ರಾಜ್ಯದ ಚಿತ್ತ ರಾಜ್ಯ ಬಜೆಟ್‌ನತ್ತ ನೆಟ್ಟಿದೆ. ಮುಂಬರುವ ಮಾರ್ಚ್ 7ರಂದು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕಾಗಿ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ, 16ನೇ ಬಜೆಟ್ ಇದಾಗಿದೆ. ಈಗಾಗಲೇ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಮಾರ್ಚ್ 3ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಇದು 2025-26ನೇ ಸಾಲಿನ ಮೊದಲ ಅಧಿವೇಶನವಾಗಿದ್ದು, ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ರಾಜ್ಯ ವಿಧಾನಮಂಡಲದ ಉಭಯ ಸದನಗಳಿಗೆ ಮೊದಲ ದಿನ ಜಂಟಿ ಭಾಷಣ ಮಾಡಲಿದ್ದಾರೆ. ಅಧಿವೇಶನ ಆರಂಭದ ಮುಂದಿನ ಮೂರು ದಿನಗಳ ಕಾಲ, ಅಂದರೆ ಮಾರ್ಚ್ 4, 5 ಮತ್ತು 6ರಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಸಲಾಗುತ್ತದೆ. ಬಳಿಕ ಮಾರ್ಚ್ 7ರಂದು ಬಜೆಟ್ ಮಂಡನೆ ಮಾಡಲಾಗುತ್ತದೆ. ಈ ಅಧಿವೇಶನದ ಅವಧಿಯನ್ನು ವ್ಯವಹಾರ ಸಲಹಾ ಸಮಿತಿಯು ನಿರ್ಧಾರ ಮಾಡಲಿದೆ.
ಸದಾ ಬಡವರ ಉತ್ತೇಜನಕ್ಕಾಗಿ ಶ್ರಮಿಸುವ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿಯೂ ಬಡವರಿಗೆ, ಮಹಿಳೆಯರಿಗೆ, ರೈತರಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆ ಮಾಡುವ ನಿರೀಕ್ಷೆ ಇದೆ. ಅಂದರೆ ಜನಸಾಮಾನ್ಯರಿಗೆ ಈಗಾಗಲೇ ಬೆಲೆ ಏರಿಕೆ ಬಿಸಿ ಮುಟ್ಟಿದ್ದು ಅದನ್ನು ತಗ್ಗಿಸುವ ಪ್ರಯತ್ನದಲ್ಲೂ ಸರ್ಕಾರ ಶ್ರಮಿಸಲು ಮುಂದಾಗಿದೆ. ಹಾಗೆಯೇ ಮೆಟ್ರೋ ದರ ನಿಗದಿಯನ್ನೂ ಬಜೆಟ್ ಮಂಡನೆ ದಿನ ಘೋಷಣೆಯಾಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದ ಬೆಳವಣಿಗೆಯತ್ತಲೂ ಚಿತ್ತ ಹರಿಸಿ ಅದಕ್ಕೆ ಪೂರಕವಾಗಿರುವ ಆಯವ್ಯಯ ಮಂಡನೆಯ ನಿರೀಕ್ಷರಯಲ್ಲಿದ್ದಾರೆ ಜನರು.
ಇನ್ನು ಬಜೆಟ್ ಮಂಡನೆ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರೈತರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಹಂಚಿಕೊಂಡಿರುವ ಕಾಳಜಿಗಳನ್ನು ನಾವು ಪರಿಗಣಿಸುತ್ತೇವೆ. ಸಾಧ್ಯವಾದಷ್ಟು ಆರ್ಥಿಕ ಮಿತಿಯೊಳಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ರೈತ ಮುಖಂಡರು ಹಾಗೂ ವಿವಿಧ ಕೃಷಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವ ಸಮಾಲೋಚನೆ ನಡೆಸಿದ್ದಾರೆ. ಸದ್ಯ ಅವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಅದರ ನಡುವೆಯೂ ತಮ್ಮ ಅಧಿಕೃತ ನಿವಾಸದಲ್ಲಿ ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಕಡಿಮೆ ಆದಾಯ ಗಳಿಸುವವರಿಗೆ ಬೆಕೆ ಏರಿಕೆ ಒಂದು ದೊಡ್ಡ ಹೊರೆಯಾಗಿದೆ. ಅದರ ಜೊತೆಗೆ ಉದ್ಯೋಗ ಸಮಸ್ಯೆಯೂ ಉಲ್ಬಣವಾಗಿದೆ. ಉದ್ಯೋಗ ಸಿಕ್ಕರೂ ನಿರೀಕ್ಷೆ ಮಟ್ಟದ ಆದಾಯ ಸಿಗುತ್ತಿಲ್ಲ. ಆದಾಯಕ್ಕಿಂದ ಹತ್ತು ಪಟ್ಟು ಜಾಸ್ತಿ ಖರ್ಚೇ ಇದೆ ಎಂದು ಕೊರಗುತ್ತಿರುವ ಜನರಿಗೆ, ಬಜೆಟ್ ಮೇಲೆ ಭಾರಿ ನಿರೀಕ್ಷೆಯಿದೆ. ಇತ್ತ ಅನ್ನದಾತರೂ ಕೂಡ ತಮಗೆ ಪೂರಕವಾಗಿರುವ ಬಜೆಟ್ ಈ ಬಾರಿ ಸಿಗುತ್ತಾ ಎಂದು ಎದುರು ನೋಡುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ವಲಯ, ಸಣ್ಣ ಕೈಗಾರಿಕೆ ಸೇರಿ ಇತರೆ ವಲಯಗಳು ಬಜೆಟ್ ಮೇಲೆ ಅತಿಹೆಚ್ಚು ನಿರೀಕ್ಷೆ ಹೊಂದಿವೆ.
ಈಗಾಗಲೇ ಕೇಂದ್ರ ಬಜೆಟ್‌ನಿಂದ ಮದ್ಯಮ ವರ್ಗದ ಜನರಿಗೆ ಕೊಂಚ ಅಸಮಾಧಾನ ಉಂಟಾಗಿದೆ. ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಕ್ಕರೂ ಅದರಿಂದ ಪರಿಣಾಮಕಾರಿ ಬದಲಾವಣೆ ಏನೂ ಆಗಿಲ್ಲ ಎಂದು ಬೇಸರ ಹೊಂದಿದ್ದಾರೆ. ಅಲ್ಲದೇ ತೆರಿಗೆ ಪಾವತಿಯಲ್ಲಿ ಕರ್ನಾಟಕವೇ ಅತಿಹೆಚ್ಚು ಪಾಲು ಹೊಂದಿದ್ದರೂ, ಕರ್ನಾಟಕದ ಪಾಲಿಗೆ ಬಜೆಟ್ ಗಾತ್ರ ಚಿಕ್ಕದಿದೆ ಎಂದು ಕಿಡಿ ಕಾರಿದ್ದಾರೆ. ಕೇಂದ್ರದ ಬಜೆಟ್‌ನಿಂದ ನಿರಾಸೆಯಾಗಿರುವ ಜನರಿಗೆ ರಾಜ್ಯ ಬಜೆಟ್‌ನಲ್ಲಿ ನಿರೀಕ್ಷೆ ಹೆಚ್ಚಾಗಿದೆ.
More From GoodReturns

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: ಸಿದ್ದರಾಮಯ್ಯ ಬಜೆಟ್ ಮಂಡಣೆ ಎಷ್ಟು ಗಂಟೆಗೆ ಆರಂಭ? ಎಲ್ಲಿ ನೋಡಬಹುದು?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications