಬಹುದು. ಇಲ್ಲಿ ಪ್ರವರ್ತಕರು ತಮ್ಮ ಭಾಗಿತ್ವವನ್ನು ಮಾರಾಟಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನೆನಪಿನಲ್ಲಿಡಬೇಕಾದ ವಿಚಾರ.
ಚೇತರಿಕೆ ಕಂಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮತ್ತೆ ಕುಸಿತ
* ಅಗ್ರಮಾನ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಷೇರಿನ ಬೆಲೆ ನಿನ್ನೆ ಕಂಡ ಚೇತರಿಕೆ ಇಂದು ಮಾಯವಾಯಿತು. ಇಂದು ಆರಂಭದಿಂದಲೂ ಮಾರಾಟದ ಒತ್ತಡದ ಕಾರಣ ರೂ.1,040 ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆಯಿಂದ ರೂ.1,100 ಕ್ಕೆ ಪುಟಿದೆದ್ದು ಮತ್ತೆ ರೂ.1,060 ಕ್ಕೆ ಕುಸಿದಿದೆ.
* ಟಾಟಾ ಸ್ಟೀಲ್ ಕಂಪನಿಯ ಷೇರಿನ ಬೆಲೆಯೂ ರೂ.276 ರ ಸಮೀಪ ಆರಂಭವಾಗಿ ರೂ.291 ರ ವರೆಗೂ ಪುಟಿದೆದ್ದು ರೂ.286ರ ಸಮೀಪಕ್ಕೆ ಕೊನೆಗೊಂಡಿದೆ.
* ಎಸ್ ಬಿ ಐ ಷೇರಿನ ಬೆಲೆ ಸತತವಾಗಿ ಜಾರುತ್ತಿದೆ. SBI ಕಾರ್ಡ್ ನ ಐಪಿಒ ನಂತರದ ಬೆಳವಣಿಗೆಗಳು ಮತ್ತು ಯೆಸ್ ಬ್ಯಾಂಕ್ ನ ಬೆಳವಣಿಗೆಗಳ ಕಾರಣ ಭಾರಿ ಕುಸಿತಕಂಡು ರೂ.208 ರವರೆಗೂ ಇಳಿಕೆ ಕಂಡು ರೂ.212 ರ ಸಮೀಪ ಕೊನೆಗೊಂಡಿದೆ.
ಬ್ಯಾಂಕಿಂಗ್ ವಲಯದ ಷೇರುಗಳು ಭಾರೀ ಕುಸಿತ
* ಬ್ಯಾಂಕಿಂಗ್ ವಲಯದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಫಾರ್ಮ ವಲಯದ ಗ್ಲೇನ್ ಮಾರ್ಕ್ ಫಾರ್ಮ, ಅರವಿಂದೋ ಫಾರ್ಮ, ಸಿಪ್ಲಾ, ವೊಕಾರ್ಡ್, ಕ್ಯಾಡಿಲ್ಲ ಹೆಲ್ತ್, ಸನ್ ಫಾರ್ಮ, ಸೇರಿ ಈ ವಲಯದ ಹೆಚ್ಚಿನ ಕಂಪನಿಗಳು , ಟೆಕ್ನಾಲಜಿ ವಲಯದ ಇನ್ಫೋಸಿಸ್, ಟಿಸಿಎಸ್, ಮೈಂಡ್ ಟ್ರೀ, ಎಲ್ & ಟಿ ಇನ್ಫೋಟೆಕ್, ಟೆಕ್ ಮಹಿಂದ್ರಾ, ಟಾಟಾ ಎಲೆಕ್ಸಿ, ಸೊನಾಟಾ ಸಾಫ್ಟ್ ವೇರ್ ಮುಂತಾದವುಗಳು ಸಹ ಭಾರಿ ಕುಸಿತ ಕಂಡಿವೆ. ಸಾರ್ವಜನಿಕ ವಲಯದ ಅಗ್ರಮಾನ್ಯ ಕಂಪೆನಿಗಳಂತೂ ನಿರಂತರವಾಗಿ ಒತ್ತಡದಲ್ಲಿವೆ.
