ಚಿನ್ನದ ಬೆಲೆಗಳ ಏರಿಳಿತ ಇತ್ತೀಚೆಗೆ ಹೆಚ್ಚಾಗಿದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಜಿಗಿತ ತಡೆಯೋಕಾಗ್ತಿಲ್ಲ. ಹೂಡಿಕೆದಾರರಿಗೆ ಹೆಚ್ಚು ಲಾಭ, ಆದರೆ ಖರೀದಿದಾರರಿಗೆ ಬೇಕಾದ ಸಮಯದಲ್ಲಿ ಕೊಳ್ಳಲಾಗದ ವಸ್ತುವಾಗಿದೆ ಬಂಆರ. ರಾಜಕೀಯ ಸ್ಥಿರತೆ ಜೊತೆ ಗ್ರಾಹಕ ತೊಡಕನ್ನು ಹೆಚ್ಚಾಗಿ ಅನಭವಿಸುತ್ತಿರುವ ಸಂದರ್ಭ ಇದಾಗಿದೆ. ಆದರೆ ಇಂಥಾ ಹೊತ್ತಿನಲ್ಲಿಯೇ ಕಲ್ಯಾಣ್ ಜ್ಯುವೆಲರ್ಸ್‌ಗೆ ಉತ್ತಮದ ಆದಾಯದ ಹೊಳೆ ಹರಿದಿದೆ.

ಹೌದು, 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಕಲ್ಯಾಣ್ ಜ್ಯುವೆಲರ್ಸ್ ಸಾಧನೆ ದೊಡ್ಡ ಮಟ್ಟಕ್ಕೆ ಹಾರಿದೆ. ಬರೋಬ್ಬರಿ 31% ಆದಾಯವನ್ನು ಸಂಪಾದಿಸಿ, ವಾಸ್ತವಕ್ಕೂ ಮೀರಿ ಆಶ್ಚರ್ಯ ಉಂಟುಮಾಡಿದೆ.
ಖರೀದಿ ಬೇಡಿಕೆ ಕಡಿಮೆ..ಆದರೂ ಉತ್ತಮ ಸಾಧನೆ ಹೇಗೆ?
ಅಕ್ಷಯ ತೃತೀಯ, ವಿವಾಹ ಋತು..ಈ ಕಾಲಘಟ್ಟದಲ್ಲಿ ಚಿನ್ನದ ಖರೀದಿ ಮಾಡುವುದು ಭಾರತೀಯರಿಗೆ ಗೌರವದ ವಿಷಯ. ಕಲ್ಯಾಣ್ ಈ ಅವಕಾಶವನ್ನು ಬಿಟ್ಟಿಲ್ಲ. ಬೃಹತ್ ಮಟ್ಟದ ಶೋ ರೂಂ ವಿಸ್ತರಣೆ, ನವೀನ ವಿನ್ಯಾಸಗಳ ಆಭರಣಗಳು, ಮತ್ತು ಜನರ ನಡಿಗೆಗೆ ಹತ್ತಿರವಾಗಿ ಮಾರುಕಟ್ಟೆ ನಡೆಸಿದ ಬುದ್ಧಿವಂತಿ ತಂತ್ರದಿಂದಾಗಿ, ಬೇಡಿಕೆ ಕಡಿಮೆಯಿದ್ದರೂ ಮಾರಾಟದಲ್ಲಿ ಜಿಗಿತ ಕಂಡಿದೆ.
ಭಾರತದ ಶೋ ರೂಂಗಳ ಪ್ರಭಾವ:
ಕಂಪನಿಯ 287 ಶೋ ರೂಂಗಳು ಭಾರತದೆಲ್ಲೆಡೆ ವ್ಯಾಪಿಸಿಕೊಂಡಿವೆ. ಇದೇ ಕಾರಣದಿಂದಾಗಿ ಈ ತ್ರೈಮಾಸಿಕದ ಗತಿಶೀಲತೆಗೆ ಭಾರತೀಯ ಮಾರ್ಕೆಟ್‌ವೇ ಪ್ರಮುಖ ಕಾರಣವಾಗಿದೆ. ಸುಮಾರು 18% ರಷ್ಟು 'ಅದೇ ಅಂಗಡಿ ಮಾರಾಟ' ಬೆಳವಣಿಗೆಯು ಗ್ರಾಹಕರಲ್ಲಿ ಕಂಪನಿಯ ಮೇಲಿನ ನಂಬಿಕೆ ಮತ್ತು ಮರುಬರವಣಿಗೆಯ ಸೂಚನೆ. ಚಿನ್ನದ ನಂಬಿಕೆಯ ಮೌಲ್ಯ, ಬ್ರ್ಯಾಂಡ್ ಸೇವೆ ಮತ್ತು ಗ್ರಾಹಕ ನಂಟು.. ಈ ಮೂರೂ ಇಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ.
ಮಧ್ಯಪ್ರಾಚ್ಯದಲ್ಲಿ ಬೆಳವಣಿಗೆ:
ಯುಎಇ, ಕೆಎಸ್‌ಎ, ಓಮಾನ್ ಮುಂತಾದ ದೇಶಗಳಲ್ಲಿ ವಾಸವಿರುವ ಭಾರತೀಯರಿಗೆ ಕಲ್ಯಾಣ್ ಹೆಚ್ಚು ಪರಿಚಿತ ಬ್ರ್ಯಾಂಡ್. ಈ ತ್ರೈಮಾಸಿಕದಲ್ಲೂ ಮಧ್ಯಪ್ರಾಚ್ಯದಿಂದ 26% ರಷ್ಟು ಆದಾಯ ಜಿಗಿತ ಕಂಡುಬಂದಿದ್ದು, ಅಲ್ಲಿ ಸಹ ಗ್ರಾಹಕ ವಿಶ್ವಾಸ ಬೆಳೆಯುತ್ತಿರುವ ಸೂಚನೆ. ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಒಟ್ಟಾರೆ 15% ಆದಾಯ ಬಂದಿರುವುದು, ಬ್ರ್ಯಾಂಡ್‌ಗೆ ಜಾಗತಿಕ ಮೌಲ್ಯವನ್ನೂ ತರುತ್ತಿದೆ.
ಡಿಜಿಟಲ್ ಮಾರಾಟದ ಧಾಟಿ:
ಕಲ್ಯಾಣ್‌ನ ಆನ್‌ಲೈನ್ ಆಭರಣ ಮಾರಾಟ ವೇದಿಕೆ 'ಕ್ಯಾಂಡೆರೆ' ಈಗ ಕಾಲದ ದರಕಾರ. ತಲೆಮಾರಿನವರು ಶೋ ರೂಂಗೆ ಹೋಗುವದಕ್ಕಿಂತ ಮೊಬೈಲ್ ಮೂಲಕ ಚಿನ್ನ ನೋಡುವುದರಲ್ಲಿ ಆಸಕ್ತರು. ಇದನ್ನು ಕಂಡುಕೊಂಡ ಕಲ್ಯಾಣ್, ಡಿಜಿಟಲ್ ಮಾರಾಟಕ್ಕೆ ಬಲ ನೀಡಿದ್ದು, ಈ ತ್ರೈಮಾಸಿಕದಲ್ಲಿ ಮಾತ್ರ 67% ಆದಾಯದ ಜಿಗಿತ ಕಂಡಿದೆ. ಅದೂ ಕೇವಲ ವೆಬ್‌ಸೈಟ್ ಮಾತ್ರವಲ್ಲ, ಪ್ರಾಮಾಣಿಕವಾದ ಬ್ರ್ಯಾಂಡ್ ಅಭಿಯಾನದಿಂದ ಗ್ರಾಹಕರ ಮನದಲ್ಲಿ ಸ್ಥಾನ ಪಡೆದಿದೆ.
ಹೊಸ ಶೋ ರೂಂಗಳು:
ಭಾರತದ ಒಳಗೇ 10 ಹೊಸ ಶೋ ರೂಂಗಳು, ಯುಎಸ್‌ಎಯಲ್ಲಿ ಹೊಸ ಪ್ರವೇಶ, ಮತ್ತು ಕ್ಯಾಂಡೆರೆ ಶಾಖೆಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ವಿಸ್ತರಣೆಗಳು ದೈನಂದಿನ ಗ್ರಾಹಕ ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸಗೊಳ್ಳುತ್ತಿವೆ. ಗ್ರಾಹಕ ಎಲ್ಲಿಂದ ಬೇಕಾದರೂ ಶಾಪಿಂಗ್ ಮಾಡಬಹುದಾದ ವಾತಾವರಣ ಕಲ್ಯಾಣ್ ನಿರ್ಮಿಸುತ್ತಿದೆ.
2026ನೇ ಆರ್ಥಿಕ ವರ್ಷದಲ್ಲಿ ಕಲ್ಯಾಣ್ ಬ್ರ್ಯಾಂಡ್ ಹಾಗೂ ಕ್ಯಾಂಡೆರೆ ಎರಡೂ ಸೇರಿ 170 ಹೊಸ ಶೋ ರೂಂಗಳನ್ನು ತೆರೆಯಲು ಸಜ್ಜಾಗಿದೆ. ಇದರಲ್ಲಿ ಬಹುತೆಕ FOCO ಮಾದರಿ - ಅಂದರೆ ಫ್ರಾಂಚೈಸಿ ಮಾಲೀಕತ್ವದಲ್ಲಿದ್ದರೂ ಕಂಪನಿಯ ನಿರ್ವಹಣೆಯ ಶಕ್ತಿಯು ಉಳಿಯುತ್ತದೆ. ಇದು ಕೇವಲ ವ್ಯಾಪಾರ ವಿಸ್ತರಣೆ ಅಲ್ಲ, ಪ್ರತಿಯೊಂದು ನಗರಕ್ಕೆ ಕಲ್ಯಾಣ್ ಅನುಭವ ತಲುಪಿಸುವ ಯೋಜನೆ.
ಈ ತ್ರೈಮಾಸಿಕ ವರದಿ ಕಲ್ಯಾಣ್ ಜ್ಯುವೆಲ್ಲರ್ಸ್‌ನ್ನು ಕೇವಲ ಚಿನ್ನ ಮಾರಾಟದ ಅಂಗಡಿಯಾಗಿ ಕಾಣಿಸುವುದಿಲ್ಲ. ಇದು ಗ್ರಾಹಕ ಸಂವೇದನೆಯ ಅರಿವು, ಸ್ಥಳೀಯತೆಯ ಪ್ರಾಮುಖ್ಯತೆ, ಡಿಜಿಟಲ್ ಮಾದರಿಯ ಅನುಸ್ಥಾನ, ಮತ್ತು ತಂತ್ರಜ್ಞಾನದೊಂದಿಗೆ ನಾಟುರಲ್ ಮಾರ್ಕೆಟಿಂಗ್ ಮಾಡಬಹುದಾದ ಬೃಹತ್ ಕಂಪನಿ ಎಂಬುದನ್ನು ಪ್ರತಿಪಾದಿಸುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications