ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಸಿದ್ಧರಾಮಯ್ಯ ಮಂಡಿಸಲಿರುವ 15ನೇ ಬಜೆಟ್ ಆಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಆಸೆ ಹೊಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಸಿಎಂ ಮಂಡಿಸುವ ಬಜೆಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ.
ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಾರಿ ಬಜೆಟ್ ಗಾತ್ರ 3.50 ಲಕ್ಷ ಕೋಟಿಯಿಂದ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯನ್ನು ಗಮನಸಿದರೆ, ಯಾವೆಲ್ಲಾ ಆಫರ್‌ಗಳನ್ನು ಹೊತ್ತು ಬಜೆಟ್ ಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇದೆ.
ಪ್ರತಿ ಬಾರಿಯಂತೆ ಈ ಬಾರಿಯ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಅದರಲ್ಲಿ ಕೃಷಿ ಸಂಬಂಧಿತ ಘೋಷಣೆಗಳು ಏನ್ ಇರಲಿವೆ ಎಂಬ ಕುತೂಹಲ ಮನೆ ಮಾಡಿದೆ. ಸಾಲಮನ್ನಾ, ಬರ ಪರಿಹಾರ 10,000 ಹೆಚ್ಚಳ ಮಾಡುವ ಸಾಧ್ಯತೆ ಇದೆ. ರೈತ ಯುವಕರನ್ನ ಮದುವೆಯಾಗುವ ವಧುವಿಗೆ ಸರ್ಕಾರ ಗಿಫ್ಟ್ ನೀಡುವ ನಿರೀಕ್ಷೆ ಇದೆ. ಇನ್ನು ಕೃಷಿ ಯಂತ್ರೋಪಕರಣ, ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಆಗುವ ಸಾಧ್ಯತೆಗಳು ಸಹ ಹೆಚ್ಚಿವೆ.

ಸಿದ್ದರಾಮಯ್ಯ ಮಂಡಿಸುವ ಬಜೆಟ್‌ನಲ್ಲಿ ಎಲ್ಲರ ಚಿತ್ತ ಕದ್ದ ವಲಯ ಎಂದರೆ ಹೊಸ ಜಿಲ್ಲೆಗಳ ಘೋಷಣೆ. ಸಿದ್ದರಾಮಯ್ಯ ಈ ಬಾರಿ ಹೊಸ ಜಿಲ್ಲೆಗಳನ್ನು ಘೋಷಿಸುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಚಿಕ್ಕೋಡಿ, ಮಧುಗಿರಿಗಳನ್ನು ಹೊಸ ಜಿಲ್ಲೆಗಳ ಕನಸು ಕಾಣುತ್ತಿವೆ.

ಬಿಬಿಎಂಪಿ ಚುನಾವಣೆಗಳ ನಿಟ್ಟಿನಲ್ಲಿ ಬೆಂಗಳೂರು ಜನರಿಗೆ ಸಿದ್ದರಾಮಯ್ಯ ಬಜೆಟ್‌ನಿಂದ ಏನೆಲ್ಲಾ ಲಾಭಗಳು ಆಗಲಿವೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಬ್ರಾಂಡ್ ಬೆಂಗಳೂರು ಕನಸು ಕಾಣುತ್ತಿರುವ ಸಿದ್ದರಾಮಯ್ಯ ಸರ್ಕಾರ ಯಾವ ಹೊಸ ಯೋಜನೆಯನ್ನು ರಾಜ್ಯ ರಾಜ್ಯಧಾನಿಗೆ ನೀಡುತ್ತದೆ ಎಂಬದನ್ನು ಜನರು ಎದುರು ನೋಡುತ್ತಿದ್ದಾರೆ.


Click it and Unblock the Notifications