ಬೆಂಗಳೂರಿನ ಉಪನಗರ ರೈಲ್ವೆ ಯೋಜನೆ ಬಹು ನಿರೀಕ್ಷಿತ ಯೋಜನೆಯಾಗಿದೆ. ಉಪನಗರ ರೈಲ್ವೆ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಯೋಜನೆ ಈಗ ಜಿಂದಾಲ್ ಸ್ಟೀಲ್ ಕಂಪನಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಅದೇನೆಂದರೆ ಈ ಮಹತ್ವದ ಯೋಜನೆಗೆ ಅಗತ್ಯವಿರುವ ರೈಲು ಹಳಿಗಳನ್ನು ಪೂರೈಸುವ ಟೆಂಡರ್ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಸಂಸ್ಥೆಗೆ ಸಿಕ್ಕಿದೆ. ಜಿಂದಾಲ್ ಕಂಪನಿಯು ಅತ್ಯಂತ ಕಡಿಮೆ ದರದ ಬಿಡ್ಡರ್ ಆಗಿ ಆಯ್ಕೆಯಾಗಿದೆ. ಈ ಬಗ್ಗೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸ್ ಅಧಿಕೃತ ಘೋಷಣೆ ಹೊರಡಿಸಿದೆ.

ಇನ್ನು ಈ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು ನಿನ್ನೆ ಮೊನ್ನೆಯಲ್ಲ. 2024ರಲ್ಲೇ ಆರಂಭವಾಗಿತ್ತು. ಟೆಂಡರ್ ಪ್ರಕ್ರಿಯೆಯು 365 ದಿನಗಳ ಒಳಗೆ ಪೂರೈಕೆ ಕಾರ್ಯ ಸಂಪೂರ್ಣಗೊಳ್ಳುವ ಗಡುವು ನಿಗದಿಯಾಗಿತ್ತು. ಇದರಲ್ಲಿ ತಾಂತ್ರಿಕ ಮತ್ತು ಹಣಕಾಸು ಮೌಲ್ಯಮಾಪನದ ಹಂತಗಳಿವೆ. ನವೆಂಬರ್ 13, 2024ರಂದು ತಾಂತ್ರಿಕ ಬಿಡ್‌ಗಳನ್ನು ತೆಗೆಯಲಾಯಿತು, ಆದರೆ ಕೇವಲ ಜಿಂದಾಲ್ ಸ್ಟೀಲ್ ಕಂಪನಿಯೇ ಬಿಡ್ ಸಲ್ಲಿಸಿತ್ತು. ಏಪ್ರಿಲ್ 5, 2025ರಂದು ತಾಂತ್ರಿಕ ಮೌಲ್ಯಮಾಪನ ನಡೆದಿದ್ದು, ಏಪ್ರಿಲ್ 11ರಂದು ಹಣಕಾಸು ಬಿಡ್‌ಗಳನ್ನು ತೆಗೆಯಲಾಯಿತು. ₹20.6 ಕೋಟಿಗೆ ಅವರು ಸಲ್ಲಿಸಿದ ಬಿಡ್ ಕಡಿಮೆ ದರ ಆಗಿದ್ದು, ಅದೇ ಕಂಪನಿಗೆ ಒಪ್ಪಂದ ದೊರಕಿತು.
ಒಪ್ಪಂದದಲ್ಲೇನಿದೆ..?
ಇನ್ನು ಈ ಒಪ್ಪಂದದ ಅನುಸಾರ, ಜಿಂದಾಲ್ ಸ್ಟೀಲ್ ಕಂಪನಿಯು IRS-T-12-2009 ಮಾನದಂಡಗಳನ್ನು ಆಧರಿಸಬೇಕಾಗಿದೆ. ಅದರ ಪ್ರಕಾರ 60E1 (UIC 60), 880 ಗ್ರೇಡ್ ರೈಲು ಹಳಿಗಳನ್ನು ಪೂರೈಸಬೇಕಾಗಿದೆ. ಪೂರೈಕೆಗಾಗುವ ಗಡುವು ವರ್ಷಗೊಂದು ದಿನವಾಗಿದ್ದು, ಯೋಜನೆ ಸಮಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಎಷ್ಟು ಕಿ.ಮೀ ಉದ್ದದ ರೈಲು ಯೋಜನೆ?
ಇದೀಗ ಇಲ್ಲಿ ಚರ್ಚೆಗೆ ಒಳಪಟ್ಟಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಬೃಹತ್ ಮಾದರಿಯ ಪ್ರಯಾಣಿಕ ರೈಲು ಜಾಲವೊಂದಾಗಿದ್ದು, ಒಟ್ಟು 149.348 ಕಿಲೋಮೀಟರ್ ಉದ್ದವಿದೆ. ಈ ಯೋಜನೆಗೆ ನಾಲ್ಕು ಪ್ರಮುಖ ಕಾರಿಡಾರ್‌ಗಳಾದ ಸಂಪಿಗೆ ಲೈನ್, ಮಲ್ಲಿಗೆ ಲೈನ್, ಪಾರಿಜಾತ ಲೈನ್ ಹಾಗೂ ಕನಕ ಲೈನ್ ಸೇರಿವೆ. ಪ್ರತಿಯೊಂದು ಮಾರ್ಗವು ಬೆಂಗಳೂರಿನ ವಿವಿಧ ಭಾಗಗಳನ್ನು ನಗರ ಸೀಮೆಗಳಲ್ಲಿ ಹಾಗೂ ಹೊರವಲಯಗಳಲ್ಲಿ ಸಂಪರ್ಕಿಸುತ್ತಿದ್ದು, ನಗರ ವಲಯದ ಪ್ರಯಾಣಿಕರ ಓಡಾಟವನ್ನು ಸುಗಮಗೊಳಿಸಲು ಈ ಯೋಜನೆಯು ರೂಪುಗೊಂಡಿದೆ.
ನಾಲ್ಕು ಪ್ರಮುಖ ಕಾರಿಡಾರ್‌ಗಳು ಯಾವುವು?
ಕಾರಿಡಾರ್ 1: ಸಂಪಿಗೆ ಲೈನ್
ಸಂಪಿಗೆ ಲೈನ್ ಒಂದನೇ ಕಾರಿಡಾರ್ ಆಗಿದೆ. ಈ ಮಾರ್ಗವು ಕೆಎಸ್‌ಆರ್ ಬೆಂಗಳೂರು ಜಂಕ್ಷನ್‍ನಿಂದ ಆರಂಭಗೊಂಡು ಯಲಹಂಕ ಮಾರ್ಗವಾಗಿ ದೇವನಹಳ್ಳಿವರೆಗೆ ವಿಸ್ತರಿಸುತ್ತದೆ. ಇದರ ಒಟ್ಟು ಉದ್ದ 41.478 ಕಿ.ಮೀ ಆಗಿದೆ. ಇದರಿಂದಾಗಿ ಬೆಂಗಳೂರು ನಗರದ ಉತ್ತರ ಭಾಗ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕ ಸುಧಾರಿಸುವ ನಿರೀಕ್ಷೆಯಿದೆ.
ಕಾರಿಡಾರ್ 2: ಮಲ್ಲಿಗೆ ಲೈನ್
ಇದು ಬೈಯ್ಯಪ್ಪನಹಳ್ಳಿ ಟರ್ಮಿನಲ್ ನಿಂದ ಚಿಕ್ಕಬಾಣಾವರವರೆಗೆ ಸಾಗುವ ಈ ಮಾರ್ಗವು 24.866 ಕಿ.ಮೀ ಉದ್ದವಿದ್ದು, ಪೂರ್ವ-ಪಶ್ಚಿಮ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ಕೆಲಸದ ನಿಮಿತ್ತ ದಿನನಿತ್ಯ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಕಾರಿಡಾರ್ 3: ಪಾರಿಜಾತ ಲೈನ್
ಇದು ಕೆಂಗೇರಿಯಿಂದ ವೈಟ್‌ಫೀಲ್ಡ್ ವರೆಗೆ ಸಾಗುವ ಈ ಮಾರ್ಗವು 35.52 ಕಿ.ಮೀ ಉದ್ದವಿದ್ದು, ಬೆಂಗಳೂರಿನ ಉದ್ಯಮ ವಲಯದ ಪ್ರಮುಖ ಭಾಗಗಳನ್ನು ಸಂಪರ್ಕಿಸುವ ಭರವಸೆಯೊಂದಿಗೆ ರೂಪುಗೊಂಡಿದೆ.
ಕಾರಿಡಾರ್ 4: ಕನಕ ಲೈನ್
ಹೀಲಲಿಗೆಯಿಂದ ರಾಜನಕುಂಟೆವರೆಗೆ ವಿಸ್ತಾರಗೊಂಡಿರುವ ಈ ಮಾರ್ಗವು 46.285 ಕಿ.ಮೀ ಉದ್ದವಿದೆ. ಇದು ನಾಡಪ್ರಭು ಕೆಂಪೇಗೌಡ ಬಡಾವಣೆಗಳ ಸಂಪರ್ಕ ಸುಧಾರಿಸುವ ನಿರೀಕ್ಷೆಯಲ್ಲಿದೆ. ಈ ಉಪನಗರ ರೈಲ್ವೆ ಯೋಜನೆಯು ನಿಗದಿತ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡರೆ, ಬೆಂಗಳೂರಿನ ಹತ್ತಿರದ ಜಿಲ್ಲೆಗಳು ಹಾಗೂ ಹೊರವಲಯಗಳಲ್ಲಿ ಜೀವನ ನಡೆಸುತ್ತಿರುವ ಲಕ್ಷಾಂತರ ಮಂದಿ ಪೌರರಿಗೆ ಉತ್ತಮ, ವೇಗದ, ಸುರಕ್ಷಿತ ಹಾಗೂ ಆಧುನಿಕ ಪ್ರಯಾಣ ಅನುಭವ ಲಭ್ಯವಾಗಲಿದೆ.
ಅಂದಹಾಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಬಗ್ಗೆ ಹೇಳುವುದೇ ಬೇಡ. ಇಂತಹ ಸಮಯದಲ್ಲಿ ಈ ಉಪನಗರ ರೈಲು ಯೋಜನೆ ಬಹುಪಾಲು ಯೋಜನೆ ನೀಡಬಲ್ಲದ್ದಾಗಿದೆ. ಈ ನಡುವೆ, ಇನ್ನುಮೆಟ್ರೋ 5ನೇ ಆವೃತ್ತಿಯು ಮುಂದಿನ ತಿಂಗಳು ನವದೆಹಲಿ ನಗರದ ಭಾರತ್ ಮಂಟಪದಲ್ಲಿ ನಡೆಯಲಿದ್ದು, ರೈಲು ಮೂಲಸೌಕರ್ಯ ಕ್ಷೇತ್ರದ ತಂತ್ರಜ್ಞಾನ, ನಾವೀನ್ಯತೆ, ಸುರಕ್ಷತೆ ಹಾಗೂ ಸಿಗ್ನಲಿಂಗ್ ವ್ಯವಸ್ಥೆಗಳ ಕುರಿತು ವ್ಯಾಪಕ ಪ್ರದರ್ಶನವಾಗಲಿದೆ.
ಅಂದಹಾಗೆ ಮುಂಬರುವ ಮೇ 21,22 ರವರೆಗೆ ನಡೆಯಲಿರುವ ಈ ಎಕ್ಸ್‌ಪೋದಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರು ಮತ್ತು ಉದ್ಯಮಗಳು ಹೊಸ ತಂತ್ರಜ್ಞಾನಗಳೊಂದಿಗೆ ಪರಿಚಿತರಾಗಬಹುದಾಗಿದೆ. ಸಾರಾಂಶವಾಗಿ, ಜಿಂದಾಲ್ ಸ್ಟೀಲ್ ಸಂಸ್ಥೆಯ ಹಳಿಗಳ ಪೂರೈಕೆ ಒಪ್ಪಂದ ಪ್ರಗತಿಯಲ್ಲಿ ಹೊರಹೊಮ್ಮಿದ್ದು, ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಮುಂದೆ ಇನ್ನೊಂದು ಮಹತ್ವದ ಮೈಲಿಗಲ್ಲು ಎಂಬಂತೆ ಪರಿಗಣಿಸಬಹುದು. ಮುಂದಿನ ಹಂತಗಳಲ್ಲಿ ನಿರ್ಮಾಣ ಕಾರ್ಯ ತ್ವರಿತಗೊಳ್ಳುವ ಸಾಧ್ಯತೆ ಇದ್ದು, ಬಹು ನಿರೀಕ್ಷಿತ ಯೋಜನೆ ಯಥಾಶೀಘ್ರ ಕಾರ್ಯರಂಗ ಪ್ರವೇಶಿಸುವ ನಿರೀಕ್ಷೆಯಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications