ದೇಶ ಮುಂದುವರೆಯಬೇಕಾದರೆ ಆ ದೇಶದ ಜನರಿಗೆ ಸರಿಯಾದ ಶಿಕ್ಷಣ, ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಸೂಕ್ತ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವು ಅತ್ಯಗತ್ಯವಾಗಿದೆ. ಅದೇ ರೀತಿ ದೇಶ ಅಭಿವೃದ್ದಿ ಹೊಂದಲು ಆ ದೇಶದ ಜನತೆ ಸರಿಯಾದ ಸಮಯಕ್ಕೆ ಹಾಗೂ ತಮ್ಮ ಆದಾಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸುವುದು ಕೂಡ ಬಹು ಮುಖ್ಯವಾಗಿದೆ. ಒಂದು ದೇಶದ ಜನತೆ ಸರಿಯಾದ ಸಮಯಕ್ಕೆ ತೆರಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿದ್ದರೆ ಅದು ಪರೋಕ್ಷ ರೂಪದಲ್ಲಿ ಅದೇ ವ್ಯಕ್ತಿಗೆ ಯಾವುದೋ ಇತರೆ ರೂಪದಲ್ಲಿ ಲಭಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ನಾವು ಸಾಮಾನ್ಯವಾಗಿ ದೈನಂದಿನ ಜೀವನದಲ್ಲಿ ಪಾವತಿಸುವ ವಸ್ತುಗಳ ಮೇಲಿನ ತೆರಿಗೆಯಿಂದ ಸರ್ಕಾರವು ಆ ಹಣವನ್ನು ಮೂಲಭೂತ ಸೌಕರ್ಯಗಳಿಗೆ ಉಪಯೋಗಿಸುತ್ತದೆ. ಈ ಮೂಲಕ ಜನತೆ ಅ ಮೂಲಕ ಕೂಡ ಲಾಭ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ತೆರಿಗೆ ಪಾವತಿ ಉತ್ತಮ ಕ್ರಮವೆಂದರೆ ತಪ್ಪಾಗಲಾರದು. ಅದೇ ರೀತಿ ಸದ್ಯ ತೆರಿಗೆಯಲ್ಲಿ ಕೂಡ ಅನೇಕ ರೀತಿ ಇದೆ. ಆದಾಯ ತೆರಿಗೆ ಕೂಡ ಅವುಗಳಲ್ಲಿ ಒಂದಾಗಿದೆ. ಸದ್ಯ ಅಡ್ವಾನ್ಸ್‌ಡ್ ಟ್ಯಾಕ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದೆ. ಇನ್ನು ಸದ್ಯ ಮುಂಗಡ ತೆರಿಗೆಯ ಮೂರನೇ ಕಂತು ಈಗಾಗಲೇ ಅಂದರೆ ಡಿಸೆಂಬರ್ 15ರಂದು ಇದ್ದಿದ್ದು, ತೆರಿಗೆದಾರರು ಇದರ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಇನ್ನು ಇಲ್ಲಿ ದಂಡದಿಂದ ಪಾರಾಗುವ ನಿಟ್ಟಿನಲ್ಲಿ ಮುಂಗಡ ತೆರಿಗೆಯನ್ನು ಸಾಮಾನ್ಯವಾಗಿ ʻನೀವು ಗಳಿಸಿದಂತೆ ಪಾವತಿಸುವ ತೆರಿಗೆʼ ಎಂದು ಉಲ್ಲೇಖಿಸಲಾಗುತ್ತದೆ.
ಮುಂಗಡ ತೆರಿಗೆಯನ್ನು ಯಾರು ಪಾವತಿಸಬೇಕು?
ಸಾಮಾನ್ಯವಾಗಿ ಮುಂಗಡ ತೆರಿಗೆಯು ಕೇವಲ ಉದ್ಯಮಿಗಳಿಗೆ ಅಥವಾ ಕಾರ್ಪೋರೇಟ್‌ಗಳಿಗೆ ಮಾತ್ರ ಮೀಸಲು ಎಂಬ ಕಲ್ಪನೆಯನ್ನು ಕೆಲವರು ಹೊಂದಿರುತ್ತಾರೆ. ಆದರೆ ಒಂದು ಹಣಕಾಸು ವರ್ಷದಲ್ಲಿ TDS (ಮೂಲದಲ್ಲಿ ತೆರಿಗೆ ಕಡಿತ ) ಲೆಕ್ಕ ಹಾಕಿದ ನಂತರ ಅವರ ಅಂದಾಜು ಹೊಣೆಗಾರಿಕೆಯು 10,000 ರೂ. ಮೀರಿದರೆ ಸಂಬಳ ಪಡೆಯುವ ವ್ಯಕ್ತಿಗಳು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಅಥವಾ ಒಬ್ಬನ ವ್ಯವಹಾರದ ತೆರಿಗೆಯು ಪ್ರಸಕ್ತ ಹಣಕಾಸಿನಲ್ಲಿ ವರ್ಷದಲ್ಲಿ 10 ಸಾವಿರ ರೂ. ದಾಟಿದರೆ ಪಾವತಿಸುವ ತೆರಿಗೆಯಾಗಿದೆ. ವ್ಯಾಪಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವಿಲ್ಲದ ಹಿರಿಯ ನಾಗರಿಕರಿಗೆ ಈ ತೆರಿಗೆ ಪದ್ದತಿಯಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ ವ್ಯಾಪಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವಿಲ್ಲದ ಹಿರಿಯ ನಾಗರಿಕರಿಗೆ ಈ ತೆರಿಗೆ ಪದ್ದತಿಯಿಂದ ವಿನಾಯಿತಿ ನೀಡಲಾಗುತ್ತದೆ. ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯು ಅಥವಾ ಆತನ ಕಂಪೆನಿಯು ಆದಾಯವನ್ನು ಗಳಿಸಿದಂತೆ ಅವರು ತಮ್ಮ ತೆರಿಗೆಯ ಹೊಣೆಗಾರಿಕೆಗಳಿಗೆ ಹೆಚ್ಚಿನ ಆದಾಯ ಪಡೆದುಕೊಳ್ಳುವುದನ್ನು ಮುಂಗಡ ತೆರಿಗೆ ಕಾರ್ಯವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. 2024-25 ರ ಹಣಕಾಸು ವರ್ಷಕ್ಕೆ, ಮುಂಗಡ ತೆರಿಗೆಯ ಮೂರನೇ ಕಂತಿನ ಗಡುವು ಡಿಸೆಂಬರ್ 15 ಆಗಿತ್ತು. ಇನ್ನು ಸೋಮವಾರ ಅಂದರೆ ಡಿ.16ರಂದು ತಾಂತ್ರಿಕ ರೂಪದಲ್ಲಿ ತೆರಿಗೆ ಪಾವತಿಗಳನ್ನು ಮಾಡಬಹುದಾದರೂ, ಸಮಯೋಚಿತವಾಗಿ ಅನುಸರಿಸಬೇಕಾಗುತ್ತದೆ.

ತ್ರೈಮಾಸಿಕ ಪಾವತಿ ವೇಳಾಪಟ್ಟಿ
ಇನ್ನು ತೆರಿಗೆದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮುಂಗಡ ತೆರಿಗೆ ಪಾವತಿಗಳನ್ನು ನಾಲ್ಕು ಕಂತುಗಳಾಗಿ ವಿಂಗಡಿಸಲಾಗಿದೆ. ಅದರಂತೆ ವೇಳಾಪಟ್ಟಿ ಹೀಗಿದೆ:
ಜೂನ್ 15: ಒಟ್ಟು ತೆರಿಗೆ ಹೊಣೆಗಾರಿಕೆಯ 15 ಪ್ರತಿಶತವಾಗಿದೆ.
ಸೆಪ್ಟೆಂಬರ್ 15: ಒಟ್ಟು ಹೊಣೆಗಾರಿಕೆಯ 45 ಪ್ರತಿಶತವನ್ನು ಹೊಂದಿದೆ. (ಸಂಚಿತ)
ಡಿಸೆಂಬರ್ 15: ಒಟ್ಟು ಹೊಣೆಗಾರಿಕೆಯ 75 ಪ್ರತಿಶತವನ್ನು ಹೊಂದಿದೆ. (ಸಂಚಿತ)
ಮಾರ್ಚ್ 15: ಒಟ್ಟು ಹೊಣೆಗಾರಿಕೆಯ 100 ಪ್ರತಿಶತವಾಗಿದೆ.
ಸಾಮಾನ್ಯವಾಗಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ಉದ್ಯೋತದಾರರು ತೆರಿಗೆ ಕಡಿತಗೊಳಿಸಿಯೇ ನೀಡುತ್ತಾರೆ. ಅಂಥ ವ್ಯಕ್ತಿಗಳು ಸ್ಥಿರ ಠೇವಣಿ ಅಥವಾ ಬಂಡವಾಳ ಲಾಭಗಳ ಬಡ್ಡಿಯಂತಹ ಹೆಚ್ಚುವರಿ ಆದಾಯದ ಸ್ಟ್ರೀಮ್‌ಗಳ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಹಾಗಾಗಿ ತೆರಿಗೆದಾರರು ತಮ್ಮ ಮುಂಗಡ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡುವಾಗ ಈ ಆದಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇನ್ನು ಅತ್ತ ಸ್ವ-ಉದ್ಯೋಗಿ ವ್ಯಕ್ತಿಗಳು ಅಥವಾ ವ್ಯವಹಾರಗಳು ಊಹೆಯ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆದರೆ ಅದು ವಿಭಿನ್ನ ರಚನೆಯನ್ನು ಹೊಂದಿದ್ದು, ಮಾರ್ಚ್ 15 ರೊಳಗೆ ಸಂಪೂರ್ಣ ಹೊಣೆಗಾರಿಕೆಯನ್ನು ಒಂದೇ ಬಾರಿಗೆ ಪಾವತಿಸಲು ಅವರಿಗೆ ಅವಕಾಶ ನೀಡುತ್ತದೆ.
ಮುಂಗಡ ತೆರಿಗೆಯನ್ನು ಹೇಗೆ ಪಾವತಿಸುವುದು
ಮುಂಗಡ ತೆರಿಗೆಯನ್ನು ಅಧಿಕೃತ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ www.incometax.gov.in. ಮೂಲಕ ಪಾವತಿಸಬಹುದು. ತೆರಿಗೆದಾರರು ತಮ್ಮ ಪ್ಯಾನ್‌ನೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಇದರಲ್ಲಿ "ಇ-ಪೇ ಟ್ಯಾಕ್ಸ್" ಅನ್ನು ಆಯ್ಕೆ ಮಾಡಿ ಮತ್ತು ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು (2025-26 FY 2024-25). ಇನ್ನು ಮುಂಗಡ ತೆರಿಗೆ (100) ಅನ್ನು ಪಾವತಿಯ ಪ್ರಕಾರವಾಗಿ ಆಯ್ಕೆ ಮಾಡಲಾಗಿದೆ ಎಂಬುದನ್ನು ಸರಿಯಾಗಿ ಗಮನಿಸಿಕೊಳ್ಳಿ.
ತೆರಿಗೆಯ ಡೆಡ್‌ಲೈನ್ ಮೀರಿದರೆ ಏನಾಗುತ್ತದೆ?
ನಿಗದಿತ ಗಡುವಿನೊಳಗೆ ಮುಂಗಡ ತೆರಿಗೆಯನ್ನು ಪಾವತಿಸಲು ವಿಫಲವಾದರೆ ಆದಾಯ ತೆರಿಗೆ ಕಾಯಿದೆಯಡಿ ವ್ಯಕ್ತಿಯು ದಂಡನೆಗೆ ಒಳಗಾಗಬಹುದು. ಒಂದು ವೇಳೆ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡುವ ವರೆಗೂ ಪ್ರತಿ ತಿಂಗಳಿಗೆ 1% ಬಡ್ಡಿಯನ್ನು ಯಾವುದೇ ಕೊರತೆ ಅಥವಾ ಪಾವತಿಸದಿರುವಿಕೆಗೆ ವಿಧಿಸಲಾಗುತ್ತದೆ. ಉದಾಹರಣೆಗೆ ತೆರಿಗೆ ಹೊಣೆಗಾರಿಕೆಯ 75 ಪ್ರತಿಶತವನ್ನು ಡಿಸೆಂಬರ್ 15 ರೊಳಗೆ ಪಾವತಿಸದಿದ್ದರೆ, ಸೆಕ್ಷನ್ 234C ಅಡಿಯಲ್ಲಿ ದಂಡದ ಬಡ್ಡಿ ಅನ್ವಯಿಸುತ್ತದೆ. ಅಲ್ಲದೆ ಮಾರ್ಚ್ 15 ರೊಳಗೆ 100 ಪ್ರತಿಶತ ಹೊಣೆಗಾರಿಕೆ ಪಾವತಿಸಲು ವಿಫಲವಾದರೆ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ. ತೆರಿಗೆ ಪಾವತಿಸದೇ ಉಳಿದಿದ್ದರೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮಾತ್ರ ತೆರವುಗೊಳಿಸಿದರೆ ವಿಳಂಬ ಮಾಡಿದ್ದಕ್ಕೆ ಸೆಕ್ಷನ್ 234B ಅಡಿಯಲ್ಲಿ ಹೆಚ್ಚುವರಿ 4% ಬಡ್ಡಿಯನ್ನು ವಿಧಿಸಲಾಗುತ್ತದೆ


Click it and Unblock the Notifications