ಭಾರಿ ಗಾತ್ರದ ಕುಸಿತವನ್ನು ಸಾಧನೆಯಾಧಾರಿತ ಕಂಪನಿಗಳು ಕಂಡಿರುವಾಗ ದೀರ್ಘಕಾಲೀನ ಹೂಡಿಕೆಯಾಗಿ, ಹಂತ ಹಂತವಾಗಿ ಪ್ರತಿ ಕುಸಿತದಲ್ಲೂ ಶೇಖರಿಸಿದಲ್ಲಿ ಉತ್ತಮ ಹೂಡಿಕೆಗುಚ್ಛವನ್ನು ನಿರ್ಮಿಸಿಕೊಳ್ಳಬಹುದು. ಈಗಿನ ಕುಸಿತಕ್ಕೂ ಕಂಪನಿಗಳ ಸಾಧನೆಗೂ ಸಂಬಂಧವಿಲ್ಲ. ಇದು ಜಾಗತಿಕ ಮಟ್ಟದಲ್ಲಿನ ಸಾಂಕ್ರಾಮಿಕವಾಗಿದೆ.
ಕುಸಿದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್
* ಇಂದು ಪ್ರತಿ ಷೇರಿಗೆ ರೂ.16.50 ರ ಮಧ್ಯಂತರ ಲಾಭಾಂಶ ಪ್ರಕಟಿಸಿದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ರೂ.330 ರವರೆಗೂ ಕುಸಿದು ನಂತರ ಪುಟಿದೆದ್ದು ರೂ.345 ರಲ್ಲಿ ಕೊನೆಗೊಂಡಿದೆ.
* ನವರತ್ನ ಕಂಪನಿ ಕೋಲ್ ಇಂಡಿಯಾ ಇಂದು ರೂ.12 ರಂತೆ ಪ್ರತಿ ಷೇರಿಗೆ ಮಧ್ಯಂತರ ಲಾಭಾಂಶ ಪ್ರಕಟಿಸಿದೆ. ಷೇರಿನ ಬೆಲೆ ರೂ.155 ರ ಸಮೀಪವಿದೆ.
* ಪ್ರತಿ ಷೇರಿಗೆ ರೂ.50 ರಂತೆ ಲಾಭಾಂಶ ಘೋಷಿಸಿರುವ ಸಾಸ್ಕಿನ್ ಟೆಕ್ನಾಲಜಿಸ್ ಇಂದು ವಾರ್ಷಿಕ ಕನಿಷ್ಟಕ್ಕೆ ಜಾರಿ ರೂ.530 ರ ಸಮೀಪ ಕೊನೆಗೊಂಡಿದೆ.
ಈ ಎಲ್ಲಾ ಬೆಳವಣಿಗೆಗಳು ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆ ಕುಸಿದಿದ್ದರೂ ಚೇತರಿಕೆಯನ್ನು ಕಾಣುವ ಲಕ್ಷಣಗಳನ್ನು ಪ್ರದರ್ಶಿಸುತ್ತಿವೆ. ಚಟುವಟಿಕೆ ನಡೆಸುವ ಮುನ್ನ ಪೇಟೆಯ ವಾತಾವರಣವನ್ನು ಅರಿತು ನಿರ್ಧರಿಸಿರಿ. ದುಡುಕಿನ ನಿರ್ಧಾರ ಬೇಡ.
ಲೇಖಕ ಕೆ. ಜಿ. ಕೃಪಾಲ್ ಬಗ್ಗೆ
ಷೇರು ಮಾರುಕಟ್ಟೆಯಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅನುಭವ ಇರುವವರು ಕೆ. ಜಿ. ಕೃಪಾಲ್. ಈಗಲೂ ಸಕ್ರಿಯ ಷೇರು ದಲ್ಲಾಳಿಗಳಾಗಿರುವ ಅವರು, ಅಪಾರ ಸಂಖ್ಯೆಯ ಹೂಡಿಕೆದಾರ ಜಾಗೃತಿ ಸಮಾವೇಶಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. ದೂರದರ್ಶನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮುದ್ರಣ, ಎಲೆಕ್ಟ್ರಾನಿಕ್, ಆನ್ ಲೈನ್ ಮೀಡಿಯಾ ಯಾವುದೂ ಕೃಪಾಲ್ ಅವರ ಲೇಖನಗಳಿಂದ ಹೊರತಾಗಿಲ್ಲ. ಅಂಕಣಕಾರರಾಗಿಯೂ ಚಿರಪರಿಚಿತರು. ಅವರ ಲೇಖನಗಳು ಪುಸ್ತಕಗಳಾಗಿ ಹಲವು ಮುದ್ರಣ ಕಂಡಿವೆ. ಆರ್ಥಿಕ ವಿಷಯಗಳ ಬಗ್ಗೆ ಸಮಚಿತ್ತದ ಒಳನೋಟಗಳಿಂದಾಗಿ ಆರ್ಥಿಕ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುವ, ಮಾತನಾಡುವ ಪ್ರಮುಖರೆನಿಸಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications