ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆ ವಿಶ್ವದಾದ್ಯಂತ ಅತಂತ್ರ ಸ್ಥಿತಿಯನ್ನು ಉಂಟುಮಾಡಿದೆ. ಇರಾನ್ (Iran) ಮೇಲೆ ಇಸ್ರೇಲ್-ಅಮೆರಿಕಾ (Israel-America) ನಡೆಸಿದ ಜಂಟಿ ದಾಳಿಯಿಂದಾಗಿ ಸುಪ್ರೀಂ ನಾಯಕ ಆಯತೊಲ್ಲ ಖಮೇನಿ ಸೇರಿದಂತೆ ಹಲವು ಇರಾನ್ ನಾಯಕರು ಬಲಿಯಾಗಿದ್ದಾರೆ. ಈ ಪರಿಣಾಮ ಇರಾನ್ ಕೂಡಾ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಮೇಲೆ ದಾಳಿ ಮೇಲೆ ದಾಳಿ ಮಾಡುತ್ತಲೇ ಇದೆ. ಈ ಮಧ್ಯೆ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಭಾರತದ ಹಲವು ವ್ಯಾಪಾರಗಳಿಗೆ ಪರಿಣಾಮ ಬೀಳಲಿದೆ. ಅದರಲ್ಲೂ ಭಾರತವು ಕಚ್ಚಾ ತೈಲದ (Crude Oil) ಸರಬರಾಜು ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಲ್ಲದೇ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಇದೀಗ ಭಾರತದ ತೈಲ ಸರಬರಾಜಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಇರಾನ್‌ನ ಪ್ರಮುಖ ಜಲಮಾರ್ಗ ಸ್ಟ್ರೇಟ್ ಆಫ್ ಹಾರ್ಮುಜ್ ಅನ್ನು ಮುಚ್ಚಿರುವ ಕಾರಣ, ಭಾರತದ ತೈಲ ಸಂಸ್ಕರಣೆ ಮಾಡುವವರು ಹೊಸ ಸರಬರಾಜು ಮೂಲಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಇರಾನ್‌ನ ಪ್ರಮುಖ ಜಲಮಾರ್ಗ್ ಬಂದ್!
ಜಾಗತಿಕ ತೈಲದ ಸುಮಾರು 20% (ದಿನಕ್ಕೆ 17-20 ಮಿಲಿಯನ್ ಬ್ಯಾರೆಲ್‌ಗಳು) ಈ ಸಣ್ಣ ಕಾಲುವೆಯ ಮೂಲಕ ಸಾಗಿಸಲಾಗುತ್ತದೆ ಎನ್ನಲಾಗಿದೆ. ಅದರಲ್ಲೂ ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು 40-50% (ದಿನಕ್ಕೆ ಸುಮಾರು 2.6 ಮಿಲಿಯನ್ ಬ್ಯಾರೆಲ್‌ಗಳು) ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಬರುತ್ತದೆ. ಇದೇ ಮಾರ್ಗದ ಮೂಲಕ ಈ ಕಚ್ಚಾ ತೈಲ ಹಾದು ಹೋಗುತ್ತದೆ ಎನ್ನಲಾಗಿದೆ.
ಜಲಮಾರ್ಗ ಬಂದ್, ಭಾರತದ ಮೇಲೆ ಪರಿಣಾಮ?
ಭಾರತ ತನ್ನ ಒಟ್ಟು ತೈಲದ 80-90% ಆಮದು ಮಾಡಿಕೊಳ್ಳುವುದಾಗಿದೆ. ಈಗಾಗಲೇ ಹಾರ್ಮುಜ್ ಜಲಮಾರ್ಗವನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಒಂದು ವೇಳೆ ಹಾರ್ಮುಜ್ ಮುಚ್ಚಿದರೆ, ತೈಲದ ಬೆಲೆಗಳು ಸಹ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದೇ ರೀತಿ ಇದೀಗ ತೈಲದ ಬೆಲೆ ಭಾರೀ ಹೆಚ್ಚಳವಾಗಿದೆ.
ಏನಿದು Strait Of Hormuz?
ಸ್ಟ್ರೇಟ್ ಆಫ್ ಹಾರ್ಮುಜ್ ಎಂಬುದು ಜಗತ್ತಿನ ಅತ್ಯಂತ ಮಹತ್ವದ, ಬೇಡಿಕೆಯ ಜಲಮಾರ್ಗವಾಗಿದೆ. ಇದನ್ನು "ಜಗತ್ತಿನ ತೈಲದ ಗಂಟಲು" ಎಂದೂ ಕರೆಯಲಾಗುತ್ತದೆ. ಇನ್ನು ಇರಾನ್ ಮತ್ತು ಓಮನ್ ನಡುವ ಇರುವಂತಹ ಸಣ್ಣ ಸಮುದ್ರ ಮಾರ್ಗ ಇದಾಗಿದ್ದು, ಹಲವು ರಾಷ್ಟ್ರಗಳ ತೈಲ ಸಾಗಾಟಕ್ಕೆ ದಾರಿಯಾಗಿದೆ.
ದಿನಕ್ಕೆ ಸುಮಾರು 17 ರಿಂದ 21 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ, ಇಂಧನಗಳನ್ನು ಈ ಮಾರ್ಗದಲ್ಲಿ ಸಾಗಿಸಲಾಗುತ್ತದೆ. ಇನ್ನು ಪರ್ಷಿಯನ್ ಗಲ್ಫ್‌ನಲ್ಲಿ ಇರುವ ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್, ಇರಾನ್ ಮುಂತಾದ ದೇಶಗಳು ತಮ್ಮ ತೈಲ ರಫ್ತನ್ನು ಈ ಮಾರ್ಗದ ಮೂಲಕವೇ ಮಾಡುತ್ತದೆ. ಅಲ್ಲದೇ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾಗಳು ಕೂಡಾ ತೈಲ ಆಮದುಗಳನ್ನು ಇಲ್ಲಿಂದಲೇ ಮಾಡುತ್ತದೆ. ಅದರಲ್ಲೂ ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಬಹುತೇಕ 40-60% ನಷ್ಟು ಇದೇ ಮಾರ್ಗದ ಮೂಲಕ ಸಾಗಿಸಲಾಗುತ್ತದೆ.
ದಾಳಿ ಬೆನ್ನಲ್ಲೇ ಬಂದ್:
ಇದೀಗ ಇಸ್ರೇಲ್-ಅಮೆರಿಕಾ ಜಂಟಿಯಾಗ ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಹಲವು ಟ್ಯಾಂಕರ್‌ಗಳಿಗೆ ರೇಡಿಯೋ ಸಂದೇಶ ಕಳುಹಿಸಿದೆ ಎನ್ನಲಾಗಿದೆ. ಈ ಸಂದೇಶದಲ್ಲಿ ಹಡಗುಗಳಿಗೆ ಹಾರ್ಮುಜ್ ಮೂಲಕ ಹಾದು ಹೋಗುವುದನ್ನು ನಿಷೇಧಿಸಿದೆ ಎಂದು ಹೇಳಿದೆ.


Click it and Unblock the Notifications