ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು ಬೆಳೆಯುತ್ತಿರುವ ಮಯಾನಗರಿ. ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಬೆಳವಣಿಗೆಗೆ ಹಲವಾರು ಅವಕಾಶಗಳು ಇರುವ ಕಾರಣ, ನಗರವು ಪ್ರಪಂಚದಾದ್ಯಂತದ ಅನೇಕ ಜನರನ್ನು ಸೆಳೆಯುತ್ತದೆ.
ಐಟಿ ಉದ್ಯಮದ ಕೇಂದ್ರವೆಂದು ಪರಿಗಣಿಸಲ್ಪಟ್ಟ ಬೆಂಗಳೂರು ನಾವೀನ್ಯತೆಗಾಗಿ ಅತ್ಯಂತ ಮಹತ್ವದ ಸ್ಥಳಗಳಲ್ಲಿ ಒಂದಾಗಿದೆ. IBM, Microsoft, ಮತ್ತು Google ನಂತಹ ಸಂಸ್ಥೆಗಳು ಬೆಂಗಳೂರಿನಲ್ಲಿ ದೊಡ್ಡ ಕಚೇರಿಗಳನ್ನು ಸ್ಥಾಪಿಸಿವೆ. ಅಷ್ಟೇ ಅಲ್ಲ; ಹಲವಾರು ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮಿಗಳು ಇಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಒಂದು ಬೃಹತ್ ಪರಿವರ್ತನೆಗೆ ಸಾಕ್ಷಿಯಾಗಿದ್ದು, ಇದು ಅತ್ಯಂತ ಲಾಭದಾಯಕ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.

ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ನಗರದಲ್ಲಿ ಸಾಕಷ್ಟು ಯೋಜನೆಗಳಿವೆ, ಮತ್ತು ಮಾರುಕಟ್ಟೆ ಬೆಳೆದಂತೆ ಬೇಡಿಕೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಈಗ ಆಸ್ತಿಯನ್ನು ಖರೀದಿಸಿದರೆ, ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದೆಂಬ ಕಾರಣಕ್ಕೆ ಹೆಚ್ಚಿನ ಜನ ಬೆಂಗಳೂರಿನಲ್ಲಿ ಹೂಡಿಕೆಯತ್ತ ಒಲವು ತೋರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರ ಗಮನಿಸಿದ್ರೆ ಹೂಡಿಕೆದಾರರಿಗೆ ಕನಕಪುರ ರಸ್ತೆ ಅದರಲ್ಲೂ ವಿಶೇಷವಾಗಿ ಹಾರೋಹಳ್ಳಿ ಅಸುಪಾಸಿನ ಪ್ರದೇಶಗಳು ಹಾಟ್ ಫೇವರೆಟ್ ಪ್ರದೇಶವಾಗಿದೆ.
ಈ ಪ್ರದೇಶದ ಬೆಳೆಯುತ್ತಿರುವ ಜನಪ್ರಿಯತೆಗೆ ಹಲವಾರು ಅಂಶಗಳು ಕೊಡುಗೆ ನೀಡುತ್ತವೆ. "ಮೊದಲನೆಯದಾಗಿ, ಕನಕಪುರ ರಸ್ತೆಯು ಜಯನಗರ, ಬನಶಂಕರಿ ಮತ್ತು ಇತರ ಪ್ರಮುಖ ನೆರೆಹೊರೆಗಳಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಸುಲಭ ಸಾಧ್ಯವಾಗಿದೆ. ಇದರೊಂದಿಗೆ ಈಗಾಗಲೇ ಇಲ್ಲಿ ವಾಣಿಜ್ಯ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡಿರುವುದರಿಂದ ವೃತ್ತಿಪರರಿಗೆ ಅಥವಾ ಮಕ್ಕಳಿರುವ ಕುಟುಂಬಗಳು ಈ ಸ್ಥಳವನ್ನು ಆಯ್ಕೆ ಮಾಡಲು ಇಚ್ಚಿಸುತ್ತಾರೆ.
ಎರಡನೆಯದಾಗಿ, ಇತರ ಪ್ರಮುಖ ರಸ್ತೆಗಳಿಗೆ ಹೋಲಿಸಿದರೆ, ಕನಕಪುರ ರಸ್ತೆಯಲ್ಲಿ ಆಸ್ತಿ ಬೆಲೆಗಳು ಸಾಂಪ್ರದಾಯಿಕವಾಗಿ ಹೆಚ್ಚು ಕೈಗೆಟುಕುವ ದರದಲ್ಲಿವೆ.
ಮೂರನೆಯದಾಗಿ, ರಸ್ತೆ ಸೇರಿದಂತೆ ವಸತಿ ಯೋಜನೆಗಳಲ್ಲಿ ಹೆಚ್ಚಿನ ಅಭಿವೃದ್ದಿ ಇಲ್ಲಿ ಕಂಡುಬಂದಿದೆ. ಐಷಾರಾಮಿ ಅಪಾರ್ಟ್ಮೆಂಟ್ ಗಳು, ಗೇಟೆಡ್ ಸಮುದಾಯಗಳು ಮತ್ತು ಇಂಡಿಪೆಂಡೆಟ್ ಮನೆಗಳು ಹೀಗೆ ಅವರವರ ಅನುಕೂಲತೆಗೆ ತಕ್ಕಂತೆ ಇಲ್ಲಿ ಹೂಡಿಕೆ ಮಾಡಬಹುದಾಗಿದೆ. ಶಾಪಿಂಗ್ ಮಾಲ್‌ಗಳು, ಕಛೇರಿಗಳು ಮತ್ತು ಮನರಂಜನಾ ಕೇಂದ್ರಗಳು ಸೇರಿದಂತೆ ವಾಣಿಜ್ಯ ಬೆಳವಣಿಗೆಗಳಲ್ಲಿ ಸ್ಥಿರವಾದ ಬೆಳವಣಿಗೆ ಇದೆ. ಈ ಕಾರಣಕ್ಕಾಗಿ ಹೂಡಿಕೆದಾರರಿಗೆ ಈ ಪ್ರದೇಶ ಹೆಚ್ಚಾಗಿ ಆಕರ್ಷಿಸುತ್ತಿದೆ.
ನಾಲ್ಕನೆಯದಾಗಿ, ಕನಕಪುರ ರಸ್ತೆಯು ನಗರದ ಪ್ರಮುಖ ಪ್ರದೇಶಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚು ಹಚ್ಚ ಹಸಿರಿನಿಂದ ಕೂಡಿದ್ದು, ಇಲ್ಲಿ ಜನದಟ್ಟಣೆ ಕಡಿಮೆ ಇದೆ. ಈ ಕಾರಣಕ್ಕಾಗಿ ಈ ಪ್ರದೇಶದಲ್ಲಿ ಆಸ್ತಿ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ" ಎನ್ನುತ್ತಾರೆ ಸ್ಥಿರಾಸ್ತಿಯ ಏಜೆಂಟುದಾರರಾಗಿರುವ ದೇವರಾಜಗೌಡ.
ಒಟ್ಟಾರೆ ಸುಮಾರು 20 ವರ್ಷಗಳ ಹಿಂದೆ ಒಂದು ಸಣ್ಣ ಗ್ರಾಮದಂತೆ ಇದ್ದ ಹಾರೋಹಳ್ಳಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಸುಮಾರು 60 ವರ್ಷಗಳ ಹಿಂದೆ ಮೂರು ಬೀದಿಗಳಿಂದ ಕೂಡಿದ್ದ ಹಳ್ಳಿ ನಂತರದ ದಿನಗಳಲ್ಲಿ ಸರ್ಕಾರ ನಿವೇಶನ ಹಂಚಿಕೆಮಾಡಿ ದೊಡ್ಡದಾಗಿ ಬೆಳೆಯುವಂತೆ ಮಾಡಿದೆ. ಇಂದು ಏಷ್ಯಾದಲ್ಲಿ ದೊಡ್ಡದಾದ ಬೃಹತ್ ಕೈಗಾರಿಕಾ ಪ್ರದೇಶ ಹಾರೋಹಳ್ಳಿಯಲ್ಲಿ ಸ್ಥಾಪನೆಯಾಗಿದ್ದು , ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಆರುವರಹಳ್ಳಿ
ಎಂದು ಸ್ಥಾಪನೆಯಾದ ಹಾರೋಹಳ್ಳಿ ಬೃಹದಾಕಾರವಾಗಿ ಬೆಳೆದು ತನ್ನ ಮಹತ್ವ ವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಇಲ್ಲಿ ಆಗುತ್ತಿರುವ ಮೂಲಸೌಕರ್ಯ ಸುಧಾರಣೆಗಳು, ಈ ಪ್ರದೇಶವನ್ನು ಆಧುನಿಕ, ಸುಸಜ್ಜಿತ ನಗರ ಕಾರಿಡಾರ್ ನಂತೆ ಪರಿವರ್ತಿಸುತ್ತಿದೆ. ಈ ಬೆಳವಣಿಗೆಗಳಲ್ಲಿ ಗಮನಾರ್ಹವಾದುದೆಂದರೆ ಹಾರೋಹಳ್ಳಿ ಮತ್ತು ಕನಕಪುರದಲ್ಲಿ ಹೊಸ ಬೈಪಾಸ್‌ಗಳು. ಹಾರೋಹಳ್ಳಿ ಬೈಪಾಸ್ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಈ ಎಲ್ಲಾ ಕಾರಣಕ್ಕೆ ಅನೇಕರು ಬೆಂಗಳೂರಿನಲ್ಲಿ ತಮ್ಮದೊಂದು ಸ್ವಂತ ಸೂರು ಇರಲಿ ಎಂದು ಇತ್ತ ಕಡೆ ಹೆಚ್ಚು ಗಮನಹರಿಸಿದ್ರೆ, ಇನ್ನು ಕೆಲವರು ಈಗ ಆಸ್ತಿಯನ್ನು ಖರೀದಿಸಿದರೆ, ನೀವು ಅದನ್ನು ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂಬ ಲೆಕ್ಕಚಾರದಲ್ಲಿ ಇಲ್ಲಿನ ಆಸ್ತಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications