ಭಾರತದಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಇ, ಬಿಟೆಕ್ (B.E, BTech) ಹೀಗೆ ಮುಂದಾದ ಅಂಡರ್‌ಗ್ರಾಜುಯೇಟ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪ್ರಮುಖ ನೇಮಕಾತಿ ಪರೀಕ್ಷೆಯೇ ಜೆಇಇ ಮೇನ್. ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಈ Joint Entrance Examination (Main) 2026 ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಈಗಾಗಲೇ ಈ ಪರೀಕ್ಷೆಯ ಅಂತಿಮ ಉತ್ತರಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ವರದಿ ಪ್ರಕಾರ, ಬಿಡುಗಡೆಯಾದ ಪಿಡಿಎಫ್‌ನಲ್ಲಿ 9 ಪ್ರಶ್ನೆಗಳನ್ನು ಡ್ರಾಪ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿದೆ. ಆದ್ದರಿಂದ ಈ ಉತ್ತರ ಕೀಲಿಯ ಆಧಾರದ ಮೇಲೆ ಅಭ್ಯರ್ಥಿಗಳ ಅಂಕಗಳನ್ನು ಲೆಕ್ಕಹಾಕಲಾಗುತ್ತದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ.
ಲಕ್ಷಗಟ್ಟಲೆ ಅಭ್ಯರ್ಥಿಗಳು ಭಾಗಿ!
ಅಧಿಕೃತ ಸೂಚನೆಯ ಪ್ರಕಾರ, ಬಿಡುಗಡೆಯದ ಉತ್ತರ ಪತ್ರಿಕೆ ಜನವರಿ 21 ರಿಂದ ಜನವರಿ 28, 2026 ರವರೆಗೆ ನಡೆದ ಪರೀಕ್ಷೆಗಳಿಗೆ ಸಂಬಂಧಿಸಿದ್ದಾಗಿದೆ. ಇನ್ನು ಈ ಬಾರಿಯ ಜೆಇಇ ಮೇನ್ 2026ರ ಪರೀಕ್ಷೆಯಲ್ಲಿ 13.5 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದಾರೆ ಎನ್ನಲಾಗಿದೆ. ಇದೀಗ ಅಭ್ಯರ್ಥಿಗಳು ಅಂಕಪಟ್ಟಿಗಾಗಿ ಕಾತುರದಿಂದ ಕಾದು ಕುಳಿತಿದ್ದಾರೆ. ಆದ್ದರಿಂದ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಅಭ್ಯರ್ಥಿಗಳು ತಮ್ಮ ಮಾರ್ಕ್ಸ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ಜೆಇಇ ಫಲಿತಾಂಶ ಎಲ್ಲಿ ನೋಡಬಹುದು?
ಅಭ್ಯರ್ಥಿಗಳು ತಮ್ಮ ಜೆಇಇ ಮುಖ್ಯ ಫಲಿತಾಂಶಗಳನ್ನು jeemain.nta.nic.in ವೆಬ್‌ಸೈಟ್ ಮೂಲಕ ಚೆಕ್ ಮಾಡಬಹುದು. ಫಲಿತಾಂಶದ ಲಿಂಕ್ ಆಕ್ಟಿವ್ ಆದ ನಂತರ, ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಲಾಗಿನ್ ಆಗಿ ಮಾರ್ಕ್ಸ್ ಕಾರ್ಡ್ ಡೌನ್‌ಲೋಡ್ ಮಾಡುವ ಅವಕಾಶವಿರುತ್ತದೆ. ಆನ್‌ಲೈನ್‌ನಲ್ಲಿ ಅಂಕಪಟ್ಟಿಗಳನ್ನು ಪಡೆದುಕೊಳ್ಳಲು ಈ ವಿವರಗಳು ಅತ್ಯಗತ್ಯವಾಗಿವೆ.
ಫಲಿತಾಂಶ ಪ್ರಕಟಣೆ ದಿನಾಂಕ ಬದಲಾವಣೆ!
ಫಲಿತಾಂಶಗಳನ್ನು ಮೊದಲು ಫೆಬ್ರವರಿ 12 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ನಿರೀಕ್ಷೆಲಾಗಿತ್ತು, ಆದರೆ ನಂತರದಲ್ಲಿ ಪ್ರಕಟಣೆ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಇಂದು (ಫೆ.16) ಜೆಇಇ ಮೇನ್-1 ಪರೀಕ್ಷೆಯ ಫಲಿತಾಂಶ ಹೊರಬರಲಿದೆ.
ಫಲಿತಾಂಶ ಪ್ರಕಟಣೆ ಸಮಯ:
ಇನ್ನು ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ, ಇದುವರೆಗೆ ಯಾವುದೇ ಅಧಿಕೃತ ಸಮಯವನ್ನು ಎನ್‌ಟಿಎ ಇನ್ನೂ ಖಚಿತಪಡಿಸಿಲ್ಲ. ಹಿಂದಿನ ಅಧಿವೇಶನಗಳಲ್ಲಿ, ಫಲಿತಾಂಶಗಳನ್ನು ಸಾಮಾನ್ಯವಾಗಿ ಸಂಜೆ ಅಥವಾ ತಡರಾತ್ರಿ ವೇಳೆಗೆ ಘೋಷಿಸಲಾಗಿತ್ತು. ನಿರಂತರ ಅಪ್‌ಡೇಟ್‌ಗಾಗಿ ಜೆಇಇ ವೆಬ್‌ಸೈಟ್ ಚೆಕ್ ಮಾಡುತ್ತಿರುವಂತೆ ಸೂಚಿಸಲಾಗಿದೆ.
ಜೆಇಇ ಪರೀಕ್ಷೆ ಎಂದರೇನು?
ಜೆಇಇ ಎಂದರೆ Joint Entrance Examination. ಇದು ಭಾರತದಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಸುವ ರಾಷ್ಟ್ರೀಯ ಮಟ್ಟದ ಪ್ರವೇಶಾತಿ ಪರೀಕ್ಷೆಯಾಗಿದೆ. ಇದನ್ನು ಎನ್‌ಟಿಎ (National Testing Agency) ನೇತೃತ್ವದಲ್ಲಿ ನಡೆಸಲಾಗುತ್ತದೆ. ಇನ್ನು ಈ ಮೇನ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಈಗಾಗಲೇ 2026 ರಲ್ಲಿ ಜನವರಿ 21 ರಿಂದ 29ರವರೆಗೆ ನಡೆದಿದೆ. ಇದೀಗ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾದು ಕುಳಿತಿದೆ.


Click it and Unblock the Notifications