ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಮೌಲ್ಯಮಾಪನ ಮಾಡುವ ಮೂಲಕ ಉದ್ಯೋಗಿಗಳ ಯೋಗಕ್ಷೇಮದ ಜಾಗತಿಕ ಶ್ರೇಯಾಂಕವನ್ನು ಬಿಡುಗಡೆ ಮಾಡಲಾಗಿದೆ. ಮೆಕಿನ್ಸೆ ಹೆಲ್ತ್ ಇನ್ಸ್ಟಿಟ್ಯೂಟ್ ನಡೆಸಿದ ಈ ಸಮೀಕ್ಷೆಯಲ್ಲಿ ಜಪಾನ್ ಕೊನೆಯ ಸ್ಥಾನದಲ್ಲಿದೆ.
ಗುರುವಾರ ಬಿಡುಗಡೆಯಾದ ಅಧ್ಯಯನದ ಪ್ರಕಾರ, 30 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಕಾರ್ಮಿಕರ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಶೇಕಡ 25ರಷ್ಟು ಜಪಾನ್ ಗಳಿಸಿದೆ. ಟರ್ಕಿಯು ಮೊದಲ ಸ್ಥಾನದಲ್ಲಿದೆ, ಭಾರತದ ಸ್ಥಾನದ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಭಾರತ ಯಾವ ಸ್ಥಾನದಲ್ಲಿ?
ಟರ್ಕಿ ಮೊದಲ ಸ್ಥಾನದಲ್ಲಿದ್ದು ಉದ್ಯೋಗಿಗಳ ಯೋಗಕ್ಷೇಮದ ವಿಚಾರದಲ್ಲಿ ಶೇಕಡ 78 ರಷ್ಟು, ಭಾರತ ಶೇಕಡ 76 ರಷ್ಟು ಮತ್ತು ಚೀನಾ ಶೇಕಡ 75 ರಷ್ಟು ಅಂಕವನ್ನು ಪಡೆದುಕೊಂಡಿದೆ. ಜಾಗತಿಕ ಸರಾಸರಿ ಶೇಕಡ 57 ಆಗಿದೆ.
ಜಪಾನಿನ ವ್ಯವಹಾರಗಳು ಉದ್ಯೋಗ ಮತ್ತು ಉದ್ಯೋಗ ಭದ್ರತೆಯನ್ನು ನೀಡಲು ಖ್ಯಾತಿಯನ್ನು ಗಳಿಸಿದ್ದರೂ ಸಹ, ಉದ್ಯೋಗಿಗಳು ಸಂತೋಷವಾಗಿರದಿದ್ದರೆ ಉದ್ಯೋಗಗಳನ್ನು ಬದಲಾಯಿಸಲು ಅತೀ ಕಷ್ಟವಾಗಿದೆ ಎಂಬುವುದು ಪ್ರಮುಖ ಕಾರಣವಾಗಿದೆ.
ಅಂತರರಾಷ್ಟ್ರೀಯ ಸಮೀಕ್ಷೆಗಳಲ್ಲಿ ಜಪಾನ್ ಸತತವಾಗಿ ಕಡಿಮೆ ರೇಟಿಂಗ್‌ಗಳನ್ನು ಹೊಂದಿದೆ. ಫಲಿತಾಂಶಗಳು ಅದನ್ನು ತೋರಿಸುತ್ತದೆ. ರೋಚೆಲ್ ಕಾಪ್, ಕಂಪನಿಗಳಿಗೆ ಕ್ರಾಸ್- ಕಲ್ಚರ್ ಕಮ್ಯೂನಿಕೇಷನ್ ಮತ್ತು ವ್ಯಾಪಾರ ಅಭ್ಯಾಸಗಳ ಬೆಳವಣಿಗೆಯನ್ನು ಮಾಡಲು ಸಲಹೆ ನೀಡಿದೆ.
ಎಂಎಸ್&ಎಡಿ ಇನ್ಶುರೆನ್ಸ್ ಗ್ರೂಪ್ ಹೋಲ್ಡಿಂಗ್ಸ್ ಇಂಕ್‌ನ ಮಂಡಳಿಯ ಸದಸ್ಯರೂ ಆಗಿರುವ ರೋಚೆಲ್ ಕಾಪ್, "ಜಪಾನ್‌ನಲ್ಲಿ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ತೃಪ್ತಿಯಿಲ್ಲ. ಸಾಕಷ್ಟು ಒತ್ತಡಗಳು ಇದೆ, ಸಾಕಷ್ಟು ಸಮಸ್ಯೆಗಳು ಕೂಡಾ ಜಪಾನ್‌ನಲ್ಲಿದೆ. ಆದ್ದರಿಂದಾಗಿ ಕಡಿಮೆ ರೇಟಿಂಗ್ ಪಡೆದುಕೊಂಡಿದೆ," ಎಂದು ಹೇಳಿದರು.
ಅದೇ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜಪಾನಿನ ಕಾರ್ಮಿಕರು ಅಲ್ಪಾವಧಿಯ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಅನಿಶ್ಚಿತತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಮೆಕಿನ್ಸೆ ಸಮೀಕ್ಷೆಯ ಪ್ರಕಾರ, ಉತ್ತಮ ಕೆಲಸದ ಅನುಭವ ಹೊಂದಿರುವ ಉದ್ಯೋಗಿಗಳು ಉತ್ತಮ ಆರೋಗ್ಯವನ್ನು ಕೂಡಾ ಹೊಂದಿದ್ದಾರೆ.
"ಹೆಚ್ಚಿನ ವಯಸ್ಕರಿಗೆ, ದೈನಂದಿನ ಜೀವನದಲ್ಲಿ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯಲಾಗುತ್ತದೆ," ಎಂದು ವರದಿಯ ಲೇಖಕರು ಬರೆದಿದ್ದಾರೆ. "ಇದು ಉದ್ಯೋಗದಾತರಿಗೆ ತಮ್ಮ ಉದ್ಯೋಗಿಗಳ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಮೇಲೆ ಪ್ರಭಾವ ಬೀರಲು ಅವಕಾಶವನ್ನು ನೀಡುತ್ತದೆ," ಎಂದು ಹೇಳಿದರು.


Click it and Unblock the Notifications