ಜಿಯೋ vs ವಡಾಫೋನ್‌ : ಉತ್ತಮ ಕೊಡುಗೆಗಳ ಜೊತೆಗೆ ಅಗ್ಗದ ರೀಚಾರ್ಜ್ ಯೋಜನೆ ಯಾವುದು? ತಿಳಿಯಿರಿ!

ಜಿಯೋ ಮತ್ತು ವಡಾಫೋನ್‌ ತಮ್ಮ ಗ್ರಹಕರಿಗಾಗಿ ಉತ್ತಮ ರಿಚಾರ್ಜ್ ಯೋಜನೆಗಳನ್ನ ನೀಡುತ್ತಿದೆ. ಜೊತೆಗೆ ಉತ್ತಮ ಕೊಡುಗೆಗಳನ್ನ ಕೂಡ ಕೊಡುತ್ತಿದೆ. ಈ ಎರಡರ್ಲಿ ಈ ವರ್ಷ ಯಾವುದು ಅತೀ ಅಗ್ಗದ ರೀಚಾರ್ಜ್ ಯೋನೆಯನ್ನ ಹೊಂದಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ಮತ್ತು ವಡಾಫೋನ್‌ ತಮ್ಮ ಗ್ರಾಹಕರನ್ನ ಹೆಚಚು ಆಕರ್ಷಿಸಲು ಸಾಕಷ್ಟು ಕಡುಗೆಗಳನ್ನ ನೀಡುತ್ತಿದೆ. ಎರಡೂ ಕಂಪನಿಗಳು ಕೂಡ ಮಾಸಿಕ ಮತ್ತು ವಾರ್ಷಿಕ ಯತಯೋಜನೆಗಳನ್ನ ನೀಡುತ್ತಿದೆ. ಇನ್ನು ಈ ಎರಡು ಕಂಪನಿಗಳಲ್ಲಿ ಯಾವುದು ಅಗ್ಗದ ರಿಚಾರ್ಜ್ ಯೋಜನೆಗಳನ್ನ ನೀಡುತ್ತಿವೆ, ಹಾಗೆ ಯಾವುದು ಅತೀ ಹೆಚ್ಚು ಕೊಡುಗೆಗಳನ್ನ ನೀಡುತ್ತಿದೆ ಎನ್ನುವುದನ್ನು ತಿಳಿಯವುದು ಮುಖ್ಯವಾಗುತ್ತದೆ.

ಜಿಯೋ vs ವಡಾಫೋನ್‌: ಅಗ್ಗದ ರೀಚಾರ್ಜ್ ಯೋಜನೆ   ಯಾವುದು? ತಿಳಿಯಿರಿ!

ಜಿಯೋದ 3,599 ರೂಗಳ ಯೋಜನೆ

ಜಿಯೋ ಕಂಪನಿಯು ಈ ವರ್ಷ ತನ್ನ ಗ್ರಾಹಕರಿಗಾಗಿ ಉತ್ತಮ ಕೊಡುಗೆಗಳನ್ನ ನೀಡುತ್ತಿದೆ. ಈ ಯೋಜನೆಯ ಮೂಲಕ ಜಿಯೋ ಬಳಕೆದಾರರು 365 ದಿನಗಳ ಕಾಲ ಒಟ್ಟು 912.5 ಜಿಬಿ ಡೇಟಾ ಜತೆಗೆ 2.5 ಜಿಬಿ ದೈನಂದಿನ ಡೇಟಾವನ್ನ ನೀಡುತ್ತಿದೆ. ಜಿಯೋ ಬಳಕೆದಾರರಿಗೆ ಜಯೋ ಸಿನಿಮಾದ ಉಚಿತ ಚಂದಾದಾರಿಕೆ, 100 ಉಚಿತ SMS ಮತ್ತು ಅನಿಯಮಿತ ಕರೆಗಳನ್ನ ಒಳಗೊಂಡಂತೆ ಅನೇಕ ಪ್ರಯೋಜನಗಳನ್ನ ನೀಡುತ್ತಿದೆ.

