ಮಧ್ಯಪ್ರಾಚ್ಯದಲ್ಲಿ (Middle East) ದಿನ ಕಳೆದಂತೆ ಸಂಘರ್ಷ ತೀವ್ರವಾಗುತ್ತಿದೆ. ಇರಾನ್-ಯುಎಸ್-ಇಸ್ರೇಲ್ ನಡುವಿನ ಕದನ, ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಉದ್ವಿಗ್ನತೆ ತೀವ್ರವಾಗುತ್ತಿರುವ ಹಿನ್ನೆಲೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಅವರು ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿರುವ ಅಮೆರಿಕನ್ನರಿಗೆ (Americans) "ಗಂಭೀರ ಸುರಕ್ಷತಾ ಅಪಾಯಗಳ" ಕಾರಣದಿಂದ "ಕೂಡಲೇ ಅಲ್ಲಿಂದ ನಿರ್ಗಮಿಸುವಂತೆ" ಕರೆ ನೀಡಿದ್ದಾರೆ. ಇರಾನ್, ಯು.ಎ.ಇ, ದುಬೈ (Iran, UAE, Dubai) ಸೇರಿದಂತೆ ಪರ್ಷಿಯನ್ ಗಲ್ಫ್‌ನಲ್ಲಿರುವ ಇತರೆ ನಗರಗಳ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಪ್ರತಿದಾಳಿ ನಡೆಸಿದ್ದು, ಮತ್ತಷ್ಟು ಭೀಕರ ದಾಳಿಗಳು ನಡೆಯಬಹುದು ಎಂಬ ನಿರೀಕ್ಷೆಯಿಂದ ಖಡಕ್ ಎಚ್ಚರಿಕೆ ನೀಡಿದೆ.

ಅಮೆರಿಕನ್ನರಿಗೆ ಖಡಕ್ ಎಚ್ಚರಿಕೆ!
ಅಮೆರಿಕ ಸರ್ಕಾರದ ವಿದೇಶಾಂಗ ಇಲಾಖೆ ಇದೀಗ ತುರ್ತು ಭದ್ರತಾ ಎಚ್ಚರಿಕೆ ನೀಡಿದೆ. ಮಧ್ಯಪ್ರಾಚ್ಯದ 14 ಕ್ಕೂ ಅಧಿಕ ದೇಶಗಳಲ್ಲಿರಿವ ಅಮೆರಿಕನ್ ನಾಗರಿಕರನ್ನು ತಕ್ಷಣವೇ ಹೊರಡಿ (DEPART NOW) ಎಂದು ಘೋಷಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಇತ್ತೀಚೆಗೆ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಿಂದಾಗಿ ಸರ್ವೊಚ್ಛ ನಾಯಕ ಆಯತೊಲ್ಲಾ ಖಮೇನಿ ಸೇರಿ, ಹಲವಾರು ಸಾವು-ನೋವುಗಳು ಸಂಭವಿಸಿದೆ. ಅಲ್ಲದೇ ಇದೀಗ ಇರಾನ್ ಕೂಡಾ ಪ್ರತೀಕಾರದ ದೃಷ್ಟಿಯಿಂದ ಯುಎಸ್ ರಾಯಭಾರ ಕಚೇರಿಗಳ ಮೇಲೆ, ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸುತ್ತಿದೆ.
ಸೋಮವಾರ ಇರಾನ್, ಯುಎಇ, ದುಬೈ ಮತ್ತು ಇತರ ಗಲ್ಫ್ ನಗರಗಳ ಮೇಲೆ ದಾಳಿ ಮಾಡಿದ ನಂತರ ಈಜಿಪ್ಟ್ ಸೇರಿದಂತೆ ಮಧ್ಯಪ್ರಾಚ್ಯದ ಹಲವಾರು ದೇಶಗಳಿಂದ ಅಮೆರಿಕನ್ನರಿಗೆ "ಈಗಲೇ ಹೊರಡುವಂತೆ" ರುಬಿಯೊ ಆದೇಶ ನೀಡಿದ್ದಾರೆ. STEP (Smart Traveler Enrollment Program) ಎಚ್ಚರಿಕೆಗಳನ್ನು ಸ್ವೀಕರಿಸಲು ನೋಂದಾಯಿಸಿಕೊಳ್ಳುವಂತೆ ಮತ್ತು ವಾಣಿಜ್ಯ ಸಾರಿಗೆಯನ್ನು ಬಳಸಿಕೊಂಡು ಈ ದೇಶಗಳನ್ನು ತೊರೆಯುವಂತೆ ಅವರು ಸಲಹೆ ನೀಡಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ವೀಡಿಯೊ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ, "ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕಾದ ನಾಗರಿಕರಿಗೆ: ನಿಮ್ಮ ಸುರಕ್ಷತೆ ಮತ್ತು ಭದ್ರತೆ ನಮ್ಮ ಪ್ರಮುಖ ಆದ್ಯತೆ. http://step.state.gov ನಲ್ಲಿ STEP ಎಚ್ಚರಿಕೆಗಳನ್ನು ಸ್ವೀಕರಿಸಲು ನೋಂದಾಯಿಸಿಕೊಳ್ಳಿ. @TravelGov ನಲ್ಲಿ ಮಾಹಿತಿ ಪಡೆಯಿರಿ. ನೀವು ಇಲಾಖೆಯನ್ನು ಯಾವುದೇ ಸಮಯದಲ್ಲಿ +1-202-501-4444 ಗೆ ಸಂಪರ್ಕಿಸಬಹುದು" ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ, ಅಮೆರಿಕಾದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯು ಇಲಾಖೆಯ ಉನ್ನತ ಆದ್ಯತೆ ಎಂದು ರುಬಿಯೊ ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ಈ ಕೆಳಗಿನ ದೇಶಗಳಿಗೆ ಭದ್ರತಾ ಎಚ್ಚರಿಕೆಗಳನ್ನು ಬಿಡುಗಡೆ ಮಾಡಿದ್ದು, ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ವೆಸ್ಟ್ ಬ್ಯಾಂಕ್, ಗಾಜಾ, ಜೋರ್ಡಾನ್, ಲೆಬನಾನ್, ಓಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್. "ಗಂಭೀರ ಸುರಕ್ಷತಾ ಅಪಾಯಗಳ" ಕಾರಣದಿಂದ "ಕೂಡಲೇ ಅಲ್ಲಿಂದ ನಿರ್ಗಮಿಸುವಂತೆ" ಅಮೆರಿಕನ್ನರಿಗೆ ರುಬಿಯೊ ಸಲಹೆ ನೀಡಿದ್ದಾರೆ.


Click it and Unblock the Notifications