ಕೇರಳ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ (Kerala, Bengaluru, Chennai, Hyderabad) ನಡುವೆ ಸಂಚರಿಸುವ ಖಾಸಗಿ ಬಸ್ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಜಿದ್ದಿನ ಗುದ್ದಾಟ ಶುರುವಾಗಿದೆ. ಚಾಲಕರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆ ಈಗಾಗಲೇ ಹಲವಾರು ಖಾಸಗಿ ಐಷಾರಾಮಿ ಬಸ್ ನಿರ್ವಾಹಕರು (Private Luxury Bus Operators)
ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಭದ್ರತಾ ದೃಷ್ಟಿಯಿಂದ, ಈ ಮೂರು ನಗರಗಳ ನಡುವೆ ಪ್ರಯಾಣ ರದ್ದುಗೊಳಿಸಿದ್ದರಿಂದ ಕೇರಳ ಮತ್ತು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಂತಹ ಪ್ರಮುಖ ದಕ್ಷಿಣ ಭಾರತದ ನಗರಗಳ ನಡುವೆ ಪ್ರಯಾಣಿಸುವ ಜನರು ಪರಡವುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಚಾಲಕರಿಗೆ ಭದ್ರತೆ ಒದಗಿಸುವಂತೆ ಪ್ರತಿಭಟನೆಯನ್ನೂ ಮಾಡಲಾಗಿದೆ.

ಸೋನಾ ಟ್ರಾವೆಲ್ಸ್‌ನ ಇಂಟರ್‌ಸ್ಟೇಟ್ ಆಪರೇಶನ್ ಇನ್‌ಚಾರ್ಜ್ ರಿಜಾಸ್ ಎ ಜೆ ಈ ಬಗ್ಗೆ ಮಾತನಾಡಿದ್ದು, "ನಮ್ಮ ಚಾಲಕರೊಬ್ಬರನ್ನು ಕೇರಳ ಗಡಿಯಲ್ಲಿ ಕೆಲ 'ಸಮಾಜವಿರೋಧಿ ಶಕ್ತಿಗಳು' ಹಲ್ಲೆ ಮಾಡಿದ್ದಾರೆ. ಈ ಪರಿಣಾಮ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದು, ಭದ್ರತೆ ಒದಗಿಸಬೇಕು ಎಂಬ ಬೇಡಿಕೆಯನ್ನು ಲಿಖಿತ ಪತ್ರದ ಮೂಲಕ ನೀಡಿದ್ದಾರೆ. ಇದರಿಂದಾಗಿ ಹಲವು ಬಸ್‌ಗಳು ತಮ್ಮ ಪ್ರಯಾಣವನ್ನು ಕೈಬಿಟ್ಟು, ಬುಕ್ಕಿಂಗ್‌ಗಳನ್ನೂ ರದ್ದುಪಡಿಸಲಾಗಿದೆ. ಆದ್ರೆ ಶುಕ್ರವಾರದಿಂದ ಸಾಮಾನ್ಯ ಸೇವೆ ಮತ್ತೆ ಆರಂಭವಾಗುವ ನಿರೀಕ್ಷೆ ಇದೆ," ಎಂದು ಹೇಳಿದ್ದಾರೆ.
ಏನಿದು ಘಟನೆ?
ಈ ಘಟನೆ ಬಗ್ಗೆ ವಿವರಿಸಿದ ಚಾಲಕರೊಬ್ಬರು, 'ಕೊಯಮತ್ತೂರಿನ ಖಾಸಗಿ ಬಸ್ ಮಾಲೀಕರು ಮತ್ತು ಅವರ ಗ್ಯಾಂಗ್ ನಮ್ಮ ಬಸ್ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬುಧವಾರ ಚೆನ್ನೈನಲ್ಲಿ ಮತ್ತೊಂದು ಬಸ್ ಅನ್ನು ನಿಲ್ಲಿಸಲಾಯಿತು. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಈ ಮಾರ್ಗಗಳಲ್ಲಿ ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ" ಎಂದು ಹೇಳಿದ್ದಾರೆ.
ಕರ್ನಾಟಕದಲ್ಲೂ ತಟ್ಟಿದ ಚಾಲಕರ ಹಲ್ಲೆ ಪ್ರಕರಣ
ಅತ್ತ ಕೊಯಮತ್ತೂರು ಮತ್ತು ಚೆನ್ನೈನಲ್ಲಿ ಖಾಸಗಿ ಬಸ್ ಚಾಲಕರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ಕರ್ನಾಟಕದಲ್ಲೂ ತಟ್ಟಿದೆ. ಈ ಪರಿಣಾಮ ಕಳೆದೊಂದು ವಾರದಿಂದಲೇ ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುವ ಹಲವಾರು ಖಾಸಗಿ ಬಸ್ ಗಳು ತಮ್ಮ ಸೇವೆಯನ್ನು ನಿಲ್ಲಿಸಿದೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ದೃಢಪಡಿಸಿದೆ. ಇನ್ನು ಬಸ್ ಚಾಲಕರ ಮೇಲೆ ಹೊರ ರಾಜ್ಯಗಳಲ್ಲಿ ಕಿರುಕುಳ ಮತ್ತು ಹಲ್ಲೆ ಪ್ರಕರಣಗಳು ದಿನ ಹೋದಂತೆ ಹೆಚ್ಚಾಗುತ್ತಲೇ ಇದೆ ಎಂದು ಆರೋಪ ಮಾಡಿದೆ. ಇನ್ನು ಹಲ್ಲೆ ಪ್ರಕರಣ ಸಂಬಂಧಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ನಟರಾಜ್ ಶರ್ಮಾ "ಕೇರಳದಲ್ಲಿ ನಮ್ಮ ಚಾಲಕರನ್ನು ನಿಲ್ಲಿಸಿ ಹಲ್ಲೆ ನಡೆಸಿದ ನಂತರ ಚಾಲಕರು ಬಸ್‌ಗಳನ್ನು ಓಡಿಸಲು ಹೆದರುತ್ತಾರೆ. ಸಂಬಂಧಿತ ಇಲಾಖೆಗಳು ಸಮಸ್ಯೆಯನ್ನು ಪರಿಹರಿಸುವವರೆಗೆ ಅನೇಕರು ರಸ್ತೆಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ." ಎಂದು ಹೇಳಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications