ದಿನ ಹೋದಂತೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ (Middle East Conflict) ತೀವ್ರವಾಗುತ್ತಿದೆ. ಮೂರು ರಾಷ್ಟ್ರಗಳ ನಡುವಿನ ಘರ್ಷಣೆ ಆರಂಭವಾಗಿ 3 ವಾರಗಳು ಕಳೆದರೂ, ಯುದ್ಧದ ಬಿಸಿ ಇನ್ನೂ ಕಮ್ಮಿಯಾಗಿಲ್ಲ. ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಯುಎಸ್ (Iran vs Israel-US War) ಸಂಘರ್ಷ ತೀವ್ರವಾಗುತ್ತಿದ್ದು, ೀ ಮಧ್ಯೆ ಇರಾನ್ ಭಾನುವಾರ ಜೆರುಸಲೆಮ್ ಹಾಗೂ ವಾಷಿಂಗ್ಟನ್‌ಗೆ ಸಂಬಂಧಿಸಿದ ನೆಲೆಗಳ ಮೇಲೆ ಅತ್ಯಾಧುನಿಕ ಕ್ಷಿಪಣಿಗಳನ್ನು ಉಡಾಯಿಸಿ ನಡುಗುವಂತೆ ಮಾಡಿದೆ. ಫೆಬ್ರವರಿ 28 ರಂದು ಯುದ್ಧ ಆರಂಭವಾಗಿದ್ದು, ಆ ನಂತರ ಇರಾನ್, ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ 'ಸೆಜ್ಜೀಲ್' ಕ್ಷಿಪಣಿಯನ್ನು (Sejjil Missile) ಉಡಾಯಿಸಿದೆ ಎಂದು ವರದಿಯಾಗಿದೆ.

ಈ ಸೆಜ್ಜೀಲ್ ಕ್ಷಿಪಣಿಯು ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸುತ್ತಾ, ಇಸ್ರೇಲ್‌ನ ಐರನ್ ಡೋಮ್‌ನಂತಹ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಸಮರ್ಥವಾಗಿ ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ, ಇದಕ್ಕೆ "ಡ್ಯಾನ್ಸಿಂಗ್ ಮಿಸೈಲ್" (ನೃತ್ಯ ಮಾಡುವ ಕ್ಷಿಪಣಿ) ಎಂದೂ ಅಡ್ಡ ಹೆಸರಿನಿಂದ ಕರೆಯಲಾಗಿದೆ. ಇನ್ನು ಈ ಮಿಸೈಲ್‌ನ ವಿಶಿಷ್ಟ ಚಲನೆಯೇ ಶತ್ರುರಾಷ್ಟ್ರಗಳಿಗೆ, ಎದುರಾಳಿಗಳಿಗೆ ಇದನ್ನು ಪತ್ತೆಹಚ್ಚಿ ತಡೆಯಲು ಕಷ್ಟಕರವಾಗಿಸುತ್ತದೆ.
ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿರುವಾಗ ಮೊದಲ ಬಾರಿಗೆ ಸೆಜ್ಜೀಲ್‌ನ ಬಳಕೆ ಭಾರೀ ಮಹತ್ವ ಪಡೆದಿದೆ. ಲಿಕ್ವಿಡ್-ಇಂಧನ ಕ್ಷಿಪಣಿಗನ್ನು ಉಡಾಯಿಸಬೇಕೆಂದರೆ ಸಾಮಾನ್ಯವಾಗಿ ಗಂಟೆಗಳ ಸಿದ್ಧತೆ ಬೇಕು. ಇಸ್ರೇಲಿ, ಯುಎಸ್ ಪಡೆಗಳ ನಿಗಾ ನಡುವೆ ಅವು 'ಡೆತ್ ಟ್ರ್ಯಾಪ್'ಗಳಾಗಬಹುದು ಎಂದು ಓಪನ್ ಸೋರ್ಸ್ ಇಂಟೆಲ್ (@Osint613) ಮಾರ್ಚ್ 15, 2026ರ ಟ್ವೀಟ್‌ನಲ್ಲಿ ತಿಳಿಸಿತ್ತು. ಇದು ಇರಾನ್‌ನ ಪ್ರತಿಕ್ರಿಯೆಯಲ್ಲಿನ ಹೆಚ್ಚಳವನ್ನು ಸೂಚಿಸುತ್ತದೆ.
ಸೆಜ್ಜಿಲ್ ಮಿಸೈಲ್ ಎಂದರೇನು?
ಇನ್ನು ಸೆಜ್ಜಿಲ್ ಇರಾನ್‌ನ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಮಿಸೈಲ್. ಆಗಿದೆ. ಇದು ಎರಡು ಹಂತಗಳ ಮಿಸೈಲ್ ಆಗಿದುದ, ಸಾಲಿಡ್ ಫ್ಯೂಯೆಲ್‌ಅನ್ನು ಬಳಸಲಾಗುತ್ತದೆ. ಇನ್ನು ಈ ರೀತಿಯ ಘನ ಇಂಧನ ಹೊಂದಿರುವ ಮಿಸೈಲ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಉಡಾಯಿಸಬಹುದು. ಇದರಿಂದ ಪ್ರತಿದಾಳಿಗೆ ಲಭ್ಯವಿರುವ ಸಮಯವನ್ನು ಕಡಿಮೆ ಮಾಡುತ್ತದೆ.
ಸೆಜ್ಜೀಲ್ (ಸೆಜ್ಜೀಲ್, ಆಶೌರಾ ಅಥವಾ ಆಶುರಾ ಎಂದೂ ಕರೆಯಲಾಗುತ್ತದೆ) ಇರಾನ್‌ನ ಸ್ವದೇಶಿ ನಿರ್ಮಿತ ಎರಡು-ಹಂತದ, ಘನ-ಪ್ರೊಪೆಲ್ಲೆಂಟ್ ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದನ್ನು ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (MRBM) ಎಂದು ವರ್ಗೀಕರಿಸಲಾಗಿದೆ. ಇದರ ಅಂದಾಜು ವ್ಯಾಪ್ತಿ 2,000 ಕಿಲೋಮೀಟರ್ ಹಾಗೂ ಪೇಲೋಡ್ ಸಾಮರ್ಥ್ಯ ಸುಮಾರು 700 ಕಿಲೋಗ್ರಾಂಗಳು.
ಈ ಘನ-ಇಂಧನ ವಿನ್ಯಾಸವು, ಹಳೆಯ ಲಿಕ್ವಿಡ್-ಇಂಧನ ವ್ಯವಸ್ಥೆಗಳಿಗಿಂತಲೂ ವೇಗವಾಗಿ ಉಡಾವಣೆ ಮಾಡಬಹುದು. CSIS ಪ್ರಕಾರ, ಸಜ್ಜೀಲ್ ಸುಮಾರು 18 ಮೀಟರ್ ಉದ್ದ, 1.25 ಮೀಟರ್ ವ್ಯಾಸ ಮತ್ತು 23,600 ಕಿಲೋಗ್ರಾಂ ತೂಕವನ್ನು ಹೊಂದಿದೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮಿಲಿಟರಿ, ಪರಮಾಣು ಸೌಲಭ್ಯಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆರಂಭವಾಗಿದೆ. ಇದಕ್ಕೆ ಪ್ರತಿದಾಳಿಯಾಗಿ, ಇರಾನ್, ಇಸ್ರೇಲ್ ಹಾಗೂ ಗಲ್ಫ್ ಪ್ರದೇಶದಲ್ಲಿ ಯುಎಸ್‌ಗೆ ಸಂಬಂಧಿಸಿದ ಮಿಲಿಟರಿ ನೆಲೆಗಳ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುತ್ತಲೇ ಇದೆ. ಇದೀಗ ಸಜ್ಜೀಲ್ ಮಿಸೈಲ್ ಮೂಲಕ ತನನ್ ಕಾರ್ಯಾಚರಣೆಯನ್ನು ಆರಂಭಿಸಿದೆ.


Click it and Unblock the Notifications