ಭಾರತದ ಸುಪ್ರೀಂ ಕೋರ್ಟ್‌ನ ಸಿಜೆಐ (Supreme Court CJI) ಆಗಿದ್ದ ಬಿ.ಆರ್.ಗವಾಯಿ ಅವರ ನಿವೃತ್ತಿಯ ನಂತರ ಇದೀಗ ಅಧಿಕೃತವಾಗಿ ನ್ಯಾಯಮೂರ್ತಿ ಸೂರ್ಯಕಾಂತ್ (Justice Suryakant) ಅವರು ಇಂದು (ನ.24) ಸುಪ್ರೀಂ ಕೋರ್ಟ್‌ನ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದರು. ದೇಶದ ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ಇದೀಗ ಸೂರ್ಯಕಾಂತ್ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಪ್ರಮಾಣವಚನ (Oath) ಸ್ವೀಕರಿಸಿದ್ದು, ಮುಂದಿನ 14 ತಿಂಗಳು ಸೇವೆ ಸಲ್ಲಿಸಲಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಹಿನ್ನೆಲೆ!
ಅಕ್ಟೋಬರ್ 30 ರಂದು ಮುಂದಿನ ಸಿಜೆಐ ಆಗಿ ನೇಮಕಗೊಂಡ ನ್ಯಾಯಮೂರ್ತಿ ಸೂರ್ಯಕಾಂತ್, ಫೆಬ್ರವರಿ 10, 1962 ರಲ್ಲಿ ಜನಿಸಿದರು. ಮೂಲತಃ ಸೂರ್ಯಕಾಂತ್ ಅವರು ಹರಿಯಾಣದ ನಿಸಾರ್ ಜಿಲ್ಲೆಯವರು. ಇನ್ನು ಸುಪ್ರೀಂ ಕೋರ್ಟ್ ಸಿಜೆಐ ಆಗಿ ಆಯ್ಕೆಯಾದವರು 65 ವರ್ಷ ಆಗುವವರೆಗೆ ಸೇವೆ ಸಲ್ಲಿಸಬಹುದು. ಅದೇ ರೀತಿ ಸೂರ್ಯಕಾಂತ್ ಅವರಿಗೆ ಮುಂದಿನ ಫೆಬ್ರವರಿ 9, 2027 ರವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ.
ವಕೀಲರಾಗಿ ಸೂರ್ಯಕಾಂತ್ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ತೆರಳಿದ ಅವರು, ತಮ್ಮ ನಿಖರ ಕಾನೂನು ವಾದ ಮತ್ತು ಮಹತ್ವದ ತೀರ್ಪುಗಳ ಮೂಲಕ ಭಾರೀ ಖ್ಯಾತಿ ಗಳಿಸಿದ್ದಾರೆ. ಇನ್ನು 2000 ದಲ್ಲಿ ಹರಿಯಾಣದ ಅಡ್ವೊಕೇಟ್ ಜನರಲ್ ಆದರು ಮತ್ತು 2001 ರಲ್ಲಿ ಹಿರಿಯ ವಕೀಲರಾಗಿಯೂ ಆಯ್ಕೆಯಾದರು. ಅದೇ ವರ್ಷದಲ್ಲಿ ಸೂರ್ಯಕಾಂತ್ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. 2018 ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರ ನೇಮಕವು ಅವರ ಸ್ಥಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಆ ನಂತರ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದರು.
ಇನ್ನು ಸುಪ್ರೀಂ ಕೋರ್ಟ್‌ನಲ್ಲಿ, ನ್ಯಾಯಮೂರ್ತಿ ಕಾಂತ್ ರಾಷ್ಟ್ರೀಯ ನೀತಿ, ಸಾಂವಿಧಾನಿಕ ನಿಯಮಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ರೂಪಿಸಿದ ಪ್ರಮುಖ ಪ್ರಕರಣಗಳಲ್ಲಿ ಭಾಗವಹಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಆಸ್ತಿ ಎಷ್ಟು?
ಮಹತ್ವದ ತೀರ್ಪುಗಳು ಮತ್ತು ಸಾಂವಿಧಾನಿಕ ಕಾನೂನಿನ ಬಗ್ಗೆ ವಾದದ ಮೂಲಕ ಹೆಸರುವಾಸಿಯಾಗಿರುವ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನ್ಯಾಯಾಂಗದ ಶ್ರೀಮಂತ ಸದಸ್ಯರಲ್ಲೊಬ್ಬರಾಗಿದ್ದಾರೆ.
ಇನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನಿವ್ವಳ ಮೌಲ್ಯ ನೋಡುವುದಾದ್ರೆ, ಅಧಿಕೃತ ದಾಖಲೆಗಳ ಪ್ರಕಾರ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು 8 ಕೋಟಿಗೂ ಅಧಿಕ ಮೌಲ್ಯದ ಸ್ಥಿರ ಠೇವಣಿಗಳನ್ನು (FD) ಹೊಂದಿದ್ದಾರೆ. ಅಷ್ಟೇ ಅಲ್ಲದೇ 4.23 ಕೋಟಿ ರೂ.ಗಳ ಪ್ರಾವಿಡೆಂಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಅವರ ಬಳಿ ಸ್ವಂತ ವಾಹನ ಇಲ್ಲದಿದ್ದೂ, ಅವರ ಪತ್ನಿ ಬಳಿ ವ್ಯಾಗನಾರ್ ಕಾರನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ನ್ಯಾಯಮೂರ್ತಿಗಳು ಭಾರತದಾದ್ಯಂತ ಆರು ವಸತಿ ಆಸ್ತಿಗಳನ್ನು ಮತ್ತು ಎರಡು ನಿವೇಶನಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಅವರ ಆಸ್ತಿಗಳಲ್ಲಿ ಚಂಡೀಗಢದ ಸೆಕ್ಟರ್ 10 ರಲ್ಲಿ ಒಂದು ಮನೆ ಮತ್ತು ಹೊಸ ಚಂಡೀಗಢದ ಇಕೋ ಸಿಟಿ-II ನಲ್ಲಿ 500 ಚದರ ಗಜಗಳಷ್ಟು ನಿವೇಶನ ಸೇರಿವೆ. ಅವರು ಚಂಡೀಗಢದ ಸೆಕ್ಟರ್ 18-C ನಲ್ಲಿ 192 ಚದರ ಗಜಗಳ ಮನೆ ಮತ್ತು ಪಂಚಕುಲದ ಗೋಲ್ಪುರ ಗ್ರಾಮದಲ್ಲಿ 13.5 ಎಕರೆ ಕೃಷಿ ಭೂಮಿಯನ್ನು ಸಹ ಹೊಂದಿದ್ದಾರೆ. ನ್ಯಾಯಮೂರ್ತಿ ಸೂರ್ಯ ಕಾಂತ್ ಗುರುಗ್ರಾಮ್‌ನ ಸುಶಾಂತ್ ಲೋಕ್-I ನಲ್ಲಿ 300 ಚದರ ಗಜಗಳ ನಿವೇಶನ, ಡಿಎಲ್‌ಎಫ್-II ನಲ್ಲಿ 250 ಚದರ ಗಜಗಳ ಮನೆ, ಮತ್ತು ನವದೆಹಲಿಯ ಗ್ರೇಟರ್ ಕೈಲಾಶ್-I ನಲ್ಲಿ 285 ಚದರ ಗಜಗಳ ಆಸ್ತಿಯಲ್ಲಿ ನೆಲ ಮಹಡಿ ಮತ್ತು ನೆಲಮಾಳಿಗೆಯನ್ನು ಸಹ ಹೊಂದಿದ್ದಾರೆ. ಅವರ ಹುಟ್ಟೂರಾದ ಹಿಸಾರ್‌ನಲ್ಲಿ, ಅವರು ಪೆಟ್ವಾರ್‌ನಲ್ಲಿ 12 ಎಕರೆ ಕೃಷಿ ಭೂಮಿ ಮತ್ತು ಪೆಟ್ವಾರ್ ಮತ್ತು ಹಿಸಾರ್ ಅರ್ಬನ್ ಎಸ್ಟೇಟ್-II ಎರಡರಲ್ಲೂ ಪೂರ್ವಜರ ಮನೆಗಳಲ್ಲಿ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ಚಿನ್ನ, ಎಫ್‌ಡಿಯಲ್ಲೂ ಭಾರೀ ಹೂಡಿಕೆ:
ಚಿನ್ನ ಮತ್ತು ಸ್ಥಿರ ಠೇವಣಿಗಳಲ್ಲೂ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಅವರ ಕುಟುಂಬ ಭಾರೀ ಹೂಡಿಕೆ ಮಾಡಿದೆ. ಒಟ್ಟಾಗಿ ಸುಮಾರು 1.1 ಕಿಲೋಗ್ರಾಂ ಚಿನ್ನ ಮತ್ತು ಆರು ಕಿಲೋಗ್ರಾಂ ಬೆಳ್ಳಿಯನ್ನು ಹೊಂದಿದ್ದಾರೆ. ಇನ್ನು ಅವರ ಪತ್ನಿಯ ಪಿಪಿಎಫ್ ಖಾತೆಯಲ್ಲಿ 49.9 ಲಕ್ಷ ರೂ. ಮತ್ತು ಅವರ ಜಿಪಿಎಫ್ ಖಾತೆಯಲ್ಲಿ 3.74 ಕೋಟಿ ರೂ. ಇದೆ. ಅವರ ಇಬ್ಬರು ಹೆಣ್ಣುಮಕ್ಕಳು ತಲಾ 100 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಹಿರಿಯ ಮಗಳು 34 ಲಕ್ಷ ರೂ. ಮೌಲ್ಯದ ಎಂಟು ಎಫ್‌ಡಿಗಳು ಮತ್ತು 47 ಲಕ್ಷ ರೂ.ಗಳ ಪಿಪಿಎಫ್ ಅನ್ನು ಹೊಂದಿದ್ದಾರೆ, ಆದರೆ ಕಿರಿಯ ಮಗಳು 25 ಲಕ್ಷ ರೂ. ಮೌಲ್ಯದ 7 ಎಫ್‌ಡಿಗಳು ಮತ್ತು 47 ಲಕ್ಷ ರೂ.ಗಳ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ..


Click it and Unblock the Notifications