ವಡಾಫೋನ್‌ನ 3599ರೂ ಯೋಜನೆ

ವಡಾಫೋನ್‌ ತನ್ನ ಬಳಕೆದಾರರಿಗೆ ಹಲವು ಪ್ರಯೋಜನಗಳನ್ನ ನೀಡುತ್ತಿದೆ. ಅದರಲ್ಲಿ ಬಳಕೆದಾರರು 3599ರೂ ಯೋಜನೆಯ ಪ್ರಯೋಜನವನ್ನ ಪಡೆಯಬಹುದು. ಬಳಕೆದಾರರು ಒಂದು ವರ್ಷ ಉಚಿತ ಡೇಟಾದ ಜೊತೆಗೆ ಅನಿಯಮಿತ ಕರೆಗಳ ಪ್ರಯೋಜನವನ್ನ ಪಡೆಯಬಹುದು. ಆದ್ರೆ ಜಿಯೋ ಹೋಲಿಸಿದರೆ ಇದರಲ್ಲಿ ಕಡಿಮೆ ಡೇಟಾ ಸೇವೆ ಇರುತ್ತದೆ. ಅಂದರೆ ವಡಾಫೋನ್‌ನ ಈ ಯೋಜನೆ ಮೂಲಕ ಪ್ರತಿದಿನ 2 ಜಿಬಿ ಡೇಟಾ ಮತ್ತು 100 ಉಚಿತ SMS ನೀಡುತ್ತದೆ. ಆದರೆ OTT ಪ್ಲಾಟ್‌ಫಾರ್ಮ್‌ಗಳ ಮೂಲಕ ಬಳಕೆದಾರರು ಯಾವುದೇ ಪ್ರಯೋಜನಗಳನ್ನ ಪಡೆಯುವುದಿಲ್ಲ.

ವಡಾಫೋನ್‌ನ ಎರಡನೇ ವಾರ್ಷಿಕ ಯೋಜನೆ

ಈ ಯೋಜನೆಗಾಗಿ ಬಳಕೆದಾರರು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ಯೋಜನೆಯು 3799ಗೆ ಬರುತ್ತದೆ. ಅಲ್ಲದೆ ಇದು OTT ಪ್ಲಾಟ್‌ಪಾರ್ಮ್ ಅಮೆಜಾನ್‌ ಚಂದಾದಾರಿಕೆಯನ್ನ ಇದು ಒಳಗೊಂಡಿದೆ. ಈ ಯೋಜನೆಯಲ್ಲಿ ನೀವು 365 ದಿನಗಳ ಮಾನ್ಯತೆ ಹಾಗು 2ಜಿಬಿ ಡೇಟಾ ಮತ್ತು ಪ್ರತಿದಿನ 10 ಉಚಿತ SMS ನಂತಹ ಕೊಡುಗೆಗಳನ್ನ ಒಳಗೊಂಡದೆ.

ಜಿಯೋ ಎಷ್ಟು ಚಂದಾದಾರರನ್ನ ಹೊಂದಿದೆ ತಿಳಿಯಿರಿ

2024 ರ ವರದಿ ಪ್ರಕಾರ ಭಾರತದ ಪ್ರಮುಖ ದೂರಸಂಪರ್ಕ ಪೂರೈಕೆದಾರ ಜಿಯೋ 450 ಮಿಲಿಯನ್ ಚಂದಾದಾರರನ್ನು ಹೊಂದಿದೆ ಎಂದು ತಿಳಿದುಬಂದಿದೆ. 2016 ರಲ್ಲಿ ಪ್ರಾರಂಭವಾದ, ಜಿಯೋ ಕೈಗೆಟುಕುವ ಡೇಟಾ ಯೋಜನೆಗಳು ಮತ್ತು ವ್ಯಾಪಕವಾದ ನೆಟ್‌ವರ್ಕ್ ಕವರೇಜ್‌ನೊಂದಿಗೆ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟುಮಾಡಿತು, ಲಕ್ಷಾಂತರ ಬಳಕೆದಾರರನ್ನು ಆಕರ್ಷಿಸಿತು. ಕಂಪನಿಯ ತ್ವರಿತ ಬೆಳವಣಿಗೆಯು ಅದರ ವ್ಯಾಪಕವಾದ 4G ನೆಟ್‌ವರ್ಕ್‌ಗೆ ಕಾರಣವಾಗಿದೆ, ಇದು ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗಳನ್ನು ನೀಡುತ್ತದೆ. ಬ್ರಾಡ್‌ಬ್ಯಾಂಡ್, ಮನರಂಜನೆ ಮತ್ತು ಇ-ಕಾಮರ್ಸ್ ಸೇರಿದಂತೆ ಕೈಗೆಟುಕುವ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ಗಮನಹರಿಸುವುದರಿಂದ ಜಿಯೋದ ಗ್ರಾಹಕರ ನೆಲೆಯು ವಿಸ್ತರಿಸುತ್ತಲೇ ಇದೆ, ಇದು ಜಾಗತಿಕವಾಗಿ ಅತಿದೊಡ್ಡ ಚಂದಾದಾರರ ನೆಲೆಯಲ್ಲಿ ಭಾರತದ ಟೆಲಿಕಾಂ ವಲಯದಲ್ಲಿ ಪ್ರಬಲ ಕಂಪನಿಯಾಗಿ ಮುನ್ನುಗ್ಗುತ್ತಿದೆ.

ವಡಾಫೋನ್‌ ಎಷ್ಟು ಚಂದಾದಾರರನ್ನ ಹೊಂದಿದೆ ತಿಳಿಯಿರಿ

2024 ರ ವರದಿ ಪ್ರಕಾರ ವೊಡಾಫೋನ್ ಐಡಿಯಾ (Vi), ಭಾರತದಲ್ಲಿನ ಪ್ರಮುಖ ಟೆಲಿಕಾಂ ಆಪರೇಟರ್ ಆಗಿದ್ದು, ಸರಿಸುಮಾರು 240 ಮಿಲಿಯನ್ ಚಂದಾದಾರರನ್ನು ಹೊಂದಿದೆ. 2018 ರಲ್ಲಿ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲಾರ್ ವಿಲೀನದಿಂದ ರೂಪುಗೊಂಡ ಕಂಪನಿಯು ಮಾರುಕಟ್ಟೆಯಲ್ಲಿ ಗಮನಾರ್ಹ ಸ್ಪರ್ಧೆಯನ್ನು ಎದುರಿಸಿದೆ ಆದರೆ ಭಾರತೀಯ ಟೆಲಿಕಾಂ ವಲಯದಲ್ಲಿ ಪ್ರಮುಖ ಆಟಗಾರನಾಗಿ ಉಳಿದಿದೆ. ಹಣಕಾಸಿನ ಒತ್ತಡಗಳು ಮತ್ತು ಮಾರುಕಟ್ಟೆ ಸ್ಪರ್ಧೆಯಂತಹ ಸವಾಲುಗಳ ಹೊರತಾಗಿಯೂ, 4G ಸಂಪರ್ಕ, ಮೌಲ್ಯವರ್ಧಿತ ಸೇವೆಗಳು ಮತ್ತು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಒಳಗೊಂಡಂತೆ Vi ತನ್ನ ಮೊಬೈಲ್ ಸೇವೆಗಳೊಂದಿಗೆ ದೊಡ್ಡ ಗ್ರಾಹಕರ ನೆಲೆಯನ್ನು ಪೂರೈಸುವುದನ್ನು ಮುಂದುವರೆಸಿದೆ. ಕಂಪನಿಯು ತನ್ನ ನೆಟ್‌ವರ್ಕ್ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ತನ್ನ ಚಂದಾದಾರರ ಸಂಖ್ಯೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಗ್ರಾಹಕರ ಕೊಡುಗೆಗಳನ್ನು ಸುಧಾರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+