ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಚಾಪ್ಟರ್ 1 (Kantara Chapter 1) ಸದ್ಯ ಭಾರೀ ಸದ್ದು ಮಾಡುತ್ತಿದೆ. ಅಕ್ಟೋಬರ್ 2 ರಂದು ರಿಲೀಸ್ ಆದ ಕಾಂತಾರ ಅಧ್ಯಾಯ 1 ಸಿನಿಮಾ ಕಲೆಕ್ಷನ್ ಬರೀ 10 ದಿನದಲ್ಲಿ 500 ಕೋಟಿ ದಾಟಿದೆ. ಹತ್ತು ದಿನವಾದರೂ ಕಾಂತಾರ ಅಬ್ಬರ ಇನ್ನೂ ನಿಂತಿಲ್ಲ. ಹೌಸ್ ಫುಲ್ ಶೋಗಳು, ಥಿಯೇಟರ್ ಮುಂದೆ ಜನಜಂಗುಳಿ, ಇನ್ನೂ ಬುಕ್ಕಿಂಗ್ ಮಾಡಲಾಗದೆ ಜನ ಕಾಯುತ್ತಲೇ ಇದ್ದಾರೆ. ಅಂತೂ ಈ ಬಾರಿ ಕಾಂತಾರ ಹೊಸ ದಾಖಲೆ ಸೃಷ್ಟಿಸೋದು ಪಕ್ಕಾ ಅಂತಾನೂ ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ.

ಅಂತೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಕಾಂತಾರ ಅಧ್ಯಾಯ 1, ವಿಶ್ವದಾದ್ಯಂತ ಭಾರೀ ಮೆಚ್ಚುಗೆಯನ್ನು ಗಳಿಸುತ್ತಿದೆ. ಇದೀಗ ಬಿಡುಗಡೆಯಾದ ಕೇವಲ ಹತ್ತೇ ದಿನದಲ್ಲಿ 590 ಕೋಟಿ ಗಳಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 600 ಕೋಟಿ ಗಡಿ ದಾಟುವ ನೀರೀಕ್ಷೆಯಿದೆ.
ಎರಡನೇ ವಾರದಲ್ಲೂ ಕಾಂತಾರದ ಅಬ್ಬರ
ಮೊದಲ ವಾರದಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ಕಾಂತಾರ ಚಾಪ್ಟರ್ 1 ಎರಡನೇ ವಾರಾಂತ್ಯದಲ್ಲಿ ನಿರೀಕ್ಷಿಸದ ಮಟ್ಟದಷ್ಟು ಜನರನ್ನ ರೀಚ್ ಆಗಿದೆ. ಅಲ್ಲದೇ ಉತ್ತಮ ಗಳಿಕೆಯೂ ಆಗಿದೆ. ಶನಿವಾರದಂದು ದೇಶೀಯ ಸಂಗ್ರಹದಲ್ಲಿ 66% ಏರಿಕೆ ದಾಖಲಿಸಿದ್ದು, ಇದು ಕಾಂತಾರ ಸಿನಿಮಾದ ಬ್ಲಾಕ್‌ಬಸ್ಟರ್ ಹಿಟ್ ಅಂತಾನೇ ಹೇಳಬಹುದು.
ಚಿತ್ರವು ತನ್ನ 10ನೇ ದಿನವಾದ ಶನಿವಾರ ಭಾರತದಲ್ಲಿ ₹37 ಕೋಟಿ ನಿವ್ವಳ ಆದಾಯ ಗಳಿಸಿದೆ. ಇದು ಶುಕ್ರವಾರಕ್ಕಿಂತ 66% ಮತ್ತು ಮೊದಲ ವಾರದ ಕೊನೆಯ ದಿನವಾದ ಗುರುವಾರಕ್ಕಿಂತ ಸುಮಾರು 75% ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಈ ಮೂಲಕ 10 ದಿನಗಳಲ್ಲಿ ಭಾರತದಲ್ಲಿ ಒಟ್ಟು ₹396.65 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ.
ಇನ್ನು ಕಾಂತಾರ ಚಾಪ್ಟರ್ 1 ಕ್ಕೆ ವಿಶ್ವಾದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ, ಆದ್ದರಿಂದ ಎರಡನೇ ಭಾನುವಾರ ಮತ್ತಷ್ಟು ಗಳಿಸುವ ನಿರೀಕ್ಷೆಯಿದೆ. ಬರೀ ಭಾರತದಲ್ಲಿ ಮಾತ್ರ 40 ಕೋಟಿಗೂ ಹೆಚ್ಚು ಗಳಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಮೊದಲ ವಾರದಲ್ಲಿ ಗಳಿಸಿದ್ದೆಷ್ಟು?
ಕಾಂತಾರ ಚಾಪ್ಟರ್ 1 ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಘೋಷಿಸಿರುವ ಪ್ರಕಾರ, ಚಿತ್ರವು ಮೊದಲ ವಾರದಲ್ಲಿ ವಿಶ್ವಾದ್ಯಂತ ₹509 ಕೋಟಿ ಗಳಿಸಿರುವುದಾಗಿ ಶುಕ್ರವಾರ ಘೋಷಿಸಿತ್ತು. ಈ ಅಂದಾಜಿನ ಪ್ರಕಾರ, ಚಿತ್ರವು 10 ದಿನಗಳಲ್ಲಿ ವಿಶ್ವಾದ್ಯಂತ ₹590 ಕೋಟಿ ತಲುಪಿರಬಹುದು ಎಂದು ಅಂದಾಜಿಸಲಾಗಿದೆ.
ಅತೀ ಹೆಚ್ಚು ಗಳಿಕೆಯ ಸಿನಿಮಾ "ಕಾಂತಾರ ಚಾಪ್ಟರ್ 1"
ಹಾಗೆಐೇ ಭಾರತೀಯ ವ್ಯಾಪಾರ ವಿಶ್ಲೇಷಕರ ಪ್ರಕಾರ, ಕಾಂತಾರ ಚಾಪ್ಟರ್ 1 ಗಳಿಕೆ ₹560 ಕೋಟಿ ಮುಟ್ಟಬಹುದು ಎಂದು ಹೇಳಲಾಗಿದೆ. ಈ ಎರಡೂ ಅಂದಾಜಿನ ಪ್ರಕಾರವೂ, ಈ ಚಿತ್ರವು ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 25 ಭಾರತೀಯ ಚಲನಚಿತ್ರಗಳ ಪಟ್ಟಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಈ ಮೂಲಕ 'ಟೈಗರ್ ಜಿಂದಾ ಹೈ' ಮತ್ತು 'ಧೂಮ್ 3' (ಎರಡೂ ₹558 ಕೋಟಿ) ಚಿತ್ರಗಳನ್ನು ಹಿಂದಿಕ್ಕಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications