LPG: ಮತ್ತೆ ಬೆಂಗಳೂರಿನಲ್ಲಿ ಶುರುವಾಗುತ್ತಾ Work From Home? ಎಲ್‌ಪಿಜಿ ಕೊರತೆ ಬೆನ್ನಲ್ಲೇ ಉದ್ಯೋಗಿಗಳ ಹೊಸ ಡಿಮ್ಯಾಂಡ್‌

ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ (Middle East Conflict) ಜಾಗತಿಕ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅತ್ತ ಇರಾನ್‌ ಮತ್ತು ಇಸ್ರೇಲ್‌ ಸಂಘರ್ಷ ತಾರಕಕ್ಕೇರಿದೆ. ಇತ್ತ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಸರ್ಕಾರದ ಕ್ರಮದಿಂದ ಇದೀಗ ಹಲವು ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದ್ದು, ಆಫೀಸ್‌ ಕ್ಯಾಂಟೀನ್‌ಗಳಿಗೂ ಯುದ್ಧದ ಬಿಸಿ ತಟ್ಟಿದೆ. ಇದೀಗ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಕೊರತೆ (LPG Cylinder Shortage) ಹೆಚ್ಚಾಗುತ್ತಿದ್ದಂತೆ, ಉದ್ಯೋಗಿಗಳಿಂದ ವರ್ಕ್‌ ಫ್ರಂ ಹೋಮ್‌ (Work From Home) ಬೇಡಿಕೆ ಮತ್ತೆ ಹೆಚ್ಚಾಗಿದೆ.

LPG ಕೊರತೆ; ಬೆಂಗಳೂರಿನಲ್ಲಿ ಶುರುವಾಗುತ್ತಾ Work From Home?

ಹೌದು, ಅನೇಕ ಕಂಪನಿಗಳು ನಡೆಸುತ್ತಿದ್ದ ಕ್ಯಾಂಟೀನ್‌ಗಳು, ಇದೀಗ ಎಲ್‌ಪಿಜಿ ಕೊರತೆಯಿಂದಾಗಿ ಮುಚ್ಚಲ್ಪಟ್ಟಿದೆ. ಅಲ್ಲದೇ ಎಲ್‌ಪಿಜಿ ಪೂರೈಕೆಯಲ್ಲಿನ ಕೊರತೆ ಸಾರಿಗೆ ಸೇವೆಗಳ ಮೇಲೂ ಪರಿಣಾಮ ಬೀರಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಅನೇಕ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿಗೆ ಮುಂದಾಗಬಹುದು ಎಂದು ವರದಿಯಾಗಿದೆ.

ಇನ್ನು ಈ ಕುರಿತು ಮಾತನಾಡಿರುವ ಔಟರ್‌ ರಿಂಗ್‌ ರೋಡ್‌ ಕಂಪನಿಗಳ ಸಂಘದ (ORRCA) ಪ್ರತಿನಿಧಿಯೊಬ್ಬರು, "ಪ್ರಸ್ತುತ ವರ್ಕ್‌ ಫ್ರಂ ಹೋಂ ಬಗ್ಗೆ ಚರ್ಚೆಗಳು ಇನ್ನೂ ಆರಂಭಿಕ ಹಂತದಲ್ಲಿದೆ. ಕೆಲವು ಕಂಪನಿಗಳು ವರ್ಕ್‌ ಫ್ರಂ ಹೋಮ್‌ ಆಯ್ಕೆ ಬಗ್ಗೆ ಯೋಚಿಸುತ್ತಿದೆ. ಮುಂದಿನ ಕೆಲವು ವಾರಗಳಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಮತ್ತೆ ವರ್ಕ್‌ ಫ್ರಂ ಹೋಮ್‌ ಬರಬಹುದು" ಎಂದು ಹೇಳಿದ್ದಾರೆ.

ಉದ್ಯೋಗಿಗಳ ಡಿಮ್ಯಾಂಡ್‌!

ಇತ್ತೀಚೆಗೆ ಹಲವಾರು ವಾಹನಗಳು ಸಿಎನ್‌ಜಿ ಮಾದರಿಯಲ್ಲೂ ಚಲಿಸುತ್ತದೆ. ಆದ್ರೆ ಆಟೋಗಳು ಮತ್ತು ಕ್ಯಾಬ್‌ಗಳು ಲಭ್ಯವಿಲ್ಲ ಎಂದು ಹೇಳಿ ಅನೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳಿಂದ, ಆಟೋ ಬುಕ್‌ ಮಾಡೋದೆ ಕಷ್ಟವಾಗಿಬಿಟ್ಟಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಅಂತೂ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅತ್ತ ತೈಲ ಬೆಲೆ, ಇಂಧನ ಸಾಗಾಟ, ಆರ್ಥಿಕ ಹೊರೆ, ಹೀಗೆ ಅನೇಕ ತೊಂದರೆಗಳು ಎದುರಾಗುತ್ತಲೇ ಇದೆ. ಇದೀಗ ಈ ಸಂಕಷ್ಟ ಉದ್ಯೋಗಿಗಳ ಮೇಲೂ ಬೀರುತ್ತಿದ್ದು, ಈ ಹಿನ್ನೆಲೆ ಉದ್ಯೋಗಿಗಳು ವರ್ಕ್‌ ಫ್ರಂ ಹೋಮ್‌ ಡಿಮ್ಯಾಂಡ್‌ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿ ನಂತರ ಮುನ್ನೆಲೆಗೆ ಬಂದಿದ್ದ ವರ್ಕ್‌ ಫ್ರಂ ಟ್ರೆಂಡ್‌ ಕೆಲವು ಕಂಪನಿಗಳಲ್ಲಿ ಇಂದೂ ಮುಂದುವರೆಸಿದ್ದರೆ, ಇನ್ನೂ ಕೆಲವು ಕಂಪನಿಗಳಲ್ಲಿ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದ್ರೆ ಇದೀಗ ಮತ್ತೆ ವರ್ಕ್‌ ಫ್ರಂ ಹೋಮ್‌ ಪ್ರವೃತ್ತಿ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇನ್ನೂ ಅಧಿಕೃತವಾಗಿ ಘೋಷಿಸಿಲ್ಲವೆಂದರೂ, ಮುಂದಿನ ದಿನಗಳಲ್ಲಿ ಬರುತ್ತಾ? ಇಲ್ವಾ? ಎಂದು ಕಾದು ನೋಡಬೇಕಿದೆ.

ದಿನ ಹೋದಂತೆ ಇಸ್ರೇಲ್‌-ಅಮೆರಿಕಾ ಮತ್ತು ಇರಾನ್‌ ನಡುವೆ ಯುದ್ಧ ಹೆಚ್ಚಾಗುತ್ತಲೇ ಇದೆ. ದಾಳಿ ಪ್ರತಿದಾಳಿಗಳು ನಡೆಯುತ್ತಲೇ ಇದೆ. ಯುದ್ಧ ಯಾವಾಗ ನಿಲ್ಲುತ್ತೆ ಎಂದು ಇಡೀ ಜಗತ್ತು ಕಾದು ಕುಳಿತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+