ಬೆಂಗಳೂರು: 2026-27ನೇ ಸಾಲಿನ ಬಹುನಿರೀಕ್ಷೆಯ ಕರ್ನಾಟಕ ಬಜೆಟ್ ಮಂಡನೆಗೆ (Karnataka Budget 2026-27) ಕ್ಷಣಗಣನೆ ಆರಂಭವಾಗಿದೆ. ಹಣಕಾಸು ಸಚಿವರು, ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯನವರು ಇಂದು (ಮಾರ್ಚ್ 6) ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆಯ ಜೊತೆಗೆ, ರಾಜ್ಯದ ಆರ್ಥಿಕತೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಬಜೆಟ್ (Siddaramaiah Budget) ಮಂಡಿಸಲಿದ್ದಾರೆ. ರಾಜ್ಯದ ಜನರೂ ಕೂಡಾ 2026-27ನೇ ಬಜೆಟ್ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಯಾವ ಕ್ಷೇತ್ರಕ್ಕೆ ಎಷ್ಟು ಕೊಡುಗೆಗಳು ರಾಜ್ಯ ಸರ್ಕಾರದಿಂದ ಸಿಗಲಿದೆ ಎಂದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

ಹಾಗಿದ್ರೆ ಕರ್ನಾಟಕ ಬಜೆಟ್ ಮಂಡನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಎಷ್ಟು ಗಂಟೆಗೆ ಮಂಡಿಸುತ್ತಾರೆ? ಲೈವ್ ಎಲ್ಲಿ ನೋಡಬಹುದು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಎಷ್ಟು ಗಂಟೆ ಕರ್ನಾಟಕ ಬಜೆಟ್ ಆರಂಭ?
ಗ್ಯಾರಂಟಿ ಯೋಜನೆಗಳು, ಹೊಸ ಯೋಜನೆ ಆರಂಭ, ಅಭಿವೃದ್ಧಿ ಕಾರ್ಯ, ರೈತರ ಆರ್ಥಿಕ ಅಭಿವೃದ್ಧಿ, ಹೀಗೆ ಹಲವು ಘೋಷಣೆಗಳ ಬಗ್ಗೆ ನಿರೀಕ್ಷೆಗಳಿವೆ. ಇನ್ನು ಮಹಿಳೆಯರಿಗೆ, ಮಕ್ಕಳಿಗೆ, ಆರೋಗ್ಯ ಕ್ಷೇತ್ರಗಳಿಗೂ ರಾಜ್ಯ ಸರ್ಕಾರದಿಂದ ಎಷ್ಟು ಕೊಡುಗೆ ಸಿಗಲಿದೆ ಎಂದು ಕಾದು ನೋಡಬೇಕಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇನ್ನು ಕರ್ನಾಟಕ ಬಜೆಟ್ ಮಂಡನೆ ಇಂದು, ಮಾರ್ಚ್ 6 ರಂದು ಬೆಳಿಗ್ಗೆ 10:15 ಕ್ಕೆ ಆರಂಭವಾಗಲಿದೆ.
ಎಲ್ಲಿ ನೋಡಬಹುದು?
GoodReturns Kannada ವೆಬ್‌ಸೈಟ್‌ನಲ್ಲಿ ನೀವು ಕರ್ನಾಟಕ ಬಜೆಟ್ ಮಂಡನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಅಲ್ಲದೇ ಇತರ ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಲೈವ್ ವೀಕ್ಷಿಸಬಹುದು.
ಮೊದಲ ಬಾರಿ ವಿಶೇಷ ವ್ಯವಸ್ಥೆ!
ಇದೀಗ ಮೊದಲ ಬಾರು ರಾಜ್ಯಾದ್ಯಂತ 230 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್‌ಗಳಲ್ಲಿ LED/TV ಸ್ಕ್ರೀನ್ ಮೂಲಕ ನೇರ ಪ್ರಸಾರವನ್ನು ನೋಡಲು ಅವಕಾಶ ನೀಡಲಾಗುತ್ತಿದೆ. ಆದ್ದರಿಂದ ಈ ಬಾರಿ ಬಸ್ ಸ್ಟಾಪ್‌ಗಳಲ್ಲೂ ಬಜೆಟ್ ಲೈವ್ ವೀಕ್ಷಣೆ ಮಾಡುವ ಅವಕಾಶವಿದೆ.


Click it and Unblock the Notifications