ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಉದ್ಭವವಾಗಿದೆ. ಪಾಕಿಸ್ತಾನದ ನಿದ್ದೆ ಗೆಡಿಸಿರುವ ಭಾರತ, ದಾಳಿ ಮೇಲೆ ದಾಳಿ ನಡೆಸುತ್ತಿದೆ. ಗಡಿಯಲ್ಲಿನ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ. ಇದರ ನಡುವೆ ಕರ್ನಾಟಕ ಸರ್ಕಾರ ಕೂಡ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಬೇಕಿದ್ದ, ಭವ್ಯ ಜನಪರ ಕಾರ್ಯಕ್ರಮವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲು ನಿರ್ಧಾರ ಮಾಡಿದೆ. ಈ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಒಗ್ಗಟ್ಟಿನಿಂದ ತೆಗೆದುಕೊಂಡಿದೆ.

ಕಾರ್ಯಕ್ರಮದ ಹಿನ್ನೆಲೆ:
ಇನ್ನು ವಿಜಯನಗರ ಜಿಲ್ಲೆಯಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವು, ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿತ್ತು. ಸರ್ಕಾರ ಎರಡು ವರ್ಷ ಆಡಳಿತ ಪೂರೈಸಿದ್ದನ್ನು ಜನತೆಗೆ ಪ್ರತಿಬಿಂಬಿಸುವ ವೇದಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕಪತ್ರಗಳನ್ನು ಕೂಡ ವಿತರಿಸುವ ಯೋಜನೆ ಇತ್ತು. ಆದರೆ ಸದ್ಯದ ಮಟ್ಟಿಗೆ ಗಡಿಯಲ್ಲಿ ಸಂಘರ್ಷ ಹೆಚ್ಚಾಗಿದೆ. ಪರಿಸ್ಥಿತಿ ಗಂಭೀರವಾಗಿದೆ. ಇದೇ ಸಮಯದಲ್ಲಿ ಸಾರ್ವಜನಿಕರ ಸುರಕ್ಷತೆ ಈಗ ಅತಿಮುಖ್ಯವಾಗಿದೆ. ಹೀಗಾಗಿ ಈ ಸಮಾರಂಭವನ್ನು ಅನಿರ್ದಿಷ್ಟಾವಧಿ ವರೆಗೆ ಮುಂದೂಡಲಾಗಿದೆ.
ಈ ಮಹತ್ವದ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿರುವ ವಿವಿಧ ಜಿಲ್ಲೆಗಳಲ್ಲಿ, ವರ್ಷಗಳ ಕಾಲ ದಾಖಲೆ ಇಲ್ಲದೆ ವಾಸವಾಗಿದ್ದ ಬಡ ಕುಟುಂಬಗಳಿಗೆ ಈಗ ಮತ್ತೆ ಕಾಯುವ ಸಂದರ್ಭ ಬಂದೊದಗಿದೆ. ಸರಿಯಾದ ದಾಖಲೆ ಇಲ್ಲದ ಕಾರಣ ತಮ್ಮ ಮನೆಗಳ ಮೇಲೆ ಕಾನೂನು ಹಕ್ಕು ಹೊಂದದ ಜನರಿಗೆ ಈ ಸಂದರ್ಭ ನಿರಾಸೆಯ ಹೊಳೆಯನ್ನರಿಸಿದೆ. ಹೊಸಪೇಟೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಈ ಹಕ್ಕುಪತ್ರ ವಿತರಣಾ ಘೋಷಣೆಯು, ಸರ್ಕಾರದ ಸಾರ್ವಜನಿಕ ನಿಟ್ಟಿನಲ್ಲಿ ಬಹುಮುಖ್ಯ ಹೆಜ್ಜೆಯಾಗಿತ್ತು. ಆದರೆ ಇದು ಇದೀಗ ಈ ನಿರೀಕ್ಷೆಯ ಸಮಯಾತೀತವಾಗಿದೆ.
ಭದ್ರತೆ ಮೊದಲು, ರಾಜಕೀಯ ನಂತರ ಎಂದ ಸರ್ಕಾರ:
ಕಾರ್ಯಕ್ರಮವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದರ ಹಿಂದೆ, ಒಂದು ಸ್ಪಷ್ಟವಾದ ನಿಲುವಿದೆ. ಕಾರ್ಯಕ್ರಮ ರದ್ದುಗೊಳಿಸುವ ಮೂಲಕ ಜನರ ಭದ್ರತೆ ಮೊದಲು, ರಾಜಕೀಯ ನಂತರ ಎಂಬ ಸ್ಪಷ್ಟ ಸಂದೇಶ ಸಾರುತ್ತಿದೆ. ಭಾರತ-ಪಾಕಿಸ್ತಾ ಗಡಿ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆಯ ಸ್ಥಿತಿ ನಿರ್ಮಾಣವಾಗಿದೆ. ಆ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸೂಚನೆಗಳನ್ನು ನೀಡಿದೆ. ಈ ಸೂಚನೆಯಿಂದ ಪ್ರೇರಿತವಾಗಿರ, ಮಹತ್ವದ ಸಾರ್ವಜನಿಕ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ತನ್ನ ನಿಗದಿತ ಯೋಜನೆಗೆ ವಿರಾಮ ಕೊಟ್ಟು ಜನರ ಸುರಕ್ಷತೆಯನ್ನು ಮೊದಲು ಎತ್ತಿ ಹಿಡಿದಿದೆ.
ಸಶಸ್ತ್ರ ಪಡೆಗೆ ಸಂಪುಟ ಶ್ಲಾಘನೆ:
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಈ ನಿರ್ಧಾರವನ್ನು ವಿವರಿಸುತ್ತಾ, ಭಾರತೀಯ ಸೇನೆ ಪಾಕಿಸ್ತಾನದ ದುರ್ಬುದ್ಧಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದು, ಅವರ ಶೂರವೀರತೆಗೆ ಸಂಪುಟವು ಗೌರವ ಸೂಚಿಸಿದೆ ಎಂದು ಹೇಳಿದರು.
ಅವರು ಮತ್ತೊಮ್ಮೆ ಭದ್ರತೆಯ ಮಹತ್ವವನ್ನು ಒತ್ತಿಹೇಳುತ್ತಾ, "ಸುರಕ್ಷೆ ಬಗ್ಗೆ ಕೇಂದ್ರದಿಂದ ದೊರಕಿದ ಸೂಚನೆಗಳ ಪ್ರಕಾರ, ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ನಾಗರಿಕ ರಕ್ಷಣಾ ಪಡೆ ಹಾಗೂ ಇತರ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳಿಗೆ ಸಿದ್ಧತೆ ಕುರಿತು ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಸೂಚನೆ ನೀಡಿದ್ದಾರೆ" ಎಂದು ತಿಳಿಸಿದರು.
ಪೊಲೀಸರು ಮತ್ತು ನಾಗರಿಕ ರಕ್ಷಣಾ ಪಡೆ ಸಜ್ಜುಗೊಳಿಸುವ ಕಾರ್ಯ ಪ್ರಾರಂಭ:
ಭದ್ರತಾ ಯಂತ್ರಾಂಶಗಳನ್ನು ತ್ವರಿತವಾಗಿ ಸಜ್ಜುಗೊಳಿಸುವ ಉದ್ದೇಶದಿಂದ, ಪೊಲೀಸ್ ಇಲಾಖೆಯಿಂದ ಆರಂಭಿಸಿ ನಾಗರಿಕ ರಕ್ಷಣಾ ಘಟಕಗಳವರೆಗೆ ಎಲ್ಲಾ ಸಂಭಾವ್ಯ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಸಜ್ಜಾಗುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳು ಕೈಗೊಳ್ಳಲಾಗುತ್ತಿದ್ದು, ಖಾಸಗಿ ಕಾರ್ಯಕ್ರಮಗಳಿಗೂ ಹೆಚ್ಚಿನ ಎಚ್ಚರಿಕೆ ಜಾರಿಗೆ ಬರುತ್ತಿದೆ.
ಕಾಂಗ್ರೆಸ್‌ಗೆ ತಾತ್ಕಾಲಿಕ ಹೊಡೆತ:
ರಾಜಕೀಯ ದೃಷ್ಟಿಯಿಂದ ಈ ಕಾರ್ಯಕ್ರಮವು ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಅಭಿವೃದ್ಧಿ ಸಾಧನೆಗಳನ್ನು ಜನರಿಗೆ ತೋರಿಸುವ ಪ್ರಮುಖ ವೇದಿಕೆಯಾಗಿತ್ತು. 2023ರ ಚುನಾವಣೆಯ ನಂತರ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹೊಸಪೇಟೆಯ ಈ ಸಮಾರಂಭವು ಅದರ ಶ್ರೇಷ್ಠತೆಯನ್ನು ಪ್ರದರ್ಶಿಸುವಂತಿತ್ತು. ಆದರೆ ಗಡಿ ಪರಿಸ್ಥಿತಿಯು ಈ ಉದ್ದೇಶಕ್ಕೆ ತಾತ್ಕಾಲಿಕ ಅಡ್ಡಿಯೆಂದು ಬೆಳೆಯುವಂತಾಗಿದೆ. ಸರ್ಕಾರಿ ಮೂಲಗಳ ಪ್ರಕಾರ, ಭದ್ರತಾ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತಲುಪಿದ ಬಳಿಕ ಹೊಸ ದಿನಾಂಕವನ್ನು ನಿಗದಿಪಡಿಸಿ, ಇದೇ ಕಾರ್ಯಕ್ರಮವನ್ನು ಪುನರ್‌ಯೋಜಿಸಲು ಸರ್ಕಾರ ಬದ್ಧವಾಗಿದೆ.
ಮುಂದಿನ ಹೆಜ್ಜೆ ಏನು?
ಸರ್ಕಾರಿ ಮೂಲಗಳ ಪ್ರಕಾರ, ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಪಡಿಸಿಲ್ಲ. ಸ್ಥಿತಿಗತಿಯ ಮೇಲೆ ನಿಗಾ ಇಡಲಾಗುತ್ತಿದ್ದು, ಸುದೀರ್ಘ ಕಾಲದಿಂದ ನಿರೀಕ್ಷೆಯಲ್ಲಿದ್ದ ಹಕ್ಕುಪತ್ರ ವಿತರಣಾ ಪ್ರಕ್ರಿಯೆಯನ್ನು ಮುಂದುವರಿಸಲು ತಕ್ಷಣವೇ ಹೊಸ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ಜನತೆಗೆ ನಿರೀಕ್ಷೆಯ ಮೂಡು ಬಡದಂತಾಗದಂತೆ ಹಾಗೂ ಭದ್ರತೆಯ ಖಾತರಿಯೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ.
ಈ ಕಾರ್ಯಕ್ರಮವನ್ನು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಸಾವಿರಾರು ಹಕ್ಕುಪತ್ರ ನಿರೀಕ್ಷಿತ ಫಲಾನುಭವಿಗಳಿಗೆ ಈ ಮುಂದೂಡಿಕೆಯ ಸುದ್ದಿ ಒಂದು ತಾತ್ಕಾಲಿಕ ನಿರಾಸೆಯನ್ನುಂಟು ಮಾಡಿದೆ. ಆದರೆ, ಭದ್ರತೆಯ ಹಿನ್ನಲೆಯಲ್ಲಿ ಈ ತೀರ್ಮಾನವನ್ನು ಬುದ್ಧಿವಂತಿಕೆಯಿಂದ ನೋಡಿ ಬೆಂಬಲಿಸುವ ಪ್ರವೃತ್ತಿ ಸಾರ್ವಜನಿಕರಲ್ಲಿ ಕಾಣಿಸುತ್ತಿದೆ.


Click it and Unblock the Notifications