ನವದೆಹಲಿ, ಫೆಬ್ರವರಿ 8: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಭಾರತದ ಅತಿದೊಡ್ಡ ಹಾಗೂ ಪ್ರಮುಖವಾಗಿರುವ ಐಟಿ ಕಂಪನಿಯಾಗಿದೆ. ಟಾಟಾ ಸನ್ಸ್ ಗ್ರೂಪ್‌ಗೆ ಸೇರಿರುವ ಈ ಕಂಪನಿಯು 1500000 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಇಷ್ಟೊಂದು ಎತ್ತರಕ್ಕೆ ಟಿಸಿಎಸ್ ಕಂಪನಿ ಬೆಳೆಯಬೇಕಾದರೆ ಇದರ ಹಿಂದೆ ದುಡಿದವರು ಅನೇಕರು ಇದ್ದಾರೆ.
ಟಿಸಿಎಸ್ ಕಂಪನಿಯನ್ನು ಈ ಹಂತಕ್ಕೆ ಬೆಳೆಸಿದ ವ್ಯಕ್ತಿ ಅದು ಐಐಟಿ ಪದವೀಧರ. ಪ್ರಸ್ತುತ ಟಿಸಿಎಸ್ ಕಂಪನಿಯು ಜಗತ್ತಿನಾದ್ಯಂತ ತನ್ನ ಉದ್ಯೋಗಿಗಳು ಹಾಗೂ ಗ್ರಾಹಕರನ್ನು ನಿರ್ವಹಿಸುತ್ತಿರುವ ರೀತಿಯಿಂದಾಗಿ ಅದು ಇಷ್ಟೊಂದು ದೊಡ್ಡ ಕಂಪನಿಯಾಗಿ ಬೆಳೆದಿದೆ. ಅಷ್ಟೇಅಲ್ಲ ಕಂಪನಿಯು ಹಗರಣದ ಸುಳಿಗೆ ಸಿಲುಕಿದ್ದ ಸಂಕಷ್ಟದ ಸಮಯದಲ್ಲಿಯೂ ಇದೇ ಐಐಟಿ ಪದವೀಧರ ಟಿಸಿಎಸ್‌ನ್ನು ಯಶಸ್ವಿನ ಹಾದಿಯಲ್ಲಿ ಮುನ್ನಡೆಸಿದ್ದರು. ಹಾಗಾದರೆ ಟಿಸಿಎಸ್‌ನ್ನು ದೈತ್ಯ ಸಂಸ್ಥೆಯಾಗಿ ಬೆಳೆಸುವ ಮೂಲಕ ಮಾರುಕಟ್ಟೆ ಮೌಲ್ಯ 1500000 ಕೋಟಿ ರೂ.ಗೆ ಏರಿಸಿದ ಆ ವಕ್ತಿ ಕೆ. ಕೃತಿವಾಸನ್. ಅವರು ಕಂಪನಿಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕೆ. ಕೃತಿವಾಸನ್ ಅವರು ಬ್ಯಾಂಕಿಂಗ್, ಫೈನಾನ್ಸ್ ಸರ್ವೀಸಸ್ ಹಾಗೂ ಇನ್ಶೂರೆನ್ಸ್(ಬಿಎಫ್‌ಎಸ್‌ಐ) ಬಿಸಿನೆಸ್ ಗ್ರೂಪ್‌ನ ಗ್ಲೋಬಲ್ ಹೆಡ್ ಆಗಿ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ವಿವಿಧೆಡೆ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರನ್ನು ಟಿಸಿಎಸ್ ಕಂಪನಿಯು 30 ವರ್ಷಗಳ ಹಿಂದೆಯೇ ನೇಮಕಗೊಳಿಸಿತ್ತು. ಅಂದಿನಿಂದ ಅವರು ಟಿಸಿಎಸ್ ಕಂಪನಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಕೃತಿವಾಸನ್ ಅವರು ಮ್ಯೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮದ್ರಾಸ್ ವಿವಿಯಿಂದ ಪದವಿಯನ್ನು ಪಡೆದುಕೊಂಡಿದ್ದು, ಐಐಟಿ ಕಾನ್ಪುರದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕ ಪದವಿಯನ್ನು ಪಡೆದುಕೊಂಡಿದ್ದಾರೆ. ಕೃತಿವಾಸನ್ ಅವರ ಆರಂಭವು ಟಿಸಿಎಸ್‌ನಲ್ಲಿ ಅಷ್ಟೊಂದು ಸುಲಭದ ದಿನಗಳಾಗಿರಲಿಲ್ಲ.
ಒಬ್ಬ ಎಂಜಿನಿಯರ್‌ನ್ನು ಕಂಪನಿಯ ಸಿಇಒ ಆಗಿ ನೇಮಕಗೊಳಿಸಿದ್ದಾಗ ಕಂಪನಿಯನ್ನು ಮುನ್ನಡೆಸುವುದು ಸವಾಲಿನ ಕೆಲಸವೂ ಆಗಿತ್ತು. ಕೃತಿವಾಸನ್ ಅವರು ಐಟಿ ವಲಯದಲ್ಲಿ ಅತಿಹೆಚ್ಚು ಸಂಬಳ ಪಡೆಯುತ್ತಿರುವ ಸಿಇಒಗಳ ಸಾಲಿನಲ್ಲಿ ಸೇರಿದ್ದಾರೆ.
ಟೈಮ್ಸ್ ನೌ ವರದಿ ಪ್ರಕಾರ ಕೃತಿವಾಸನ್ ಅವರು ಪ್ರಸ್ತುತ ಪ್ರತಿ ತಿಂಗಳು 10 ಲಕ್ಷ ರೂ. ಮೂಲ ವೇತನ ಪಡೆಯುತ್ತಿದ್ದಾರೆ. ಅಂದರೆ ವರ್ಷಕ್ಕೆ 1.2 ಕೋಟಿ ರೂ. ಕೆಲವೊಮ್ಮೆ ಈ ವೇತನವು ತಿಂಗಳಿಗೆ 16 ಲಕ್ಷ ರೂ.ವರೆಗೆ ಏರಿಕೆಯಾಗುತ್ತದೆ. ನ್ಯೂಸ್ 18 ವರದಿಯೊಂದು ಬಹಿರಂಗಪಡಿಸಿರುವ ಮಾಹಿತಿಯಂತೆ ಕೃತಿವಾಸನ್ 2018-19ರಲ್ಲಿ 4.3 ಕೋಟಿ ರೂ. ವೇತನ ಪಡೆಯುತ್ತಿದ್ದರು.


Click it and Unblock the Notifications