ಕರ್ನಾಟಕದ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್ ಇದೀಗ ಹಠಾತ್ ನಾಯಕತ್ವ ಬದಲಾವಣೆಯನ್ನ ಅನುಭವಿಸುತ್ತಿದೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರೀಕೃಷ್ಣನ್ ಹರಿ ಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ತಮ್ಮ ಸ್ಥಾನಗಳಿಂದ ರಾಜೀನಾಮೆ ಸಲ್ಲಿಸಿದ್ದು ಭಾನುವಾರ ರಾತ್ರಿ ಪ್ರಕಟವಾಗಿದೆ. ಈ ಸುದ್ದಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಷೇರು ಬೆಲೆಗಳಲ್ಲಿ ತೀವ್ರ ಕುಸಿತ ಕಂಡಿದೆ.

ಏಕೆ ರಾಜೀನಾಮೆ?
ಬ್ಯಾಂಕ್‌ನ ನಿಯಂತ್ರಕ ಸಂಸ್ಥೆಗಳಿಗೆ ನೀಡಿದ ಮಾಹಿತಿ ಪ್ರಕಾರ, ಇಬ್ಬರೂ ಅಧಿಕೃತರು ತಮ್ಮ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಶರ್ಮಾ ಅವರು ಮುಂಬೈಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ ಕಾರಣದಿಂದ ಜುಲೈ 15 ರಿಂದ ರಾಜೀನಾಮೆ ಜಾರಿಗೆ ಬರುತ್ತದೆ ಎನ್ನಲಾಗಿದೆ. ಅಲ್ಲದೇ ಶೇಖರ್ ರಾವ್ ಅವರು ಮಂಗಳೂರು ಶಾಖೆಗೆ ಸ್ಥಳಾಂತರಗೊಳ್ಳಲು ಸಾಧ್ಯವಾಗದ ಕಾರಣ ಮತ್ತು ಇತರ ವೈಯಕ್ತಿಕ ಅಂಶಗಳಿಂದ ಜುಲೈ ಮಧ್ಯದಲ್ಲಿ ರಾಜೀನಾಮೆ ಜಾರಿಗೆ ಬರಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಶರ್ಮಾ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿರುವುದಾಗಿ ತಿಳಿದುಬಂದಿದೆ.
ಷೇರು ಮೌಲ್ಯದಲ್ಲೇನಾಯ್ತು?
ನಿರೀಕ್ಷೆಯೇ ಮಾಡಲಾಗದ ರಾಜೀನಾಮೆ ಘೋಷಣೆಯಿಂದ, ಇಂದಿನ (ಸೋಮವಾರ) ವಹಿವಾಟಿನಲ್ಲಿ ಷೇರು ಮೌಲ್ಯವು ಗಣನೀಯವಾಗಿ ಕುಸಿತವಾಗಿದೆ. ಅಲ್ಲದೇ ಶನಿವಾರದ ಕೊನೆ ಬೆಲೆ ₹207.65 ಇತ್ತು. ಆದರೆ ಸೋಮವಾರ ಷೇರುಗಳು ₹199ಕ್ಕೆ ಆರಂಭವಾಗಿ ನಂತರ ₹190ವರೆಗೆ ತಲುಪಿದವು. ಇದರಿಂದ ಒಟ್ಟು 8.4% ರಷ್ಟು ಕುಸಿತ ದಾಖಲಾಗಿದ್ದು, ಹೂಡಿಕೆದಾರರಲ್ಲಿ ಆತಂಕವಂಟಾಗಿದೆ.
ಇನ್ನು ಈ ಪರಿಯ ಕುಸಿತಕ್ಕೆ ಶರ್ಮಾ ಅವರ ರಾಜೀನಾಮೆಯೇ ಕಾರಣ ಎನ್ನಬಹುದು. ಪದತ್ಯಾಗದ ಸುದ್ದಿ ಮಾತ್ರವೇ ಈ ತೀವ್ರ ಮಾರಾಟದ ಪ್ರಮುಖ ಕಾರಣ ಎಂದು ವಿಶ್ಲೇಷಕರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ತೃತಿಯ ಸ್ಥಿತಿ:
ಹತ್ತಿರದ ವಾರಗಳಲ್ಲಿ ಈ ಷೇರು ₹205-₹208 ಮಧ್ಯೆ ವಹಿವಾಟು ನಡೆಸುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಈ ಷೇರು 12.5% ಮತ್ತು ಈ ಹಣಕಾಸು ವರ್ಷದಲ್ಲಿ 8%ರಷ್ಟು ಕುಸಿತ ಕಂಡಿದೆ.
ಬ್ರೋಕರೇಜ್ ಸಂಸ್ಥೆಗಳ ನೋಟ:
Axis Securities ನ ಮೇ 27ರ ಸಂಶೋಧನಾ ವರದಿಯ ಪ್ರಕಾರ, ಷೇರುಗಳಿಗೆ 'ಖರೀದಿ' ಶಿಫಾರಸು ನೀಡಲಾಗಿದೆ. ಗುರಿ ಬೆಲೆ 270 ರೂ.ಗೆ ನಿಗದಿಯಾಗಿದೆ. ಇದು ಪ್ರಸ್ತುತ ಮಟ್ಟದಿಂದ 38%ರಷ್ಟು ಏರಿಕೆ ಸಾಧ್ಯತೆ ಇದೆ. ಡಿಜಿಟಲ್ ಸಾಮರ್ಥ್ಯಗಳ ಬೆಳವಣಿಗೆ, ಚಿಲ್ಲರೆ ವಿಸ್ತರಣೆ, ಬ್ಯಾಂಕ್‌ನ ಬಲಾನ್ವಯ ಸಮತೋಲಸ್ಥಿತಿ ಸುಧಾರಣೆ..ಇವುಗಳನ್ನು ಉತ್ತಮ ಪ್ರಚೋದಕಗಳೆಂದು ಗುರುತಿಸಿದೆ.
ಮುಂದಿನ ದಿಕ್ಕು ಹೇಗಿರಬಹುದು?
Axis Securities ವರದಿಯಲ್ಲಿಯೇ ಉಲ್ಲೇಖಿಸಿರುವ ಅಂಶಗಳ ಪ್ರಕಾರ, CASA ಠೇವಣಿಗಳ ಮೇಲೆ ಅಧಿಕ ಒತ್ತುವರಿ ಮುಂದುವರಿಯುತ್ತದೆ. FY26Eರಿಂದ ಬ್ಯಾಂಕ್ ಬೆಳವಣಿಗೆ ಪುನರಾರಂಭಿಸಲಿದೆ ಎಂಬ ನಿರೀಕ್ಷೆ ಇದೆ. ಅಲ್ಲದೇ ಈಗಾಗಲೇ ನಡೆದ ಹೂಡಿಕೆಗಳಿಂದ ಓಪೆಕ್ಸ್ ಬೆಳವಣಿಗೆ ನಿಯಂತ್ರಣದಲ್ಲೇ ಇರುತ್ತದೆ, ಇದು ವೆಚ್ಚ ಅನುಪಾತ ಕಡಿಮೆಗೆ ಕಾರಣವಾಗುತ್ತದೆ. ಬಹು ಚಾನಲ್ ವಿಸ್ತರಣೆ (Multi-channel presence) ಮೂಲಕ ಮಾರುಕಟ್ಟೆ ಶೇರ್ ಹೆಚ್ಚಿಸಲು ಯತ್ನಿಸಲಾಗುತ್ತಿದೆ. ಇವುಗಳ ಹಿನ್ನೆಲೆಯಲ್ಲಿ Return on Assets (RoA) ಸುಧಾರಣೆಯಾಗುವ ಸಾಧ್ಯತೆ ಇದೆ.
ಕರ್ನಾಟಕ ಬ್ಯಾಂಕ್‌ನ ಎರಡು ಶ್ರೇಷ್ಠ ನಾಯಕರ ನಿರ್ಗಮನದಿಂದ ಷೇರು ಮಾರುಕಟ್ಟೆಯಲ್ಲಿ ತಾತ್ಕಾಲಿಕ ಅಸ್ಥಿರತೆ ನಿರ್ಮಾಣವಾದರೂ, ಬ್ರೋಕರೇಜ್ ಸಂಸ್ಥೆಗಳು ಇನ್ನೂ ಇದರ ದೀರ್ಘಾವಧಿ ಬೆಳವಣಿಗೆಯಲ್ಲಿ ಭರವಸೆ ವ್ಯಕ್ತಪಡಿಸುತ್ತಿವೆ. ಹೊಸ ನಾಯಕತ್ವ ಯಾರಾಗಲಿದ್ದಾರೆ ಎಂಬ ಕುತೂಹಲ ಮುಂದುವರಿದರೆ, ಹೂಡಿಕೆದಾರರಿಗೆ ಈ ಷೇರು ನಿರಂತರ ನೋಟದ ಅಡಿಯಲ್ಲಿ ಇರಬೇಕಾದ ಸ್ಪಷ್ಟ ಸಂಕೇತವಿದೆ.


Click it and Unblock the Notifications