ಭಾರತದಲ್ಲಿ ಇಂಟರ್‍ನೆಟ್‌ನ ಹೊಸ ಕ್ರಾಂತಿ ಸೃಷ್ಟಿಸಲು ಜಿಯೋ ಮತ್ತು ಸ್ಟಾರ್‍ಲಿಂಕ್ ಒಪ್ಪಂಡ ಮಾಡಿಕೊಂಡಿದೆ..ಭಾರತದ ಮೂಲೆ ಮೂಲೆಗೂ ಸುಧಾರಿತ ಇಂಟರ್‍ನೆಟ್ ಒದಗಿಸುವುದೇ ಇದರ ಉದ್ದೇಶವಾಗಿದೆ. ಸರಿಯಾಗಿ ನೆಟ್‌ವರ್ಕ್ ಸಿಗಲ್ಲ ಅನ್ನೋ ಪದ ಕೇಳುವಂತಾಗಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಹೈಸ್ಪೀಡ್ ನೆಟ್‌ವರ್ಕ್ ಸಿಗಬೇಕು. ಇದೇ ಉದ್ದೇಶದಿಂದ ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗೆ ಜಿಯೋ ಮತ್ತು ಸ್ಟಾರ್‌ಲಿಂಕ್ ಪಾಲುದಾರಿಕೆ ಮಾಡಿಕೊಂಡಿದೆ.

ಹೌದು, ಭಾರತದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್, ಆರಂಭದಲ್ಲಿ ಉಚಿತ ಅನ್‌ಲಿಮಿಟೆಡ್ ಇಂಟರ್‍ನೆಟ್ ಸೇವೆ ಕೊಟ್ಟು ಇವತ್ತು ಒಂದು ಸ್ಥಾನ-ಮಾನ ಗಳಿಸಿರುವ ಕಂಪನಿಯಾಗಿದೆ. ಆಗ ಜಗತ್ತಿನ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಜೊತೆಗೂಡಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಭಾರತದ ಗ್ರಾಹಕರಿಗೆ ಒದಗಿಸಲು ಹೊಸ ಒಪ್ಪಂದವನ್ನು ಘೋಷಿಸಿದೆ.
ಇನ್ನು ಈ ಹೊಸ ಒಪ್ಪಂದದಿಂದ ಭಾರತದಲ್ಲಿ ನಿಯಂತ್ರಣ ಅನುಮೋದನೆಗಳಿಗೆ ಒಳಪಟ್ಟಿದೆ. ಇದಕ್ಕೆ ಸರ್ಕಾರದಿಂದ ಒಮ್ಮೆ ಅನುಮೋದನೆ ಸಿಕ್ಕಿತೆಂದರೆ, ಜಿಯೋ ಭಾರತದ ವಿವಿಧ ಭಾಗಗಳಲ್ಲಿ ಸ್ಟಾರ್‌ಲಿಂಕ್ ಉಪಕರಣಗಳನ್ನು ಮಾರಾಟ ಮಾಡಲಿದೆ. ಅಷ್ಟೇ ಅಲ್ಲದೇ ಗ್ರಾಹಕರಿಗೆ ಇಂಟರ್ನೆಟ್ ಸೇವೆ ಒದಗಿಸಲು ಸಹಾಯ ಮಾಡಲಿದೆ. ಜೊತೆಗೆ, ಜಿಯೋ ತನ್ನ ಸ್ವಂತ ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ ಆನ್‌ಲೈನ್ ಮಾರಾಟ ಚಾನಲ್‌ಗಳ ಮೂಲಕ ಸ್ಟಾರ್‌ಲಿಂಕ್ ಸೇವೆಯನ್ನು ವಿಸ್ತರಿಸಲು ಸಹಕರಿಸುತ್ತದೆ.
ಸ್ಟಾರ್‌ಲಿಂಕ್ ಸೇವೆಗಳ ಪ್ರಾಮುಖ್ಯತೆ ಏನು..?
ಈ ಸ್ಟಾರ್‍ಲಿಂಕ್ ಉಪಗ್ರಹ ಇಂಟರ್‍ನೆಟ್ ಸೇವೆಯು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಒದಗಿಸುತ್ತವೆ. ಇನ್ನೂ ಸರಳವಾಗಿ ಹೇಳುವುದಾದರೆ ಇಂಟರ್‍ನೆಟ್ ಸೇವೆ ಲಭ್ಯವಿಲ್ಲದ ದೂರದ ಪ್ರದೇಶಗಳಲ್ಲಿ, ಇದು ಸೇವೆ ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಉಪಗ್ರಹಗಳ ಮೂಲಕ ಡೇಟಾ ಪ್ರಸಾರ ಮಾಡುವ ತಂತ್ರಜ್ಞಾನವನ್ನು ಬಳಸುತ್ತದೆ. ಅಲ್ಲದೇ ಇದರಿಂದ ಹೆಚ್ಚು ವೇಗದ, ಕಡಿಮೆ ವಿಳಂಬದ ಇಂಟರ್ನೆಟ್ ಸೇವೆಯನ್ನು ನೀಡಬಹುದು. ಅಲ್ಲದೇ ಜಿಯೋ ಮತ್ತು ಸ್ಟಾರ್‍ಲಿಂಕ್ ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವುದರಿಂದ, ಹೆಚ್ಚು ಜನರಿಗೆ ಇಂಟರ್‍ನೆಟ್ ಸೇವೆ ಲಭ್ಯವಾಗಲಿದೆ. ಅದರಲ್ಲೂ ಗ್ರಾಮೀಣ ಭಾಗದ ಜನತೆಗೆ, ವೇಗದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಹಾಗೆಯೇ ಇದು ಶಿಕ್ಷಣ, ಆರೋಗ್ಯ ಸೇವೆಗಳು, ವ್ಯವಹಾರ ಮತ್ತು ಇತರೆ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ.
ಏರ್‌ಟೆಲ್ ಕೂಡ ಸ್ಟಾರ್‌ಲಿಂಕ್ ಜೊತೆಗೆ ಪಾಲುದಾರಿಕೆ:
ಅಂದಹಾಗೆ ಜಿಯೋ ಮಾತ್ರ ಸ್ಟಾರ್‍ಲಿಂಕ್ ಜೊತೆ ಪಾಲುದಾರಿಕೆ ಮಾಡಿಕೊಂಡಿಲ್ಲ. ಭಾರತದ ಎರಡನೇ ಅತುದೊಡ್ಡ ಟೆಲಿಕಾಂ ಸಂಸ್ಥೆಯಾದ ಏರ್‍ಟೆಲ್ ಕೂಡ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಜೊತೆ ಇಂತಹವೇ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಒಪ್ಪಂದದ ಅನುಸಾರ ಏರ್‍ಟೆಲ್ ತನ್ನ ಚಾನಲ್‌ಗಳ ಮೂಲಕ ಸ್ಟಾರ್‍ಲಿಂಕ್ ಸೇವೆಗಳನ್ನು ವಿತರಿಸುತ್ತದೆ.
ಇನ್ನು ಭಾರತದ ದೂರ ಸಂಪರ್ಕ ಇಲಾಕೆ ಮತ್ತು ಎನ್‌ಸ್ಪೇಸ್ ನಿಯಂತ್ರಣ ಸಂಸ್ಥೆಗಳ ಅನುಮೋದನೆ ಸಿಕ್ಕ ನಂತರವೇ, ಸ್ಟಾರ್‌ಲಿಂಕ್ ಸೇವೆಗಳನ್ನು ದೇಶದಲ್ಲಿ ಅಧಿಕೃತವಾಗಿ ಪ್ರಾರಂಭಿಸಲು ಸಾಧ್ಯವಾಗಿದೆ. ಆದರೆ ಈ ಎರಡೂ ಒಪ್ಪಂದಗಳು ಕೂಡ ಭಾರತ ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದು, ಯಾರಿಗೆ ಲಾಟ್ರಿ ಹೊಡೆಯಲಿದೆ ಅನ್ನೋದೇ ಕುತೂಹಲ. ಎರಡೂ ಕಂಪನಿಗಳಿಗೂ ಭಾರತ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ, ಇಂಟರ್‍ನೆಟ್ ಕ್ರಾಂತಿಯಲ್ಲೂ ಸ್ಪರ್ಧೆ ಏರ್ಪಾಡಾಗುವುದು ಖಂಡಿತ.
ಜಿಯೋ ಮತ್ತು ಸ್ಪೇಸ್‌ಎಕ್ಸ್ ಸಹಕಾರದ ಉದ್ದೇಶ:
ಜಿಯೋ ಮತ್ತು ಸ್ಟಾರ್‍ಲಿಂಕ್‌ನ ಒಪ್ಪಂದದ ಭಾಗವಾಗಿ ಜಿಯೋ, ತನ್ನ ತಂತ್ರಜ್ಞಾನ ಮತ್ತು ಮಾರಾಟ ಚಾನಲ್‌ಗಳ ಮೂಲಕ ಈ ಇಂಟರ್‍ನೆಟ್ ಸೇವೆಯನ್ನು ವ್ಯಾಪಕವಾಗಿ ವಿತರಿಸಲು ಸಹಾಯ ಮಾಡಲಿದೆ. ಈ ಬಗ್ಗೆ ಜಿಯೋ ಗ್ರೂಪ್‌ನ ಸಿಇಒ ಮ್ಯಾಥ್ಯೂ ಊಮೆನ್ ಈ ಒಪ್ಪಂದದ ಬಗ್ಗೆ ಮಾತನಾಡಿದ್ದಾರೆ. ಜಿಯೋದ ಬ್ರಾಡ್‌ಬ್ಯಾಂಡ್ ವ್ಯವಸ್ಥೆಯಲ್ಲಿ ಸ್ಟಾರ್‌ಲಿಂಕ್ ಸೇವೆಯನ್ನು ಅಳವಡಿಸಿಕೊಂಡು, ನಾವು ಭಾರತದಲ್ಲಿ ವೇಗದ ಮತ್ತು ವಿಶ್ವಾಸಾರ್ಹ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದ್ದೇವೆ. ಇದು AI-ಚಾಲಿತ ಯುಗದಲ್ಲಿ ಸಮುದಾಯಗಳು ಮತ್ತು ವ್ಯವಹಾರಗಳಿಗೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಭಾರತದಲ್ಲಿ 2022ರಲ್ಲಿಯೂ ಸ್ಪೇಸ್‌ಎಕ್ಸ್, ಸ್ಟಾರ್‌ಲಿಂಕ್ ಸೇವೆ ಪ್ರಾರಂಭಿಸಲು ಯತ್ನಿಸಿತ್ತು. ಆದರೆ ಭಾರತ ಸರ್ಕಾರದ ಅನುಮೋದನೆ ಸಿಗುವುದಕ್ಕೂ ಮೊದಲೇ ಗ್ರಾಹಕರಿಗೆ ಸೇವೆ ನೀಡಲು ಪ್ರಯತ್ನಿಸಿದ್ದರಿಂದ, ಅದಕ್ಕೆ ಭಾರತ ಸರ್ಕಾರ ಅಡ್ಡಿ ಉಂಟುಮಾಡಿತು. ಅದೇ ಸಂದರ್ಭದಲ್ಲಿ ಸ್ಟಾರ್‌ಲಿಂಕ್ ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರ ಹಣವನ್ನು ಮರುಪಾವತಿ ಮಾಡಬೇಕಾಯಿತು. ಇದರ ನಡುವೆ ಈ ಬಾರಿ ಜಿಯೋ ಮತ್ತು ಏರ್‍ಟೆಲ್‌ನಂತಹ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳ ಬೆಂಬಲದಿಂದ, ಸ್ಟಾರ್‌ಲಿಂಕ್ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ಹೆಚ್ಚಿನ ಅವಕಾಶಗಳಿವೆ.
ಜಿಯೋ ಸ್ವಂತ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆ:
ಇನ್ನು ಜಿಯೋ ಸ್ಟಾರ್‍ಲಿಂಕ್ ಸೇವೆಯನ್ನು ಬಯಸಿದರೂ ಅದರು, ಸ್ಟಾರ್‍ಲಿಂಕ್ ಸೇವೆಯ ಮೇಲೆಯೇ ಅವಲಂಬಿತವಾಗಿಲ್ಲ. ಬದಲಾಗಿ ತನ್ನದೇ ಆದ ಜಿಯೋಸ್ಪೇಸ್ ಫೈಬರ್ ಉಪಗ್ರಹ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅಂದರೆ ಜಿಯೋಸ್ಪೇಸ್ ಫೈಬರ್ ಸೇವೆ ಎಸ್‌ಇಎಸ್ ಎಂಬ ಕಂಪನಿಯೊಂದಿಗೆ ಜಂಟಿ ಸಹಕಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ 2023ರಲ್ಲಿ ಸೇವೆಯನ್ನು ಭಾರತದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಪರೀಕ್ಷಿಸಲಾಗಿದೆ. ಹಾಗೆಯೇ 2024 ರಲ್ಲಿ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಮೂಲಕ ಭಾರತದಲ್ಲಿ ಜಿಯೋ ತನ್ನದೇ ಆದ ಉಪಗ್ರಹ ಆಧಾರಿತ ಇಂಟರ್‍ನೆಟ್ ಸೇವೆಯನ್ನು ಪ್ರಾರಂಭಿಸಬಹುದು.
ಭಾರತದ ಉಪಗ್ರಹ ಇಂಟರ್ನೆಟ್ ಮಾರುಕಟ್ಟೆ:
ಭಾರತದಲ್ಲಿ ಇಂಟರ್‍ನೆಟ್ ಬಳಕೆ ವ್ಯಾಪಕವಾಗಿ ಬಳಕೆಯಾಗಿದೆ. ಜನರು ಇಂಟರ್‍ನೆಟ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೀಗಾಗಿ ಉಪಗ್ರಹ ಇಂಟರ್ನೆಟ್ ಸೇವೆಗಳಿಗೆ ಭಾರಿ ಬೇಡಿಕೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಜಿಯೋ, ಏರ್‌ಟೆಲ್, ಸ್ಟಾರ್‌ಲಿಂಕ್, ಮತ್ತು ಒನ್‌ವೆಬ್ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಇನ್ನು ಏರ್‍ಟೆಲ್ ಒನ್‌ವೆಬ್ ಜೊತೆಯಾಗಿ ತನ್ನದೇ ಆದ ಉಪಗ್ರಹ ಆಧಾರಿತ ಸೇವೆ ಅಭಿವೃದ್ಧಿಪಡಿಸುತ್ತಿದೆ. ಅದೇ ಸಮಯದಲ್ಲಿ ಜಿಯೋ ತನ್ನ ಜಿಯೋಸ್ಪೇಸ್ ಫೈಬರ್ ಮೂಲಕ ಹೊಸ ಯೋಜನೆಗಳತ್ತ ಗಮನ ಹರಿಸಿದೆ.
ಅಂದಹಾಗೆ ಜಿಯೋ ಮತ್ತು ಏರ್‌ಟೆಲ್ ಭಾರತ ಸರ್ಕಾರದಿಂದ ಸಮ್ಮತಿ ಪಡೆಯಲು ಎದುರು ನೋಡುತ್ತಿರುವುದಂತೂ ಖಚಿತ. ಹಿಂದಿನ ಸರ್ಕಾರದಲ್ಲಿ ಬೇಲಿ-ನಿಯಂತ್ರಿತ ಪಾಲುದಾರಿಕೆಗೆ ಅನುಮೋದನೆ ನೀಡಲು ಮುಕ್ತವಿರಲಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಯಿಂದ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿರುವಂತೆ ತೋರುತ್ತಿದೆ. ಗಮನಾರ್ಹವಾಗಿ ಇಂದು ಎಲ್ಲವೂ ಸರಿಯಾದ ದಾರಿಗೆ ಸಾಗುತ್ತಿದೆ. ನಾವು ಭಾರತ ಸರ್ಕಾರದ ಅನುಮೋದನೆ ಪಡೆಯಲು ನಿರೀಕ್ಷಿಸುತ್ತಿದ್ದೇವೆ ಮತ್ತು ಈ ಸೇವೆಯನ್ನು ಹೆಚ್ಚು ಜನರಿಗೆ ತಲುಪಿಸಲು ಜಿಯೋ ಜೊತೆ ಸಹಕರಿಸುತ್ತೇವೆ.
ಒಂದುವೇಳೆ ಈ ಒಪ್ಪಂದಕ್ಕೆ ಭಾರತ ಸರ್ಕಾರದ ಅನುಮತಿ ಸಿಕ್ಕರೆ, ಜಿಯೋ ಮತ್ತು ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಭಾರತದಲ್ಲಿ ವೇಗದ ಉಪಗ್ರಹ ಇಂಟರ್ನೆಟ್ ಲಭ್ಯವಾಗುವ ಸಾಧ್ಯತೆ ಇದೆ. ಈ ಸೇವೆಯಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಏರ್‌ಟೆಲ್ ಕೂಡ ಸ್ಟಾರ್‌ಲಿಂಕ್ ಜೊತೆ ಇದೇ ರೀತಿಯ ಒಪ್ಪಂದ ಮಾಡಿಕೊಂಡಿದ್ದು, ಬಿಗಿಯಾದ ಸ್ಪರ್ಧೆಯನ್ನು ನೀಡಬಹುದು. ಆದರೆ ಭಾರತ ಸರ್ಕಾರದ ಅನುಮೋದನೆಯ ನಂತರ ಮಾತ್ರ ಈ ಹೊಸ ಸೇವೆಗಳು ಪ್ರಾರಂಭವಾಗಲಿವೆ. ಇದಕ್ಕೆ ಭಾರತ ಸರ್ಕಾರ ಸಮ್ಮತಿ ನೀಡುತ್ತದಾ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಈ ಮೂಲಕ ಇಂಟರ್‍ನೆಟ್ ಕ್ರಾಂತಿ ಶುರುವಾಗಿದೆ ಎಂದರೂ ತಪ್ಪಾಗಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications